Author: Times of bayaluseeme
ಬೆಂಗಳೂರು, ಮೇ 22: ಕಾಂಗ್ರೆಸ್‌ನ ಗೂಂಡಾಗಳು ಕಾನೂನು ಕೈಗೆ ತೆಗೆದುಕೊಂಡು ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ದಾಳಿ ಮಾಡಿದ್ದಾರೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ರಾಜಭವನದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಕಾರಿನ ಮೇಲೆ ಕಾಂಗ್ರೆಸ್ ಗೂಂಡಾಗಳು ದಾಳಿ ಮಾಡಿದ್ದಾರೆ. ಸರ್ಕಾರ ಮಾಡಿರುವ ತಪ್ಪುಗಳ ವಿರುದ್ಧ ನಾರಾಯಣಸ್ವಾಮಿ ಮಾತಾಡಿದ್ದಾರೆ. ಆದರೆ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಲಾಗಿದೆ. ಇದೇ ರೀತಿ ಸಿ.ಟಿ.ರವಿ ಅವರ ಮೇಲೂ ದಾಳಿ ಮಾಡಲಾಗಿತ್ತು. ಪೊಲೀಸರು ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡಿಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಟ್ಟಿಲ್ಲ ಎಂದು ದೂರಿದರು. ನಾರಾಯಣಸ್ವಾಮಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಕಾರಿನ ಮೇಲೆ ಬಣ್ಣ, ಮೊಟ್ಟೆ ಹಾಕಲಾಗಿದೆ. ಕೊಲೆ ಬೆದರಿಕೆ ಹಾಕಲಾಗಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಪಕ್ಷ ನಾಯಕರ ಕರ್ತವ್ಯ. ಅದನ್ನು ಅವರು ಸರಿಯಾಗಿಯೇ ಮಾಡಿದ್ದಾರೆ. ನಾಯಿ…
ಕಳೆದ ಹತ್ತು ವರ್ಷಗಳಲ್ಲಿ ದೇಶದ ಬಡವರಿಗೆ ಜನೌಷಧ ಕೇಂದ್ರಗಳ ಮೂಲಕ ಔಷಧ ಖರೀದಿಯಲ್ಲಿ ಸುಮಾರು 30 ಸಾವಿರ ಕೋಟಿ ರೂ. ಉಳಿತಾಯವಾಗಿದೆ. ಈ ಸಾಧನೆಯನ್ನು ಗಮನದಲ್ಲಿಟ್ಟು, ಕರ್ನಾಟಕದ ಕಾಂಗ್ರೆಸ್ ಸರಕಾರವು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಸಂಸದ ಗೋವಿಂದ ಎಂ. ಕಾರಜೋಳ ಒತ್ತಾಯಿಸಿದ್ದಾರೆ. ರಾಜ್ಯ ಸರಕಾರದ ಈ ನಿರ್ಧಾರವನ್ನು “ಬಡವರ ಬಗ್ಗೆ ಕಾಳಜಿಯಿಲ್ಲದ, ಅಸಂವೇದನಾಶೀಲ ಮತ್ತು ಮೂರ್ಖತನದ ಕ್ರಮ” ಎಂದು ಕಾರಜೋಳ ಖಂಡಿಸಿದ್ದಾರೆ. ದೇಶಾದ್ಯಂತ 16,290 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ 1,459 ಕೇಂದ್ರಗಳಿದ್ದು, ಇವುಗಳಲ್ಲಿ 400ಕ್ಕೂ ಹೆಚ್ಚು ಕೇಂದ್ರಗಳು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಈ ಕೇಂದ್ರಗಳ ಮೂಲಕ 2,047 ಬಗೆಯ ಔಷಧಗಳು ಮತ್ತು 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಉಪಕರಣಗಳು ರಿಯಾಯಿತಿ ದರದಲ್ಲಿ ರೋಗಿಗಳಿಗೆ ಲಭ್ಯವಾಗುತ್ತಿವೆ. ರಾಜ್ಯದ ಬಡವರ ಮತ್ತು ದೀನದಲಿತರ ಬಗ್ಗೆ ಕಾಳಜಿಯಿದ್ದರೆ, ಸರಕಾರ ಈ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಕಾರಜೋಳ ಆಗ್ರಹಿಸಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ…
