Author: Times of bayaluseeme

ಬಹುದೊಡ್ಡ ಸಾಂಸ್ಕøತಿಕ ಪರಂಪರೆ ಭಾರತಕ್ಕಿದೆ. ಇಲ್ಲಿನ ಅಧ್ಯಾತ್ಮಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಹಲವು ಋಷಿ ಮುನಿಗಳ ತತ್ವ ವಿಚಾರಗಳು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿವೆ. ಇಲ್ಲಿನ ನದ-ನದಿಗಳು, ಪುಣ್ಯಕ್ಷೇತ್ರಗಳು, ಸಾಧುಸಂತರು, ಬಹುಸಂಖ್ಯೆಯಲ್ಲಿವೆ. ಆದರೂ ಹೃದಯದಾರಿದ್ರ, ಅನಕ್ಷರತೆ, ಅವೈಚಾರಿಕತೆ, ಅಪ್ರಾಮಾಣಿಕತೆ ಹಾಗೂ ಭ್ರμÁ್ಟಚಾರಗಳು ಮುತ್ತಿಗೆ ಹಾಕಿ ಇಡೀ ಸಾಮಾಜಿಕ ಬದುಕನ್ನೆ ಕಂಗೇಡಿಸುತ್ತಿವೆ. ಭಾರತ ದೇಶವೆಂದರೆ ಬಹು ಸಂಸ್ಕøತಿಗಳ ನೆಲೆ. ಬಡವ-ಬಲ್ಲಿದ, ಮೇಲು-ಕೀಳು, ಕೂಲಿಕಾರ-ಮಾಲಿಕ, ಶೋಷಿತ-ಶೋಷಕ, ಅಕ್ಷರಸ್ಥ-ಅನಕ್ಷರಸ್ಥ, ಕ್ರೂರಿ-ಕರುಣಿ, ಪಂಡಿತ-ಪಾಮರ, ಉತ್ಕøಷ್ಟ-ನಿಕೃಷ್ಟ, ಮುಗ್ದ-ಕಪಟಿ, ಆಸ್ತಿಕ-ನಾಸ್ತಿಕ, ಜೋಗಿ-ಯೋಗಿ, ಸ್ವಾರ್ಥಿ-ನಿಸ್ವಾರ್ಥಿ, ಅಹಂಕಾರಿ-ನಿರಹಂಕಾರಿ, ಸ್ತ್ರೀ-ಪುರುಷರು, ಪುರುಷಸ್ತ್ರೀಯರು, ಸ್ತ್ರೀಯಪುರುಷರು, ನಪುಂಸಕರು, ಬಡಗಿ, ಕಮ್ಮಾರ, ಚಮ್ಮಾರ, ಬಳೆಗಾರ, ಜೀತಗಾರ, ಸಿಂಪಿಗ, ಅಗಸ, ಪೂಜಾರಿ, ಬೆಸ್ತ, ವೈದ್ಯ, ಶಿಕ್ಷಕ, ಒಕ್ಕಲಿಗ, ಅಧಿಕಾರಿ, ಆಳು ಮೊದಲಾದ ನೆಲೆಯಲ್ಲಿ ರೂಪಿತಗೊಂಡಿರುವ ಭಾರತ ದೇಶವನ್ನು ಒಂದು ನೆಲೆಯಲ್ಲಿ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ತಿನ್ನಲು ಸಿಗದೆ ಒಂದು ಅಗಳು ಅನ್ನಕ್ಕಾಗಿ ಅಲೆಯುವವರು ಒಂದೆಡೆ, ತಿಂದು ಹೆಚ್ಚಾಗಿ ಬಿಸಾಡುವ ಜನರು ಮತ್ತೊಂದೆಡೆಯಿರುವುದನ್ನು ಕಾಣುತ್ತೇವೆ. ಕ್ಷಣಕ್ಷಣವೂ ಭಯ, ಆತಂಕ, ತಲ್ಲಣಗಳಿಂದ ಬದುಕುತ್ತಿರುವ ಮಂದಿಯಿರುವಂತೆಯೇ, ನಿರ್ಭಯವಾಗಿ,…

