Author: Times of bayaluseeme

ದಾಬಸ್ ಪೇಟೆ, ಜೂ. 28: ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ನಡೆದ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನಾ ಕೇಂದ್ರ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ನಂತರ ಮಾಧ್ಯಮಗಳ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಕೆಐಎಡಿಬಿ ವತಿಯಿಂದ ಶೇ.20 ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಸಣ್ಣ ಕೈಗಾರಿಕೆಗಳಿಗೆ ನಾವು ಒತ್ತು ನೀಡಬೇಕು. ಕಾರ್ಮಿಕರ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಚರ್ಚೆ ಮಾಡುತ್ತೇವೆ” ಎಂದು ಭರವಸೆ ನೀಡಿದರು. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ನೀವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಕಾಸಿಯಾ ಸಂಸ್ಥೆ…

Read More

ಹೊಸದುರ್ಗ: ದಾವಣಗೆರೆ ರೈತರು ಹಾಗೂ ಜನಪ್ರತಿನಿಧಿಗಳು ಹೊಸದುರ್ಗಕ್ಕೆ ಭದ್ರಾ ನೀರು ನೀಡಲು ವಿರೋಧ ಮಾಡಿದ ಹಿನ್ನಲೆ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಸಂಘಟನೆಗಳಿಂದ ಹೊಸದುರ್ಗ ಪಟ್ಟಣ ಸಂಪೂರ್ಣ ಬಂದ್ ಕರೆ ನೀಡಿವೆ. ಕಳೆದ ಎರಡು ದಿನಗಳ ಹಿಂದೆ ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ನಾಯಕರ ಜೊತೆ ಸಭೆ ನಡೆಸಿ ರೈತರನ್ನು ಮನವೊಲಿಸುವ ಕೆಲಸ ಮಾಡಿದ್ರೂ, ಆದ್ರೆ ಮನವೊಲಿಕೆಯ ನಂತರವೂ ದಾವಣಗೆರೆ ರೈತರು ದಾವಣಗೆರೆ ಬಂದ್ ಗೆ ಕರೆ ನೀಡಿದ ಹಿನ್ನಲೆ ಅವರಿಗೆ ಸಾವಲಾಗಿ ಇಂದು ಹೊಸದುರ್ಗ ಬಂದ್ ಗೆ ಕರೆ ನೀಡಿದ್ರು. ಇಂದು ಬೆಳಗ್ಗೆಯಿಂದಲೇ ಹೊಸದುರ್ಗ ಪಟ್ಟಣದಲ್ಲಿ ಖಾಸಗಿ ಬಸ್ ಹಾಗೂ ಆಟೋ ಚಾಲಕರ ಸಂಘದಿಂದ ಸಂಚಾರ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡಿದ್ರೆ ಇತ್ತ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಮುಚ್ಚುವ ಮೂಲಕ ಹೊಸದುರ್ಗ ಜನತೆ ಬಂದ್ ಗೆ ಬೆಂಬಲ ನೀಡಿದ್ದಾರೆ. ಬಂದ್ ವೇಳೆ ಶಾಲಾ, ಕಾಲೇಜುಗಳು, ಆಸ್ಪತ್ರೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ರೈತ…