ಚಿತ್ರದುರ್ಗ, ಮೇ.21: ಖಾಸಗಿ ಅನುದಾನ ರಹಿತ ಶಾಲೆಗಳು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸರ್ಕಾರದ ನಿಯಮಾವಳಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂದು ತಿಳಿಸಿದ ಅವರು, ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಯಮಗಳ ಉಲ್ಲಂಘನೆ ಮಾಡಬಾರದು. ಒಂದು ವೇಳೆ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘನೆ ಕುರಿತು ದೂರು ಬಂದರೆ ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ನಿಯಮಾವಳಿ ಪಾಲನೆ ಕಡ್ಡಾಯ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಪ್ರವೇಶ ಶುಲ್ಕದ ಮಾಹಿತಿಯನ್ನು ಪ್ರಚುರ ಪಡಿಸದೇ ಇರುವುದು, ಒಂದೇ ಬಾರಿಗೆ ಡೋನೇಷನ್ ಶುಲ್ಕ ಕಟ್ಟುವಂತೆ ಬೇಡಿಕೆಯಿಡುವುದು, ಮೂಲಸೌಲಭ್ಯಗಳ ಕೊರತೆ, ನಾಮಕಾವಸ್ಥೆಗೆ ಶಿಕ್ಷಣ ಸಂಸ್ಥೆ ನಡೆಸುವುದು, ಉತ್ತಮ ಫಲಿತಾಂಶಕ್ಕೆ ಪಡೆಯಲು…
ಬೆಂಗಳೂರು, ಮೇ 21: ಭಾರತೀಯ ವಿದೇಶಿ ಸೇವೆಯ (Indian Foreign Service) ಭಾರತೀಯ ರಾಯಭಾರಿ ಕಛೇರಿಗಳ ಅಧಿಕಾರಿಗಳಾದ ಇಸ್ರೇಲ್ ನವಿಶಾಲ್ ಜ್ಯೋತಿ ದಾಸ್, ಟೆಲ್ ಅವಿವ್, ಬೀಜಿಂಗ್ ನ ಡಾ.ಗೌತಮ್ ಕುಮಾರ್ ಪಾಂಡೆ, ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯ ಅಜಿತ್ ಜಾನ್ ಜೋಶುವಾ, ಕುವೈತ್ ನ ಮನಸ್ ರಾಜ್ ಪಟೇಲ್ ಮತ್ತು ಬೋಗೋಟ ನ ಡಾ.ವಿನೀತ್‌ಕುಮಾರ್ ಅವರು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕದ ಕಾಫಿ ಶ್ರೀಗಂಧದ ಸಾಮಗ್ರಿಗಳು, ಅರಣ್ಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ಮುಂತಾದ ಸ್ಥಳೀಯ ಉತ್ಪನ್ನಗಳ ರಪ್ತಿನ ಬಗ್ಗೆ ಚರ್ಚಿಸಿ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಒದಗಿಸುವ ಆಶಯವನ್ನು ಸದರಿ ಅಧಿಕಾರಿಗಳು ವ್ಯಕ್ತಪಡಿಸಿದ್ದು ನಮ್ಮ ಸ್ಥಳೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶ ಸಿಗಲಿದೆ ಎಂದು ತಿಳಿಸಿದರು
ಚಿತ್ರದುರ್ಗ ಮೇ.21: ಅಂಗವಿಕಲರ ಸಬಲೀಕರಣ ಉತ್ತೇಜಿಸುವ ಸಲುವಾಗಿ ಹಮ್ಮಿಕೊಂಡಿರುವ “ಸುಗಮ್ಯ ಯಾತ್ರಾ” ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ದಿ ಅಸೋಷಿಯೇಷನ್ ಆಫ್ ಪೀಪಲ್‍ವಿತ್ ಡಿಸೆಬಿಲಿಟಿ (ಎಪಿಡಿ) ಸಂಯುಕ್ತಾಶ್ರಯದಲ್ಲಿ “ಸುಗಮ್ಯ ಯಾತ್ರಾ-ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ” ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲರಿಗೂ ಸಮಾನ ಅವಕಾಶ-ಸುಗಮ್ಯ ಯಾತ್ರೆ ನಮ್ಮ ಹಕ್ಕು, ಸುಗಮ್ಯ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಟ್ಟಾಗಿ ನಡೆಯೋಣ, ಸುಗಮ ಸಮಾಜ ಕಟ್ಟೋಣ, ವಿಕಲಚೇತನ ವ್ಯಕ್ತಿಗಳ ಪ್ರಭುತ್ವಕ್ಕೆ ದಾರಿ ಹಾಸೋಣ, ಸುಗಮ್ಯ ಯಾತ್ರೆ-ಸೊಗಸಾದ ಜೀವನ, ನಡೆಯೋಣ ಸುಗಮ್ಯ ಮಾರ್ಗದಲ್ಲಿ, ಎಲ್ಲರಿಗೂ ಸಮಾನ ಸೌಲಭ್ಯದಲ್ಲಿ ನಾವು ನಿರ್ಬಂಧ ಮುಕ್ತ ಸಮಾಜದತ್ತ, ಅಡಚಣೆ ಇಲ್ಲದ…
