Author: Times of bayaluseeme

ಬೆಂಗಳೂರು: ಬಿಗ್ ಬಾಸ್ ಕನ್ನಡ ಅಭಿಮಾನಿಗಳಿಗೆ ಸುದೀಪ್‌ ಕೊನೆಗೂ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸೀಸನ್ 11ರ ಮುಕ್ತಾಯದ ವೇಳೆಗೆ ಅನಿವಾರ್ಯ ಕಾರಣಗಳಿಂದ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಶಾಕ್‌ ನೀಡಿದ್ದ ಸುದೀಪ್‌ ಇದೀಗ ಮನಸ್ಸು ಬದಲಾಯಿಸಿದ್ದಾರೆ. ಸೀಸನ್‌ 12ರ ಕುರಿತು ಮಾಹಿತಿ ನೀಡಲು ನಿನ್ನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೀಸನ್‌ ಮಾತ್ರವಲ್ಲ ಮುಂದಿನ 4 ಅವಧಿಯನ್ನೂ ತಾವೇ ನಿರೂಪಿಸುವುದಾಗಿ ತಿಳಿಸಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಗಿಫ್ಟ್‌ ನೀಡಿದ್ದಾರೆ.ಹೌದು, ಸೀಸನ್‌ 12 ಮಾತ್ರವಲ್ಲ 15 ಸೀಸನ್‌ವರೆಗೂ ಕಿಚ್ಚ ಸುದೀಪ್‌ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಮುಂದಿನ 4 ಬಿಗ್‌ ಬಾಸ್‌ ಸೀಸನ್‌ಗಳನ್ನು ಹೋಸ್ಟ್‌ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದಾರೆ. ಇನ್ನು ನಾನು ನನ್ನ ತಾಯಿ ಕಳೆದುಕೊಂಡ ಬಳಿಕ ಬಾರಿ ನೋವಿನಲ್ಲಿ ಇದ್ದೆ. ಜೊತೆಗೆ ಎರಡೇ ವಾರಕ್ಕೆ ಬಿಗ್ಬಾಸ್ ವೇದಿಕೆ ಹತ್ತಿ ನಿರೂಪಣೆ ಮಾಡಿದ್ದೆ. ಆಗ ಕೊಂಚ ಮನಸಿಗೆ ಬೇಸರ…

Read More

ಬೆಂಗಳೂರು, ಜೂನ್ 30, (ಕರ್ನಾಟಕ ವಾರ್ತೆ): 2025ರ ದ್ವಿತೀಯ ಪಿಯುಸಿ ಪರೀಕ್ಷೆ-3 ನ್ನು 2025 ನೇ ಜೂನ್ 09 ರಿಂದ 20 ರವರೆಗೆ ನಡೆಸಲಾಗಿದ್ದು, ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-3 ರ ಕ್ರೋಢೀಕೃತ ಫಲಿತಾಂಶವನ್ನು ವೆಬ್ ಸೈಟ್ https://karresults.nic.in ನಲ್ಲಿ 2025 ನೇ ಜುಲೈ ರಂದು ಮಧ್ಯಾಹ್ನ 1.00 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ನಿರ್ದೇಶಕರು, (ಪರೀಕ್ಷೆಗಳು) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಚಿತ್ರದುರ್ಗ : ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಜಾತ್ಯಾತೀತ ಜನತಾದಳದಿಂದ ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವವೃತ್ತದಲ್ಲಿಮಾನವ ಸರಪಳಿ ನಿರ್ಮಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ವಸತಿ ಸಚಿವ ಜಮೀರ್ ಅಹಮದ್ ವಿರುದ್ದಧಿಕ್ಕಾರಗಳನ್ನುಕೂಗಿದರು.ಜೆಡಿಎಸ್.ಜಿಲ್ಲಾಧ್ಯಕ್ಷ ಎಂ.ಜಯಣ್ಣ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ವಸತಿ ಸಚಿವ ಜಮೀರ್ ಅಹಮದ್ಮನೆಗಳನ್ನುನೀಡಲು ಬಡವರಿಂದ ಲಂಚ ಪಡೆದಿದ್ದಾರೆಂದು ಅವರ ಪಕ್ಷದ ಶಾಸಕರುಗಳೆ ಆದ ಪಾಟೀಲ್, ರಾಜು ಕಾಗೆ ಆಪಾದಿಸುತ್ತಿದ್ದಾರೆ. ಬಿಟ್ಟಿಭಾಗ್ಯಗಳನ್ನು ನೀಡಿ ರಾಜ್ಯದ ಜನತೆಯನ್ನು ಮರಳು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅಭಿವೃದ್ದಿಕುಂಠಿತಗೊಂಡಿದೆ. ಕೂಡಲೆ ಸಚಿವ ಜಮೀರ್ ಅಹಮದ್‍ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಮಾಜಿ ಪ್ರಧಾನಿಹೆಚ್.ಡಿ.ದೇವೆಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರವರ ಹೆಸರಿಗೆ ಮಸಿ ಬಳಿಯುವ ಕೆಲಸಮಾಡುವುದು ಬೇಡಎಂದು ಆಗ್ರಹಿಸಿದರು.ಜೆಡಿಎಸ್. ಮಾಜಿ ಅಧ್ಯಕ್ಷ ಡಿ.ಯಶೋಧರ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರ್ಷಗಳಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಯನ್ನು ಉಚಿತ ಭಾಗ್ಯಗಳ ಭ್ರಮೆಯಲ್ಲಿ ತೇಲಿಸುತ್ತಿದ್ದಾರೆ. ವಾಲ್ಮೀಕಿ…

