Author: Times of bayaluseeme

ಹೊಳಲ್ಕೆರೆ ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಮಳೆಗಾಗಿ. ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿ.. ಮೆರವಣಿಗೆ ಮಾಡಲಾಯಿತು.ಗ್ರಾಮಕ್ಕೆ ಮಳೆ ಇಲ್ಲದೆ ಜನರ ಜೀವನ ಕಂಗಲಾಗಿದೆ, ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಇದ್ದ ಕೊಳವೆಬಾವಿಗಳಲ್ಲಿ ನೀರಿನಪ್ರಮಾಣ ಕಡಿಮೆಯಾಗಿದೆ. ಇದ್ದಲ್ಲದ ಮಧ್ಯೆ ಕರೆಂಟಿನ ಅಭಾವ ಇದೆ. ಕೃಷಿಗೆ ಮಳೇಯ ನೀರೇ ಆಧಾರವಾಗಿದೆ, ಆದರೆ ವರುಣ ಕಣ್ಣುಬಿಡುತ್ತಿಲ್ಲ, ಮಳೆ ಇಲ್ಲೆ ಗ್ರಾಮದ ಜನತೆ ಕಂಗಾಲಾಗಿದ್ದಾರೆ, ಕತ್ತೇಗಳ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಹಿಂದಿನ ಕಾಲದಿಂದಲೂ ಇದೆ ಈ ಹಿನ್ನಲೆಯಲ್ಲಿ ಇಂದು ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ಮಾಡಿ ಗ್ರಾಮದತುಂಬೆಲ್ಲಾ ಮೆರವಣಿಗೆಯನ್ನು ನಡೆಸುವುದರ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತುಈ ಕಾರ್ಯುಕ್ರಮವೂ ಊರಿನ ಗುಡಿ ಗೌಡರಾದ. ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಡೆಸಲಾಯಿತು, ಇದರಲ್ಲಿ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

Read More

ಗಣಿಧಣಿ ಎಂದೇ ಪಡೆದಿರುವ ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರದ ಮೂಲಕ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಲು ರೆಡಿಯಾಗಿದ್ದಾರೆ. ಈಗ ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಟೀಸರ್ನಲ್ಲೇ ಭರವಸೆ ಮೂಡಿಸಿದ್ದ ಉದಯೋನ್ಮುಖ ನಟ ಈಗ ತಮ್ಮ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ. ವೈರಲ್‌ ವಯ್ಯಾರಿ’ ಸದ್ದು.. ಕಿರೀಟಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಣ್ಣ ಹಚ್ಚಿರುವ ಚೊಚ್ಚಲ ಚಿತ್ರದ ಟೀಸರ್‌ ಈಗಾಗಲೇ ಭಾರಿ ಸದ್ದು ಮಾಡಿದೆ. ಇದೀಗ ಸಿನಿಮಾದ ಎರಡನೇ ಹಾಡು ‘ವೈರಲ್‌ ವಯ್ಯಾರಿ’ ಅನಾವರಣಗೊಂಡಿದ್ದು, ಪ್ರಚಾರ ಜೋರಾಗಿದೆ. ನಾಯಕ-ನಾಯಕಿಯ ಹೈ-ಲೆವೆಲ್‌ ಎನರ್ಜಿ: ಈ ವೈರಲ್‌ ವಯ್ಯಾರಿ ಹಾಡಿಗೆ ಪವನ್‌ ಭಟ್‌ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್‌ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್‌ ಮ್ಯೂಸಿಕ್‌ ಕಿಕ್‌ಗೆ ಕಿರೀಟಿ ಮತ್ತು ಶ್ರೀಲೀಲಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಎನರ್ಜಿ ಹೈ-ಲೆವೆಲ್‌ನಲ್ಲಿದೆ.…