Read More

ಮಹಾ ಮಾನವತವಾದಿ, ವಿಶ್ವಗುರು ಮಹಾತ್ಮ ಬಸವೇಶ್ವರರ ಜಯಂತಿಯ ಈ ಶುಭದಿನದಂದು “ಮಹಾತ್ಮರ ಚರಿತಾಮೃತ” ಕೃತಿಯಿಂದ  ಲೇಖನ ಸಂಪಾದಿಸಿ ಕೊಟ್ಟಿದ್ದಾರೆ ರುದ್ರಮೂರ್ತಿ ಎಂ. ಜೆ “ಆಯತದಲ್ಲಿ ಪೂರ್ವಾಚಾರಿಯ ಕಂಡೆ ಸ್ವಾಯತದಲ್ಲಿ ಪೂರ್ವಚಾರಿಯ ಕಂಡೆ ಸನ್ನಿಹಿತದಲ್ಲಿ ಪೂರ್ವಚಾರಿಯ ಕಂಡೆ ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನು” -ಅಲ್ಲಮಪ್ರಭು ದೇವರು ಹನ್ನೆರಡನೆಯ ಶತಾಬ್ದಿಯ ಸ್ವರ್ಣೋಧ್ಯಾಯದ ಸಮಾನತೆಯ ಶಿಖರಸೂರ್ಯ ವಿಶ್ವಗುರು ಬಸವಣ್ಣನವರು. ವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ. ವಚನಾಂದೋಲನದ ಪ್ರಥಮ ನೇತಾರ. ನಾಡಿಗೆ ಇಷ್ಟಲಿಂಗ ಕೊಟ್ಟ ಪ್ರಥಮ ಹರಿಕಾರ ಮಹಾಮಾನವತಾವಾದಿ. ಕಲ್ಯಾಣವೆಂಬ ಪ್ರಣತಿಯಲ್ಲಿ ಬಹುಬೆಲೆ ಬಾಳುವ ಭಕ್ತಿರಸವೆಂಬ ತೈಲವನ್ನೆರೆದು ಬೆಳ್ಳಂಬೆಳಕಾಗಿ ಶಿವನ ಪ್ರಕಾಶದಂತೆ ತೊಳಗಿ ಬೆಳಗಿದ ವಿಶ್ವ ವಿಭೂತಿ ಬಸವಣ್ಣನವರು, ಮುತ್ತಿನ ಹಾರದಂತೆ ನುಡಿದು ,ಲಿಂಗ ಮೆಚ್ಚಿ, ಅಹುದು ಎಂಬಂತೆ ನಡೆದು ಸರ್ವಕಾಲಿಕವೂ ,ಶಾಶ್ವತವೂ ಆದ ವಿಶ್ವ ತತ್ವಗಳನ್ನು ಸಾರಿದವರು.  ಇಂಗಳೇಶ್ವರದ ಮಂಗಳಮೂರ್ತಿಯಾದ ಇವರು ಶಿವಾನುಭಾವದ ಸಹಕಾರ ಮೂರ್ತಿಯಾಗಿ, ಜಂಗಮ ಶಿವ ಶಾಸನದಂತೆ ಬಾಳಿದವರು. ದೇಶ-ಕಾಲ- ಜಾತಿ- ಕುಲ- ಮತಗಳ ಮಾನವ…

Read More

ಚಿತ್ರದುರ್ಗ : ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಕಳೆದ ತಿಂಗಳು ಗುಂಡಿನ ದಾಳಿ ನಡೆಸಿ 26 ಅಮಾಯಕರುಗಳನ್ನು ಹತ್ಯೆಗೈದಿರುವುದು ಅತ್ಯಂತ ಖಂಡನಾರ್ಹ. ಮಾನವ ಕುಲಕ್ಕೆ ಕಳಂಕ. ಭಯೋತ್ಪಾದಕರು ಎಲ್ಲಿಯೇ ಅಡಗಿ ಕುಳಿತಿರಲಿ ಪತ್ತೆ ಹಚ್ಚಿ ಬಗ್ಗು ಬಡಿಯುವಂತೆ ಎದ್ದೇಳು ಕರ್ನಾಟಕ ಸಂಘಟನೆಯ ಕೇಂದ್ರ ವರ್ಕಿಂಗ್ ಕಮಿಟಿ ಸದಸ್ಯ ಜೆ.ಯಾದವರೆಡ್ಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಪ್ರವಾಸಿ ಮಂದಿರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ಪದಾಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಕ್ರಮಕ್ಕೆ ಎದ್ದೇಳು ಕರ್ನಾಟಕ ಸಂಪೂರ್ಣ ಬೆಂಬಲವಿದೆ. ಅಂತಹ ಅಮಾನವೀಯ ಘಟನೆ ಮತ್ತೆ ಮರುಕಳಿಸಬಾರದೆಂದರೆ ಉಗ್ರರ ತಂಗುದಾಣಗಳನ್ನು ಪತ್ತೆ ಹೆಚ್ಚಿ ಸರ್ವನಾಶ ಮಾಡಬೇಕು. ಭಯೋತ್ಪಾದಕರಲ್ಲಿ ಕೊಲ್ಲುವ ಮನಸ್ಥಿತಿ ಬಿಟ್ಟರೆ ಮಾನವೀಯತೆ ಅಂತಃಕರಣವಿರುವುದಿಲ್ಲ. ಮನಷ್ಯತ್ವ ಕಳೆದುಕೊಂಡಿರುತ್ತಾರೆ. ಹಾಗಾಗಿ ಪಹಲ್ಗಾಮ್‍ನ ದಾಳಿಗೆ ಧರ್ಮದ ಲೇಪನ ಬೇಡ. ಜಮ್ಮು-ಕಾಶ್ಮೀರದ ಸ್ಥಳೀಯ ಮುಸಲ್ಮಾನರು ಜೀವದ ಹಂಗು ತೊರೆದು ಉಗ್ರರಿಂದ ಪ್ರವಾಸಿಗರನ್ನು ಕಾಪಾಡುವ ಪ್ರಯತ್ನ ನಡೆಸಿ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿ ಊಟ, ವಸತಿ ನೀಡಿ ಮಾನವೀಯತೆ ಮೆರೆದಿದ್ದನ್ನು ಹತ್ಯೆಗೊಳಗಾದ…