Read More

ಚಿತ್ರದುರ್ಗ : ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ನೂತನ ಅಧ್ಯಕ್ಷರಾಗಿ ಬಸವೇಶ್ವರ ಆಸ್ಪತ್ರೆಯ ಡಾ.ಪಾಲಾಕ್ಷಪ್ಪ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದುವರೆವಿಗೂ ಅಧ್ಯಕ್ಷರಾಗಿದ್ದ ಜಿ.ಚಿದಾನಂದಪ್ಪನವರು ವೈಯಕ್ತಿಕ ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದರಿಂದಡಾ.ಪಾಲಾಕ್ಷಪ್ಪನವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಡಾ.ಪಾಲಾಕ್ಷಪ್ಪನವರನ್ನು ಅಭಿನಂದಿಸಿದ ಸಂದರ್ಭದಲ್ಲಿ ನ್ಯಾಯವಾದಿ ವಿಶ್ವನಾಥ್, ಖಜಾಂಚಿ ದಯಾನಂದಪಾಟೀಲ್, ನಿವೃತ್ತ ಇಂಜಿನಿಯರ್ ಬಸವರಾಜ್ ಇವರುಗಳು ಹಾಜರಿದ್ದರು.

Read More

ಚಿತ್ರದುರ್ಗ : ಸಂಸ್ಥೆ ನಿಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ನಗು ನಗುತ ಜೀವಿಸಿ ಮತ್ತೊಬ್ಬರ ಬಗ್ಗೆ ಟೀಕೆಮಾಡುವುದನ್ನು ಬಿಟ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಸಿಬ್ಬಂದಿಗಳಿಗೆ ಕರೆ ನೀಡಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಡಾ.ಅನಂತರಾಮು ಹಾಗೂ ಎಂ.ಎಂ. ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಪಾಪಣ್ಣ ಇವರುಗಳಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಕಾರಣ. ದೇಹಕ್ಕೆ ವಯಸ್ಸಾಗಬಹುದು. ಆದರೆ ಮನಸ್ಸಿಗೆ ಎಂದಿಗೂ ವಯಸ್ಸಾಗುವುದಿಲ್ಲ. ವೃತ್ತಿಯಲ್ಲಿರುವವರು ನಿವೃತ್ತಿಯಾಗಲೇಬೇಕು. ಒಬ್ಬವ್ಯಕ್ತಿಯ ವ್ಯಕ್ತಿತ್ವವನ್ನು ಮನಸ್ಸಿನಿಂದ ಅಳೆಯಬೇಕು. ರೂಪ, ಧರಿಸಿರುವ ಬಟ್ಟೆಯಿಂದಲ್ಲ. ಮತ್ತೊಬ್ಬರ ಬಗ್ಗೆ ಎಂದಿಗೂ ಹಗುರುವಾಗಿಮಾತನಾಡಬೇಡಿ. ಕೆಟ್ಟ ಆಲೋಚನೆಯಿಂದ ದೂರವಿದ್ದು, ಸಧೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ…

