Author: Times of bayaluseeme

ಹಾಲಿ ಐಪಿಎಲ್ ಚಾಂಪಿಯನ್ RCB ಫ್ರಾಂಚೈಸಿಯಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಆರ್ ಸಿಬಿ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆ ಡಿಯಾಜಿಯೊ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿರುವ ಪಾಲನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಡಿಯಾಜಿಯೊ ಸಂಭಾವ್ಯ ಸಲಹೆಗಾರರೊಂದಿಗೆ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದು, 17,000 ಕೋಟಿ ರೂಪಾಯಿಗಳ ಮೌಲ್ಯಮಾಪನದ ನಿರೀಕ್ಷೆ ಇರಬಹುದು ಎನ್ನಲಾಗಿದೆ. ಈ ಕುರಿತು ಇನ್ನೂ ಯಾವುದೇ ನಿರ್ಧಾರ ಅಂತಿಮವಾಗಿಲ್ಲವಾದರೂ ತಂಡ ಷೇರು ಮಾರಾಟದ ಬಗೆಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇವೆ.

Read More

1. ದಸರಾ ಹಬ್ಬವನ್ನು ದಶೈನ್ ಎಂಬ ಹೆಸರಿನಿಂದ ಆಚರಿಸುವ ದೇಶ ‘ನೇಪಾಳ’. 2. ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲಲು ‘ಶಿವನ’ ತ್ರಿಶೂಲವನ್ನು ಬಳಸಿದಳು. 3. ದಸರಾ ಎಂಬ ಪದವು ‘ಸಂಸ್ಕೃತ’ದಿಂದ ಬಂದಿದೆ. 4. ದಸರಾ ಹಬ್ಬವು ‘ಆಶ್ವಯುಜ’ ತಿಂಗಳಲ್ಲಿ ಬರುತ್ತದೆ. 5. ಈ ಮಾಸದಲ್ಲಿ ದುರ್ಗಾ ದೇವಿಯ ಆರಾಧನೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ದಸರಾ ಎಂಬುದು ಆಚರಣೆಗಳ ಮಿಶ್ರಣ. ಹೊಸ ಬಟ್ಟೆಗಳನ್ನು ಧರಿಸುವುದು, ಆಯುಧಗಳನ್ನು ಪೂಜಿಸುವುದು, ರಾವಣನನ್ನು ಸುಡುವುದು ಇತ್ಯಾದಿಗಳು ಈ ಹಬ್ಬದಂದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಮೈಸೂರ್‌ನಲ್ಲಿ ದಸರಾ ಸಂಭ್ರಮದಿಂದ ಆಚರಿಸುತ್ತಾರೆ. ತೆಲಂಗಾಣದಲ್ಲಿ ಅಲೈ-ಬಲೈ & ಕುಂಬಳಕಾಯಿಗಳನ್ನು ಬಲಿಕೊಡುವುದು ಸಹ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಏಕಕಾಲದಲ್ಲಿ 3 ತುಂಡುಗಳಾಗಿ ಮೇಕೆ ಬಲಿ ನೀಡುವ ಪದ್ಧತಿಯೂ ಇತ್ತು. ನಿಮ್ಮ ಪ್ರದೇಶದಲ್ಲಿ ಹೇಗೆ ಆಚರಿಸುತ್ತಾರೆ ಎಂದು ಕಾಮೆಂಟ್ ಮಾಡಿ.

Read More

ಅಹ್ಮದಾಬಾದಿನಲ್ಲಿ ಇಂದಿನಿಂದ ಆರಂಭವಾದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರೋಸ್ಟನ್ ಚೇಸ್ ನಾಯಕತ್ವದ ವಿಂಡೀಸ್ ಮೊಹ್ಮದ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ಕುಸಿದು ಕೇವಲ 162 ರನ್ ಗೆ ಆಲೌಟ್ ಆಗಿದೆ. ಸಿರಾಜ್ ನಾಲ್ಕು ವಿಕೆಟ್ ಪಡೆದರೆ, ಬುಮ್ರಾ ಮೂರು ವಿಕೆಟ್ ಉರುಳಿಸಿ ವಿಂಡೀಸ್ ಪತನಕ್ಕೆ ಕಾರಣರಾದರು. ಬಳಗ ಭಾರತದ ವೇಗಿಗಳಾದ ಮಹಮದ್ ಸಿರಾಜ್ ಮತ್ತು ಜಸ್ ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ಕೇವಲ 162 ರನ್ ಗೇ ಆಲೌಟ್ ಆಗಿದೆ.

