Author: Times of bayaluseeme
ಚಿತ್ರದುರ್ಗ: 2025-2026ನೇ ಸಾಲಿನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾಳೆ ನಗರದ ಎಸ್ ಆರ್ ಬಿ ಎಂ ಎಸ್ ರೋಟರಿ ಭಾಲಭವನದಲ್ಲಿ ನಡೆಯಲಿದೆ.ನಾಳೆ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಚಿತ್ರದುರ್ಗ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ ಮೂರ್ತಿ, ಕಾರ್ಯದರ್ಶಿಯಾಗಿ ಅನುರಾಧ ವಿಶ್ವನಾಥ ಸೇರಿದಂತೆ ರೋಟರಿ ಕ್ಲಬ್ ನ ಇತರೆ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಎಂ.ಕೆ.ರವೀಂದ್ರ, .ಪಿ.ಡಿ.ಜಿ.ಕೆ.ಮಧುಪ್ರಸಾದ್, .ಪಿ.ಎಚ್.ಎಫ್.ಪಿ.ಡಿ.ಜಿ.ಶುಂಭುಲಿಂಗಪ್ಪ, ಚಿನ್ಮುಲಾದ್ರಿ ವಲಯದ ಸಹಾಯಕ ರಾಜ್ಯಪಾಲರಾದ ಆರ್‍ಟಿಎನ್.ಪಿಎಚ್‍ಇ.ಕಿರಣ್ ಕುಮಾರ್‍ರವರು ಕ್ಲಬ್ಬುಲೆಟಿನ್ ರೋಟರಿ ಚಿತ್ರಾ ಬಿಡುಗಡೆ ಮಾಡಲಿದ್ದಾರೆ.
ಸತ್ಯ ಹೇಳಿದರೆ ಬೆಚ್ಚಿಬೀಳುವ ಕಾಂಗ್ರೆಸ್ ಪಕ್ಷದವರು ಆಪಪ್ರಚಾರದಲ್ಲಿ ತೊಡಗಿದ್ದಾರೆ. ಆರ್‍ಎಸ್‍ಎಸ್ ಹಾಗೂ ಆರ್‍ಎಸ್‍ಎಸ್ ಸಹಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ಬೇದ್ರೇ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನದ ಪೀಠಿಕೆಯಲ್ಲಿ ಯಾರೂ ಕೈ ಆಡಿಸಬಾರದು. ತಿದ್ದುಪಡಿ ಮಾಡಲು ಯಾವುದೇ ಅವಕಾಶವೇ ಇಲ್ಲ. ಕಲಂ ಹಾಗೂ ಅನುಚ್ಛೇದಗಳನ್ನು ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಅಂದಿನಪ್ರಧಾನಿ ಇಂದಿರಾ ಗಾಂಧಿಯವರು ಅನೈತಿಕವಾಗಿ ಮತ್ತು ರಾಜಾರೋಷವಾಗಿ ಪೀಠಿಕೆಯಲ್ಲಿ ಕೈಯಾಡಿಸಿ ಜಾತ್ಯಾತೀತ ಮತ್ತುಸಮಾಜವಾದ ಎಂಬ ಎರಡು ಶಬ್ದಗಳನ್ನು ಸೇರ್ಪಡೆ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದ್ದರು ಎಂದು ದೂರಿದ್ದಾರೆ.ಇಷ್ಟು ಮಾತ್ರವಲ್ಲದೇ ಆಲಹಾಬಾದ್ ಹೈಕೋರ್ಟ್ ಚುನಾವಣೆ ಅಕ್ರಮ ಎತ್ತಿಹಿಡಿದು ಬಂಧಿಸಲು ಆದೇಶ ನೀಡಿದ್ದನ್ನು ಸಹಿಸಲಾಗದೇ ಹಾಗೂ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಈ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಡೀ ದೇಶದ ವಿರೋಧ ಪಕ್ಷದನಾಯಕರನ್ನೆಲ್ಲ ಬಂಧಿಸಿ ದೇಶವನ್ನೇ ಬಂಧಿಖಾನೆ ಮಾಡಿದ್ದರು. ಯಾವ ಸದನದಲ್ಲೂ ಚರ್ಚೆ ಮಾಡದೇ…
ಹೊಳಲ್ಕೆರೆ : ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯಲು ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಶಾಸಕಡಾ.ಎಂ.ಚಂದ್ರಪ್ಪ ತಿಳಿಸಿದರು. ಮಲ್ಲಾಡಿಹಳ್ಳಿ ಗ್ರಾಮದಲ್ಲಿ ಐದು ಕೋಟಿ ರೂ.ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆಸಲ್ಲಿಸಿ ಮಾತನಾಡಿದರು.ಚೆಕ್‍ಡ್ಯಾಂಗಳನ್ನು ಕಟ್ಟಿಸಿರುವುದರಿಂದ ಅಂತರ್ಜಲ ಮಟ್ಟ ಜಾಸ್ತಿಯಾಗಿದೆ. ತಾಲ್ಲೂಕಿನಾದ್ಯಂತ ಡ್ಯಾಮ್, ಕೆರೆ, ಕಟ್ಟೆಗಳನ್ನುಕಟ್ಟಿಸಿದ್ದೇನೆ. ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಿದೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದುಅರ್ಥಮಾಡಿಕೊಂಡಿದ್ದೇನೆ. ಯಾವ ಜನಾಂಗಕ್ಕೂ ಅನ್ಯಾಯವಾಗಿಲ್ಲ. ಡಿಸೆಂಬರ್‍ನೊಳಗೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸುತ್ತೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಸ್ಕೂಲ್, ಕಾಲೇಜು, ಸ್ಟೇಡಿಯಂ, ಈಜುಕೊಳ, ಒಳಾಂಗಣ…
