Author: Times of bayaluseeme

ಪರಿಶಿಷ್ಟ ಜಾತಿ ಸಮೀಕ್ಷೆ ಮಾಡುವಾಗ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬೆಂಗಳೂರು ನಾಗರಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಧಿಕಾರಿಗಳನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡಿರುವ ಅಧಿಕಾರಿ ರಮೇಶ್, ಪೆದ್ದರಾಜು ಮತ್ತು ಸಿ ಸೆಂಥಿಲ್ ಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ವಲಯ ಆಯುಕ್ತ ಸ್ನೇಹಲ್ ಆರ್ ಜುಲೈ 2 ರಂದು ಹೊರಡಿಸಿದ ಅಮಾನತು ಆದೇಶದ ಪ್ರಕಾರ, ಕಂದಾಯ ನಿರೀಕ್ಷಕ ರಮೇಶ್ ಮತ್ತು ತೆರಿಗೆ ಸಂಗ್ರಾಹಕ ಪೆದ್ದರಾಜು ಅವರು ತಮ್ಮ ಅಡಿಯಲ್ಲಿ ಕೆಲಸ ಮಾಡುವ ಗಣತಿದಾರರ ಮನೆಯ ನಿವಾಸಿಗಳನ್ನು ಸಂಪರ್ಕಿಸಿ ಸಮೀಕ್ಷೆ ಪೂರ್ಣಗೊಳಿಸಿದ ನಂತರ ಅಂತಹ ಮನೆಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಮುಗಿದ ನಂತರ, ಅವರು ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವನ್ನು ಅಪ್‌ಲೋಡ್ ಮಾಡಬೇಕಾಗಿತ್ತು.ಆದರೆ, ಗಣತಿದಾರರು ಮತ್ತು ಸಿಬ್ಬಂದಿ HRBR ಲೇಔಟ್‌ನಲ್ಲಿ ಆಯಾ ಮನೆಗಳ ಮಾಲೀಕರು ಮತ್ತು ನಿವಾಸಿಗಳನ್ನು ಸಂಪರ್ಕಿಸಿ ಜಾತಿ ಗಣತಿ ನಡೆಸದೆಯೇ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿರುವುದು…

Read More

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಶಿಫಾರಸು ಮಾಡಿದ್ದಾರೆ. ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ. ವೇತನ ಪಾವತಿಸದಿರುವುದೂ ಕರ್ತವ್ಯಲೋಪ: ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ. ಹೊರಗುತ್ತಿಗೆ…

Read More

ಚಿತ್ರದುರ್ಗ : ಸಾಮಾಜಿಕ ಸಂಘರ್ಷ ಸಮಿತಿ-ಚಿತ್ರದುರ್ಗ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ತುಮಕೂರುಸಹಯೋಗದೊಂದಿಗೆ ಜು.6 ರಂದು ಬೆಳಿಗ್ಗೆ 11 ಗಂಟೆಗೆ ವಿಜ್ಞಾನ ಕಾಲೇಜು ಎದುರು ಆದಿ ಕರ್ನಾಟಕ ಹಾಸ್ಟೆಲ್‍ನಲ್ಲಿಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಧೃವಿಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನ ಆಚರಿಸಲಾಗುವುದು. ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಸಿ.ಚಂದ್ರಶೇಖರ್ ಜನ್ಮದಿನ ಉದ್ಗಾಟಿಸುವರು. ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ,ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶಪ್ಪ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿಮಲ್ಲಿಕಾರ್ಜುನ್, ಉಪಾಧ್ಯಕ್ಷ ಬಸವನಾಳ್, ಸೂಳ್ಯಾ ಜಿಲ್ಲೆ ಅರಣ್ಯಾಧಿಕಾರಿ ನಂದಗೋಪಾಲ್, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಸಾಹಿತಿ ದು.ಸರಸ್ವತಿ, ಶಂಕರ್, ನಿವೃತ್ತ ಪ್ರಾಚಾರ್ಯರಾದ ವಿ.ಬಸವರಾಜ್, ಎಂ.ಡಿ.ರವಿ,ಇಮ್ತಿಯಾಜ್ ಹುಸೇನ್ ಇನ್ನು ಅನೇಕರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಬನ್ನೇರುಘಟ್ಟ ಪ್ರಕೃತಿ ಶಿಬಿರದಲ್ಲಿ…