Read More

ಕಳೆದ ಕೆಲವು ದಿನಗಳಿಂದ ದಾವಣಗೆರೆಯಲ್ಲಿ ಕೆಲವು ಮುಖಂಡರು ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರನ್ನು ಕೊಡಬಾರದೆಂದುಹೋರಾಟ ಮಾಡುತ್ತಿದ್ದಾರೆ.ಯಾರು ಸಹ ತಿನ್ನುವ ಅನ್ನಕ್ಕೆ, ಕುಡಿಯುವ ನೀರಿಗೆ ಅಡ್ಡಿಪಡಿಸುವುದು ಅಕ್ಷಮ್ಯ ಅಪರಾಧ ಅದನ್ನುತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಚಿತ್ರದುರ್ಗ ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಚಿತ್ರದುರ್ಗ ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವು ಅನ್ನಕ್ಕೆ, ನೀರಿಗೆ ಬೇಲಿಹಾಕಿಲ್ಲ.. ನಾನು ವಿನಂತಿ ಮಾಡುತ್ತೇನೆ ಯಾವುದೇ ಕಾರಣಕ್ಕೂ ಈಗಾಗಲೇ ಪೂರ್ಣಗೊಂಡಿರುವ ಯೋಜನೆಯನ್ನುನಿಲ್ಲಿಸಬಾರದು.ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ 800 ಕೋಟಿ ರೂವೆಚ್ಚದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದ ಯೋಜನೆ.ಈ ಯೋಜನೆಯನ್ನುಉದ್ಘಾಟನೆ ಮಾಡಿ ನೀರು ಒದಗಿಸಬೇಕು ಆದರೆ ಇದಕ್ಕೆ ಅಡ್ಡಿಪಡಿಸುವುದು ಎಷ್ಟು ಸೂಕ್ತ.ಸುಪ್ರೀಂ ಕೋರ್ಟ್ ಕುಡಿಯುವ ನೀರುಒದಗಿಸುವ ಬಗ್ಗೆ ಹಲವು ಆದೇಶವನ್ನು ಮಾಡಿದೆ.. ಇದಕ್ಕೆ ಏರಿಯಾ ಮಿತಿಯಿಲ್ಲ ಎಂದರು. ಕೃಷ್ಣಾ ನದಿಯಿಂದ ಮಹಾರಾಷ್ಟ್ರಕ್ಕೆ…

Read More

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶರಣರ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಇಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಿತು. ಈಗಾಗಲೇ ಪ್ರಕರಣದ ವಿಚಾರಣೆ ಕೊನೆ ಹಂತಕ್ಕೆ ತಲುಪಿದ್ದು ಇಂದು ನ್ಯಾಯಾಲಯದಲ್ಲಿ ಪ್ರಕರಣದ A1 ಆರೋಪಿ ಶಿವಮೂರ್ತಿ ಮುರುಘಾ ಶರಣರ ಹೇಳಿಕೆ ದಾಖಲು ಮಾಡುವುದನ್ನು ಜುಲೈ 3ಕ್ಕೆ ನಿಗದಿ ಪಡಿಸಿದ್ದು, ಮುರುಘಾ ಶ್ರೀಗೆ ಶ್ರವಣ ದೋಷ ಹಿನ್ನಲೆ ವಿಡಿಯೋ ಕಾನ್ಫೆರೆನ್ಸ್ ಬದಲಾಗಿ ನೇರವಾಗಿ ನ್ಯಾಯಾಲಯಕ್ಕೆ ಬಂದು ಹೇಳಿಕೆ ದಾಖಲಿಸಲು ಸೂಚನೆ ನೀಡಲಾಗಿದೆ.ಇನ್ನು ಪ್ರಕರಣದ ಸಂಬಂಧ ಮುರುಘಾ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು ಜೊತೆಗೆ ಜಿಲ್ಲೆಗೆ ಪ್ರವೇಶ ನೀಡದಂತೆ ಆದೇಶಿಸಿತ್ತು. ಆದ್ರೆ ಶರಣರಿಗೆ ಶ್ರವಣ ದೋಷ ಇರುವ ಕಾರಣ ಖುದ್ದಾಗಿ ಬಂದು ಹಾಜರಾಗುವಂತೆ ಕೋರ್ಟ್ ಹೇಳಿದೆ.

Read More

ಇಂದಿರಾಗಾಂಧಿರವರು ಅಧಿಕಾರಕ್ಕಾಗಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ಮಧ್ಯೆ ರಾತ್ರಿಯಲ್ಲಿ ರಾಷ್ಟ್ರಪತಿ ಗಳಿಂದ ಸಹಿ ಮಾಡಿಸಿ ತುರ್ತು ಪರಿಸ್ಥಿತಿ ಹೇರಿದರು.ಇದರ ಪರಿಣಾಮ ಇಡೀ ದೇಶವೇ ಬಂದಿಖಾನೆ ಯಾಯಿತು.. ಎಲ್ಲಾ ರಾಜಕೀಯ ಮುಖಂಡರುಗಳು ಜೈಲು ಸೇರಿದರು. ತುರ್ತು ಪರಿಸ್ಥಿತಿ ಹೇರಿದ್ದರ ಪರಿಣಾಮ 93 ಸಾವಿರ ಜನ ಜೈಲಿನಲ್ಲಿ ಇಲ್ಲಿರುವಂತಾಯಿತು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಡಾ. ಶಿವಯೋಗಿ ಸ್ವಾಮಿ ತಿಳಿಸಿದರು.ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಸೋಮವಾರ ನಡೆದ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಚಿತ್ರದುರ್ಗ ಹಾಗೂ ಭಾರತೀಯ ಜನತಾ ಪಾರ್ಟಿ ಸಂಯುಕ್ತಾಶ್ರಯದಲ್ಲಿ ನಡೆದ ತುರ್ತು ಪರಿಸ್ಥಿತಿ ಹೇರಿದ ಕಾಗ್ರೇಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವೆಂಬರ್ 26ನ್ನು ನರೇಂದ್ರ ಮೋದಿರವರು ಸಂವಿಧಾನ ಎಂದು ಘೋಷಣೆ ಮಾಡಿದರು.. ಹಾಗೆಯೇ ಜೂನ್25ನ್ನು ಸಂವಿಧಾನ ಹತ್ಯೆ ದಿನ ಎಂದು ಘೋಷಣೆ ಮಾಡಬೇಕು.ಅನುರಾಗ ಠಾಕೂರ್‍ರವರುಕಾಂಗ್ರೆಸ್ ನವರು ಸಂವಿಧಾನವನ್ನು ಬಗ್ಗಲಲ್ಲಿ ಇಟ್ಟುಕೊಂಡು ಓಡಾಡುತ್ತೀರಿ ಅದರಲ್ಲಿ ಎಷ್ಟು ಪುಟಗಳಿವೆ ಎಂದು ಹೇಳಿಕೇಳಿದ್ದಸರಿಯಾಗಿದೆ.ಇತಿಹಾಸವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ..…

