Author: Times of bayaluseeme
ದಾವಣಗೆರೆ: ಮೂರು ದಶಕಗಳ ನಂತರ ವೀರಶೈವ ಲಿಂಗಾಯತರು ಒಗ್ಗೂಡಿದ್ದು, ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಪೀಠಾಚಾರ್ಯರ ಶೃಂಗಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಪಂಚ ಪೀಠಾಚಾರ್ಯರರು ಒಟ್ಟಿಗೆ ಸೇರುತ್ತಿದ್ದಾರೆ.ಜು.21 ಹಾಗೂ 22 ರಂದು ವೀರಶೈವ ಪೀಠಾಚಾರ್ಯರ ಶೃಂಗಸಭೆ ದಾವಣಗೆರೆಯಲ್ಲಿ ನಡೆಯುತ್ತಿದ್ದು, ಈ ಶೃಂಗಸಭೆಯಲ್ಲಿ ವೀರಶೈವಲಿಂಗಾಯತಸಮುದಾಯದಐದುಮಠಾಧೀಶರುಒಟ್ಟಿಗೆಕಾಣಿಸಿಕೊಳ್ಳಲಿದ್ದಾರೆ.ಬಾಳೆಹೊನ್ನೂರು, ಕೇದಾರ, ಉಜ್ಜಯಿನಿ, ರಂಭಾಪುರಿ ಮತ್ತುಶ್ರೀಶೈಲಪೀಠಗಳಮುಖ್ಯಸ್ಥರು ಸಮಾವೇಶದಲ್ಲಿ ಒಗ್ಗೂಡಲಿದ್ದಾರೆ.ಜಾತಿ ಜನಗಣತಿಯ ಸಮಯದಲ್ಲಿ ಸಮುದಾಯವು ಪ್ರಾರಂಭಿಸಬೇಕಾದ ಕ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬಾಳೆಹೊನ್ನೂರು ಪೀಠದ ಮುಖ್ಯಸ್ಥ ಡಾ. ವೀರಸೋಮೇಶ್ವರ ಜಗದ್ಗುರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಸಮಾವೇಶವು ಜಾತಿ ಜನಗಣತಿಯ…
ಮೊಡವೆಗಳನ್ನು ನಿವಾರಿಸಲು ನೀವು ಮನೆಯಲ್ಲಿಯೇ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅವುಗಳೆಂದರೆ, ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣ, ಅಲೋವೆರಾ ಜೆಲ್, ಟೀ ಟ್ರೀ ಎಣ್ಣೆ, ಮತ್ತು ಹಸಿ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್. ಇವುಗಳನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು.ಮೊಡವೆ ನಿವಾರಣೆಗೆ ಮನೆಮದ್ದುಗಳು: ಅರಿಶಿನ ಮತ್ತು ಜೇನುತುಪ್ಪ: ಅರಿಶಿನವು ನೈಸರ್ಗಿಕ ಸೋಂಕು ನಿವಾರಕವಾಗಿದೆ ಮತ್ತು ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ. ಒಂದು ಚಮಚ ಅರಿಶಿನ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ, ಮೊಡವೆಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಅಲೋವೆರಾ ಜೆಲ್: ಅಲೋವೆರಾ ಜೆಲ್ ತ್ವಚೆಯನ್ನು ತಂಪಾಗಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೊಡವೆಗಳ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚಿ, ಒಣಗಲು ಬಿಟ್ಟು ತೊಳೆಯಿರಿ. ಟೀ ಟ್ರೀ ಎಣ್ಣೆ: ಟೀ ಟ್ರೀ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಒಂದು ಹತ್ತಿ ಉಂಡೆಗೆ 2-3 ಹನಿ ಟೀ ಟ್ರೀ ಎಣ್ಣೆ ಹಾಕಿ ಮೊಡವೆಗಳ…
