ಬೆಂಗಳೂರು: ಗ್ಯಾರಂಟಿ ಸರ್ಕಾರ ರಾಜ್ಯದ ಜನರಿಗೆ ಮತ್ತೆ ದರ ಏರಿಕೆ ಬರೆ ಎಳೆದಿದೆ. ದಸರಾ ಪ್ರಯುಕ್ತ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಿದೆ. ಬರೋಬ್ಬರಿ 20 ರೂ. ಏರಿಕೆ ಮಾಡಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.ದಸರಾ ಹಬ್ಬದ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕಾಗಿತ್ತು ಸರ್ಕಾರ. ಆದರೆ ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ ೨೦ ರೂಪಾಯಿ ಏರಿಕೆ ಮಾಡಿದೆ. ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕ್ತಾ ಇದ್ದಾರೆ.
ಇನ್ನೂ ಕೆಎಸ್ಆರ್ಟಿಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಇರಲಿದೆ.
ಯಾವ್ಯಾವ ಬಸ್ ಟಿಕೆಟ್ ದರ ಎಷ್ಟಿದೆ?
ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ
ತಡೆ ರಹಿತ ಸಾರಿಗೆ – 210 ರಿಂದ 240 ರೂ.
ರಾಜಾಹಂಸ – 270 ರಿಂದ 290 ರೂ.
ಐರಾವತ – 430 ರಿಂದ 450 ರೂ.
ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.
ದಸರಾ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡಬೇಕು. ಆದ್ರೆ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿರೋದು ಸರಿಯಲ್ಲ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