Read More

ಚಿತ್ರದುರ್ಗ ಜು. 04 ಹೊಳಲ್ಕೆರೆ ಪಟ್ಟಣದಲ್ಲಿ ಕರ್ನಾಟಕ ಫ್ಯಾಮಿಲ್ಸಿ ಅಸೋಸಿಯೇಷನ್‍ವತಿಯಿಂದ ಸಾರ್ವಜನಿಕರಿಗಾಗಿ ಮನೋರಂಜನಾ ಕೇಂದ್ರವನ್ನುಕಾನೂನು ಪ್ರಕಾರವಾಗಿ ನಡೆಸುತ್ತಿದ್ದರು ಸಹಾ ಪೋಲಿಸರು ವಿನಾ ಕಾರಣ ತೊಂದರೆಯನ್ನು ನೀಡುತ್ತಿದ್ದಾರೆ, ಯಾವುದೇಕಾರಣವನ್ನು ನೀಡದೇ ನಮ್ಮಲ್ಲಿ ಆಟವನ್ನು ಆಡುವ ಸದಸ್ಯರನ್ನು ತಪಾಸಣೆಗೆ ಒಳಪಡಿಸಿ ಅವರನ್ನು ಮುಜುರಗಕ್ಕೆ ಈಡುಮಾಡುತ್ತಿದ್ದಾರೆ ಎಂದು ಕರ್ನಾಟಕ ಫ್ಯಾಮಿಲ್ಸಿ ಅಸೋಸಿಯೇಷನ್‍ನ ಅಧ್ಯಕ್ಷರಾದ ನಾಗರಾಜು ಪೋಲಿಸರ ವಿರುದ್ದ ಕಿಡಿ ಕಾರಿದ್ದಾರೆ. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಪೂರ್ವಪರ ಮಾಹಿತಿಯನ್ನು ನೀಡದೇ ಕ್ಲಬ್‍ನಲ್ಲಿ ಆಟವಾಡುತ್ತಿದವರನ್ನು ಪೊಲೀಸ್‍ವ್ಯಾನ್‍ನಲ್ಲಿ ಹತ್ತಿಸಿಕೊಂಡು ಗಾಂಜಾ ಸೇವನೆ ಮಾಡಿದ್ದಾರೆಎಂದು ಆರೋಪಿಸಿ ಜಿಲ್ಲಾಸ್ಪತ್ರೆಗೆ ಕರೆದು ತಂದು ತಪಾಸಣೆಗೆ ಒಳಪಡಿಸಿದ್ದಾರೆ.. ಇದರಲ್ಲಿ ಯಾರು ಸಹ ಗಾಂಜಾ ಸೇವನೆ ಮಾಡಿಲ್ಲ.ಅದಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಲಾಗಿದೆ ನಾವುಕ್ಲಬ್‍ಗೆ ಸಂಬಂಧಪಟ್ಟಂತೆ ಕಾನೂನು ಪ್ರಕಾರವಾಗಿ ಎಲ್ಲಾ ರೀತಿಯಾದಂತಹ ದಾಖಲಾತಿಗಳನ್ನು ಹೊಂದಿದ್ದೇವೆ ಎಂದರು. ಕಾನೂನು ಪ್ರಕಾರ ಎಲ್ಲಾ ದಾಖಲಾತಿಗಳು ಇದ್ದರೂ ಸಹ ಪೊಲೀಸÀರು 2-3 ದಿನಕ್ಕೊಮ್ಮೆ ನಮ್…