Read More

ಹೈಕಮಾಂಡ್ ನಾಯಕರ ಸೂಚನೆ ಪಾಲಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ ಶಾಸಕ ರಂಗನಾಥ್, ಶಿವರಾಮೇಗೌಡ ಸೇರಿದಂತೆ ಈ ಬಗ್ಗೆ ಚರ್ಚಿಸುವವರಿಗೆ ನೋಟೀಸ್ ನೀಡಲು ಸೂಚನೆ ಬೆಂಗಳೂರು, ಅ.02: “ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಅಧಿಕಾರ ಹಂಚಿಕೆ ವಿಚಾರವಾಗಿ ಮತ್ತೆ ಚರ್ಚೆ ಆರಂಭವಾಗುತ್ತಿವೆ ಎಂದು ಕೇಳಿದಾಗ, “ಯಾವ ಅಧಿಕಾರ ಹಂಚಿಕೆ ವಿಚಾರ ಇಲ್ಲ. ಈ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ. ಶಾಸಕ ರಂಗನಾಥ್ ಸೇರಿದಂತೆ ಈ ವಿಚಾರವಾಗಿ ಯಾರೆಲ್ಲಾ ಮಾತನಾಡಿದ್ದಾರೋ ಅವರಿಗೆ ನೋಟೀಸ್ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಅವರಿಗೆ ಸೂಚಿಸಿದ್ದೇನೆ. ಈ ವಿಚಾರವಾಗಿ ಚರ್ಚೆ ಮಾಡಬಾರದು ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ…

Read More

ನಟ ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಸಿರುವ ‘ಕಾಂತಾರ-1’ ಸಿನಿಮಾ ಅಬ್ಬರ ಸೃಷ್ಟಿಸಿದೆ. 30 ದೇಶಗಳ 7000 ಥೇಟರುಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಿದ್ದು, ಕನ್ನಡದ ಯಾವ ಸಿನಿಮಾವು ಈ ಮಟ್ಟದ ಅಬ್ಬರ ಸೃಷ್ಟಿಸಿರಲಿಲ್ಲ ಎಂಬುದು ಗಮನಾರ್ಹ. ಉಳಿದಂತೆ 34 ನಿಮಿಷಗಳಲ್ಲೇ 10 ಸಾವಿರ ಟಿಕೆಟ್ ಬುಕ್ ಆಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಇಷ್ಟೊಂದು ಭರದಲ್ಲಿ ಟಿಕೆಟ್ ಬಿಕರಿಯಾದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಕಾಂತಾರ-1 ಭಾಜನವಾಗಿದೆ. 1200ರೂವರೆಗೂ ಟಿಕೆಟ್ ಮಾರಾಟವಾಗಿರುವ ಸಂಗತಿ ಕಾಂತಾರ ಕ್ರೇಜ್ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ.