ಚಿತ್ರದುರ್ಗ ಜು.05 ದಂಡಿನ ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ನಾಲ್ಕು ವರ್ಷಗಳಿಂದ ಅರ್ಧಕ್ಕೆ ನಿಂತಿರುವಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಪಪ್ಪಿ ಸ್ಟೂಡೆಂಟ್ ವಿಂಗ್ ಸದಸ್ಯರು ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅರ್ಧಕ್ಕೆ ನಿಂತಿರುವ ಕಾಮಗಾರಿವಿಚಾರವನ್ನು ಸಂಬಂಧಪಟ್ಟ ಪಿಡಿಒ ಅವರ ಗಮನಕ್ಕೆ ತಂದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನುಮಾಡಿಸಲಾಗುವುದು, ನಾನು ಕೂಡ ಸ್ಥಳಕ್ಕೆ ವೀಕ್ಷಣೆ ಮಾಡಿ ಅತಿ ಶೀಘ್ರದಲ್ಲೇ ಕೆಲಸ ಮುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪಪ್ಪಿ ಸ್ಟೂಡೆಂಟ್ ವಿಂಗ್ ಸದಸ್ಯರಾದ ರವಿ, ಸಲೀಂ, ಗೌತಮ್ ಇದ್ದರು.
ಚಳ್ಳಕೆರೆ ನಗರದ ಹೊರವಲಯದಲ್ಲಿರುವ ಬೃಹತ್ತಾದಶ್ರೀಸಾಯಿಬಾಬಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 12ನೇ ವರ್ಷದ ಶ್ರೀಸಾಯಿ ಗುರು ಪೂರ್ಣಿಮ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಜುಲೈ 9 ಮತ್ತು 10 ಎರಡು ದಿನಗಳ ಕಾಲ ಭಕ್ತಿ, ಶ್ರದ್ದೆಯಿಂದ ಅದ್ದೂರಿಯಾಗಿ ನಡೆಸಲಾಗುವುದು ಎಂದು ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು.ಇದೆ ತಿಂಗಳ 9 ಬುಧವಾರ ಬೆಳಗ್ಗೆ 8.30ಕ್ಕೆ ಸಾಯಿಬಾಬಾರ ಬೃಹತ್ ಶೋಭಾಯಾತ್ರೆ ಬಳ್ಳಾರಿ ರಸ್ತೆಯಲ್ಲಿರುವ ಗ್ರಾಮದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಆರಂಭವಾಗಲಿದ್ದು, ವಾಲ್ಮೀಕಿ ಹರ್ಷಾನಂದ ಮಹಾಸ್ವಾಮಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಿ ಬಳಿಕ ಮಧ್ಯಾಹ್ನ ಸಾಯಿಬಾಬಾಮಂದಿರಕ್ಕೆ ತಲುಪುವುದು ಎಂದು ಮಾಹಿತಿ ನೀಡಿದರು. ಇನ್ನು ಮಧ್ಯಾಹ್ನ 12ಕ್ಕೆ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿತ್ರದುರ್ಗ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನ ಕೋಟೆಯ ಬಸವಲಿಂಗಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ಕಾರ್ಯಕ್ರಮದ…
ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ವಡೋದರ ವಾಯುನೆಲೆಯಿಂದ ಬಾಂಗ್ಲಾ ವಲಸಿಗರ ಕೈಗಳಿಗೆ ಕೋಳಹಾಕಿ ಢಾಕಾದಲ್ಲಿ ಇಳಿಸಲಾಗಿದೆ.ಕಳೆದ ತಿಂಗಳು ಅಹಮದಾಬಾದ್‌ನಲ್ಲಿ 1200 ಅಕ್ರಮ ಬಾಂಗ್ಲಾ ವಲಸಿಗರ ಮನೆಗಳನ್ನುಸರ್ಕಾರ ನೆಲೆಸಮ ಮಾಡಿತ್ತು. ಅದರ. ಮುಂದುವರಿದ ಭಾಗವಾಗಿ ಅಕ್ರಮ ವಲಸಿಗರನ್ನು ಇದೀಗ ಬಾಂಗ್ಲಾದೇಶಕ್ಕೆ ರವಾನಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ.
