Author: Times of bayaluseeme
ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶ್ರೀವಿರುದ್ದದ ಪೋಕ್ಸೋ ಪ್ರಕರಣ ಸಂಬಂಧ ಇಂದು 313 ಹೇಳಿಕೆ ನೀಡಲು ಕೋರ್ಟ್ ಗೆ ಮುರುಘಾ ಶರಣರು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಬಗ್ಗೆ ಪೋಲಿಸರು 1ನೇ ಪೋಕ್ಸೊ ಪ್ರಕರಣದ A ಮತ್ತು B ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿದ್ದರು.ಇಂದು A ಚಾರ್ಜ್ ಶೀಟಲ್ಲಿನ ಸಾಕ್ಷಿಗಳ ಹೇಳಿಕೆ ಕುರಿತು 313 ಹೇಳಿಕೆ ದಾಖಲಿಸಿಕೊಂಡಿದ್ದಾರೆ.ಇನ್ನು ನ್ಯಾಯಾದೀಶರಾದ ಗಂಗಾಧರಪ್ಪ ಚನ್ನಬಸಪ್ಪ ಹಡಪದ ಚಾರ್ಜ್ ಶೀಟ್ Bನ 313 ಹೇಳಿಕೆಯನ್ನ ಜುಲೈ 10ಕ್ಕೆ ನಿಗಧಿ ಮಾಡಿದ ಬಳಿಕ ಮುರುಘಾ ಶ್ರೀಗಳಿಗೆ ಜಿಲ್ಲೆಯಲ್ಲಿ ಎಲ್ಲೂ ನಿಂತು ಜನರನ್ನ ಮಾತಾಡಿಸದಂತೆ ಮುರುಘಾ ಶ್ರೀಗೆ ಸೂಚನೆ ನೀಡಿದರು. ಬಳಿಕ ನ್ಯಾಯಾಧೀಶರ ಸೂಚನೆಯಂತೆ ನೇರವಾಗಿ ಮುರುಘಾ ಶ್ರೀಗಳು ಕಾರು ಹತ್ತಿಕೊಂಡು ದಾವಣಗೆರೆಯತ್ತಾ ಪ್ರಯಾಣ ಬೆಳೆಸಿದರು.
ಕನ್ನಡದ ಸೂಪರ್ ಹಿಟ್ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ ನಲ್ಲಿ ಬ್ಯುಸಿ ಆಗಿರೋದು ಗೊತ್ತೇಯಿದೆ. ಈಗಾಗಲೇ ಸಲಾರ್ ಸಿನಿಮಾ ಬಳಿಕ ಡ್ರ್ಯಾಗನ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಮುಂದೆ ಸಲಾರ್ -2 ಮಾಡಬೇಕಿದೆ. ಆ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದು ಖಚಿತ ಎಂಬ ಮಾಹಿತಿ ಟಾಲಿವುಡ್ ನಿಂದ ಕೇಳಿ ಬರುತ್ತಿದೆ.ಸಲಾರ್ ಸಿನಿಮಾ ಬೆನ್ನಲ್ಲೇ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುತ್ತದೆ ಎನ್ನಲಾಗಿತ್ತು. ಇದೇ ಸಿನಿಮಾ ಈಗ ಅಲ್ಲು ಅರ್ಜುನ್ ಪಾಲಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ ದಿಲ್ ರಾಜು ಮಾಹಿತಿ ನೀಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ತಮ್ಮ ಬ್ಯಾನರ್‌ನಲ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಮತ್ತಷ್ಟು ಬಿಗ್ ಬಜೆಟ್ ಚಿತ್ರಗಳಿಗೆ ಪ್ಲ್ಯಾನ್ ಮಾಡುತ್ತಿದ್ದಾರೆ. KGF ಸರಣಿಯಿಂದ ಪ್ರಶಾಂತ್ ನೀಲ್ ಕ್ರೇಜ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದೆ. ‘ಸಲಾರ್’ ಸಿನಿಮಾ ಕೂಡ ಹಿಟ್ ಆಗಿ ಮತ್ತಷ್ಟು ನೇಮು ಫೇಮು ತಂದುಕೊಟ್ಟಿದೆ. ನೀಲ್ ಮೇಕಿಂಗ್ ಸ್ಟೈಲ್ ಮಾಸ್…