Read More

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಹಲವಾರು ವರ್ಷಗಳಿಂದ ಕೆಲ ಟ್ರಾಪಿಕ್ ಸಿಗ್ನಲ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ನಗರದಲ್ಲಿ ವಾಹನ ಸಂಚಾರದ ಜೊತೆ ಜೊತೆಗೆ ದಿನನಿತ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಿದ್ದು, ಇವರ ಮೇಲೆ ಕಣ್ಗಾವಲು ಇಡಲು ಪೊಲೀಸರಿಗೆ ಕೊಂಚ ತೊಂದರೆಯಾಗುವ ಸಾಧ್ಯತೆ ಇದೆ. ಇನ್ನು ನಗರದ ಹಲವೆಡೆ ನಾಮಕಾವಸ್ಥೆಗೆ ಕ್ಯಾಮರಾ ಅಳವಡಿಕೆ ಮಾಡಿದ್ದು, ಅವುಗಳು ಕಣ್ಣಿಗೆ ಮಾತ್ರ ಕಾಣಿಸುತ್ತವೆ ಕಾರ್ಯನಿರ್ವಹಣೆ ಇಲ್ಲದೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಪೊಲೀಸರು ಸಂಚಾರ ನಿರ್ವಹಣೆಗೆ ತೊಡಕು ಉಂಟಾಗುವ ಸಾಧ್ಯತೆ ಇದೆ. ಸ್ಥಳೀಯ ಅಧಿಕಾರಿಗಳು, ನಗರದ ಹಲವಾರು ಸೂಕ್ಷ್ಮ ಸ್ಥಳಗಳಲ್ಲಿ ಸಂಚಾರ ನಿರ್ವಹಣೆ ಮತ್ತು ಅನಿರೀಕ್ಷಿತ ಘಟನೆಗಳನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದ್ದು ಕೂಡಲೇ ಕೆಟ್ಟು ಹೋದಂತ ಕ್ಯಾಮೆರಾಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ. ಇನ್ನು ಚಿತ್ರದುರ್ಗ ನಗರದಾದ್ಯಂತ ಸ್ಥಾಪಿಸಿದ 32 ಸಿಸಿಟಿವಿ ಕ್ಯಾಮೆರಾಗಳಲ್ಲಿ 20ಕ್ಕೂ ಹೆಚ್ಚು ಕ್ಯಾಮೆರಾಗಳು ಒಂದು ವರ್ಷದಿಂದ ಕಾರ್ಯನಿರ್ವಹಿಸದೆ ಇರುವುದಾಗಿ ನಗರಸಭೆ…

Read More

ಚಿತ್ರದುರ್ಗ ಜೂ. 27 ಮಲೆ ಮಾದೇಶ್ವರ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಮಾರಣ ಹೋಮ ನಡೆದಿದೆ ಇದಕ್ಕೆ ಯಾರು? ಹೊಣೆ, ಸರ್ಕಾರ ಶೀಘ್ರವೇಉತ್ತರ ಕೊಡಬೇಕಿದೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಸ್ವಾಮಿಯವರು ಆಗ್ರಹಿಸಿದ್ದಾರೆ.ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಭಾರತ ದೇಶದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ ಇದರ ನಡುವೆ ಐದು ಹುಲಿಗಳು ಪ್ರಾಣ ಬಿಟ್ಟಿವೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ವೈಫಲ್ಯಾವೆ ಹೊರತು ಬೇರೆ ಏನು ? ಅಲ್ಲ, ಮಲೆ ಮಾದೇಶ್ವರ ಅರಣ್ಯ ಪ್ರದೇಶದ ಅಧಿಕಾರಿಗಳ ನಿರ್ಲಕ್ಷತನದಿಂದ ಕಾಡು ಕಳ್ಳರು ಹುಲಿಗಳನ್ನ ಕೊಲೆ ಮಾಡಿದ್ದಾರೆ. ಮಲೆ ಮಾದೇಶ್ವರ ಅರಣಪ್ರದೇಶದಲ್ಲಿನ ಅರಣ್ಯಅಧಿಕಾರಿಗಳು ಕೆಲಸ ಮಾಡದೆ ಅಲ್ಲಿನ ಮರಗಳನ್ನು ಸಹ ಮಾರಿಕೊಳ್ಳುತ್ತಿದ್ದಾರೆ. ಇದರ ನಡುವೆ 5 ಹುಲಿಗಳನ್ನು ಕೊಲ್ಲುವುದಕ್ಕೆಇವರು ನೇರ ಕಾರಣರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಇದರ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿತಪ್ಪಿತಸ್ಥ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಳಿದುಹೋಗುತ್ತಿರುವ ಹುಲಿಗಳ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು…