Read More

ಹಲ್ಲಿನ ಆರೋಗ್ಯ ಅಂದರೆ ಹಲ್ಲುಗಳು ಮತ್ತು ಒಸಡುಗಳು ಆರೋಗ್ಯಕರವಾಗಿರುವುದು. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಯಮಿತವಾಗಿ ಹಲ್ಲುಜ್ಜುವುದು, ಫ್ಲೋಸ್ ಮಾಡುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯ. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ. ನಿಯಮಿತವಾಗಿ ಹಲ್ಲುಜ್ಜುವುದು: ಪ್ರತಿ ದಿನ ಬೆಳಗ್ಗೆ ಊಟದ ನಂತರ ಮತ್ತು ಮಲಗುವ ಮುನ್ನ ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಫ್ಲೋಸ್ ಮಾಡುವುದು: ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಆಹಾರ ಮತ್ತು ಪ್ಲೇಕ್ ಅನ್ನು ತೆಗೆದುಹಾಕಲು ಫ್ಲೋಸ್ ಬಳಸಿ. ಆರೋಗ್ಯಕರ ಆಹಾರ ಸೇವನೆ. ಸಕ್ಕರೆ ಅಂಶ ಕಡಿಮೆ ಇರುವ ಮತ್ತು ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ವಿಟಮಿನ್ ಡಿ ಇರುವ ಆಹಾರವನ್ನು ಸೇವಿಸಿ. ದಂತವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು: ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡಿ, ಹಲ್ಲುಗಳ ಆರೋಗ್ಯವನ್ನು ಪರೀಕ್ಷಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು: ಧೂಮಪಾನ ಮತ್ತು ಮದ್ಯಪಾನವು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ.ಹಲ್ಲಿನ ಸಮಸ್ಯೆಗಳನ್ನುನಿ ರ್ಲಕ್ಷಿಸದಿರುವುದು:ಲ್ಲಿನ ನೋವು, ರಕ್ತಸ್ರಾವ, ಅಥವಾ ಇತರ ಯಾವುದೇ…

Read More

ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಅಗ್ರಿಮೆಂಟ್‌ ಆಗಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಒಪ್ಪಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯನವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್‌ಪಾಸ್‌ ನೀಡುವುದು ಗ್ಯಾರಂಟಿಯಾಗಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್‌ನ ಶಾಸಕರು ರಾಜಾರೋಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಿದ್ದರಾಮಯ್ಯನವರಿಗೆ ಬೋರ್ಡಿಂಗ್‌ ಪಾಸ್‌ ಇದ್ದಂತೆ ಎಂದರು. ಸರ್ಕಾರ ಎರಡೂವರೆ ವರ್ಷಗಳಲ್ಲಿ ಟೇಕಾಫ್‌ ಆಗಿಲ್ಲ. ಶಾಸಕರೆಲ್ಲರೂ ತಿರುಗುಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಪರವಾಗಿ ಇಲ್ಲ ಎಂಬುದು ಸುರ್ಜೇವಾಲಾ ಅವರ ಸಭೆಯಿಂದ ಗೊತ್ತಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೇಂದ್ರಕ್ಕೆ ಹೋಗುವುದು ಗ್ಯಾರಂಟಿಯಾಗಿದೆ. ಇನ್ನೆರಡು ವರ್ಷವೂ ಇದೇ ರೀತಿ ಅತಂತ್ರದಲ್ಲೇ ಸರ್ಕಾರ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ…