ಚಿತ್ರದುರ್ಗ : ದುಡಿಯುವ ವರ್ಗದ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡದ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಧಿಕ್ಕರಿಸಿ ಜು.9 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರಮೋದಿ ದೇಶದ ಪ್ರಧಾನಿಯಾಗಿ ಹನ್ನೊಂದುವರ್ಷಗಳು ಕಳೆದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟು ಯುವ ಜನಾಂಗವನ್ನು ವಂಚಿಸಿದ್ದಾರೆ.ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಎಲ್ಲರೂ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುವಂತಾಗಿದೆ. ವಿಶ್ವವಿದ್ಯಾನಿಲಯ, ಆಸ್ಪತ್ರೆಗಳಲ್ಲಿ ನೇರ ನೇಮಕಾತಿಯಿಲ್ಲ. ಹೊರ ಗುತ್ತಿಗೆ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದರಿಂದ ಜೀವನಭದ್ರತೆಯಿಲ್ಲದಂತಾಗಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲಿ ಕೂಲಿ ಕೆಲಸವೂ ಸಿಗದಂತ ಕಷ್ಟದ ಪರಿಸ್ಥಿತಿನಿರ್ಮಾಣವಾಗಿದೆ. ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜೀವನ ಭದ್ರತೆಯಿಲ್ಲದೆ ನರಳುವಂತಾಗಿದೆ. ದುಡಿಯುವವರ್ಗ ಶೋಷಣೆಗೊಳಗಾಗಿರುವುದನ್ನು ಖಂಡಿಸಿ ದೇಶಾದ್ಯಂತ ಜು.9 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು,ಕಾರ್ಮಿಕರು ವಿವಿಧ ಸಂಘಟನೆಗಳವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಸಿಪಿಐ. ಜಿಲ್ಲಾ ಕಾರ್ಯದರ್ಶಿ…
ಚಿತ್ರದುರ್ಗ : ಒಳ ಮೀಸಲಾತಿ ಜಾರಿಗೊಳಿಸದೆ ಸುಪ್ರಿಂಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ರಾಜ್ಯ ಸರ್ಕಾರದ ವಿರುದ್ದ ಆ.1 ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪ್ರತಿಮೆ ಮುಂಭಾಗ ಸರ್ಕಾರದ ಶವಯಾತ್ರೆ ನಡೆಸಿ ಸಾಮೂಹಿಕವಾಗಿ ಕೇಶಮುಂಡನ ಮಾಡಿಕೊಳ್ಳಲಾಗುವುದೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚ ಭಾಸ್ಕರ್‍ಪ್ರಸಾದ್ಎಚ್ಚರಿಕೆನೀಡಿದ್ದಾರೆ.ಪ್ರವಾಸಿಮಂದಿರದಲ್ಲಿಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಜಾರಿಗೊಳಿಸುವಂತೆಸುಪ್ರೀಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷವಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟಜಾತಿಯ ನೂರ ಒಂದು ಜಾತಿಗಳಿಗೆ ವಂಚನೆ ಮಾಡಿಕೊಂಡು ಬರುತ್ತಿದ್ದಾರೆ. ಅನಗತ್ಯ ಆಯೋಗ ರಚಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಹಾಗಾಗಿ ಆ.1 ರಿಂದ 30 ರೊಳಗೆ ಯಾವುದಾದರೂ ಒಂದು ದಿನಾಂಕ ನಿಗಧಿಪಡಿಸಿಕೊಂಡು ದೆಹಲಿ ಚಲೋ ಹಮ್ಮಿಕೊಂಡು ರಾಹುಲ್‍ಗಾಂಧಿ ನಿವಾಸಕ್ಕೆ ಮುತ್ತಿಗೆ ಹಾಕಿ ರಾಜ್ಯದಲ್ಲಿರುವ ನಿಮ್ಮ ಪಕ್ಷದ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದೆಯೇಎಂದು ಪ್ರಶ್ನಿಸಲಾಗುವುದು. ಇದಲ್ಲದೆ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.ನೂರ ಒಂದು ಜಾತಿಗಳಿಗೂ ಸಂಜೀವಿನಿಯಾಗಿರುವ ಒಳ ಮೀಸಲಾತಿ ಜಾರಿಯಾಗಬೇಕು.…