Read More

ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ನೀಟ್ -2004 ಪರೀಕ್ಷೆ ಫಲಿತಾಂಶದಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಅದ್ಭುತ ಸಾಧನೆ ಮಾಡಿದೆ.2025-26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಸಹ ಆರಂಭಿಸಿದ್ದು, ಶಿವಮೊಗ್ಗ ಸೇರಿದಂತೆ ನೆರೆಹೊರೆಯ ಜಿಲ್ಲೆಗಳ ಮಕ್ಕಳಿಗೂ ಪ್ರವೇಶಅವಕಾಶ ಕಲ್ಪಿಸಿದೆ ಎಂದು ಅಕಾಡೆಮಿ ಮುಖ್ಯಸ್ಥ ರಾಕೇಶ ವಿನ್ಸೆಂಟ್ ಡಿಸೋಜ ಹೇಳಿದರು. ನಗರದಲ್ಲಿ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಪ್ರವೇಶ ಸಿದ್ಧತೆಗೆ ಮೀಸಲಾದಮಲೆನಾಡಿನ ಪ್ರಪ್ರಥಮ ವಸತಿಯುತ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿಯ ಚೊಚ್ಚಲ ಬ್ಯಾಚ್‍ನ 45ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೆಡಿಕಲ್ ಸೀಟ್ ಪಡೆಯುವ ದೃಢ ನಿರೀಕ್ಷೆಯಲ್ಲಿ ಇದ್ದಾರೆ ಎಂದರು. ಅಕಾಡೆಮಿಯ ಕೆ.ರೀತು ಅಕ್ಷಯ್, ಸ್ಮಿತಾ ಡಿಮೆಲ್ಲೋ, ಎ.ಎನ್.ದೀಕ್ಷಿತ, ಫಣಿರಾಜ, ಸಿ.ಡಿ.ಅರುಣ್, ಕೆ.ಜಿ.ಆತ್ಮೀಯ, ಮೋಹನ ದಾವನೊಲು ಮಂಜು ವರದಿ ವುಲ್ ಪಾಟೀಲ, ಎಸ್.ಸುಚಿಂತ್, ಎಚ್.ಸಿ.ವರ್ಷ ಹೆಚ್ಚು ಅಂಕಗಳಿಸುವ ಮೂಲಕ ಅದ್ಭುತಸಾಧನೆಮಾಡಿದ್ದಾರೆ. ಎಚ್.ಜೆ. ಹರ್ಷ ಶೇ.96.28 ಅಂಕದೊಂದಿಗೆ ಸಿಎಟ್ ಆಲ್ ಇಂಡಿಯಾ ರ್ಯಾಂಕಿಂಗ್‍ನಲ್ಲಿ 561 ಅಂಕ ಪಡೆದು,ಸಾಧನೆ ಮಾಡಿದ್ದಾನೆ ಎಂದು ಹೇಳಿದರು. ಬಿ.ಜಿ.ಕೀರ್ತನ, ಬಿ.ಕೆ.ಭುವನ್, ಎಚ್. ಎಸ್.ರಕ್ಷಿತ್,…

Read More

ನಾನು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ, ಸತತ ಮೂರು ಸಲ ಜನ ಗೆಲಿಸಿದ್ದು ಹೈಕಮಾಂಡ್ ಗಮನಿಸಿದೆ ನಮ್ಮ ಎಸ್ಟಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಭರವಸೆಯಿದೆ ಎಂದು ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಟಿ ರಘುಮೂರ್ತಿ ತಿಳಿಸಿದರು. ಚಿತ್ರದುರ್ಗದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ, ಸಿಎಂ ದೆಹಲಿ ಪ್ರವಾಸ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುವ ಭರವಸೆ ಇದೆ ನಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿಲ್ಲ ಗ್ಯಾರಂಟಿ ಯೋಜನೆ ಜತೆಗೆ ಇತರೆ ಕೆಲಸಗಳೂ ನಡೆಯುತ್ತಿವೆ ಸ್ವಲ್ಪ ಕಡಿಮೆ ಆಗಿರಬಹುದು,ಆದರೆ ಅಭಿವೃದ್ಧಿ ಆಗುತ್ತಿದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ರಘುಮೂರ್ತಿ ತಿಳಿಸಿದರು.

