Author: Times of bayaluseeme
ಹೊಸದುರ್ಗ ಪಟ್ಟಣದ ಕುಂಚಿಟಿಗ ಮಠ ಹಾಗೂ ಸದ್ಗುರು ಆಶ್ರಮದ ಸಮೀಪವಿರುವ ಬೆಟ್ಟದ ಮೇಲೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಠದ ಸುತ್ತಮುತ್ತ ಹಲವಾರು ಬಾರಿ ಕರಡಿಗಳು, ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಸಂಜೆ ವೇಳೆ ವಾಯುವಿಹಾರಕ್ಕೆ ಹೋಗುವವರು ಹಾಗೂ ಹೊಲಗಳಿಗೆ ತೆರಳುವ ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಕಾಡು ಪ್ರಾಣಿಗಳ ಆಗಮನದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದ ಸಮಯದಲ್ಲಿ ಬೋನು ಇರಿಸುವ ಮೂಲಕ ಅಲ್ಲಿಗೆ ಕೆಲಸ ಮುಗಿಯಿತು ಎಂದು ಸುಮ್ಮನೆ ಆಗುತ್ತಾರೆ. ಆದರೆ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹೊಸದುರ್ಗ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಇಂದು ರಾತ್ರಿ 7: 30 ಕ್ಕೆ ಕರಡಿ ಮತ್ತೆ ಕಾಣಿಸಿಕೊಂಡಿದ್ದು . ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಪಟ್ಟಣದ ಹಲವೆಡೆ ಕರಡಿಗಳ ಹಾವಳಿ ಹೆಚ್ಚಾಗಿ ಜನರು ಭಯಭೀತರಾಗಿದ್ದು. ಕರಡಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು. ಜನರು ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿಯಿದೆ. ಹೀಗೆ ಕಾಡು ಪ್ರಾಣಿಗಳು ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಪ್ರತ್ಯಕ್ಷವಾಗಿರುವ ಬಗ್ಗೆ ಪರಿಶೀಲನೆ ನಡೆಸಿ. ಕರಡಿಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಕ್ರಮವಹಿಸಬೇಕು ಎಂದು ಕರುನಾಡ ವಿಜಯ ಸೇನೆ ಚಿತ್ರದುರ್ಗ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಹೆಸರುವಾಸಿಯಾದ ಸಿಂಪಲ್ ಸುನಿ ಇದೀಗ ತಮ್ಮ ನಿರ್ದೇಶನದ ಹೊಸ ಚಿತ್ರ ‘ಮೋಡ ಕವಿದ ವಾತಾವರಣ’ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ‘ಶೀಲಂ’ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಸುನಿ ಅವರೊಂದಿಗೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಶೀಲಂ, ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಮತ್ತು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಈ ಚಿತ್ರವು ತನ್ನ ಈವರೆಗಿನ ಎಲ್ಲ ಚಿತ್ರಗಳಿಗಿಂತ ಭಿನ್ನವಾಗಿದೆ ಎಂದು ಸುನಿ ಹಂಚಿಕೊಂಡರು. ‘ಒಂದು ಸರಳ ಪ್ರೇಮಕಥೆ ನಂತರ, ನನ್ನ ಉತ್ಸಾಹವನ್ನು ಹೆಚ್ಚಿಸುವಂತಹ ಏನಾದರೂ ನನಗೆ ಅಗತ್ಯವಿತ್ತು ಮತ್ತು ಈ ಕಥೆ ನನಗೆ ಆ ಶಕ್ತಿಯನ್ನು ನೀಡಿತು. ಈ ಮೂಲಕ, ನಾನು ಶೀಲಂ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದು ಹೇಳಿದರು.’ನನ್ನ ಗುರುಗಳ ಚಿತ್ರದ ಮೂಲಕವೇ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವುದು ತುಂಬಾ…