ನಾನೀಗ 6 ತಿಂಗಳ ಗರ್ಭವತಿ. ಅವಳಿ ಮಕ್ಕಳಿಗೆ ಅಮ್ಮನಾಗುವ ಖುಷಿಯಲ್ಲಿದ್ದೇನೆ. ನಾನು ಅವಿವಾಹಿತೆ, ಹೀಗಾಗಿ ಐವಿಎಫ್ ಮೂಲಕ ತಾಯಿಯಾಗುತ್ತಿದ್ದೇನೆ.’ಇದು ನಟಿ ಭಾವನಾ ರಾಮಣ್ಣ ಅವರ ಮಾತುಗಳು. ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ಮೂಲಕ ಮನೆಮಾತಾದ ನಟಿ 40ರ ಹರೆಯದಲ್ಲಿ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು, ‘ನನಗೆ 20, 30ರ ಹರೆಯದಲ್ಲಿ ತಾಯ್ತನದ ಬಗ್ಗೆ ಯೋಚನೆ ಇರಲಿಲ್ಲ. ಆದರೆ 40ರ ಹರೆಯಕ್ಕೆ ಬಂದಾಗ ತಾಯಿಯಾಗುವ ತುಡಿತ ಹೆಚ್ಚಾಯಿತು. ಆದರೆ ನಾನು ಅವಿವಾಹಿತೆ. ತಾಯಿಯಾಗುವುದು ಸುಲಭವಲ್ಲ. ಹಲವು ಐವಿಎಫ್ ಕ್ಲಿನಿಕ್ಗಳು ನನ್ನ ಆಸೆಗೆ ತಣ್ಣೀರೆರಚಿದವು. ಕೊನೆಗೂ ಒಂದು ಕಡೆ ಐವಿಎಫ್ ಮಾಡಲು ಒಪ್ಪಿದರು. ಮೊದಲ ಪ್ರಯತ್ನದಲ್ಲೇ ಗರ್ಭವತಿಯಾದೆ. ಈ ನನ್ನ ನಿರ್ಧಾರಕ್ಕೆ ತಂದೆ. ಮನೆಮಂದಿಯ ಬೆಂಬಲವಿದೆ. ಕೆಲವರು ನನ್ನ ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬುದು ನನಗೆ ತಿಳಿದಿದೆ. ನನ್ನ ಮಕ್ಕಳು ತಂದೆ ಇಲ್ಲದೇ ಬೆಳೆಯುತ್ತಾರೆ. ಆದರೆ ಕಲೆ, ಸಂಗೀತ, ಸಂಸ್ಕೃತಿ, ಪ್ರೀತಿ ತುಂಬಿದ ವಾತಾವರಣದಲ್ಲಿ ಬೆಳೆಯುತ್ತಾರೆ.…
ಸದಾ ಒಂದಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ವಿವಾದದಲ್ಲಿ ಮೈಮೇಲೆ ಎಳೆದುಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡುವಾಗ ನನಗೆ ಮೊದಲ ಸಿನಿಮಾದ ಚೆಕ್ ಸಿಕ್ಕಾಗ ಮನೆಯವರೆಲ್ಲ ಏನು ಮಾತಾಡಿದ್ದಾರೆ ಅನ್ನೋದು ನೆನಪಿದೆ. ಕೂರ್ಗ್ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಎಂಟ್ರಿ ಕೊಟ್ಟಿದ್ದು ನಾನು ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ರಶ್ಮಿಕಾ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅಹಂ ಬಿಟ್ಟು ಕನ್ನಡ ಚಿತ್ರರಂಗದ ಇತಿಹಾಸ ತೆರೆದು ನೋಡಿ, ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚರಂತಹ ನಟಿಯರು ನಮ್ಮ ಚಿತ್ರರಂಗಕ್ಕೆ ನೀವು ಬರುವ ಮೊದಲೇ ಎಂಟ್ರಿ ಕೊಟ್ಟಿದ್ರು.ನೀವು ನಿನ್ನೆ ಮೊನ್ನೆ ಬಂದು ಹೀಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಚಿತ್ರದುರ್ಗ : ತುರುವನೂರು ಹೋಬಳಿಯ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡುತ್ತಿದ್ದೇನೆ. 