Read More

ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಲಿಂ. ಪಂಚಾಕ್ಷರ ಗವಾಯಿಗಳ 81ನೇ ಹಾಗೂ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವ ಸಮಾರಂಭವೂ ಜೂ. 29 ರ ಭಾನುವಾರ ಬೆಳ್ಳಿಗೆ 10.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಾನಯೋಗಿ ಸಂಗೀತ ಬಳಗದಕಾರ್ಯಾಧ್ಯಕ್ಷರಾದ ನಂದೀಶ್ ಜಿ.ಟಿ.ರವರು ತಿಳಿಸಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಶ್ರೀಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಎಂ.ತೋಟಪ್ಪ ಉತ್ತಂಗಿ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ.ಶೈಲಾ ವಿಜಯಕುಮಾರ್ ಉಭಯ ಶ್ರೀಗಳ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಮ್ಮರುದ್ರಪ್ಪ, ಶ್ರೀಮತಿ ಉಮಾ ರಮೇಶ್, ಶ್ರೀಮತಿ ಪ್ರೇಮ ಬಾಲಚಂದ್ರಪ್ಪ, ಶ್ರೀಮತಿ ನೀಲಮ್ಮ ಬಸಯ್ಯ ಹಾಗೂ ಬ್ರಹ್ಮಚಾರಿ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ, ಸಾಧನೆಯನ್ನು ಮಾಡಿದ ಹಿರಿಯ ಪತ್ರಕರ್ತರು,ಬರಹಗರರಾದ ಜಿ.ಎಸ್.ಉಜ್ಜನಪ್ಪ, ಜಾನಪದ ಗಾಯಕಿ ಶ್ರೀಮತಿ ಸುಶೀಲಮ್ಮ, ಪರಿಸರ ಪ್ರೇಮಿ ಸಿದ್ದರಾಜು ಜೋಗಿ,ಸಂಗೀತಗರಾರದ…

Read More

ಚಿತ್ರದುರ್ಗ ಜೂ. 26 ಹುಬ್ಬಳ್ಳಿ ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್. ಪಾಟೀಲ ಅವರು ಸತ್ಯವಾದ ಮಾತನ್ನೇಹೇಳಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ ಖಾನ್ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ಮಾದ್ಯಮ ವಕ್ತಾರ ನಾಗರಾಜ್ಬೇದ್ರೇ ಆಗ್ರಹಿಸಿದರು ಈ ಬಗ್ಗೆ ಹೇಳಿಕೆಯನ್ನು ನೀಡಿದ ಅವರು, ಹಲವು ಸಚಿವರ ಮೇಲೆ ಕಾಂಗ್ರೆಸ್‍ನ ನಾಯಕರೇ ಆರೋಪ ಮಾಡುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಬಗೆ ತಿಳಿಯುತ್ತಿದೆ.ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಇರುವುದು ಕರ್ನಾಟಕದ ಕಾಂಗ್ರೆಸ್ಸರ್ಕಾರ ಎನ್ನುವುದು ಈ ಮೂಲಕ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಚಿವ ಜಮೀರ್‍ಅಹ್ಮದ್ಖಾನ್ ಅವರ ಮೇಲೆ ಆರೋಪ ಬಂದಿದೆ. ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದರು. ಕಳೆದ ಎರಡು ವರ್ಷಗಳಿಂದ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದೇವೆ. ಆದರೆ ಸತ್ಯ ಗೊತ್ತಿದ್ದರೂ ಸಹ ಕಾಂಗ್ರೆಸ್ ನಮ್ಮಆರೋಪಗಳನ್ನು ಅಲ್ಲಗಳೆಯುತ್ತ ಬಂದರು. ಕ್ಷೇತ್ರಕ್ಕೆ ಮನೆ ಪಡೆಯಲು ಲಂಚ ಕೊಡುವ…