Read More

ಪ್ರಧಾನಿ ಮೋದಿ ಅವರು ತಮ್ಮ X ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿಜಯದಶಮಿ ಶುಭಾಶಯ ಕೋರಿದ್ದಾರೆ. ನಕಾರಾತ್ಮಕತೆ ಮೇಲೆ ಸಕಾರಾತ್ಮಕತೆಯನ್ನು ಸಂಕೇತಿಸುವ ಹಬ್ಬವೇ ವಿಜಯದಶಮಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ವಿಜಯ ದಶಮಿ ಎಂಬುದು ದುಷ್ಟತನ ಹಾಗೂ ಸುಳ್ಳಿನ ಮೇಲೆ ಒಳ್ಳೆಯದು ಹಾಗೂ ಸತ್ಯದ ವಿಜಯ ಎಂದು ಸಹ ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ಹಬ್ಬದ ಶುಭ ಸಂದರ್ಭವು ಧೈರ್ಯ, ಬುದ್ಧಿವಂತಿಕೆ ಹಾಗೂ ಭಕ್ತಿಯ ಹಾದಿಯಲ್ಲಿ ನಡೆಯಲು ಎಲ್ಲರಿಗೂ ಸ್ಫೂರ್ತಿ ನೀಡಲಿ ಶುಭಾಶಯಗಳು ಎಂದು ಬರೆದಿದ್ದಾರೆ. ಇಂದು ಗಾಂಧಿ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಮಹಾತ್ಮ ಗಾಂಧೀಜಿಯನ್ನು ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ದೇಶದ ಬದಲಾವಣೆಗೆ ಸರಳತೆ, ಧೈರ್ಯಗಳು ಸಾಧನವಾಗಿ ಹೇಗೆ ಕಾರಣವಾಗಬಲ್ಲವು ಎಂಬುದನ್ನು ಗಾಂಧೀಜಿ ಅವರನ್ನು ನೋಡಿ ಕಲಿಯಬೇಕು. ಅಹಿಂಸೆ, ಕರುಣೆ, ಸೇವೆ ಜನಸಮುದಾಯವನ್ನು ಸಬಲೀಕರಣಗೊಳಿಸುವ ಪ್ರಮುಖ ಸಾಧನಗಳು ಎಂದು ಅವರು ನಂಬಿದ್ದರು. ಭಾರತದ ವಿಕಸಿತೆಗೆ ಅವರ ಹಾದಿಯನ್ನೇ ಅನುಸರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ‘ಜೈ ಜವಾನ್ ಜೈ ಕಿಸಾನ್’ ಎಂಬ…

Read More

ಬೆಂಗಳೂರು, ಅ.1: ಎಐಸಿಸಿ ಅಧ್ಯಕ್ಷರೂ ಹಾಗು ಮಾರ್ಗದರ್ಶಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್‌. ಪಾಟೀಲ್* ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಖರ್ಗೆ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರು ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡಿದ್ದರಿಂದ ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇರಿಸಿದ್ದಾರೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ವೈದ್ಯರ ಸಲಹೆ-ಸೂಚನೆಯಂತೆ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಎಂದಿನ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ.

Read More

ಚಿತ್ರದುರ್ಗ :ಚಿತ್ರದುರ್ಗ ಕೋಟೆಯ ಇತಿಹಾಸವನ್ನು ಸಾರುವಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಪಾತ್ರ ಮುಖ್ಯವಾಗಿದುದ್ದು ಎಂದು ರಾಷ್ಟ್ರೀಯ ಹೆದ್ದಾರಿ-48ರ ತಹಶೀಲ್ದಾರ್ ನಾಗವೇಣಿ ಹೇಳಿದರು. ನಗರದ ಕೆ.ಎಸ್.ಟಿ.ಡಿ.ಸಿ, ಮಯೂರ ದುರ್ಗ ಹೋಟೆಲ್‍ನಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ  ಆಯೋಜಿಸಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   ಮಾರ್ಗದರ್ಶಿಗಳು ಪ್ರವಾಸಿಗರಿಗೆ ಸೂಕ್ತ ಹಾಗೂ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಚಿತ್ರದುರ್ಗ ಗತಿ ಇತಿಹಾಸವನ್ನು ಕಣ್ಣೆದುರು ತೆರೆದಿಡುವ ಕೆಲಸ ಮಾಡಬೇಕು. ಕೋಟೆ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಶುಚ್ಛಿತ್ವವನ್ನು ಕಾಪಾಡಿಕೊಳ್ಳಬೇಕು. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಹೆಚ್ಚು ಹೆಚ್ಚು ಪ್ರವಾಸಿಗರು ಜಿಲ್ಲೆ ಆಗಮಿಸಿದಷ್ಟು ಜಿಲ್ಲೆ ಪ್ರಗತಿ ಕಾಣಲಿದೆ. ಹೆಚ್ಚು ಪ್ರಚಲಿತವಿಲ್ಲದ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಹ ಹೊರಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ನಾಗವೇಣಿ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಹೆಚ್. ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಶ್ರೀಮಂತ ಇತಿಹಾಸ, ವಾಸ್ತುಶಿಲ್ಪ, ಸಾಂಸ್ಕøತಿಕ ಪರಂಪರೆ, ಮತ್ತು ಪ್ರಕೃತಿ ಸೌಂದರ್ಯವನ್ನು ಪ್ರದರ್ಶಿಸುವ ಮೂಲಕ…