3 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನ ಮಾಡಲಾಗುತ್ತಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು. ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮತ್ತು ಭವನ, ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ತುರುವನೂರು ಹೋಬಳಿಯ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದ್ದೇನೆ, ಎಲ್ಲಾ ಕಾಮಗಾರಿಗಳು ಸಹ ಚಾಲ್ತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಹೋಬಳಿಯ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದರು. ತುರುವನೂರು ಹೋಬಳಿಯ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ವಿಶೇಷ ಪ್ರದೇಶಾಭಿವೃದ್ದಿ ಯೋಜನೆಯಡಿ ಸುಮಾರು 2 ಕೋಟಿ ವೆಚ್ಚದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಿಂದ ಚಿಕ್ಕಪ್ಪನಹಳ್ಳಿ ಗ್ರಾಮದವರೆಗೆ ಸಂಪರ್ಕ ರಸ್ತೆಯ ಡಾಂಬರೀಕರಣ ಮಾಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲು ಇಂಜಿನಿಯರ್ ಗೆ ಮತ್ತು ಗುತ್ತಿಗೆದಾರನಿಗೆ ಸೂಚನೆ ನೀಡಿದ್ದೇನೆ.ಚಿಕ್ಕಗೊಂಡನಹಳ್ಳಿ ಬೆಸ್ತರ ಕಾಲೋನಿಯಲ್ಲಿ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕ ಉದ್ಘಾಟನೆ ಮಾಡಿದ್ದು, ಉತ್ತಮವಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು…
ವಿಜಯನಗರ: ಸೋಮವಾರದಿಂದ ಉತ್ತರ ಕರ್ನಾಟಕದ ಶಾಸಕರ ಜೊತೆ ಸುರ್ಜೀವಾಲ ಮಾತನಾಡಲಿದ್ದಾರೆ. ನಮ್ಮಲ್ಲಿ ಯಾವ ಗುಂಪುಗಳು ಇಲ್ಲ ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿಯವರು ವರ್ಷಾಂತ್ಯಕ್ಕೆ ಸರ್ಕಾರ ಬದಲಾಗುತ್ತೆ ಎಂಬ ಸುಳ್ಳನ್ನು ಮತ್ತೆ ಮತ್ತೆ ಹೇಳಿ ಸತ್ಯ ಅಂತ ಹೇಳುತ್ತಿದ್ದಾರೆ. ಅದು ಅವರ ಭ್ರಮೆ. ಸಿಎಂ ಬದಲಾವಣೆ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾವು ಏನ್ ಮಾತಾಡುವುದಿಲ್ಲ. ನಾವು ಎಲ್ಲಾ ಶಾಸಕರು ಒಗ್ಗಟ್ಟಾಗಿ ಇದ್ದೇವೆ. ಕೆಲವರು ಸಚಿವರು ಶಾಸಕರ ಕೈಗೆ ಸಿಗುವುದಿಲ್ಲ ಎಂದು ಹೇಳ್ತಿದ್ದಾರೆ. ಅಂತಹ ದೂರುಗಳು ನನಗೆ ಬಂದಿಲ್ಲ. ಇನ್ನು ಶಾಸಕ ಬಿ ಆರ್ ಪಾಟೀಲ ಕೆಲ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ ಅವರನ್ನು ಕರೆದು ಸಿಎಂ ಮಾತಾಡಿದ್ದಾರೆ ಎಲ್ಲವೂ ಸರಿ ಹೋಗುತ್ತದೆ ಎಂದರು
Subscribe to Updates
Get the latest creative news from FooBar about art, design and business.