Read More

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೃಷ್ಟಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಸಮತೋಲಿತ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆಗಳು ಮತ್ತು ಸುರಕ್ಷಿತ ಅಭ್ಯಾಸಗಳು ಆರೋಗ್ಯಕರ ಕಣ್ಣುಗಳಿಗೆ ಕೊಡುಗೆ ನೀಡುತ್ತವೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿ ಕೆಲವು ಸಲಹೆಗಳಿವೆ: ಆರೋಗ್ಯಕರ ಆಹಾರ: ಕ್ಯಾರೆಟ್, ಎಲೆಗಳ ಹಸಿರು ತರಕಾರಿಗಳು, ಸಿಟ್ರಸ್ ಹಣ್ಣುಗಳು ಮತ್ತು ಎಣ್ಣೆಯುಕ್ತ ಮೀನುಗಳಂತಹ ಪೋಷಕಾಂಶ-ಭರಿತ ಆಹಾರಗಳನ್ನು ಸೇವಿಸಿ. ನಿಯಮಿತ ಕಣ್ಣಿನ ಪರೀಕ್ಷೆಗಳು: ವೃತ್ತಿಪರ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ತಡೆಯಲು ಮತ್ತು ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಲು ಇದು ಸಹಾಯಕವಾಗಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆ: ಸ್ಕ್ರೀನ್ ಸಮಯವನ್ನು ಮಿತಿಗೊಳಿಸಿ ಮತ್ತು ದೀರ್ಘಾವಧಿಯ ಸ್ಕ್ರೀನ್ ವೀಕ್ಷಣೆಯ ಸಮಯದಲ್ಲಿ ಆಗಾಗ್ಗೆ ವಿರಾಮ ತೆಗೆದುಕೊಳ್ಳಿ. 20-20-20 ನಿಯಮವನ್ನು ಅನುಸರಿಸಿ: ಪ್ರತಿ 20 ನಿಮಿಷಗಳಿಗೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ. ಸೂರ್ಯನ ಬೆಳಕಿನಿಂದ ರಕ್ಷಣೆ: ಕಣ್ಣುಗಳಿಗೆ ಹಾನಿಯಾಗದಂತೆ ತಡೆಯಲು ಸನ್ ಗ್ಲಾಸ್ ಧರಿಸಿ. ಧೂಮಪಾನ ತ್ಯಜಿಸಿ: ಧೂಮಪಾನವು…

Read More

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿಯಾಗಿದ್ದು, ಕಳೆದ ವಾರ ಮೆದೆಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ನಾಲ್ವರ ಗ್ಯಾಂಗ್ ಈಗ ಅದೇ ವಿಧ್ಯಾನಗರದ ಈರುಳ್ಳಿ ಮಲ್ಲಪ್ಪ ಲೇಔಟ್ ನಲ್ಲಿ ಪ್ರತ್ಯಕ್ಷವಾಗಿದೆ. ಇಂದು ದಿನ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಇಡೀ ಏರಿಯಾದಲ್ಲಿ ಓಡಾಟ ನಡೆಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಮಾಸ್ಕ್, ಬ್ಯಾಗ್ ಹಾಕಿಕೊಂಡು ಕೈಯಲ್ಲಿ ಮಚ್ಚು ಹಿಡಿದು ಓಡಾಟ ನಡೆಸಿದ್ದು, ಮನೆಗಳ ಸುತ್ತಮುತ್ತ ಸ್ಕೆಚ್ ಹಾಕುತ್ತಿರುವ ದೃಶ್ಯಗಳು ಸೆರೆ ಆಗಿದೆ.  ಕೆಲ ಮನೆಯವರು ಲೈಟ್ ಆನ್ ಮಾಡಿದ್ದಂತೆ ಅಲ್ಲಿಂದ ಓಡಿ ಹೋಗಿದ್ದಾರೆ. ಕಳ್ಳರ ಹಾವಳಿಯಿಂದ ಚಿತ್ರದುರ್ಗ ನಗರದ ಜನತೆ ಆತಂಕಕ್ಕೆ ಒಳಗಾಗಿದ್ದು ಜಾಗ್ರತೆಯಿಂದ ಇರುವಂತೆ ಪೊಲೀಸರ ಮನವಿ ಮಾಡಿದ್ದಾರೆ. ಇನ್ನು ಕಳ್ಳರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read More

ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ರಾಮಾಯಣ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ರಾಮಾಯಣ ಸಿನಿಮಾದಲ್ಲಿ ಯಾರು ಯಾರು ಯಾವ್ಯಾವ ಪಾತ್ರ ಕಾಣಿಸಿಕೊಂಡಿದ್ದಾರೆ ಎನ್ನುವುದು ಇದೀಗ ರಿವೀಲ್ ಆಗಿದೆ. ಬಾಲಿವುಡ್ ನ ದಂಗಲ್ ಸಿನಿಮಾ ಖ್ಯಾತಿಯ ಡೈರೆಕ್ಟರ್ ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಡೈರೆಕ್ಟರ್ ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು ಮೂವಿ 2 ಭಾಗದಲ್ಲಿ ಬರಲಿದೆ. ಹಾಲಿವುಡ್ ಖ್ಯಾತ ಸಾಹಸಿ ನಿರ್ದೇಶಕ ಗೈನೋರಿಸ್ ಈ ಸಿನಿಮಾ ತಂಡ ಸೇರಿದ್ದು ನಿರೀಕ್ಷೆ ಮತ್ತಷ್ಟು ದುಪ್ಪಟ್ಟು ಮಾಡಿದೆ. ಇನ್ನು ಯಾರು ಯಾರು ಯಾವ ಯಾವ ಪಾತ್ರ ಎಂದು ನೋಡುವುದಾದರೆ.. ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಹಾಗೂ…

Read More

ಚಿತ್ರದುರ್ಗ ಜು. 5 ಗುರುಸಿದ್ದಪ್ಪರವರು ತಮ್ಮ ಜೀವನ ಹಾಗೂ ರಾಜಕೀಯದಲ್ಲೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಹಣ, ಅಧಿಕಾರಕ್ಕೆಅಸೆಪಡೆದ ತಮ್ಮ ಪಾಲಿನ ಕೆಲಸವನ್ನು ಮಾಡಿಕೊಂಡು ಮಾರ್ಗದರ್ಶಿಗಳಾಗಿದ್ದರು ಎಂದು ಕರ್ನಾಟಕ ಪ್ರದೇಶ ಜನತಾದಳದಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್ ತಿಳಿಸಿದರು. ಚಿತ್ರದುರ್ಗ ನಗರದ ಜಿಲ್ಲಾ ಜೆ.ಡಿ.ಎಸ್ ಘಟಕದ ಜೆ.ಪಿ.ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಗುರುಸಿದ್ದಪ್ಪರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಮಾತನಾಡಿದ ಅವರು. ಗುರುಸಿದ್ದಪ್ಪರವರು ಯಾವಾಗಲೂ ಬೇರೆಯವರಿಗೆ ಒಳ್ಳೇಯದ್ದನೆ ಬಯಸುತ್ತಿದ್ದರು, ಅಲ್ಲದೆ ತಾವು ಸಹಾಬೇರೆಯವರಿಗೆ ಕೆಟ್ಟದನ್ನು ಮಾಡಿಲ್ಲ, ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ರಾಜಕೀಯಕ್ಕೆ ನೀಡಿ ಕುಟುಂಬಕ್ಕೆ ಕಡಿಮೆಸಮಯವನ್ನು ನೀಡಿದ್ದರು, 50 ವರ್ಷದಿಂದ ರಾಜಕಾರಣ ಮಾಡಿದ್ದಾರೆ ಯಾವುದೇ ರೀತಿಯ ಆಸ್ತಿ, ಹಣ, ಮಾಡಿಲ್ಲ ಯಾವುದೇಶಿಫಾರಸ್ಸ್‍ನ್ನು ಶಾಸಕರು, ಮಂತ್ರಿಗಳತ್ತ ತೆಗೆದುಕೊಂಡು ಹೋಗಿಲ್ಲ ಬೇರೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆಎಂದರು. ಇತ್ತಿಚಿನ ದಿನಮಾನದಲ್ಲಿ ರಾಜಕೀಯ ಎಂದತರೆ ಹಣ ಮಾಡುವ ಸಂಸ್ಥೆ ಎಂದು ಹಲವಾರು…

