Author: Times of bayaluseeme
ಬೆಂಗಳೂರು, ಮೇ 21: ಭಾರತೀಯ ವಿದೇಶಿ ಸೇವೆಯ (Indian Foreign Service) ಭಾರತೀಯ ರಾಯಭಾರಿ ಕಛೇರಿಗಳ ಅಧಿಕಾರಿಗಳಾದ ಇಸ್ರೇಲ್ ನವಿಶಾಲ್ ಜ್ಯೋತಿ ದಾಸ್, ಟೆಲ್ ಅವಿವ್, ಬೀಜಿಂಗ್ ನ ಡಾ.ಗೌತಮ್ ಕುಮಾರ್ ಪಾಂಡೆ, ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯ ಅಜಿತ್ ಜಾನ್ ಜೋಶುವಾ, ಕುವೈತ್ ನ ಮನಸ್ ರಾಜ್ ಪಟೇಲ್ ಮತ್ತು ಬೋಗೋಟ ನ ಡಾ.ವಿನೀತ್‌ಕುಮಾರ್ ಅವರು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕದ ಕಾಫಿ ಶ್ರೀಗಂಧದ ಸಾಮಗ್ರಿಗಳು, ಅರಣ್ಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ಮುಂತಾದ ಸ್ಥಳೀಯ ಉತ್ಪನ್ನಗಳ ರಪ್ತಿನ ಬಗ್ಗೆ ಚರ್ಚಿಸಿ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಒದಗಿಸುವ ಆಶಯವನ್ನು ಸದರಿ ಅಧಿಕಾರಿಗಳು ವ್ಯಕ್ತಪಡಿಸಿದ್ದು ನಮ್ಮ ಸ್ಥಳೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶ ಸಿಗಲಿದೆ ಎಂದು ತಿಳಿಸಿದರು
ಚಿತ್ರದುರ್ಗ ಮೇ.21: ಅಂಗವಿಕಲರ ಸಬಲೀಕರಣ ಉತ್ತೇಜಿಸುವ ಸಲುವಾಗಿ ಹಮ್ಮಿಕೊಂಡಿರುವ “ಸುಗಮ್ಯ ಯಾತ್ರಾ” ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ದಿ ಅಸೋಷಿಯೇಷನ್ ಆಫ್ ಪೀಪಲ್‍ವಿತ್ ಡಿಸೆಬಿಲಿಟಿ (ಎಪಿಡಿ) ಸಂಯುಕ್ತಾಶ್ರಯದಲ್ಲಿ “ಸುಗಮ್ಯ ಯಾತ್ರಾ-ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ” ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲರಿಗೂ ಸಮಾನ ಅವಕಾಶ-ಸುಗಮ್ಯ ಯಾತ್ರೆ ನಮ್ಮ ಹಕ್ಕು, ಸುಗಮ್ಯ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಟ್ಟಾಗಿ ನಡೆಯೋಣ, ಸುಗಮ ಸಮಾಜ ಕಟ್ಟೋಣ, ವಿಕಲಚೇತನ ವ್ಯಕ್ತಿಗಳ ಪ್ರಭುತ್ವಕ್ಕೆ ದಾರಿ ಹಾಸೋಣ, ಸುಗಮ್ಯ ಯಾತ್ರೆ-ಸೊಗಸಾದ ಜೀವನ, ನಡೆಯೋಣ ಸುಗಮ್ಯ ಮಾರ್ಗದಲ್ಲಿ, ಎಲ್ಲರಿಗೂ ಸಮಾನ ಸೌಲಭ್ಯದಲ್ಲಿ ನಾವು ನಿರ್ಬಂಧ ಮುಕ್ತ ಸಮಾಜದತ್ತ, ಅಡಚಣೆ ಇಲ್ಲದ…
ಚಿತ್ರದುರ್ಗ, ಮೇ.20: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಯುವ ಜನತೆ ಕೌಶಲಾಧಾರಿತ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಟಿಟಿಸಿ ಕೋರ್ಸ್ ಎಸ್‍ಎಸ್‍ಎಲ್‍ಸಿ ನಂತರ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಉದ್ಯೋಗ ಭರವಸೆಯ ಕೋರ್ಸ್‍ಗಳನ್ನು ನೀಡುವಲ್ಲಿ ಮುಂಚೂಣೆಯಲ್ಲಿದೆ. ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೋಮಾ ಪ್ರವೇಶಾತಿಯು ಪ್ರಾರಂಭವಾಗಿದ್ದು, 1. ಡಿಪ್ಲೋಮಾ ಇನ್‍ಟೂಲ್ ಅಂಡ್ ಡೈ ಮೇಕಿಂಗ್ 2. ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ 3. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಬ ಮೂರು ಕೋರ್ಸ್‍ಗಳಿವೆ. ಈ ಕೋರ್ಸ್‍ಗಳ ಅವಧಿ 3 ವರ್ಷ ಹಾಗೂ 1 ವರ್ಷ ಕಡ್ಡಾಯವಾಗಿ ಕೈಗಾರಿಕೆಗಳಿಗೆನಿಯೋಜಿಸಲಾಗುವುದು. ಡಿಪ್ಲೋಮಾ ಆದ ನಂತರ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿರುತ್ತವೆ. ಹಾಗೂ ಚಿತ್ರದುರ್ಗ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್‍ಗಳಿಗೆ ಶೇ.70 ಪ್ರಾಯೋಗಿಕ ತರಬೇತಿ ಹಾಗೂ ಶೇ.30 ಥೇರಿ…