Read More

ಕಾಂಗ್ರೆಸ್ ಸರ್ಕಾರದಲ್ಲಿನ ವಸತಿ ಸಚಿವ ಜಮೀರ್ ಆಹಮದ್‍ರವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಆಗ್ರಹಿಸಿಚಿತ್ರದುರ್ಗ ಜಿಲ್ಲಾ ಜನತಾದಳ (ಜಾತ್ಯಾತೀತ) ಚಿತ್ರದುರ್ಗ ನಗರದಲ್ಲಿ ಬೀದಿ ಗೀಳಿದು ಹೋರಾಟ, ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಜೆಡಿಎಸ್‍ನ ಪದಾಧಿಕಾರಿಗಳು,ಕಾರ್ಯಕರ್ತರು ಓನಕೆ ಒಬವ್ವ ಪ್ರತಿಮೆ ಮುಂಭಾಗದಲ್ಲಿ ಮಾನವ ಸರಪಳಿ ಯನ್ನು ನಿರ್ಮಾಣ ಮಾಡಿ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ಆಹಮದ್ ವಿರುದ್ದ ಘೋಷಣೆ ಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಬಡವರಿಗೆ ಮನೆಗಳನ್ನು ಹಂಚುವ ಸಮಯದಲ್ಲಿಅವರಿಂದ ಹಣವನ್ನು ಪಡೆಯುತ್ತಿರುವ ಭ್ರಷ್ಠ ಸಚಿವನಾದ ಜಮೀರ್ ಆಹ್ಮದ್ ರವರನ್ನು ಸಿದ್ದರಾಮಯ್ಯರವರು ತಮ್ಮ ಸಚಿವಸಂಪುಟದಿಂದ ವಜಾಗೊಳಿಸಬೇಕಿದೆ. ಇನ್ನೂ ಮುಂದಾದರೂ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸವನ್ನು ಮಾಡಬೇಕಿದೆಮತದಾರ ನಮಗೆ ಉತ್ತಮವಾದ ಸರ್ಕಾರವನ್ನು ನೀಡುತ್ತಾರೆ ಎಂಭ ಭರವಸೆಯ ಮೇರೆಗೆ ಕಾಂಗ್ರೆಸ್‍ಗೆ ಮತವನ್ನು ನೀಡಿದ್ದಾರೆ,ಆದರೆ ಕಾಂಗ್ರೆಸ್ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸುವದರ ಮೂಲಕ ಎಲ್ಲಡೆ…

Read More

ಮೈಸೂರು, ಜೂನ್ 30: ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಒಟ್ಟಾಗಿದ್ದೇವೆ, ಯಾರೂ ಏನೂ ಹೇಳಿದರು ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಕೇಳುವುದಿಲ್ಲ. ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಅವರು ಇಂದು ಮೈಸೂರು ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರ. ಸುರ್ಜೆವಾಲಾ ಅಭಿಪ್ರಾಯ ಪಡೆಯಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ಅವರು ಅಭಿಪ್ರಾಯ ಕೇಳಿ, ಅವರ ಕೆಲಸವನ್ನು ಮಾಡುತ್ತಾರೆ ಎಂದರು ಬಿಜೆಪಿ ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಸಿದ್ದರಾಮಯ್ಯ ಅವರು ಈ ಬಾರಿಯ ದಸರಾ ಉದ್ಘಾಟಿಸುವುದಿಲ್ಲ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಹೇಗೆ ಭವಿಷ್ಯ ನುಡಿಯುತ್ತಾರೆ ಎಂದು ಪ್ರಶ್ನಿಸಿದರು.

Read More