Author: Times of bayaluseeme
ಚಿತ್ರದುರ್ಗ : ಜಾತ್ಯಾತೀತ, ಪ್ರಜಾಪ್ರಭುತ್ವದ ಸಿದ್ದಾಂತದ ಮೇಲೆ ನಂಬಿಕೆಯಿಟ್ಟಿರುವ ಸಮಾಜವಾದಿ ಪಾರ್ಟಿಗೆ ಜನಪರ ಕಾಳಜಿಯಿದೆ ಎಂದು ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಹೇಳಿದರು.ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‍ಯಾದವ್‍ರವರ 52 ನೇ ಹುಟ್ಟುಹಬ್ಬ ಆಚರಿಸಿ ಮಾತನಾಡಿದರು.ಮಾನವೀಯ ಮೌಲ್ಯವಿಟ್ಟುಕೊಂಡಿರುವ ಅಖಿಲೇಶ್‍ಯಾದವ್‍ರವರಲ್ಲಿ ಅಧಿಕಾರದ ದಾಹವಿಲ್ಲ. ರಾಂ ಮನೋಹರ್‍ಲೋಹಿಯಾಸಿದ್ದಾಂತದ ಮೇಲೆ ಪಾರ್ಟಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವರುಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಗುಣಗಾನ ಮಾಡಿದರು. 1992, ಅ.4 ರಂದು ಸ್ಥಾಪನೆಯಾದ ಸಮಾಜವಾದಿ ಪಾರ್ಟಿಗೆ ತನ್ನದೆ ಆದ ಶಕ್ತಿಯಿದೆ. ಸಾಮಾಜಿಕ ನ್ಯಾಯದ ಹರಿಕಾರರೆನಿಸಿಕೊಂಡಿರುವ ಅಖಿಲೇಶ್ ಯಾದವ್‍ರವರು ಕೋಮುವಾದಿ ಶಕ್ತಿಗಳ ವಿರುದ್ದ ಸದಾ ಹೋರಾಟ ನಡೆಸುತ್ತಿರುತ್ತಾರೆಂದರು.ಲೇಖಕ ಹೆಚ್.ಆನಂದಕುಮಾರ್ ಮಾತನಾಡಿ ಪರಂಪರೆಯಿಂದ ರಾಜಕಾರಣಿಯಾಗಿರುವ ಅಖಿಲೇಶ್‍ಯಾದವ್ ಉತ್ತರ ಪ್ರದೇಶದಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿದರು. ನಿಮ್ನ, ಮಧ್ಯಮ, ಮೇಲ್ಜಾತಿಯ ರಾಜಕಾರಣವಿರುವಉತ್ತರ ಪ್ರದೇಶದಲ್ಲಿ ಐದು ವರ್ಷಗಳ ಕಾಲ ಸಿ.ಎಂ.ಆಗಿ ಅತ್ಯುತ್ತಮ ಆಡಳಿತ ನೀಡಿದ್ದರು. ಸಂಸತ್ ಚುನಾವಣೆಯಲ್ಲಿ ಬಿಜೆಪಿ.ಗೆದೊಡ್ಡ ಹೊಡೆತ ಕೊಟ್ಟ ಅಖಿಲೇಶ್ ಯಾದವ್ ಅಂಬೇಡ್ಕರ್…
ಚಿತ್ರದುರ್ಗ ಜು. 01 ರೋಟರಿ ಕ್ಲಬ್ ಚಿತ್ರದುರ್ಗ,ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಆರ್ಯ ವೈಶ್ಯಸಂಘ ಇನ್ನರ್ವೀಲ್‍ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಸಂಹಯೋಗದೊಂದಿಗೆ ಬಸವೇಶ್ವರ ಬ್ಲಡ್ ಬ್ಯಾಂಕ್ ಮತ್ತು ರೆಡ್‍ಕ್ರಾಸ್ ಸೊಸೈಟಿಸಹಕಾರದೊಂದಿಗೆ ಚಿತ್ರದುರ್ಗ ನಗರದಲ್ಲಿ ಮಂಗಳವಾರ ವಾಸವಿ ಮಹಲ್‍ನಲ್ಲಿ ವೈದ್ಯರ ಮತ್ತು ಲೆಕ್ಕ ಪರಿಶೋಧಕರದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಪುರುಷ ಮಹಿಳೆ ಎನ್ನದೆ ಎಲ್ಲರು ಸಹಾ ರಕ್ತವನ್ನು ದಾನ ಮಾಡಿದರು. ರಕ್ತದಾನ ಶಿಬಿರವನ್ನು ಉದ್ಘಾಟಿಸಿದರೋಟರಿಯನ್ ಸಂಸ್ಥೆಯ ಜಿಲ್ಲಾ ಗೌರನ್ನರ್ ಎಂ.ಕೆ.ರವೀಂದ್ರ ಮಾತನಾಡಿ, ರಕ್ತದಾನ ಎನ್ನುವುದು ಸ್ವಯಂ ಪ್ರೇರಿತವಾಗಿಬರಬೇಕಿದೆ, ರಕ್ತದ ಕೊರತೆಯಿಂದ ಬಹಳಷ್ಟು ಜನ ನರಳುತ್ತಿ ದ್ದಾರೆ ಈ ರೀತಿಯಾದ ರಕ್ತದಾನ ಶಿಬಿರಗಳನ್ನು ಆಯೋಜನೆಮಾಡುವುದರ ಮೂಲಕ ಅಂತಹರಿಗೆ ನೆರವಾಗಬೇಕಿದೆ. ನಮ್ಮ ದೇಹದಲ್ಲಿ ರಕ್ತವನ್ನು ದಾನ ಮಾಡುವುದರಿಂದ ಯಾವುದೇ ರೀತಿಯಹಾನಿಯಾ ಗುವುದಿಲ್ಲ ಬದಲಿಗೆ ಹೊಸದಾದ ರಕ್ತ ಬರುತ್ತದೆ. ರಕ್ತವನ್ನು ನಿಯಮಿತವಾದ ಸಮಯದಲ್ಲಿ ದಾನ ಮಾಡುವುದರಿಂದನಮ್ಮ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತದೆ ಎಂದರು. ಈ ರಕ್ತದಾನ ಶಿಬಿರದಲ್ಲಿ…
