ಪ್ರಾತಃಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯಾರುತಮ್ಮ ದಿನನಿತ್ಯದ ಆರೋಗ್ಯದ ಸಾಧನೆಯೊಂದಿಗೆ
ಪ್ರಾರಂಭಿಸುತ್ತಾರೋ ಅವರುಗಳಿಗೆ ಖಾಯಿಲೆಗಳುಹತ್ತಿರ ಸುಳಿಯುವುದಿಲ್ಲ. ಬದಲಾಗಿ ಆರೋಗ್ಯದ
ಸುಯೋಗವು ಪ್ರಾಪ್ತವಾಗುತ್ತದೆ ಎಂದು ದಾವಣಗೆರೆ ಆದರ್ಶಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ
ವಿಶ್ವಯೋಗ ಮಂದಿರದ ಹಿರಿಯ ಯೋಗ ತಜ್ಞರೂ ಆದಡಾ. ರಾಘವೇಂದ್ರ ಗುರೂಜಿಅಭಿಪ್ರಾಯಪಟ್ಟರು.ಇತ್ತೀಚೆಗೆ ಮಂಗಳೂರಿನ ರಾಧಾಕೃಷ್ಣದೇವಸ್ಥಾನದ ಬಾಳಂಭಟ್ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಸಿ.ಎಸ್.ಎಸ್. ಸಮಾಜ ಸುಧಾರಕ ಸಂಘದಮಂಗಳೂರು ಇವರ 52ನೇ ವಾರ್ಷಿಕ ಮಹಾಸಭೆ,ಸಾಮೂಹಿಕ ಬ್ರಹ್ಮೋಪದೇಶ, ಶ್ರೀ ಸತ್ಯನಾರಾಯಣಪೂಜೆ, ಸರ್ವ ಸಮಾಜದ ಹಿರಿಯರಿಗೆ ಹಾಗೂಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಆಯೋಜಿಸಿದಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ದೈನಂದಿನ ದಿನಚರಿಯಲ್ಲಿ ಆರೋಗ್ಯದ ಅವಶ್ಯಕತೆಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.
ನಾವು ಎಲ್ಲಾ ವಿಷಯಕ್ಕೂ ಮುಹೂರ್ತವನ್ನುನೋಡಿ ಮುಂದುವರೆಯುತ್ತೇವೆ. ಆದರೆ ನಮ್ಮ
ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವಮುಹೂರ್ತವನ್ನು ನೋಡುವುದಿಲ್ಲ. ಇದು
ನಮ್ಮೆಲ್ಲರ ದೌರ್ಬಲ್ಯವಾಗಿದೆ. ಒಳ್ಳೆಯ ಆರೋಗ್ಯ, ಸದಾಚಟುವಟಿಕೆಯಿಂದಿರಲು ಸರ್ವಶ್ರೇಷ್ಠವಾದ ಮುಹೂರ್ತ
ಬ್ರಾಹ್ಮೀ ಮುಹೂರ್ತವಾಗಿದೆ ಅಂದರೆ ಬೆಳಿಗ್ಗೆ 3-30 ರಿಂದ 4-30 ರ ಒಳಗೆ ಹಾಸಿಗೆಯಿಂದ ಎದ್ದು ಶುಚಿರ್ಭೂತರಾಗಿ
ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಒಂದಿಷ್ಟು ಶಾರೀರಿಕ, ಮಾನಸಿಕವ್ಯಾಯಾಮವನ್ನು ಮಾಡಿ ದೈನಂದಿನ ಕೆಲಸಗಳನ್ನು
ಪ್ರಾರಂಭಿಸಬೇಕು ಎಂದು ತಿಳಿಸುತ್ತಾ ನಮ್ಮಹೊಟ್ಟೆಯ ಆರೋಗ್ಯ, ಮನಸ್ಸಿನ ಆರೋಗ್ಯ,ಉಸಿರಾಟಕ್ಕೂ ಆರೋಗ್ಯಕ್ಕೂ ಇರುವ ಸಾಮ್ಯತೆ ಹೀಗೆಹತ್ತು ಹಲವು ವಿಷಯಗಳನ್ನು ಡಾ|| ರಾಘವೇಂದ್ರಗುರೂಜಿಯವರು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಡಾ|| ಗುರೂಜಿಯವರನ್ನುಆತ್ಮೀಯವಾಗಿ ಗೌರವಿಸಿ ಜೀವಮಾನಸಾಧನೆಯನ್ನೊಳಗೊಂಡ ಸುಂದರವಾದ ಸನ್ಮಾನಪತ್ರ ನೀಡಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿಫಲಪುಷ್ಪ ತಾಂಬೂಲದೊಂದಿಗೆ ಗೌರವಾರ್ಪಣೆಅರ್ಪಿಸಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದಗಣೇಶ್ ನಾಯಕ್ ಕದ್ರಿ, ವಸಂತ್ ನಾಯಕ್ಗುಡ್ಡೇಕೇರಿ ಇವರನ್ನು ಸಹ ಸನ್ಮಾನಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನುಸುದೇಶ್‍ಕುಮಾರ್ ಬೋಳಾರ, ಪ್ರಧಾನಕಾರ್ಯದರ್ಶಿಗಳಾದ ಎಂ. ಮುರಳಿ ಮನೋಹರನಾಯಕ್ ಜೆಪ್ಪು, ಕಾರ್ಯದರ್ಶಿಗಳಾದ ಅವಿನಾಶ್ನಾಯಕ್, ಸುಧೀರ್ ನಾಯಕ್ ಜೆಪ್ಪು,ಕೋಶಾಧಿಕಾರಿಗಳಾದ ಗೌತಮ್‍ರಾವ್, ಉಪಾಧ್ಯಕ್ಷರಾದಪ್ರೀತಮ್ ನಾಯಕ್ ಹಾಗೂ ಶ್ರೀಮತಿ ಹರಿಣಿಶಾಮ್ನಾಯಕ್, ಸರ್ವ ಸಮಾಜ ಬಾಂಧವರೂ ಹಾಗೂ ಸರ್ವಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳಿಂದಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