Read More

ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಹೊರಾಟಗಾರರ ಮೇಲೆ ನಡೆÀದ ಪೋಲಿಸ್ ದೌರ್ಜನ್ಖಡಿಸಿ ಚಿತ್ರದುರ್ಗ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಯುಕ್ತ ಹೋರಾಟ ಸಮಿತಿವತಿಯಿಂದ ರೈತರು ಪ್ರತಿಭಟನೆ ನಡೆಸಿದ್ದಾರೆ. ದೇವನಹಳ್ಳಿಯಲ್ಲಿ ಅತ್ಯಂತ ಶಾಂತಿಯುತವಾಗಿ ನಡೆದಿದ್ದ ರೈತರ ಪ್ರತಿಭಟನೆಯನ್ನ ಪೊಲಿಸ್ ಬಲ ಬಳಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನ ಕಾಂಗ್ರೆಸ್ ಸರ್ಕಾರ ನಡೆಸಿದೆ ವಯಸ್ಸಾದ ಮಹಿಳೆರನ್ನು ಬಿಡದೆ ಎಲ್ಲಾ ಹೋರಾಟಗಾರರನ್ನು ಸಿಕ್ಕಾಪಟ್ಟಿ ಎಳೆದಾಡಿ ಪೋಲಿಸ್ ವಶಕ್ಕೆ ಪಡೆದಿದ್ದಾರೆ ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂದೆಕೊರರಿಗೆ ಲಾಭ ಮಾಡಿಕೊಡಲು ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆಗ್ರಹಿಸಿದರು. ದೇವನಹಳ್ಳಿ ಚನ್ನರಾಯಪಟ್ಟಣ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು, ಬಂಧಿತ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು, ಹೊರಾಟಗಾರರೊಂದಿಗೆ ಹೀನಾಯವಾಗಿ ವರ್ತಿಸಿದ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾಧ ಧನಂಜಯ, ಮಲ್ಲಿಕಾರ್ಜನ್, ಬಸ್ತಿಹಳ್ಳಿ ಸುರೇಶ್‍ಬಾಬು, ನಾಗರಾಜ್ ಷಫಿವುಲ್ಲಾ, ಪುರುಷೋತ್ತಮ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ, ಯಾದವರೆಡ್ಡಿ, ಹೊರಕೇರಪ್ಪ ಜಿ.ಕೆ.ನಾಗರಾಜ್ ಸೇರಿದಂತೆ ಇತರರು…

Read More

ದಾವಣಗೆರೆ: 2023ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದೆ ಇದ್ದಕ್ಕೆ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಅವರು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಸಾಕ್ಷಿ ಸಮೇತ ಬಹಿರಂಗಪಡಿಸುವೆ ಎಂದರು. ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಜೊತೆ ಬರಲು ಒಪ್ಪಿದ್ದರು. ಅದರ ಸಂಬಂಧ ಡಿ.ಕೆ ಶಿವಕುಮಾರ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಮನೆ ಬಾಗಿಲಿಗೆ ಬಂದಿದ್ರು. ಆದರೆ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ತಮ್ಮ ನಿಲುವು ಬದಲಿಸಿದರು ಎಂದು ತಿಳಿಸಿದರು. ಇನ್ನು ನಾನು ಕಾನೂನುಬಾಹಿರ ಕೆಲಸ ಮಾಡಿಲ್ಲ. ಬೇಕಾದ್ರೆ ಕಟೀಲು ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಅವ್ರು ಬೇಕಾದ್ರೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

Read More