ಬೆಂಗಳೂರು: ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರಿಂದ ಅಪಮಾನಕ್ಕೆ ಒಳಗಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಅವರ ಸ್ವಯಂ ನಿವೃತ್ತಿ ವಿಚಾರದಲ್ಲಿ ಸರ್ಕಾರ ಮತ್ತೊಂದು ಯಡವಟ್ಟು ನಡೆ ಪ್ರದರ್ಶಿಸಿದೆ.ಗೃಹಇಲಾಖೆಯಿಂದ ಸ್ವಯಂ ನಿವೃತ್ತಿ ಅಂಗೀಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಜುಲೈ 6ಕ್ಕೆ ಡೆಡ್‌ಲೈನ್‌ಫಿಕ್ಸ್ ಮಾಡಿದ್ದು, ಅಷ್ಟರೊಳಗೆ ವಿಆರ್‌ಎಸ್ ಪತ್ರ ವಾಪಸ್ ಪಡೆಯದೇ ಇದ್ದರೆ ಸ್ವಯಂ ನಿವೃತ್ತಿ ಅಂಗೀಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಏನಿದು ಪ್ರಕರಣ? ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರಿ ಅಪಮಾನಕ್ಕೆ ಒಳಗಾಗಿದ್ದರು. ಬೆಳಗಾವಿ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಏಕಾಏಕಿ ಕಪ್ಪು ಬಾವುಟ ತೋರಿಸಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಸಿಎಂ, ಎಎಎಸ್ಪಿ ನಾರಾಯಣ ಅವ್ರ ಮೇಲೆ ಮೇಲೆ ಕಪಾಳಮೋಕ್ಷಕ್ಕೆ ಮುಂದಾಗಿದ್ದರು. ಈ ಸನ್ನಿವೇಶದಿಂದ ಅಧಿಕಾರಿ ನೊಂದುಕೊಂಡಿದ್ದರು. ಅದೇ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.ಸ್ವಯಂಪ್ರೇರಿತ ನಿವೃತ್ತಿಗೆ ನಾರಾಯಣ ಅವರು ಅರ್ಜಿ ಸಲ್ಲಿಸಿದ್ದಾರೆ. ತಮಗಾದ ಅವಮಾನಕ್ಕೆ ಬರಮಣ್ಣ ಅವರು ನೊಂದುಕೊಂಡಿದ್ದರು. ಹೀಗಾಗಿ, ಕೆಲಸದಿಂದಲೇ…
ನವ ದೆಹಲಿ: ಸಿದ್ದರಾಮಯ್ಯ ಪ್ರತಿ ಬಾರಿ ಐದು ವರ್ಷ ನಾನೇ ಸಿಎಂ ಅಂದಾಗ ಅನುಮಾನ ಹೆಚ್ಚು ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುಜನರು ಐದು ವರ್ಷಕ್ಕೆ ಇವರನ್ನು ಆಯ್ಕೆ ಮಾಡಿದ್ದಾರೆ ಉತ್ತಮ ಆಡಳಿತ ಮಾಡಿಬೇಕು. ಮೊನ್ನೆ ಸಿದ್ದರಾಮಯ್ಯ ನವರು ನಾವು (ಬಂಡೆ ನಾವು) ಅಂದರು. ಇಂದು ನಾನು ಅನ್ನುತ್ತಿದ್ದಾರೆ. ಏನು ಬೆಳವಣಿಗೆ ಆಗಿದೆ. ಅವರು ಎಷ್ಟು ಬಾರಿ ಹೇಳುತ್ತಾರೋ ಅಷ್ಟು ಸಂಶಯ ಹೆಚ್ಚಾಗುತ್ತದೆ. ನಾಯಕತ್ವ ಬದಲಾವಣೆ ಅಂತಾ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ಹೇಳುತ್ತಿದ್ದಾರೆ ಎಂದು ಹೇಳಿದರು. ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಒಳ ಜಗಳದಿಂದ ರಾಜ್ಯ ಅಭಿವೃದ್ಧಿ ಶೂನ್ಯ ಆಗಿದೆ, ಆಡಳಿತ ಕುಸಿದಿದೆ. ಭ್ರಷ್ಟಾಚಾರ ಹೆಚ್ಚಿದೆ, ರಾಜ್ಯದಲ್ಲಿ ಮಳೆ ಬರುತ್ತಿದೆ. ರೈತರಿಗೆ ಸೂಕ್ತ ಪರಿಹಾರ ಇಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದೆ. ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲು ಆಗುತ್ತಿಲ್ಲ. ಸಮೃದ್ಧ ಕರ್ನಾಟಕ ರಾಜ್ಯವನ್ನು…