Read More

ಚಿತ್ರದುರ್ಗ ಜು. 04 ನಗರದ ಸೀಬಾರದ ಬಳಿಯಲ್ಲಿನ ಎಸ್ಸೆನ್ ಸ್ಮಾರಕಕ್ಕೆ ಶುಕ್ರವಾರ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭೇಟಿ ನೀಡಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಶ್ರೀಗಳು ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪರವರ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ವಿವಿಧ ಕಾರ್ಯಕ್ರಮಗಳ ಭಾವಚಿತ್ರವನ್ನು ವಿಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಎಸ್ಸೆನ್ ಸ್ಮಾರಕದ ಟ್ರಸ್ಟ್‍ನ ಗೌ.ಕಾರ್ಯದರ್ಶಿ ಹೆಚ್ ಹನುಮಂತಪ್ಪ, ಕೆ.ಇ.ಬಿ.ಷಣ್ಮುಖಪ್ಪ, ನಗರಾಭಿವೃದ್ದಿಪ್ರಾಧಿಕಾರದ ಅಧ್ಯಕ್ಷ ಎಂ. ಕೆ.ತಾಜ್‍ಪೀರ್, ಪಂಚಮಸಾಲಿ ಸಮಾಜದ ಗುತ್ತಿನಾಡ್ ಪ್ರಕಾಶ್, ಹೇಮರೆಡ್ಡಿ ಮಲ್ಲಮ್ಮ ಸಮಾಜದಕಾರ್ಯದರ್ಶಿ ಡಿ ಟಿ ಶಿವನಂಜಪ್ಪ, ಶಿವಶಿಂಪಿ ಸಮಾಜದ ಇ.ಎಸ್. ಜಯದೇವಮೂರ್ತಿ, ಸಾಹಿತಿ ನಿರಂಜನ ದೇವರಮನೆ,ಬಸವರಾಜ ಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ಪಂಚಪೀಠಗಳ ಪರಮಭಕ್ತ ಕೆ ಸಿರುದ್ರೇಶ್, ಗೌಳಿ ಸಮಾ ಜದ ಜಾಲಿಕಟ್ಟೆ ರುದ್ರಪ್ಪ,ಲೋಕೇಶ್, ಬೃಹನ್ಮಠದ ಎಂ.ಜೆ.ರುದ್ರ ಮೂರ್ತಿ, ತವಂದಿ ರಾಜ, ಕೆ.ಸಿ. ಗುರು ಬಸವರಾಜು, ಸಿಬಾರದ ಸುತ್ತಮುತ್ತಲಿನ ಭಕ್ತರು ಉಪಸ್ಥಿತರಿದ್ದರು.

Read More

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು ಬಿಟ್ಟರೆ ಬೇರೆ ಆಯ್ಕೆಗಳು ಇಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಅಸಹಾಯಕತೆ ಅಲ್ಲ ಅದು ಪಕ್ಷ ನಿಷ್ಠೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು ಉಪ ಮುಖ್ಯಮಂತ್ರಿಗಳು ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ. ಅವರು ಹೈಕಮಾಂಡ್ ಹೇಗೆ ಹೇಳುತ್ತದೆ ಹಾಗೆ ಕೇಳುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಆಗಲಿ. ಆಗಂತ ಯಾರು ಸಹ ಅಧಿಕಾರ ಬೇಡ ಅಂತೆಲ್ಲ ರಾಜಕೀಯ ಸನ್ಯಾಸಿಗಳು ಆಗಲ್ವಲ್ಲ ಎಂದು ಹೇಳಿದರು. ಇನ್ನು ಯಾರಿಗೆಲ್ಲ ಯೋಗ ಇದೆ ಅವರು ಸಿಎಂ ಆಗ್ತಾರೆ. ಯಾಕೆ ಬಿಜೆಪಿಯಲ್ಲಿ ಸದಾನಂದ ಗೌಡ್ರು ಸಣ್ಣಪುಟ್ಟ ಅಧ್ಯಕ್ಷ ಸ್ಥಾನಕ್ಕೆ ಪರದಾಡುವಾಗ ಸಿಎಂ ಆಗಲಿಲ್ವೆ, ಬೊಮ್ಮಾಯಿ ಆಕಸ್ಮಿಕವಾಗಿ ಮುಖ್ಯಮಂತ್ರಿ ಪಟ್ಟ ಸಿಗಲಿಲ್ವೆ ಹಾಗೆ ಅವ್ರ ಯೋಗ ಬಂದಾಗ ಆಗ್ತಾರೆ.ಇತಿಹಾಸದಲ್ಲಿ ಎಂತೆಂತವರು ಸಿಎಂ ಆಗಿದ್ದಾರೆ.ಹಾಗೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಸಿಎಂ ಆಗಬಹುದು. ಸಿದ್ದರಾಮಯ್ಯ, ಡಿಕೆಶಿ ಚೆನ್ನಾಗಿ ಇದ್ದಾರೆ, ಮುಂದೆಯೂ ಇರ್ತಾರೆ ಬೇರೆ ಪಕ್ಷದವರಿಗೆ ಮಾತ್ರ…

