ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಗಳಿಂದ (BMTC Bus) ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಬಿಎಂಟಿಸಿಯ ಹಳೆಯ ಡಕೋಟಾ ಬಸ್ಸುಗಳು ಎಂಬ ಆರೋಪವಿದೆ. ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನ ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಎಂಟಿಸಿ ಸಾಕಷ್ಟು ಬಸ್ಸುಗಳಲ್ಲಿ ಹಾರ್ನ್ ಇಲ್ಲ, ಇಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಬ್ರೇಕ್, ಕ್ಲಚ್ ಪ್ಯಾಡ್, ಹೀಗೆ ನಾನಾ ರೀತಿಯ ಸಮಸ್ಯೆ ಗಳಿದ್ದು, ಹೊಸ ಬಸ್ಗಳಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.ಏತನ್ಮಧ್ಯೆ, 4500 ಹೊಸ ಬಸ್ಗಳನ್ನು ಬಿಎಂಟಿಸಿಗೆ ನೀಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಆರಂಭದಿಂದ ಹಂತ ಹಂತವಾಗಿ ಹೊಸ ಬಸ್ಗಳು ಬಿಎಂಟಿಸಿ ಸೇರಲಿವೆ. ಈ 4500 ಹೊಸ ಬಸ್ಗಳು ಬರುತ್ತಿದ್ದಂತೆಯೇ ಬಿಎಂಟಿಸಿಯ ಹಳೆಯ ಬಸ್ಗಳು ಗುಜರಿ ಸೇರಲಿವೆ.
ಬಿಎಂಟಿಸಿಗೆ ಬರಲಿರುವ ಹೊಸ ಬಸ್ಗಳ ವಿವರ
4100 ಸಾಮಾನ್ಯ ಎಲೆಕ್ಟ್ರಿಕ್ ಬಸ್, 400 ಎಸಿ ಎಲೆಕ್ಟ್ರಿಕ್ ಬಸ್ ಬರಲಿದ್ದು ಈಗಾಗಲೇ ಬಿಎಂಟಿಸಿ ನಿಗಮದ 15 ರಿಂದ 20 ಡಿಪೋ ಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿಯಲ್ಲಿ ಸದ್ಯ 1200 ಎಲೆಕ್ಟ್ರಿಕ್ ಬಸ್ಗಳಿವೆ. 4500 ಹೊಸ ಬಸ್ಗಳಿಂದ ಬಿಎಂಟಿಸಿಯಲ್ಲಿ ಒಟ್ಟು 5700 ಎಲೆಕ್ಟ್ರಿಕ್ಗಳಾಗಲಿವೆ. ಗ್ರಾಸ್ ಕಾಂಟ್ರಾಕ್ಟ್ ಅಡಿಯಲ್ಲಿ ಈ ಬಸ್ಸುಗಳು ನಗರದಲ್ಲಿ ಸಂಚಾರ ಮಾಡಲಿದೆ. ಈ ಬಸ್ಸಿಗೆ ಡ್ರೈವರ್ ಬಸ್ ಕಂಪನಿ ಅವರಾದರೆ, ಕಂಡಕ್ಟರ್ ಬಿಎಂಟಿಸಿಯಿಂದ ಇರುತ್ತಾರೆ.ಒಟ್ಟಿನಲ್ಲಿ, ಪದೇಪದೇ ಬಿಎಂಟಿಸಿ ಬಸ್ಗ ಬ್ರೇಕ್ ಡೌನ್ ಮತ್ತು ಆಕ್ಸಿಡೆಂಟ್ ಗಳಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದಂತೂ ಸುಳ್ಳಲ್ಲ. ಆದಷ್ಟು ಬೇಗ ಈ ಬಸ್ಗಳು ಬಿಎಂಟಿಸಿ ಸೇರಿದರೆ ಒಂದಷ್ಟು ಅಮಾಯಕರ ಜೀವ ಉಳಿಯಬಹುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