ಪ್ರಭಾಸ್ ಬೋಳು ತಲೆಯುಳ್ಳವರು ಎಂದು ತಿಳಿದುಬಂದಿದೆ. ಅವರು ಹೆಚ್ಚಾಗಿ ವಿಗ್ ಧರಿಸಿರುವುದನ್ನು ಕಾಣಬಹುದು. ಆದರೆ ನೀವು ಎಂದಾದರೂ ಅವರನ್ನು ವಿಗ್ ಇಲ್ಲದೆ ನೋಡಿದ್ದೀರಾ? ಈಗ ಒಂದು ಫೋಟೋ ಹರಿದಾಡುತ್ತಿದೆ. ಪ್ರಭಾಸ್ ಈಗ ಭಾರತದ ಅತಿದೊಡ್ಡ ತಾರೆ ಎಂದರೇ ಅತಿಶಯೋಕ್ತಿಯಲ್ಲ. ಅವರು ತೆಲುಗು ನಟರಾಗಿರುವುದು ನಮಗೆ ಗೌರವ. ಚಲನಚಿತ್ರೋದ್ಯಮವನ್ನು ಬದಲಾಯಿಸಿದ ನಟ ಪ್ರಸ್ತುತ ಪ್ಯಾನ್-ಇಂಡಿಯಾ ಮತ್ತು ಗ್ಲೋಬಲ್ ಲೆವೆಲ್ ಚಲನಚಿತ್ರಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಡಾರ್ಲಿಂಗ್‌ನ ವ್ಯವಹಾರವು ಈಗ ನಾಲ್ಕರಿಂದ ಐದು ಸಾವಿರ ಕೋಟಿ ಮೌಲ್ಯದ್ದಾಗಿದೆ ಎಂಬುದು ಗಮನಾರ್ಹ. ಪ್ರಭಾಸ್ ಯಾವಾಗಲೂ ವಿಗ್ ಧರಿಸಿ ಅಥವಾ ಕ್ಯಾಪ್ ಧರಿಸಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರನ್ನು ವಿಗ್ ಇಲ್ಲದೆ ನೋಡುವುದು ಬಹಳ ಅಪರೂಪ. ಇತ್ತೀಚೆಗೆ, ವಿಗ್ ಇಲ್ಲದೆ ಅವರ ಒಂದು ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಪ್ರಿಯ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಪ್ರೇಕ್ಷಕರು ಮತ್ತು ಸಿನಿಮಾ ಪ್ರಿಯರಿಗೂ ಅಚ್ಚರಿ ಮೂಡಿಸುತ್ತದೆ. ಪ್ರಭಾಸ್ ವಿಗ್ ಇಲ್ಲದೆ ಹೀಗಿರುತ್ತಾನಾ ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ. ಇದರಲ್ಲಿ ಡಾರ್ಲಿಂಗ್…
ಮೊಡವೆಗಳನ್ನು ನಿವಾರಿಸಲು ನೀವು ಮನೆಯಲ್ಲಿಯೇ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅವುಗಳೆಂದರೆ, ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣ, ಅಲೋವೆರಾ ಜೆಲ್, ಟೀ ಟ್ರೀ ಎಣ್ಣೆ, ಮತ್ತು ಹಸಿ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್. ಇವುಗಳನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು.ಮೊಡವೆ ನಿವಾರಣೆಗೆ ಮನೆಮದ್ದುಗಳು: ಅರಿಶಿನ ಮತ್ತು ಜೇನುತುಪ್ಪ: ಅರಿಶಿನವು ನೈಸರ್ಗಿಕ ಸೋಂಕು ನಿವಾರಕವಾಗಿದೆ ಮತ್ತು ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ. ಒಂದು ಚಮಚ ಅರಿಶಿನ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ, ಮೊಡವೆಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಅಲೋವೆರಾ ಜೆಲ್: ಅಲೋವೆರಾ ಜೆಲ್ ತ್ವಚೆಯನ್ನು ತಂಪಾಗಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೊಡವೆಗಳ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚಿ, ಒಣಗಲು ಬಿಟ್ಟು ತೊಳೆಯಿರಿ. ಟೀ ಟ್ರೀ ಎಣ್ಣೆ: ಟೀ ಟ್ರೀ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಒಂದು ಹತ್ತಿ ಉಂಡೆಗೆ 2-3 ಹನಿ ಟೀ ಟ್ರೀ ಎಣ್ಣೆ ಹಾಕಿ ಮೊಡವೆಗಳ…