Read More

ಮಕ್ಕಳ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಏಳು ಸಲಹೆಗಳು:  ವ್ಯಾಯಾಮ, ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡಿ, ನೀರು ಬಡಿಸಿ, ತೂಕವನ್ನು ಕಾಪಾಡಿಕೊಳ್ಳಿ, ಔಷಧಿಗಳನ್ನು ಸರಿಯಾಗಿ ಬಳಸಿ ಮತ್ತು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ವಯಸ್ಕರಲ್ಲಿ ಮೂತ್ರಪಿಂಡದ ಕಾಯಿಲೆ ಸಾಮಾನ್ಯವಾಗಿದೆ, ಮತ್ತು ಮಕ್ಕಳು ಕಲಿಯುವ ಅನೇಕ ಅಭ್ಯಾಸಗಳು ಅವರು ವಯಸ್ಸಾದಂತೆ ಮೂತ್ರಪಿಂಡದ ಆರೋಗ್ಯಕ್ಕೆ ವೇದಿಕೆಯನ್ನು ಹೊಂದಿಸಬಹುದು. ನಿಮ್ಮ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ತಮ್ಮ ಮೂತ್ರಪಿಂಡಗಳನ್ನು ರಕ್ಷಿಸಲು ನೀವು ಸಹಾಯ ಮಾಡಬಹುದು. ನಿಮ್ಮ ಮಗುವಿನ ಭವಿಷ್ಯದ ಮೂತ್ರಪಿಂಡದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಈಗಲೇ ಅನುಸರಿಸಲು ಪ್ರಾರಂಭಿಸಬೇಕಾದ ಏಳು ಸುವರ್ಣ ನಿಯಮಗಳು ಇಲ್ಲಿವೆ. ನಿಯಮಿತ ವ್ಯಾಯಾಮ/ಚಟುವಟಿಕೆ/ಆಟ:  ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯು ನಿಮ್ಮ ಮಗುವಿಗೆ ಉತ್ತಮ ಭಾವನೆ ನೀಡಲು ಮತ್ತು ಅವರ ಆರೋಗ್ಯವನ್ನು ಸುಧಾರಿಸಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಯು ನಿಮ್ಮ ಮಗುವಿನ ಮೂಳೆಗಳು, ಸ್ನಾಯುಗಳು, ಹೃದಯ ಮತ್ತು ಮೂತ್ರಪಿಂಡಗಳು ಸೇರಿದಂತೆ ದೇಹದ ಅನೇಕ ಭಾಗಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನಿಮ್ಮ ಮಗುವಿನ ವೇಳಾಪಟ್ಟಿಯಲ್ಲಿ…