ಚಿತ್ರದುರ್ಗ: ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಈ ಬಾರಿ ಉಡುಪಿಯ ಅಮೋಘ ಸಾಂಸ್ಕತಿಕ- ಸಾಮಾಜಿಕ-ಸಾಹಿತ್ಯಿಕ ಸಂಸ್ಥೆ ಕೊಡ ಮಾಡುವ ಪ್ರತಿಷ್ಟಿತ ‘‘ಸಾಮರಸ್ಯ’’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರ ಶನಿವಾರ ಸಂಜೆ 4 ಗಂಟೆಗೆ ನೆರವೇರಲಿದೆ. ಚಿತ್ರದುರ್ಗದ ಶ್ರೀಶಿವಶರಣ ಮಾದಾರ ಚನ್ನಯ್ಯ ಗುರುಪೀಠವು ಹೆಸರಿನಿಂದ ಜಾತಿ ಸೂಚಕವಾಗಿದ್ದರೂ ಪೀಠಧ್ಯಕ್ಷರಾದ ಸ್ವಾಮೀಜಿಯವರು ಸಮಾಜದ ಎಲ್ಲ ಜಾತಿ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಮಾಜದಲ್ಲಿ ನೆಲೆಯೂರಿರುವ ಮೇಲು-ಕೀಳು ಭಾವನೆಗಳು ಮೂಢನಂಬಿಕೆ ಕಂದಾಚಾರ ಜಾತೀಯತೆ ನಿರ್ಮೂಲನೆಗೆ ಸದಾ ಶ್ರಮಿಸುತ್ತಿದ್ದಾರೆ. ಮಾನವ ಸಂಘ ಜೀವಿ ಸಮಾಜದಲ್ಲಿ ಸಹಬಾಳ್ವೆ ನಡೆಸುವಾಗ ಎಲ್ಲ ಜಾತಿ ವರ್ಗಗಳ ಜನರು ಪರಸ್ಪರ ಹೊಂದಿಕೊಂಡು ಬಾಳಿದಾಗ ಮಾತ್ರ ಮಾನವನ ಅಭ್ಯುದಯ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳ ಈ ಸಾಮಾಜಿಕ ಸಾಮರಸ್ಯದ ನಿರಂತರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅಮೋಘ ಸಂಸ್ಥೆ ತಿಳಿಸಿದೆ. ಸಮಾರಂಭದಲ್ಲಿ…
ಚಿತ್ರದುರ್ಗ, ಮೇ.20: ಸೋಮವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 3.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 0.1 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 1.1 ಹಿರಿಯೂರು ತಾಲ್ಲೂಕು 2.8 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 2.5 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 6.3 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 0.9 ಮಿ.ಮೀ ಮಳೆಯಾಗಿದೆ. ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 0.1 ಮಿ.ಮೀ, ಪರಶುರಾಂಪುರ 0.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 0.7 ಮಿ.ಮೀ, ಭರಮಸಾಗರ 2.5 ಮಿ.ಮೀ, ಹಿರೇಗುಂಟನೂರು 1.6 ಮಿ.ಮೀ, ತುರುವನೂರು 0.1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 0.8 ಮಿ.ಮೀ, ಧರ್ಮಪುರ 0.1 ಮಿ.ಮೀ, ಜವನಗೊಂಡನಹಳ್ಳಿ 10 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 4.3 ಮಿ.ಮೀ, ಬಿ.ದುರ್ಗ 0.4 ಮಿ.ಮೀ, ರಾಮಗಿರಿ 1.7 ಮಿ.ಮೀ, ತಾಳ್ಯ 3.3 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 3.8 ಮಿ.ಮೀ, ಮಾಡದಕೆರೆ 4.5 ಮಿ.ಮೀ, ಮತ್ತೋಡು…