ಬೆಂಗಳೂರು: ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. ಹಾಸನದಲ್ಲಿ ಹೃದಯಾಘಾತದ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಎಳೆಯ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಬದುಕಿ ಬಾಳಬೇಕಾದ ಚಿಕ್ಕಮಕ್ಕಳು, ಯುವಜನರು, ಅಮಾಯಕರ ಜೀವಗಳ ಬೆಲೆ, ಅವರ ಕುಟುಂಬಸ್ಥರ…
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇದೆ ವೇಳೆ ಶಾಸಕ ಬಿ.ಆರ್.ಪಾಟೀಲ್ ರವರು ಸಿದ್ದರಾಮಯ್ಯರವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್ ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದರು. ಇನ್ನು ಜಾತಿಗಣತಿ ನಡೆಸಲಾಗಿದೆ ಎಂಬ ಪೋಸ್ಟರ್ ಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಜಾತಿಗಣತಿಯನ್ನು ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದು ಹೇಳಿದರು.
“ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪಕ್ಷ ಸಂಘಟನೆ ವಿಚಾರ ಹಾಗೂ ಶಾಸಕರ ಅಹವಾಲು ಸ್ವೀಕರಿಸಲು ಸಭೆ ಮಾಡುತ್ತಿದ್ದಾರೆಯೇ ಹೊರತು, ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕರ ಜೊತೆ ಮಾಡುತ್ತಿರುವ ಸಭೆ ಬಗ್ಗೆ ಕೇಳಿದಾಗ, “ಈ ಸಭೆ ಬಗ್ಗೆ ಯಾರಿಗೂ ಆತಂಕ ಬೇಡ. ರಾಷ್ಟ್ರಾದ್ಯಂತ ನಾವು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದು, ಸಂಘಟನೆ ಹಿನ್ನೆಲೆಯಲ್ಲಿ ಈ ಸಭೆ ಮಾಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಸಂಘಟನೆ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶಕ್ತಿ ತುಂಬಲು ಹೇಳಿದ್ದಾರೆ. ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ನವದೆಹಲಿಯಲ್ಲಿ…
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 11 ಜನ ಹೃದಯಾಘಾತಕ್ಕೆ ಬಲಿ ಆಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 21,700 ಮಂದಿ ಇಸಿಜಿ ಮಾಡಿಸಿದ್ದಾರೆ. ಅದರಲ್ಲಿ 11,335 ಮಂದಿ ಅಬ್ ನಾರ್ಮಲ್ ಹಾಗೂ 1533 ಮಂದಿ ಕ್ರಿಟಿಕಲ್ ಆಗಿರುವುದಾಗಿ ತಿಳಿದು ಬಂದಿದೆ. ಇನ್ನು 442 ಜನರಿಗೆ ಹಠಾತ್ ಹೃದಯಾಘಾತ ಆಗಿರುವುದಾಗಿ ತುಮಕೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದ್ದಾರೆ. ಜೊತೆಗೆ ಹಾಸನದಲ್ಲಿ ಕಳೆದ ತಿಂಗಳು ಸಂಭವಿಸಿದ ಹೃದಯಾಘಾತಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ರಾಜ್ಯದಲ್ಲಿ ಹೃದಯಾಘಾತ ಆಗುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಹೃದ್ರೋಗ ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಹೃದಯಾಘಾತ ಹೆಚ್ಚಾದ ಬೆನ್ನಲ್ಲೇ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚೆಕಪ್ ಗಾಗಿ ಆಗಮಿಸುತ್ತಿರುವುದಾಗಿ ವರದಿ ಆಗಿದೆ.