ಚಿತ್ರದುರ್ಗ, ಮೇ.20: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಯುವ ಜನತೆ ಕೌಶಲಾಧಾರಿತ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಟಿಟಿಸಿ ಕೋರ್ಸ್ ಎಸ್‍ಎಸ್‍ಎಲ್‍ಸಿ ನಂತರ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಉದ್ಯೋಗ ಭರವಸೆಯ ಕೋರ್ಸ್‍ಗಳನ್ನು ನೀಡುವಲ್ಲಿ ಮುಂಚೂಣೆಯಲ್ಲಿದೆ. ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೋಮಾ ಪ್ರವೇಶಾತಿಯು ಪ್ರಾರಂಭವಾಗಿದ್ದು, 1. ಡಿಪ್ಲೋಮಾ ಇನ್‍ಟೂಲ್ ಅಂಡ್ ಡೈ ಮೇಕಿಂಗ್ 2. ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ 3. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಬ ಮೂರು ಕೋರ್ಸ್‍ಗಳಿವೆ. ಈ ಕೋರ್ಸ್‍ಗಳ ಅವಧಿ 3 ವರ್ಷ ಹಾಗೂ 1 ವರ್ಷ ಕಡ್ಡಾಯವಾಗಿ ಕೈಗಾರಿಕೆಗಳಿಗೆನಿಯೋಜಿಸಲಾಗುವುದು. ಡಿಪ್ಲೋಮಾ ಆದ ನಂತರ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿರುತ್ತವೆ. ಹಾಗೂ ಚಿತ್ರದುರ್ಗ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್‍ಗಳಿಗೆ ಶೇ.70 ಪ್ರಾಯೋಗಿಕ ತರಬೇತಿ ಹಾಗೂ ಶೇ.30 ಥೇರಿ…
ಚಿತ್ರದುರ್ಗ: ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಈ ಬಾರಿ ಉಡುಪಿಯ ಅಮೋಘ ಸಾಂಸ್ಕತಿಕ- ಸಾಮಾಜಿಕ-ಸಾಹಿತ್ಯಿಕ ಸಂಸ್ಥೆ ಕೊಡ ಮಾಡುವ ಪ್ರತಿಷ್ಟಿತ ‘‘ಸಾಮರಸ್ಯ’’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರ ಶನಿವಾರ ಸಂಜೆ 4 ಗಂಟೆಗೆ ನೆರವೇರಲಿದೆ. ಚಿತ್ರದುರ್ಗದ ಶ್ರೀಶಿವಶರಣ ಮಾದಾರ ಚನ್ನಯ್ಯ ಗುರುಪೀಠವು ಹೆಸರಿನಿಂದ ಜಾತಿ ಸೂಚಕವಾಗಿದ್ದರೂ ಪೀಠಧ್ಯಕ್ಷರಾದ ಸ್ವಾಮೀಜಿಯವರು ಸಮಾಜದ ಎಲ್ಲ ಜಾತಿ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಮಾಜದಲ್ಲಿ ನೆಲೆಯೂರಿರುವ ಮೇಲು-ಕೀಳು ಭಾವನೆಗಳು ಮೂಢನಂಬಿಕೆ ಕಂದಾಚಾರ ಜಾತೀಯತೆ ನಿರ್ಮೂಲನೆಗೆ ಸದಾ ಶ್ರಮಿಸುತ್ತಿದ್ದಾರೆ. ಮಾನವ ಸಂಘ ಜೀವಿ ಸಮಾಜದಲ್ಲಿ ಸಹಬಾಳ್ವೆ ನಡೆಸುವಾಗ ಎಲ್ಲ ಜಾತಿ ವರ್ಗಗಳ ಜನರು ಪರಸ್ಪರ ಹೊಂದಿಕೊಂಡು ಬಾಳಿದಾಗ ಮಾತ್ರ ಮಾನವನ ಅಭ್ಯುದಯ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳ ಈ ಸಾಮಾಜಿಕ ಸಾಮರಸ್ಯದ ನಿರಂತರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅಮೋಘ ಸಂಸ್ಥೆ ತಿಳಿಸಿದೆ. ಸಮಾರಂಭದಲ್ಲಿ…