ಬೆಂಗಳೂರು ಹೃದಯಭಾಗದಲ್ಲಿರುವ ಚಾಮರಾಜಪೇಟೆಯ ಪ್ರತಿಷ್ಠಿತ ಟಿ.ಆರ್.ಮಿಲ್ಸ್ ಕಂಪನಿಯ ಚಂದ್ರ ಸ್ಪಿನಿಂಗ್ ಮಿಲ್ಸ್ ಜಾಗದಲ್ಲಿ ಕೊಳಗೇರಿ ನಿವಾಸಿಗಳಿಗೆ ಪನರ್ ವಸತಿ ಕಲ್ಪಿಸಿಕೊಡಲು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರವಾಗಿ ಕರ್ನಾಟಕ ಸರ್ಕಾರ ಆರು ಎಕರೆ ಭೂಮಿ ಸ್ವಾಧೀನಕ್ಕೆ 2005 ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಇಪ್ಪತ್ತು ವರ್ಷಗಳ ಸುದೀರ್ಘವಾದ ಕಾನೂನು ಹೋರಾಟದ ನಂತರ ಹೈಕೋರ್ಟ್ ಆದೇಶ ಹೊರಡಿಸಿದ್ದು ಚಂದ್ರ ಸ್ಪಿನಿಂಗ್ ಅಂಡ್ ವಿವಿಂಗ್ ಮಿಲ್ಸ್ ಹಾಗೂ ಇತರರ ಭೂಸ್ವಾಧೀನಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ಪರವಾಗಿ ಕರ್ನಾಟಕ ಸರ್ಕಾರ ಹೊರಡಿಸಿದ ಅಧಿಸೂಚನೆ ಹೈಕೋರ್ಟ್ ತೀರ್ಪಿನಿಂದ ರದ್ದಾಗಿದೆ.ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ಕೊಳಚೆ ಕರ್ನಾಟಕರದ ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ನಗರದ ಹೃದಯಭಾಗದಲ್ಲಿರುವ ದೇವನಾಥಚಾರ್ ಸ್ಟ್ರೀಟ್, ಚಾಮರಾಜಪೇಟೆ ಗವಿಪುರಂ ಸಮೀಪ ಇರುವ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಇತರರ ಆರು ಎಕರೆ ಜಮೀನನ್ನು ಕೊಳಗೇರಿ ನಿವಾಸಿಗಳಿಗೆ ಪುನರ್…
ಚಿತ್ರದುರ್ಗ ಜಿಲ್ಲಾ ಜೆ.ಡಿ.ಎಸ್ ಘಟಕದಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದ ಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿನಮನ ಕಾರ್ಯಕ್ರಮವನ್ನು 05-07-2025ರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನ ಪಕ್ಕದ ಜಿಲ್ಲಾ ಜೆ.ಡಿ.ಎಸ್ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜೆ ಡಿ ಎಸ್ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿನಾಯಕ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ವಹಿಸುವರುಕರ್ನಾಟಕ ಪ್ರದೇಶ ಜನತಾದಳದ ಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್ ,ಜೆ.ಡಿ.ಎಸ್ ಘಟಕದ ಮಾಜಿ ಜಿಲ್ಲಾ ಅಧ್ಯಕ್ಷರಾದ ಡಿ.ಯಶೋಧರ ,ಜಿಲ್ಲಾ ಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್. ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ ,ಚಳ್ಳಕೆರೆ ತಾಲ್ಲೂಕಿನ ಘಟಕದ ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ, ಹಿರಿಯೂರು ತಾಲ್ಲೂಕಿನ ಘಟಕದ ಅಧ್ಯಕ್ಷರಾದ ಹನುಮಂತ ರಾಯಪ್ಪ, ಮೊಳಕಾಲ್ಮೂರು ಅಧ್ಯಕ್ಷರಾದ ಕರಿಬಸಪ್ಪ, ಹೊಸದುರ್ಗ ತಾಲ್ಲೂಕ್ಘಟಕದ ಅಧ್ಯಕ್ಷರಾದ ಗಣೇಶ್‍ಮೂರ್ತಿ, ಹೂಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷರಾದ ಪರಮೇಶ್ವರಪ್ಪ, ಹಿರಿಯೂರು ವಿಧಾನಸಭೆಯ ಕ್ಷೇತ್ರದ ರವೀಂದ್ರಪ್ಪ, ಚಳ್ಳಕೆರೆ ವಿಧಾನಸಭೆ ಕ್ಷೇತ್ರದ…
ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಬುಧವಾರ ಸಂಜೆ ವಾರದ ಸಭೆಯಲ್ಲಿ ರೋಟರಿ ಕ್ಲಬ್,ಚಿತ್ರದುರ್ಗ ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಇವರ ಸಂಯುಕ್ತಾಶ್ರಯದಲ್ಲಿ ವೈದ್ಯರ, ಲೆಕ್ಕ ಪರಿಶೋಧಕರ ಹಾಗೂಪತ್ರಿಕಾ ದಿನಾಚರಣೆಯ ಅಂಗವಾಗಿ ಅವರ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಅರವಿಂದ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆ ದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಸಮಾಜದ ಉನ್ನತಿಗಾಗಿ ಕಾರ್ಯಗಳನ್ನು ಸಂಸ್ಥೆಯ ಮುಖ್ಯ ಗುರಿಯಾಗಿದೆ ಸಂಸ್ಥೆಯು ಉತ್ತಮ ರೀತಿಯಲ್ಲಿ ಹೆಚ್ಚು ಹೆಚ್ಚು ಸೇವಾಕಾರ್ಯಗಳನ್ನು ಮಾಡಲಿ ಎಂದು ಆಶಿಸಿ ರೋಟರಿ ಸಂಸ್ಥೆಯು ಸಮಾಜದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನುಹಮ್ಮಿಕೊಂಡಿದ್ದು ಅವುಗಳಲ್ಲಿ ಪಲ್ಸ್ ಪೋಲಿಯೋ ನಿರ್ಮೂಲನೆ, ಅಂಧತ್ವ ನಿರ್ಮೂಲನೆ, ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಆದ್ಯತೆಹಾಗೂ ಸ್ವಚ್ಛ ಸಮಾಜ ನಿರ್ಮಾಣ ಮಾಡುವುದು ಆಗಿದೆ ಎಂದರು. ಮತ್ತೋರ್ವ ವೈದ್ಯರಾದ ಡಾ,ತೇಜಸ್ವಿ ಮಾತನಾಡಿ, ರೋಟರಿ ಕ್ಲಬ್ ಪ್ರಪಂಚದಲ್ಲಿ ಸೇವಾ ಮನೋಭಾವದಿಂದ ಕಾರ್ಯವನ್ನುಮಾಡುತ್ತಿದೆ. ಜನರಿಗೆ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬಡವರಿಗೆ ಸಹಾಯವನ್ನು ಮಾಡುತ್ತಿದೆ. ರೋಟರಿ ಕ್ಲಬ್ ಸಂಸ್ಥೆಯಿಂದ ಲಕ್ಷಾಂತರ ಜನತೆ…
ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸಚಿವರು, ಕರ್ನಾಟಕದ ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೀತಿ ಬಿಜೆಪಿ ಎಂಎಲ್ಸಿ ಅವರ ಮನಸ್ಥಿತಿ ಎಂಥಹದ್ದು ಎಂದು ತೋರಿಸುತ್ತದೆ. ರವಿ ಕುಮಾರ್ ಅವರು ಸಮಸ್ತ ಮಹಿಳಾ ಕುಲಕ್ಕೆ ಮಾಡಿರುವ ಅವಮಾನ ಇದಾಗಿದೆ. ರವಿಕುಮಾರ್ ಅವರ ಹೇಳಿಕೆಯನ್ನು ಕೇಂದ್ರ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವರೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಸಿಟಿ ರವಿ ಅವರು ನನ್ನ ಬಗ್ಗೆ ಕೆಟ್ಟಾಗಿ ಮಾತನಾಡಿದಾಗ ಆ ಪಕ್ಷದ ನಾಯಕರು ಒಂದೂ ಮಾತನಾಡಲಿಲ್ಲ. ಇಂಥ ನಾಯಕರ ಹೇಳಿಕೆಗಳಿಗೆ ಕೇಂದ್ರದ ನಾಯಕರು ಪರೋಕ್ಷ ಬೆಂಬಲ ನೀಡಿದಂತಿದೆ. ಇದು…
Subscribe to Updates
Get the latest creative news from FooBar about art, design and business.