ಮೊಳಕಾಲ್ಮೂರು: ನನಗೆ ಮದುವೆ ಆಗಲು ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಹೋಮ್ ಗಾರ್ಡ್ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಜಹಗೀರ್ ಬುಡೆರಾ ಹಳ್ಳಿಯಲ್ಲಿ ನಡೆದಿದೆ. ಸುಮಾರು 33 ವರ್ಷದ ತಿರುಮಲ ಎಂಬಾತ ಸುಮಾರು ವರ್ಷಗಳಿಂದ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನನಗೆ ವಯಸ್ಸಾಗುತ್ತಿದೆ ಆದರೂ ಹೆಣ್ಣು ಆಗುತ್ತಿಲ್ಲ, ನಾನು ಬದುಕಿದ್ದು ಏನು ಮಾಡೋದು ಎಂದು ಹಲವಾರು ಬಾರಿ ಮನೆಯವರ ಬಳಿ ನೋವು ಹೇಳಿಕೊಂಡಿದ್ದ, ಆ ವೇಳೆ ಮನೆಯವರು ಹೆಣ್ಣು ಹುಡುಕಿ ಮದುವೆ ಮಾಡುತ್ತೇವೆ ಎಂದು ಹೇಳಿ ಸಮಾಧಾನ ಮಾಡಿದ್ದರು. ಆದರೂ ತಿರುಮಲ ಮದುವೆ ವಿಚಾರವಾಗಿ ಯೋಚಿಸಿ ಮಾನಸಿಕವಾಗಿ ನೊಂದಿದ್ದ ಎಂದು ಹೇಳಾಗುತ್ತಿದೆ. ದಿನನಿತ್ಯದಂತೆ ಮನೆಯವರ ಜೊತೆ ಊಟ ಮಾಡಿ ತನ್ನ ರೂಮ್ ಗೆ ಹೋಗಿದ್ದಾನೆ. ಬಳಿಕ ರೂಂನಲ್ಲಿದ್ದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಳ್ಳಕೆರೆ: ಮೋರಿಗೆ ಬಿದ್ದ ಹಸುವನ್ನು ರಕ್ಷಣೆ ಯುವಕರು ಹಾಗೂ ಪೊಲೀಸರು ಸೇರಿ ರಕ್ಷಣೆ ಮಾಡಿದ ಘಟನೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ನಡೆದಿದೆ. ಹಸುವೊಂದು ಆಯತಪ್ಪಿ ರಾಜಕಾಲುವೆಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಕಂಡ ಪೊಲೀಸ್ ಪೇದೆ ತಿಮ್ಮಣ್ಣ ಯುವಕರ ಜೊತೆಗೂಡಿ ಜೆಸಿಬಿ ಮೂಲಕ ಹಸು ರಕ್ಷಣೆ ಮಾಡಿದ್ದಾರೆ.ಪರುಶುರಾಮಪುರ ಠಾಣೆಯಲ್ಲಿ ತಿಮ್ಮಣ್ಣ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಸು ರಕ್ಷಣೆ ಮಾಡಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ : ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರಳೀಧರ್ ಪಟ್ಟಣದಲ್ಲಿರುವ ಪ್ರಮುಖ ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಟೆಲ್ ಗಳಲ್ಲಿ ಸ್ವಚ್ಛತೆ ಸೇರಿದಂತೆ ಹೋಟೆಲ್ ರೂಲ್ಸ್ ನ ಬ್ರೇಕ್ ಮಾಡಿ ತಮಗಿಷ್ಟ ಬಂದಂತೆ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನಲೆ ಹೊಟೇಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೆ ವೇಳೆ ರವಿ ಹೋಟೆಲ್ ನಲ್ಲಿ ಸ್ವಚ್ಛತೆ ಇಲ್ಲದೆ ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಹಿನ್ನಲೆ ಹೊಟೇಲ್ ಬಂದ್ ಮಾಡುವಂತೆ ಹೇಳಿದರು. ಜೊತೆಗೆ ಕೆಲ ಹೋಟೆಲ್ ಮಾಲೀಕರಿಗೆ ಸ್ವಚ್ಛತೆ ಸೇರಿದಂತೆ ಹೋಟೆಲ್ ರೂಲ್ಸ್ ನ ಫಾಲೋ ಮಾಡಿ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ರು. ಇದೆ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್,ಉಪಾಧ್ಯಕ್ಷೆ ಕವಿತಾ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.