Read More

ಹಿರಿಯೂರು: ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿ ಸುಧಾರಣೆ ತರುವುದಕ್ಕಾಗಿ ಎಲ್ಲಾ ಉಪನ್ಯಾಸಕರು ಚಿಂತನ -ಮಂಥನ ನಡೆಸಬೇಕಿದೆ ಎಂದು ಶಾಲಾ ಶಿಕ್ಷಣ ಉಪ ನಿರ್ದೇಶಕ ಕೆ ತಿಮ್ಮಯ್ಯ ಉಪನ್ಯಾಸಕರುಗಳಿಗೆ ಸಲಹೆ ನೀಡಿದರು. ಹಿರಿಯೂರಿನ ವಾಗ್ದೇವಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಲೂಕಿನ ಎಲ್ಲಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ ತರಬೇಕಿದೆ ಹಾಗೂ ಇಲ್ಲಿ ಸೇರಿರುವ ಎಲ್ಲಾ ಹಿರಿಯ ಮತ್ತು ಕಿರಿಯ ಉಪನ್ಯಾಸಕರು ತಮ್ಮ ಪಾಠ ಪ್ರವಚನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ತಮ್ಮ ಅಧ್ಯಯನ ಮತ್ತು ಅನುಭವದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪನವರು ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರು,ಪ್ರಾಚಾರ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು ಎಲ್ಲರೂ ಸೇರಿ ಚಿಂತನ ಮಂಥನ ನಡೆಸಿ ಸುಧಾರಣೆಗೆ ತರಬೇಕಿದೆ ಎಂದು ಹೇಳಿದರು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಮಾತನಾಡಿದರು.…

Read More

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 393 ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ಏಕಕಾಲಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡಿಜಿಟಲ್ ವ್ಯವಸ್ಥೆಯ ಮೂಲಕ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಸಾಂಕೇತಿಕವಾಗಿ ಚಾಲನೆ  ನೀಡಿದರು.ನಂತರ ಮಾತನಾಡಿದ ಡಿಹೆಚ್‍ಒ ಡಾ.ಜಿ.ಪಿ.ರೇಣುಪ್ರಸಾದ್, ಆಶಾ ಕಿರಣ ದೃಷ್ಟಿ ಕೇಂದ್ರ ಸ್ಥಾಪನೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮೆಚ್ಚುಗೆ ವ್ಯಕ್ತ ಪಡಿಸಿರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ತೆ ಮತ್ತು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ಜಿಲ್ಲೆಯಾದ್ಯಂತ 17 ಕಡೆ ಇಂದಿನಿಂದ ಸೇವೆ ಒದಗಿಸಲಾಗುತ್ತದೆ ಎಂದರು. ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಅನುಷ್ಠಾನಧಿಕಾರಿ ಡಾ.ಜಿ.ಓ.ನಾಗರಜ್ ಮಾತನಾಡಿ, ಈ ಹಿಂದೆ ಆಶಾ ಕಿರಣ  ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆ ಬೇಟಿ ಮಾಡಿ ಆಶಾ…

Read More

ಬೆಂಗಳೂರು, ಜುಲೈ 3, 2025: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಎಂಎಲ್‌ಸಿ ಎನ್.ರವಿ ಕುಮಾರ್ ನೀಡಿರುವ ಅವಹೇಳನಕಾರ ಹೇಳಿಕೆಯನ್ನು ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘ ಬಲವಾಗಿ ಖಂಡಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ,ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಖುಷ್ಬೂ ಗೋಯಲ್ ಚೌಧರಿ ಅವರನ್ನೊಳಗೊಂಡ ನಿಯೋಗವು ಸಂಘದ ಪರವಾಗಿ ಮನವಿ ಸಲ್ಲಿಸಿ, ರವಿ ಕುಮಾರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ಕುರಿತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘವು, ಯಾರದೇ ಭಯ, ಅವಮಾನ ಅಥವಾ ರಾಜಕೀಯ ಬೆದರಿಕೆ ಇಲ್ಲದೆ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಇರಬೇಕು. ಇದಕ್ಕೆ ಚ್ಯುತಿ ಉಂಟುಮಾಡುವವರ ವಿರುದ್ಧ ಸರ್ಕಾರವು ತ್ವರಿತ ಮತ್ತು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಹೇಳಿದೆ.…

Read More