Read More

ಚಿತ್ರದುರ್ಗ : ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಮನೆ ಮನೆ ಗಣತಿ ಆರಂಭಿಸಿರುವ ರಾಜ್ಯ ಸರ್ಕಾರ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪೂರಕ ಪ್ರಶ್ನಾವಳಿಗಳನ್ನು ಸಿದ್ದಪಡಿಸಬೇಕೆಂದು ವೈಜ್ಞಾನಿಕ ಒಳ ಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ವಿ.ಕಿರಣ್‍ಕುಮಾರ್ ಕೊತ್ತಗೆರೆ ಒತ್ತಾಯಿಸಿದರು. ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.5 ರಿಂದ ಆರಂಭಗೊಂಡಿರುವ ಗಣತಿ 17 ರವರೆಗೆ ನಡೆಯಲಿದೆ. ಗಣತಿಯಲ್ಲಿ ಕಡ್ಡಾಯವಾಗಿ ದತ್ತಾಂಶ ಕೊಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಇನ್ನು ಅಲೆಮಾರಿ ಅರೆಅಲೆಮಾರಿಗಳಿಗೆ ಸೂರಿಲ್ಲ. ಸಾಮಾಜಿಕ, ಶೈಕ್ಷಣಿಕ ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಗಣತಿ ನಡೆಸಬೇಕು. ಯಾವುದೇ ಕಾರಣಕ್ಕು ಅಲೆಮಾರಿ, ಅರೆಅಲೆಮಾರಿಗಳ ನೈಜತೆಯನ್ನು ಮುಚ್ಚಿಡಬಾರದು. ಮೀಸಲಾತಿಯ ವಕ್ತಾರರಂತೆ ನಡೆದುಕೊಳ್ಳುತ್ತಿರುವ ಕೆಲವರು ಆಯೋಗ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ತಳಸಮುದಾಯಗಳ ನಿಖರ ಸರ್ವೆಗೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲಾ ಕೊರಮ ಕ್ಷೇಮಾಭಿವೃದ್ದಿ…

Read More

ಚಿತ್ರದುರ್ಗ : ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಮೇ.5 ರಿಂದ ಆರಂಭಿಸಿರುವ ಮನೆ ಮನೆ ಸಮೀಕ್ಷೆಯಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಪಾಲ್ಗೊಂಡು ಕಡ್ಡಾಯವಾಗಿ ಮಾದಿಗ ಎಂದು ಬರೆಸುವಂತೆ ಜಾಗೃತಿ ಮೂಡಿಸಿದರು. ನಗರದ ಕೆಳಗೋಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ಗುರುವಾರ ನಡೆದ ಮನೆ ಮನೆ ಗಣತಿಯಲ್ಲಿ ಭಾಗವಹಿಸಿದ್ದ ಜಿ.ಎಸ್.ಮಂಜುನಾಥ್ ಮಾದಿಗ ಜನಾಂಗ ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ನಮೂದಿಸಬಾರದು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಈ ಸಮಾಜ ಜಾತಿ ಗಣತಿಯಲ್ಲಿ ಮಾದಿಗ ಎಂದು ನಮೂದಿಸದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿಯಲ್ಲಿನ ಒಳ ಜಾತಿಗಳಿಗೆ ಆಯಾ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕಲ್ಪಿಸಲು ನೆರವಾಗಲಿದೆ ಎಂದರು. ಒಳ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ಮಹತ್ತರ ತೀರ್ಪಿನಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗಿಕರಣಕ್ಕೆ ಮುಂದಾಗಿದ್ದು, ಮೇ 17 ರವರೆಗೆ ಜಾತಿ ಸಮೀಕ್ಷೆ ನಡೆಯಲಿದೆ. ಗಣತಿದಾರರು…

Read More

ಚಿತ್ರದುರ್ಗ: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸುವ ಸಂಚಾರಿ ಆರೋಗ್ಯ ಘಟಕದ ಎರಡು ವಾಹನಗಳಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಸಂಚಾರಿ ಆರೋಗ್ಯ ಕ್ಲಿನಿಕ್‍ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಅವರಿರುವ ಸ್ಥಳಕ್ಕೆ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವುದು, ಚಿಕಿತ್ಸೆ ಹಾಗೂ ಸಲಹೆ ಸೇರಿದಂತೆ ಮೊದಲಾದ ಸೇವೆ ಒದಗಿಸಲು ಸಂಚಾರಿ ಆರೋಗ್ಯ ಕ್ಲಿನಿಕ್‍ಗಳು ಕಾರ್ಯಾರಂಭಗೊಂಡಿದ್ದು, ನೋಂದಾಯಿತ ಕಟ್ಟಡ ಮತ್ತು ಇತರೆ…

Read More