ಬೆಂಗಳೂರು: ದಿವಂಗತ ನಟ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸ್ಮಾರಕವನ್ನು ತೆರವು ಮಾಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಬಾಲಕೃಷ್ಣ ಕುಟುಂಬಕ್ಕೆ ಇತ್ತೀಚಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಅಭಿಮಾನ್ ಸ್ಟುಡಿಯೋಗಾಗಿ ನೀಡಿದ್ದ ಜಾಗವನ್ನು ಅರಣ್ಯ ಭೂಮಿ ಎಂದು ಘೋಷಣೆ ಮಾಡಿದೆ.ಆದರೆ ಸರ್ಕಾರದ ಆದೇಶ ಲೆಕ್ಕಿಸದೇ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಬಾಲಣ್ಣನ ಪುತ್ರಿ ಗೀತಾ ಬಾಲಿ ಹೇಳಿದ್ದಾರೆ. ಇದರಿಂದ ಮತ್ತೆ ಸಮಾಧಿ ಆಗುತ್ತದೆ ಎಂದು ಕನಸು ಕಂಡಿದ್ದ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.ಚಿತ್ರರಂಗದ ಚಟುವಟಿಕೆಗಳಿಗೆ ಪೂರಕವಾಗಲಿ, ಚಿತ್ರರಂಗದವರಿಗೆ ಶೂಟಿಂಗ್ಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಹಿರಿಯನಟ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂದಾಗ ಸರ್ಕಾರ ಕೂಡಾ ಸಾಥ್ ನೀಡಿ 20 ಎಕರೆ ಜಾಗವನ್ನ ನೀಡಿತ್ತು. ಜಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನ ವಿಧಿಸಲಾಗಿತ್ತು. ಆ ನಿಯಮಗಳು ಈಗ ಉಲ್ಲಂಘನೆಯಾಗಿದೆ ಎಂದು ಅರಣ್ಯ ಇಲಾಖೆ ಮತ್ತೆ ಆ ಜಮೀನನ್ನು ಹಿಂಪಡೆಯಲು ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಈ ಬೆನ್ನಲ್ಲೇ ಬಾಲಣ್ಣ ಪುತ್ರಿ ಗೀತಾ ಬಾಲಿ ಆ ಜಾಗವನ್ನು ನಾನು ಬಿಟ್ಟು ಕೊಡಲು ಸಿದ್ದವಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. 2003ರಲ್ಲೇ 10 ಎಕರೆ ಮಾರಾಟವಾದ ವೇಳೆ ನಿಯಮ ಉಲ್ಲಂಘನೆ ಆಗದೇಇರೋದುಈಗಹೇಗೆಸಾಧ್ಯಎಂದುಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಗೆ 10 ಎಕರೆ ವಿಸ್ತೀರ್ಣದ ಅಭಿಮಾನ್ ಸ್ಟುಡಿಯೋ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನಿರ್ದೇಶಿಸಿದೆ ಎಂಬ ಸುದ್ದಿ ನನಲ್ಲಿ ಆಘಾತ ಮೂಡಿಸಿದೆ. ಕಾನೂನು ಬದ್ಧವಾಗಿ ಸರ್ಕಾರಕ್ಕೆ ಈ ಕ್ರಮ ಜರುಗಿಸಲು ಯಾವುದೇ ರೀತಿಯ ಹಕ್ಕಿಲ್ಲ ಎಂದು ಹೇಳಿದರು.
ಸರ್ಕಾರ ಅಥವಾ ಅರಣ್ಯ ಇಲಾಖೆಯು ನನ್ನ ತಂದೆಯ ಸ್ಟುಡಿಯೋ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಎಂಬುದನ್ನು ದೃಢೀಕರಿಸುವ ದಾಖಲೆಗಳೊಂದಿಗೆ ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಉದ್ದೇಶಿಸಿದ್ದೇನೆ. 10 ಎಕರೆ ಮಾರಾಟದಲ್ಲಿ ಫಲಾನುಭವಿಗಳು ವಿಕಸನಗೊಳ್ಳುತ್ತಿದ್ದಾರೆ ಎಂದರು.10 ಎಕರೆ ಜಾಗ ಮಾರಾಟಕ್ಕೆ ಸರ್ಕಾರದ ಕೈವಾಡ: ಈ ಮೊದಲು ಅಭಿಮಾನ್ ಸ್ಟುಡಿಯೋದ 10 ಎಕರೆ ಜಾಗವನ್ನು ಮಾರಾಟ ಮಾಡಲಾಗಿತ್ತು. ಆ ಕುರಿತು ಪ್ರತಿಕ್ರಿಯಿಸಿದ ಗೀತಾ ಬಾಲಿ, ಆ‘ಜಾಗ ಮಾರಾಟಕ್ಕೆ ಆಗಿನ ಸರ್ಕಾರವೇ ಕೈ ಜೋಡಿಸಿತ್ತು. ನಾನು ಮಾರಾಟ ಮಾಡಿಕೊಂಡಿಲ್ಲ. ಅದು ಸರ್ಕಾರದ ಕೈವಾಡ. 2003ರಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಬಹಿರಂಗವಾಗಿ ಹೇಳುತ್ತೇನೆ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