Read More

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕುರಿ ಶೆಡ್ ಹಾಗೂ ಇ ಸ್ವತ್ತು ಮಾಡಿಕೊಡಲು ಪಿಡಿಒ ಶಶಿಕಲಾ ಲಂಚ ಪಡೆದಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ರೈತರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಕುರಿ, ದನ, ಮೇಕೆ ಶೆಡ್ ಗಳ ನಿರ್ಮಾಣಕ್ಕೆ ಎಂದು ಸುಮಾರು 68 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಇದನ್ನು ಉಚಿತವಾಗಿ ರೈತರಿಗೆ ನೀಡಬೇಕಿದ್ದ ಪಿಡಿಒ ಶಶಿಕಲಾ ಒಂದೊಂದು ಶೆಡ್ ಗಳಿಗೆ 3000 ರೂಪಾಯಿ ಹಣ ಪಡೆದು, ಕೆಲಸ ಮಾಡಿಕೊಟ್ಟಿಲ್ಲ. ಕೇಳಿದ್ರೆ ಯಾರಿಗೆ ಹೇಳ್ತೀರಾ ಹೇಳಿ ಎಂಬ ಉಡಾಫೆ ಉತ್ತರ ಕೊಡ್ತಾರೆ ಮೇಲಧಿಕಾರಿಗಳ ಗಮನಕ್ಕೆ ತರುವುದಕ್ಕೂ ಮೇಡಂ ಬಿಡುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಎಲ್ಲ ಸಿಬ್ಬಂದಿಗೂ ಏನೇ ಕೆಲಸ ಮಾಡಿಕೊಡಬೇಕು ಅಂದ್ರು ಇಲ್ಲಿ ಹಣ ಕೊಡುವ ಅನಿವಾರ್ಯತೆ ಸೃಷ್ಟಿ ಮಾಡಿದ್ದಾರೆ. ಲಂಚ ಕೊಡಲಿಲ್ಲ ಅಂದ್ರೆ ಕೆಲಸ ಆಗಲ್ಲ…ಇಲ್ಲ ವಿಳಂಬ ಮಾಡ್ತಾರೆ.…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಲವಾರು ಬಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ..? ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ಐಎಎಸ್‌ ಅಧಿಕಾರಿಯಾದ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆದರೂ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಕಾರ್ಯ ನಡೆಯದೆ, ಶಾಸಕರು ದಂಗೆ ಏಳುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್‌ ಸೂಚಿಸಿದೆ. ಈ ಸಮಸ್ಯೆಗಳನ್ನು ಮರೆಮಾಚಲು ರವಿಕುಮಾರ್‌ ಹೇಳಿಕೆಯನ್ನು ವಿವಾದ ಮಾಡಲಾಗಿದೆ ಎಂದರು. ಬಿಜೆಪಿಯವರು ಮಾಡಿದರೆ ಎಫ್‌ಐಆರ್‌ ದಾಖಲಿಸುತ್ತಾರೆ. ಕಾಂಗ್ರೆಸ್‌ನವರು ಮಾಡಿದರೆ ಯಾವುದೇ ದೂರು ದಾಖಲಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಕರೆಯುತ್ತಾರೆ. ರಾಷ್ಟ್ರಪತಿಗಳಿಗೆ ಗೌರವ ಕೊಡದೆ ಏಕವಚನದಲ್ಲೇ ಮಾತಾಡುತ್ತಾರೆ. ಅಂದರೆ ಕಾಂಗ್ರೆಸ್‌ಗೆ ಬೇರೆಯೇ ರೀತಿಯ ಕಾನೂನು ಇದೆ ಎಂದಾಯಿತು. ರವಿಕುಮಾರ್‌ ಯಾವ ರೀತಿಯ ಅಶ್ಲೀಲ…

Read More