ಬೆಂಗಳೂರು: ನಿಮ್ಮ ರಾಜಕೀಯ ದ್ವೇಷಕ್ಕೆ ಜಾರಿ ನಿರ್ದೇಶನಾಲಯವನ್ನು ಸಾಧನವಾಗಿ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿಕೆ.ಸುರೇಶ್ ಅವರು ಮಂಗಳವಾರ ಆಗ್ರಹಿಸಿದ್ದಾರೆ.ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿರುದ್ಧದ ಇಡಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂಕೋರ್ಟ್ ತೀರ್ಪು ಮಹತ್ವದ್ದಾಗಿದೆ. ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಹಲವು ಬಾರಿ ಕೇಂದ್ರ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಹೇಳಿದರು.ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರ ಇಡಿಯನ್ನು ಸಾಧನವಾಗಿ ಬಳಕೆ ಮಾಡುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕವಾದರೂ ಸೇಡಿನ ರಾಜಕೀಯವನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ದಾವಣಗೆರೆ: ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಒಂದಾಗಲಿ ಎಂದು ಬಯಸಿ ಅದಕ್ಕೆ ಅಡಿಪಾಯ ಹಾಕಿದ್ದೇ ನಾನು, ಇದೀಗ ಇಬ್ಬರೂ ಸೇರಿಕೊಂಡು, ನನಗೆ ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ರೆಡ್ಡಿ ಮತ್ತು ಶ್ರೀರಾಮುಲು ಇತ್ತೀಚಿಗಿನ ಬಿಜೆಪಿ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ ನನಗೆ ಇಬ್ಬರೂ ಒಳ್ಳೆಯ ಗಿಫ್ಟ್ ನೀಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ಟೀಂ ಅಂತಾ ಇಲ್ಲ. ನಮ್ಮದು ಒಂದೇ ಹೈಕಮಾಂಡ್, ಒಬ್ಬರೇ ನಾಯಕರು. ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಅಭಿಪ್ರಾಯ. ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ. ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ ಬರುವ ವಿಚಾರವೂ ನನಗೆ ಗೊತ್ತಿಲ್ಲ ಎಂದು ಹೇಳಿದರು.ಹಲವು ತಿಂಗಳಿಂದ ಮುನಿಸಿಕೊಂಡಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ…
ಹೆಚ್ಚಿನ ಜನರಿಗೆ ಒಂದು ಹಂತದಲ್ಲಿ ಬಾಯಿ ಹುಣ್ಣು ಬರುತ್ತಿತ್ತು – ತಿನ್ನುವುದು ಅಥವಾ ಮಾತನಾಡುವುದು ಕಷ್ಟಕರವಾಗಿಸುವ ಸಣ್ಣ, ನೋವಿನ ಹುಣ್ಣು. ಹೆಚ್ಚಿನ ಸಮಯ, ಅದು ಒಂದು ಅಥವಾ ಎರಡು ವಾರಗಳಲ್ಲಿ ತಂತಾನೇ ಗುಣವಾಗುತ್ತದೆ ಮತ್ತು ಶೀಘ್ರದಲ್ಲೇ ಮರೆತುಬಿಡುತ್ತೇವೆ. ಆದರೆ ಸಣ್ಣ ಹುಣ್ಣು ಹೋಗದಿದ್ದರೆ ಏನು? ಅಥವಾ ಅದು ಮತ್ತೆಮತ್ತೆ ಬರುತ್ತಲೇ ಇದ್ದರೆ ಏನು? ಇದಕ್ಕೆ ಬೇರೆ ಕಾರಣಗಳಿದೆಯೇ? ನಿಮ್ಮ ದೇಹವು ನೀಡುತ್ತಿರುವ ಅಪಾಯದ ಸೂಚನೆಯೇ?