ಬೆಂಗಳೂರು ಜು1: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ರಿಕಾ ದಿನಾಚರಣೆ-2025” ಹಾಗೂ “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ. ಸುಳ್ಳು ಮತ್ತು ಊಹಾ ಪತ್ರಿಕೋದ್ಯಮಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದರು. ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ ?…
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಭೋಗನಹಳ್ಳಿಯಲ್ಲಿ ಮೂಲ ಸೌಕರ್ಯಗಳ ಕಣ್ಮರೆ ಆಗಿವೆ. ಈ ಹಳ್ಳಿ ಹಾಗೂ ಚಿತ್ರನಾಯಕನಹಳ್ಳಿ ಸಂಪರ್ಕವಾಗಿ ಹೊಸದಾಗಿ ಮಾಡಿದ್ದ ರಸ್ತೆ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಅರ್ಧಕ್ಕರ್ಧ ಬಾವಿಯಂತಾಗಿ ಬರುವ ವಾಹನ ಸವಾರರನ್ನು ಅಪಾಯಕ್ಕೆ ಬಾಯ್ತೆರೆದು ಕರೆಯುತ್ತಿದೆ. ಇನ್ನು ಹಳ್ಳಿಯಲ್ಲಿ ಸ್ವಚ್ಛತೆಯ ವಿಷಯದಲ್ಲೂ ಹೇಳತೀರದಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ಇಲ್ಲವೇ ಇಲ್ಲ. ಮಳೆ ಬಂದ ಸಮಯದಲ್ಲಿ ಮಳೆಯ ನೀರು ಬೀದಿಗೆ ಬರುತ್ತದೆ. ಇದರಿಂದ ಸಂಪೂರ್ಣ ಹಳ್ಳಿಯೇ ಕೊಚ್ಚೆಯಾಗಿ ಮಾರ್ಪಾಡು ಆಗುತ್ತಿದೆ. ಇನ್ನು ಶಾಲೆಯಲ್ಲಿ ಹಾವು ಚೇಳು ಸೇರಿಕೊಂಡು ಹಾಳು ಕೊಂಪೆಯಂತಾಗಿದ್ರೆ, ಇತ್ತ ಬಸ್ ನಿಲ್ದಾಣ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರೀರಾಮುಲು ಶಾಸಕ ಆಗಿದ್ದಾಗ ಸರ್ಕಾರಿ ಬಸ್ ಗಳು ಬರ್ತಿದ್ದವು ಅವ್ರು ಹೋದ ಮೇಲೆ ಯಾವ ಬಸ್ ಬರದಂಗೆ ಮಾಡಿದ್ರೂ. ಈಗಿನ ಶಾಸಕರಿಗೆ ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಮನವಿ ಕೊಟ್ರೆ…
ಚಿತ್ರದುರ್ಗ ಜೂ. 30ವಸತಿ ಇಲಾಖೆಯಲ್ಲಿ ಸಚಿವರು ಹಣವನ್ನು ಪಡೆದು ಮನೆ ನೀಡುವ ಕಾರ್ಯ ಹೆಚ್ಚಾಗಿದೆ..ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಭ್ರಷ್ಟಾಚಾರತಾಂಡವಾಡುತ್ತಿದೆ ಬಿಜೆಪಿ ಸರ್ಕಾರ 40% ರಷ್ಟು ಭ್ರಷ್ಟ ಸರ್ಕಾರ ಅನ್ನುತಿದ್ದರು ಆದರೆ ಈಗ ಕಾಂಗ್ರೆಸ್ ಸರ್ಕಾರ 50% ರಿಂದ 60%ರಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ಆರೋಪಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಮುಗಿಲುಮಟ್ಟಿದೆ ಹಣ ಕೊಡದೇ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸವಾಗುತ್ತಿಲ್ಲ ಇದರಿಂದ ಬಡವರ ಬದುಕುದುಸ್ಥಿತಿಯಲ್ಲಿದೆ.ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತಿದ್ದ ಲೋಕಾಯುಕ್ತ ಅಧಿಕಾರವನ್ನು ಮೊಟುಕುಗೊಳಿಸಿದ್ದಾರೆ.ರಾಜ್ಯದ ಜನತೆಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಬೇಸತ್ತಿದ್ದಾರೆ.ಲಂಚವಿಲ್ಲದೇ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ.ಬಿಜೆಪಿ ಪಕ್ಷದ ಮೇಲೆಲಂಚದ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅವರ ನೀತಿಯನ್ನೇ ಮುಂದುವರಿಸಿದೆ ಎಂದು ದೂರಿದರು. ಈ ಎರಡು ರಾಜಕೀಯ ಪಕ್ಷಗಳ ಬಗ್ಗೆ ಮತದಾರರು ಬೇಸತ್ತಿದ್ದಾರೆ.. ಮುಂದಿನ ಚುನಾವಣೆಯಲ್ಲಿ ಪರ್ಯಾಯ ಪಕ್ಷವನ್ನು ಗೆಲ್ಲಿಸಬೇಕಾಗಿದೆ.ಇಂದಿನ ಅಧಿಕಾರ ಶೇ 30% ರಷ್ಟು ಇರುವ ಶ್ರೀಮಂತರ ಕೈಯಲ್ಲಿದೆ.. ಶೇ…
ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ವಿಭಿನ್ನವಾದ ಚಿತ್ರಕಥೆಯ ಮೂಲಕ ಸಿನಿಮಾ ರಂಗದಲ್ಲಿ ಸುಪರ್ ಹಿಟ್ ಆಗಿತ್ತು. ಇದೀಗ ಚಿತ್ರಕ್ಕೆ ಹತ್ತು ವರ್ಷ ತುಂಬಿದ ಹಿನ್ನಲೆ ಜುಲೈ 4ರಂದು ರಂಗಿ ತರಂಗ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಇತ್ತೀಚಿಗೆ ಸುದ್ದಿಗೋಷ್ಠಿ ಕರೆದಿದ್ದ ಚಿತ್ರತಂಡ ಇದರ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿ ರಂಗಿ ತರಂಗ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುವಾಗ ಎಚ್ ಕೆ ಪ್ರಕಾಶ್ ಇದನ್ನು ನೀವೇ ನಿರ್ದೇಶನ ಮಾಡಬೇಕೆಂದು ಆಸೆಪಟ್ಟರು. ಚಿತ್ರದಲ್ಲಿ ಸಾಯಿಕುಮಾರ್ ಹೊರತುಪಡಿಸಿ ಉಳಿದೆಲ್ಲ ಕಲಾವಿದರು ಹೊಸಬರು ಇದ್ದರೂ. ಎಲ್ಲರ ಶ್ರಮದಿಂದ ಚಿತ್ರ ಸೂಪರ್ ಹಿಟ್ ಆಯ್ತು. ಕೆಲವರು ಹಾಗ ನಿರ್ಮಾಪಕರಿಗೆ ಪೋಸ್ಟರ್ ಹಣ ಬರುವುದಿಲ್ಲ ಎಂದು ಹೆದರಿಸಿದ್ದರು. ಜೊತೆಗೆ ಆಗ ಬಾಹುಬಲಿ,ಶ್ರೀಮಂತುಡು ಅಂತಹ ಸಿನಿಮಾಗಳಿಗೆ ಸೆಡ್ಡು ಹೊಡೆದು ಗೆದ್ದಿತು ಎಂದು ಸಂತಸ ವ್ಯಕ್ತಪಡಿಸಿದರು ಇದೆ ವೇಳೆ ಸಾಯಿಕುಮಾರ್ ಮಾತನಾಡಿ ನನಗೆ ಪೊಲೀಸ್ ಸ್ಟೋರಿ ಬಿಟ್ರೆ ಇಷ್ಟವಾದ…
Subscribe to Updates
Get the latest creative news from FooBar about art, design and business.