ಚಿತ್ರದುರ್ಗ, ಮೇ.20: ಸೋಮವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 3.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 0.1 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 1.1 ಹಿರಿಯೂರು ತಾಲ್ಲೂಕು 2.8 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 2.5 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 6.3 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 0.9 ಮಿ.ಮೀ ಮಳೆಯಾಗಿದೆ. ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 0.1 ಮಿ.ಮೀ, ಪರಶುರಾಂಪುರ 0.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 0.7 ಮಿ.ಮೀ, ಭರಮಸಾಗರ 2.5 ಮಿ.ಮೀ, ಹಿರೇಗುಂಟನೂರು 1.6 ಮಿ.ಮೀ, ತುರುವನೂರು 0.1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 0.8 ಮಿ.ಮೀ, ಧರ್ಮಪುರ 0.1 ಮಿ.ಮೀ, ಜವನಗೊಂಡನಹಳ್ಳಿ 10 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 4.3 ಮಿ.ಮೀ, ಬಿ.ದುರ್ಗ 0.4 ಮಿ.ಮೀ, ರಾಮಗಿರಿ 1.7 ಮಿ.ಮೀ, ತಾಳ್ಯ 3.3 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 3.8 ಮಿ.ಮೀ, ಮಾಡದಕೆರೆ 4.5 ಮಿ.ಮೀ, ಮತ್ತೋಡು…
ಚಿತ್ರದುರ್ಗ, ಮೇ.20: ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಪಡೆದಿರುವ ರಸಗೊಬ್ಬರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮವಾದ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಬೀಜ ಮತ್ತು ವಿವಿಧ ರಸಗೊಬ್ಬರಗಳನ್ನು ಕೊಂಡು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತೀದ್ದಾರೆ. ಆದರೆ ಜಿಲ್ಲೆಯಲ್ಲಿ ಅಲ್ಲಲ್ಲಿ ರಸಗಗೊಬ್ಬರಗಳನ್ನು ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರಿಂದ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರಿಂದ ದೂರುಗಳು ಸ್ವೀಕೃತವಾಗುತ್ತಿವೆ. ಆದುದರಿಂದ ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಪಡೆದಿರುವ ರಸಗೊಬ್ಬರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು. ಕಡ್ಡಾಯವಾಗಿ ರಸಗೊಬ್ಬರಗಳ ದರ ಪಟ್ಟಿ ಮತ್ತು ದೈನಂದಿನ ದಾಸ್ತಾನನ್ನು ತಮ್ಮ ಮಾರಾಟ ಮಳಿಗೆಗಳ ಮುಂದೆ…
ಚಿತ್ರದುರ್ಗ, ಮೇ.20: “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಪ್ರಸಾರ ಭಾರತಿ ಆಕಾಶವಾಣಿಯ ಕನ್ನಡ ಅಭಿಯಾನದ ಅಂಗವಾಗಿ ನಾಡು-ನುಡಿ ಸಂಸ್ಕøತಿಯ ಕುರಿತಾದ ವಿಶೇಷ ಸಂದರ್ಶನ ಸರಣಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರೊಂದಿಗೆ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಡೆಸಿದ ವಿಶೇಷ ಸಂದರ್ಶನ ಭಾಗ-1 ಇದೇ ಮೇ.21ರಂದು ಬೆಳಿಗ್ಗೆ 8.30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಸಾರ ಭಾರತಿ ಚಿತ್ರದುರ್ಗ ಆಕಾಶವಾಣಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.