ಬಾಯಿ ಹುಣ್ಣುಗಳು ಚಿಕ್ಕ ವಿಷಯವಾಗಿ ಕಾಣಿಸಬಹುದು, ಆದರೆ ಅವು ವಿಟಮಿನ್ ಕೊರತೆಯಿಂದ ಹಿಡಿದು ಬಾಯಿಯ ಕ್ಯಾನ್ಸರ್‌ವರೆಗಿನ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಗಳ ಆರಂಭಿಕ ಸೂಚಕಗಳಾಗಿರಬಹುದು. ನಿಮ್ಮ ಬಾಯಿ ನಿಮಗೆ ಹೇಳುವುದನ್ನು ಕೇಳುವುದು ನೀವು ಅರಿತುಕೊಳ್ಳುವುದಕ್ಕಿಂತ ಹೆಚ್ಚು ಮುಖ್ಯವಾಗಬಹುದು. ಎಲ್ಲಾ ಹುಣ್ಣುಗಳು ಒಂದೇ ಆಗಿರುವುದಿಲ್ಲ ಬಾಯಿ ಹುಣ್ಣು ಸಾಮಾನ್ಯವಾಗಿ ದುಂಡಗಿನ ಅಥವಾ ಅಂಡಾಕಾರದ ಆಕಾರದಲ್ಲಿರುತ್ತದೆ, ಬಿಳಿ ಅಥವಾ ಹಳದಿ ಮಧ್ಯಭಾಗ ಮತ್ತು ಕೆಂಪು ಅಂಚನ್ನು ಹೊಂದಿರುತ್ತದೆ. ಅವು ಸಾಮಾನ್ಯವಾಗಿ ಕೆನ್ನೆಯ ಒಳಗೆ, ತುಟಿಗಳ ಮೇಲೆ ಅಥವಾ ನಾಲಿಗೆಯ ಮೇಲೆ…
ಉಪನ್ಯಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ತರಗತಿಗಳಲ್ಲಿ ಬೋಧನೆ ಮಾಡಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ತಿಳಿಸಿದರು. ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣಾ ಚಿಂತನ ಮಂಥನ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತಾನಾಡಿದರು. ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಮೂಡಿಸಲು ಉಪನ್ಯಾಸಕರು ಕೆಲವೊಮ್ಮೆ ಬಣ್ಣ ಹಚ್ಚಿಕೊಳ್ಳದೆ ಅಭಿನಯದ ಮೂಲಕ ಬೋಧನೆ ಮಾಡುವ ಕಲೆಗಾರಿಕೆಯನ್ನು ರೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುತ್ತದೆ.ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿನ ಮೇಲುಸ್ತುವಾರಿಯನ್ನು ಒಬ್ಬೊಬ್ಬ ಉಪನ್ಯಾಸಕರು ವಹಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಮನ ಹರಿಸುವಂತೆ ಸೂಚನೆ ನೀಡಿದರು. ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಮಾತನಾಡಿ ಉಪನ್ಯಾಸಕರ ಸೇವಾ ಭದ್ರತೆ ಆಯಾ ಕಾಲೇಜಿನ ಫಲಿತಾಂಶದ ಮೇಲೆ ನಿಂತಿದೆ. ಹೀಗಾಗಿ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಪ್ರತಿ ಉಪನ್ಯಾಸಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.ಜಿಲ್ಲಾ ಪ್ರಾಂಶುಪಾಲರ…
ಹೊಳಲ್ಕೆರೆ: ಜಮೀನಿನಲ್ಲಿ ವಿದ್ಯುತ್ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿರುವ ಘಟನೆ, ಹೊಳಲ್ಕೆರೆ ತಾಲೂಕಿನ ಕಾಳಘಟ್ಟದಲ್ಲಿ ನಡೆದಿದೆ.