ಚಿತ್ರದುರ್ಗ, ಮೇ.20: ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಪಡೆದಿರುವ ರಸಗೊಬ್ಬರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮವಾದ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಬೀಜ ಮತ್ತು ವಿವಿಧ ರಸಗೊಬ್ಬರಗಳನ್ನು ಕೊಂಡು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತೀದ್ದಾರೆ. ಆದರೆ ಜಿಲ್ಲೆಯಲ್ಲಿ ಅಲ್ಲಲ್ಲಿ ರಸಗಗೊಬ್ಬರಗಳನ್ನು ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರಿಂದ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರಿಂದ ದೂರುಗಳು ಸ್ವೀಕೃತವಾಗುತ್ತಿವೆ. ಆದುದರಿಂದ ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಪಡೆದಿರುವ ರಸಗೊಬ್ಬರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು. ಕಡ್ಡಾಯವಾಗಿ ರಸಗೊಬ್ಬರಗಳ ದರ ಪಟ್ಟಿ ಮತ್ತು ದೈನಂದಿನ ದಾಸ್ತಾನನ್ನು ತಮ್ಮ ಮಾರಾಟ ಮಳಿಗೆಗಳ ಮುಂದೆ…
ಚಿತ್ರದುರ್ಗ, ಮೇ.20: “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಪ್ರಸಾರ ಭಾರತಿ ಆಕಾಶವಾಣಿಯ ಕನ್ನಡ ಅಭಿಯಾನದ ಅಂಗವಾಗಿ ನಾಡು-ನುಡಿ ಸಂಸ್ಕøತಿಯ ಕುರಿತಾದ ವಿಶೇಷ ಸಂದರ್ಶನ ಸರಣಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರೊಂದಿಗೆ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಡೆಸಿದ ವಿಶೇಷ ಸಂದರ್ಶನ ಭಾಗ-1 ಇದೇ ಮೇ.21ರಂದು ಬೆಳಿಗ್ಗೆ 8.30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಸಾರ ಭಾರತಿ ಚಿತ್ರದುರ್ಗ ಆಕಾಶವಾಣಿ ಪ್ರಕಟಣೆ ತಿಳಿಸಿದೆ.
ಚಿತ್ರದುರ್ಗ : ಭಯೋತ್ಪಾದನೆಯನ್ನು ಸಂಹಾರ ಮಾಡಬೇಕಾಗಿರುವುದರಿಂದ ಪ್ರತಿ ಮನೆಯಿಂದಲೂ ಒಬ್ಬನನ್ನು ಸೈನ್ಯಕ್ಕೆ ಕಡ್ಡಾಯವಾಗಿ ಸೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು. ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಆಪರೇಷನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿರುವುದರಿಂದ ನಾಗರೀಕರ ವೇದಿಕೆ ವತಿಯಿಂದ ಶನಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಪರೇಷನ್ ಸಿಂಧೂರ ಬೃಹತ್ ತಿರಂಗಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು. ಭಾರತ ಜಗತ್ತಿಗೆ ತಾಯಿ ಬೇರಿದ್ದಂತೆ. ಬೇರೆಯವರ ಮೇಲೆ ಎಂದಿಗೂ ದಬ್ಬಾಳಿಕೆ ಮಾಡಲ್ಲ. ಶರಣರು, ಸಂತರು, ಮಹಾತ್ಮರು, ವೀರಪುರುಷರು ನೆಲೆಸಿರುವ ದೇಶ ನಮ್ಮದು ಎಂದು ವಿಶ್ವಕ್ಕೆ ಗೊತ್ತು. ಶಿವಾಜಿಮಹಾರಾಜರು, ರಾಣಾ ಪ್ರತಾಪ್‍ಸಿಂಗ್, ಪೃಥ್ವಿರಾಜ್ ಚವ್ಹಾಣ್, ಬುದ್ದ, ಬಸವ ಹುಟ್ಟಿರುವ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ. ದೇಶದ್ರೋಹಿ, ಧರ್ಮದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ. ಭಾರತವನ್ನು ಕೆಣಕಿ ಪಾಪಿ ಪಾಕಿಸ್ತಾನದವರು ತಿಣುಕುತ್ತಿದ್ದಾರೆ. ಭಾರತೀಯರೆಂದರೆ ತಾಯಿ ಹೃದಯದವರು. ಭಾರತವನ್ನು ಯಾರೆ ಮುಟ್ಟಿದರು ಸರ್ವನಾಶವಾಗುತ್ತಾರೆಂದು ಹೇಳಿದರು. ಮಕ್ಕಳನ್ನು…