Read More

ಚಿತ್ರದುರ್ಗ: ದುಶ್ಚಟಗಳನ್ನು ತ್ಯಜಿಸಿ ಬದಲಾವಣೆಯ ಕಡೆ ಗಮನ ನೀಡಿದಾಗ ಮಾತ್ರ ಮಾದಿಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಪ್ರತಿಪಾದಿಸಿದರು.ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷ್ಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು ಸರ್ಕಾರ ನಿಮ್ಮ ಉನ್ನತಿಯ ಬಗ್ಗೆ ಯೋಚಿಸುವುದಿಲ್ಲ ನಿಮ್ಮ ಬೆಳವಣಿಗೆಗೆ ನೀವೇ ಶಿಲ್ಪಿಗಳಾಗಬೇಕು ಕುಡಿತ, ಅನಕ್ಷರತೆ, ಮಾದಿಗ ಸಮುದಾಯಕ್ಕೆ ಶಾಪವಾಗಿದೆ. ನಾನು ಕೂಡ ದುಶ್ಚಟಕ್ಕೆ ಒಳಗಾಗಿದ್ದಾರೆ ಹಮಾಲಿ ಕೆಲಸ ಮಾಡಿಕೊಂಡು ಬದುಕಬೇಕಿತ್ತು ಕೆಟ್ಟ ಚಟಗಳಿಂದ ದೂರ ಉಳಿದಿದ್ದಕ್ಕೆ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.ನಾವು ಸಾಗುತ್ತಿರುವ ದಾರಿ ಸರಿಯೋ, ತಪ್ಪೋ ಎನ್ನುವುದನ್ನು ನಿರ್ಣಯಿಸುವ ವಿವೇಕ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಆದರೆ ನಾವು ಕೆಟ್ಟ ವಿಷಯಗಳಿಗೆ ಆದ್ಯತೆ ನೀಡಿ ಕುಟುಂಬವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿಯವರು ಶಿಕ್ಷಣ ಪಡೆಯದ ಹೊರತು ವ್ಯಕ್ತಿಯ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಮನೆಯ…

Read More

ಚಿತ್ರದುರ್ಗ:ತಾಂತ್ರಿಕ ಯುಗದಲ್ಲಿ ಯಂತ್ರಗಳ ಬಳಕೆಯಿಂದ ಸಾರ್ವಜನಿಕರು ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜೀವನ ಶೈಲಿ ಬದಲಾಯಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಸ್ತ ನಾರಿ ಸಶಕ್ತ ಪರಿವಾರ ಅಭಿಮಾನದಡಿ ಅಸಾಂಕ್ರಾಮಿಕ ರೋಗಗಳ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪೌಷ್ಟಿಕ ಸಮತೋಲನ ಆಹಾರ, ಧಾನ್ಯಗಳ ಬಳಕೆ, ಜೀರ್ಣ ಕ್ರಿಯೆ ಆಗುವ ನಾರಿನ ಅಂಶ ಇರುವ ತರಕಾರಿಗಳ ಬಳಕೆ ಮಾಡಿ ಅಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದು ಎಂದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಕುಮಾರ್ ಮಾತನಾಡಿ, ಮದ್ಯಪಾನ ಧೂಮಪಾನದಂತಹ ದುಶ್ಚಟಗಳಿಂದ ದೂರ ಇದ್ದು, ನಿಯಮಿತ ವ್ಯಯಾಮ, ಧ್ಯಾನ ಅಭ್ಯಾಸ ಮಾಡುವುದರೊಂದಿಗೆ 30 ವರ್ಷ ಮೇಲ್ಪಟ್ಟ ಸಾರ್ವಜನಿಕರು ಸಮೀಪದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಸಾಂಕ್ರಾಮಿಕ ರೋಗಗಳ ಪರೀಕ್ಷೆಗೆ ಒಳಪಡಬೇಕೆಂದರು.ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾಹಿತಿ…

Read More