ದಾವಣಗೆರೆ ಮೂಲದ ಕಾರ್ಮಿಕ ನಜೀರ್ (30), ಫಾರೂಕ್ (30) ಹಾಗೂ ಹೊಳಲ್ಕೆರೆ ತಾಲೂಕಿನ ಗ್ಯಾರೇಹಳ್ಳಿಯ ಶ್ರೀನಿವಾಸ್ (35) ಮೃತ ದುರ್ದೈವಿಗಳು. ಶ್ರೀನಿವಾಸ್ ತೋಟದಲ್ಲಿ ಅಡಕೆ ಶೇಡ್ ನಿರ್ಮಾಣ ವೇಳೆ ಈ ದುರಂತ ಸಂಭವಿಸಿದೆ. ಕಬ್ಬಿಣದ ಕಂಬ ನೆಡುವ ವೇಳೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ, ತೀವ್ರ ಅಸ್ವಸ್ಥಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿಕ್ಕಜಾಜೂರು ಇನ್ಸ್ಪೆಕ್ಟರ್ ನೇತ್ರಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಳ್ಳಕೆರೆ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡದೆ ಜಾಗ ಖಾಲಿ ಮಾಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಗ್ರಹಿಸಿ ನಗರಸಭೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ CPI ಪಕ್ಷದ ಮುಖಂಡ ಶಿವರುದ್ರಪ್ಪ ಮಾತನಾಡಿ, ನಗರಸಭೆ ಪೌರಾಯುಕ್ತ ಜಗ್ಗಾರೆಡ್ಡಿ ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡದೆ ಜಾಗ ಖಾಲಿ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಮಾಡಿ ದೌರ್ಜನ್ಯ ಮಾಡುತ್ತಿದ್ದಾರೆ. ಒಂದು ಕಡೆ ಫೈನಾನ್ಸ್ ಅವರು ಕಾಟ ಕೊಡುತ್ತಿದ್ದಾರೆ ಜೊತೆಗೆ ಇವರ ಕಾಟ ಸಹ ಜೋರಾಗಿದೆ. ವ್ಯಾಪಾರಿಗಳ ಕುಟುಂಬ ಎಲ್ಲಿಗೆ ಹೋಗಬೇಕು. ಕೂಡಲೇ ನಗರಸಭೆ ಅಧಿಕಾರಿಗಳು ವ್ಯಾಪಾರಿಗಳಿಗೆ ಕಾಲಾವಕಾಶ ನೀಡಬೇಕು ಇಲ್ಲದೆ ಹೋದರೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಚಳ್ಳಕೆರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದರು. ಚಳ್ಳಕೆರೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆ ಖಾಲಿ ಆಗಿದ್ದರು ಸಹ ಮೈಸೂರಿನಲ್ಲಿ ಸಾಧನ ಸಮಾವೇಶ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಸಮಾವೇಶ ಮಾಡಿದರೂ ಎಂದು ತಿಳಿಯುತ್ತಿಲ್ಲ. ಈಗಿನ ಸರ್ಕಾರ ತನ್ನ ಮತಗಳಿಂದ ಅಧಿಕಾರಕ್ಕೆ ಬಂದಿಲ್ಲ. ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಸೋನಿಯ ಗಾಂಧಿಯನ್ನ ಬೈಯುತ್ತಿದ್ದರು. ಕಾಂಗ್ರೆಸ್ ಗೆ ಬಂದ ಮೇಲೆ ಅವರ ಕಾಲಿಗೆ ಬಿದ್ದರು ಸಿದ್ರಾಮಣ್ಣ ನಿಮಗೆ ನಾಚಿಕೆ ಆಗಬೇಕು ಎಂದು ಕಿಡಿ ಕಾರಿದರು. ಇನ್ನು ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲಲು ನಾನು ಕಾರಣ ಎಂದು ಸ್ವತಃ ಸಿದ್ದರಾಮಯ್ಯ ನನ್ನ ಕರೆದು ಹೇಳಿದ್ರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನು ಸಿದ್ದರಾಮಯ್ಯ ವಿಪಕ್ಷ ನಾಯಕ ಆದಾಗ ಪಕ್ಷ ಸಂಘಟನೆ ಮಾಡಿ ಸಿಎಂ ಆಗಿದ್ದಾರೆ. ಅವರು ಮೊದಲಿನ ಸಿದ್ದರಾಮಯ್ಯ ಆಗಿಲ್ಲ ಈಗ ಬಹಳ ಬದಲಾಗಿದ್ದಾರೆ. ಈ ಬದಲಾವಣೆ ನಿಮಗೆ ಶೋಭೆ…
Subscribe to Updates
Get the latest creative news from FooBar about art, design and business.