ಚಿತ್ರದುರ್ಗ: ತಾಲೂಕಿನ ಹೊಳಲ್ಕೆರೆ ರಸ್ತೆಯಲ್ಲಿರುವ ಕೇಶವ ನವ ನಗರದ ಸಮೀಪ ಆಟೋ ಚಾಲಕ ರವಿಕುಮಾರ್ ಎಂಬಾತ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ನಡೆದಿದೆ. ಅಟೋ ಚಾಲಕ ರವಿಕುಮಾರ್ ಸುಮಾರು 25 ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಅಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ, ನಿನ್ನೆ ಜಾನಕೊಂಡಕ್ಕೆ ಯಾವುದೋ ಕೆಲಸದ ಮೇಲೆ ಹೋಗಿದ್ದ, ಬಳಿಕ ಆತ ಬರ್ಬರವಾಗಿ ಹತ್ಯೆಯಾಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ರವಿ ಕುಮಾರ್ ನನ್ನು ಹತ್ಯೆ ಮಾಡಿ ಬೆಡ್ ಶೀಟ್ ನಲ್ಲಿ ಸುತ್ತಿ ರಾತ್ರಿ ಸೈಟ್ ನಲ್ಲಿ ಶವ ಬಿಸಾಡಿ ಹೋಗಿದ್ದು, ಘಟನೆ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್, ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಮುಗುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಯಾದಗಿರಿ, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಗದಗ ಸೇರಿ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವರುಣನ ಅರ್ಭಟ ಮುಂದುವರಿದಿದೆ. ಮಳೆಯಿಂದಾಗಿ ಒಂದೆಡೆ ರೈತರ ಮೋಗದಲ್ಲಿ ಸಂತಸ ಉಂಟಾದರೆ ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 3 ದಿನಗಳಲ್ಲಿ ಭಾರೀ ಮಳೆ ಸುರಿದಿದ್ದು, ಪ್ರಸ್ತಕ ಬೆಳೆಗೆ ಅನುಕೂಲವಾಗಲಿದೆ. ಇನ್ನೂ ಒಂದು ವಾರ ನಿರಂತರ ಮಳೆಯಾಗುವ ಸಾಧ್ಯತೆಗಳಿವೆ. ವಡಗೇರಾ ತಾಲೂಕಿನ ಬಬಲಾದ ಗ್ರಾಮ ಜಲಾವೃತಗೊಂಡಿದ್ದು, 15ಕ್ಕೂ ಹೆಚ್ಚು ಮನೆಯೊಳಗೆ ನೀರು ನುಗ್ಗಿದ ಹಿನ್ನಲೆ ನಿವಾಸಿಗಳು ಪರದಾಡುವಂತಾಗಿದೆ. ಇನ್ನುಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ 4 ವರ್ಷದ ಬಳಿಕ ಮತ್ತೆ ಭೂಕುಸಿತವಾಗಿದ್ದು, ಯಾವುದೇ ಅನಾಹುತ ನಡೆದಿಲ್ಲ. ಹೊಸಕುಂಬ್ರಿಯ ಬಳಿ ಪದೇಪದೇ ಕುಸಿತವಾಗುತ್ತಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನವರೆಗೆ ಒಟ್ಟು 28 ಮಿಮೀ ಮಳೆ ದಾಖಲಾಗಿದೆ.
ಸ್ವತಃ ಸಚಿವರೇ ಭರವಸೆ ನೀಡಿದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್ ಗೇಟನ್ನು ತೆರವು ಮಾಡಿಲ್ಲ ಎಂದು ಕೋಪಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಟೋಲ್‌ಗೇಟ್ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಜಿಲ್ಲೆಯ ಘಟನೆ ರಾಯಚೂರು ದೇವದುರ್ಗದಲ್ಲಿ ನಡೆದಿದೆ.ರಾಯಚೂರಿನಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಂಥಣಿ ಸೇತುವೆಯಿಂದ ಕಲಮಲಾ ಕ್ರಾಸ್ ರಸ್ತೆಯ ಮಧ್ಯೆ ಕಾಕರಗಲ್‌ನಲ್ಲಿ 40 ಕಿ.ಮೀ. ವ್ಯಾಪ್ತಿಯಲ್ಲಿ ಆವೈಜ್ಞಾನಿಕವಾಗಿ 2 ಟೋಲ್ ಗೇಟುಗಳನ್ನು ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಶರಣ ಪ್ರಕಾಶ ಅವರ ಗಮನ ಸೆಳೆದಿದ್ದರು. ಆಗ ನೀವು ಸಭೆ ಮುಗಿಸಿ ಹೋಗುವುದರೊಳಗೆ ಟೋಲ್ ತೆಗೆಸುವೆ ಎಂದು ಸಚಿವರು ಭರವಸೆ ನೀಡಿದ್ದರು.ಸಭೆ ಬಳಿಕ ತೆರಳುತ್ತಿದ್ದ ಶಾಸಕಿಗೆ ಕಾಕರ ಗಲ್ ಟೋಲ್‌ಗೇಟ್‌ನಲ್ಲಿ ಇನ್ನೂ ಶುಲ್ಕ ವಸೂಲಿ ಮಾಡುತ್ತಿರುವುದು ಕಾಣಿಸಿದೆ.ಇದರಿಂದ ಆಕ್ರೋಶಗೊಂಡ ಅವರು ತಮ್ಮ ಬೆಂಬಲಿಗರೊಂದಿಗೆ ಅಹೋರಾತ್ರಿ ಧರಣಿ ಕುಳಿತರು. ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದಾರೆ. ಅನೇಕ ಬಾರಿ ಟೋಲ್‌ಗೇಟ್ ರದ್ದು ಪಡಿಸಲು ಒತ್ತಾಯಿಸಿದರೂ ಪ್ರಯೋಜನವಿಲ್ಲ. ಸಚಿವರ ಭರವಸೆಯೂ ಸುಳ್ಳಾಗಿದೆ…
Subscribe to Updates
Get the latest creative news from FooBar about art, design and business.