ಚಿತ್ರದುರ್ಗ : ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಈಗ ಶಮನಗೊಂಡಿದೆ. ಆದಾಗ್ಯೂ ಸಹ ಸರ್ಕಾರದ ಸೂಚನೆಯಂತೆ ತುರ್ತು ಸಂದರ್ಭಗಳಲ್ಲಿ ನಾಗರೀಕರನ್ನು ರಕ್ಷಣೆ ಮಾಡುವ ಕುರಿತು ನಾಗರೀಕ ಸುರಕ್ಷಾ ಅಣಕು ಪ್ರದರ್ಶವನ್ನು ಇದೇ ಮೇ.15 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಾಗರೀಕ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಪರಾಮರ್ಶಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಇಂತಹ ಸಂದರ್ಭಗಳಲ್ಲಿ ಕಡಿಮೆ ಸಮಯದಲ್ಲಿ, ತುರ್ತಾಗಿ ಸ್ಪಂದನೆ ದೊರಕುವಂತಾಗಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಜನರು ಗಾಬರಿಯಾಗದೆ, ವಿವೇಚನೆಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು ಈ ಅಣಕು ಪ್ರದರ್ಶನದ ಉದ್ದೇಶವಾಗಿದೆ. ವಿಕೋಪದಲ್ಲಿ…
ಬುದ್ಧ ಕಟ್ಟ ಬಯಸಿದ ಸಮಾಜ: ಬಹುದೊಡ್ಡ ಸಾಂಸ್ಕೃತಿಕ ಪರಂಪರೆ ಭಾರತಕ್ಕಿದೆ. ಇಲ್ಲಿನ ಅಧ್ಯಾತ್ಮಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಹಲವು ಋಷಿ ಮುನಿಗಳ ತತ್ವ ವಿಚಾರಗಳು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿವೆ. ಇಲ್ಲಿನ ನದ-ನದಿಗಳು, ಪುಣ್ಯಕ್ಷೇತ್ರಗಳು, ಸಾಧುಸಂತರು, ಬಹುಸಂಖ್ಯೆಯಲ್ಲಿವೆ. ಆದರೂ ಹೃದಯದಾರಿದ್ರ, ಅನಕ್ಷರತೆ, ಅವೈಚಾರಿಕತೆ, ಅಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರಗಳು ಮುತ್ತಿಗೆ ಹಾಕಿ ಇಡೀ ಸಾಮಾಜಿಕ ಬದುಕನ್ನೆ ಕಂಗೇಡಿಸುತ್ತಿವೆ. ಬಹುಸಂಸ್ಕೃತಿಗಳ ನೆಲೆ ಭಾರತ ದೇಶವೆಂದರೆ ಬಹು ಸಂಸ್ಕೃತಿಗಳ ನೆಲೆ. ಬಡವ-ಬಲ್ಲಿದ, ಮೇಲು-ಕೀಳು, ಕೂಲಿಕಾರ-ಮಾಲಿಕ, ಶೋಷಿತ-ಶೋಷಕ, ಅಕ್ಷರಸ್ಥ-ಅನಕ್ಷರಸ್ಥ, ಕ್ರೂರಿ-ಕರುಣಿ, ಪಂಡಿತ-ಪಾಮರ, ಉತ್ಕೃಷ್ಟ-ನಿಕೃಷ್ಟ, ಮುಗ್ದ-ಕಪಟಿ, ಆಸ್ತಿಕ-ನಾಸ್ತಿಕ, ಜೋಗಿ-ಯೋಗಿ, ಸ್ವಾರ್ಥಿ-ನಿಸ್ವಾರ್ಥಿ, ಅಹಂಕಾರಿ-ನಿರಹಂಕಾರಿ, ಸ್ತ್ರೀ-ಪುರುಷರು, ಪುರುಷಸ್ತ್ರೀಯರು, ಸ್ತ್ರೀಯಪುರುಷರು, ನಪುಂಸಕರು, ಬಡಗಿ, ಕಮ್ಮಾರ, ಚಮ್ಮಾರ, ಬಳೆಗಾರ, ಜೀತಗಾರ, ಸಿಂಪಿಗ, ಅಗಸ, ಪೂಜಾರಿ, ಬೆಸ್ತ, ವೈದ್ಯ, ಶಿಕ್ಷಕ, ಒಕ್ಕಲಿಗ, ಅಧಿಕಾರಿ, ಆಳು ಮೊದಲಾದ ನೆಲೆಯಲ್ಲಿ ರೂಪಿತಗೊಂಡಿರುವ ಭಾರತ ದೇಶವನ್ನು ಒಂದು ನೆಲೆಯಲ್ಲಿ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ವೈರುಧ್ಯಗಳು ತಿನ್ನಲು ಸಿಗದೆ ಒಂದು ಅಗಳು ಅನ್ನಕ್ಕಾಗಿ ಅಲೆಯುವವರು ಒಂದೆಡೆ, ತಿಂದು ಹೆಚ್ಚಾಗಿ ಬಿಸಾಡುವ ಜನರು ಮತ್ತೊಂದೆಡೆಯಿರುವುದನ್ನು…
Subscribe to Updates
Get the latest creative news from FooBar about art, design and business.