ಬೆಂಗಳೂರು: ಮುಡಾದಲ್ಲಿ 3,000 ರಿಂದ 4,000 ಕೋಟಿ ರೂ. ಲೂಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.ಪ್ರಧಾನಿ ಮೋದಿಯವರ ಜನ್ಮದಿನ ಹಿನ್ನೆಲೆ ಬಿಜೆಪಿ ನಾಯಕರು ಜಯನಗರದಲ್ಲಿ ರಕ್ತದಾನ ಶಿಬಿರ ಹಾಗೂ ಮೋದಿಯವರ ಬದುಕಿನ ಚಿತ್ರ ಪ್ರದರ್ಶಿನಕ್ಕೆ ಚಾಲನೆ ನೀಡಿದರು. ಈ ವೇಳೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನದ ಬಗ್ಗೆ ಮಾತನಾಡಿ, ಮುಡಾದಲ್ಲಿ 3,000 ರಿಂದ 4,000 ಕೋಟಿ ರೂ. ಲೂಟಿಯಾಗಿದೆ. ಸಿಎಂ ಅವರ ಕುಟುಂಬ ಅಕ್ರಮವಾಗಿ 14 ಸೈಟ್ಗಳನ್ನು ಪಡೆದಿತ್ತು. ಈ ಕೇಸ್ ಮುಚ್ಚಿ ಹೋಗುತ್ತೇನೋ ಅಂತ ಜನಕ್ಕೆ ಅನಿಸಿತ್ತು. ಆದರೆ ಈಗ ದಿನೇಶ್ ಕುಮಾರ್ ಬಂಧನ ಆಗಿದೆ. ಇದರಿಂದ ಪ್ರಕರಣಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಇನ್ನಷ್ಟು ಬ್ರೋಕರ್ಗಳ ತನಿಖೆಯೂ ಆಗಬೇಕು ಎಂದರು.ಇದೇ ವೇಳೆ ವಿಜಯಪುರದಲ್ಲಿ ಬ್ಯಾಂಕ್ ಲೂಟಿ ವಿಚಾರವಾಗಿ ಮಾತನಾಡಿದ ಅವರು, ಮತ್ತೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ನಡಿಯುತ್ತಿವೆ. ಈ ಸರ್ಕಾರದ ಅವಧಿಯಲ್ಲಿ ದರೋಡೆಕೋರರಿಗೆ ಹಬ್ಬದ ವಾತಾವರಣ ಇದ್ದಂತೆ. ಜೊತೆಗೆ ಕಾಂಗ್ರೆಸ್ನವರು ನೀವು ಲೂಟಿ ಮಾಡಿ, ನಮಗೆ ಕಮಿಷನ್ ಕೊಡಿ ಅಂತಾರೆ. ಆಡಳಿತ ಹದಗೆಟ್ಟು ಹೋಗಿದೆ, ದುಡ್ಡಿಲ್ಲದೇ ಸರ್ಕಾರ ಪಾಪರ್ ಆಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಜಾತಿ ಒಡೆಯುವುದರಲ್ಲಿ ಫೇಮಸ್. ನಮ್ಮ ಸರ್ಕಾರ ಬಂದ ನಂತರ ಸಿದ್ದರಾಮಯ್ಯಗೆ ಸನ್ಮಾನ ಮಾಡ್ತೇವೆ. ಕುಲ ಕುಲ ಅಂತ ಹೊಡೆದಾಡಬೇಡಿ ಅಂತ ಕನಕದಾಸರು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಕುಲ ಕುಲ ಅಂತ ಹೊಡೆದಾಡಿ ಅಂತಿದ್ದಾರೆ. ಇದೀಗ 52 ಹೊಸ ಜಾತಿಗಳನ್ನು ಸೇರಿಸಿದ್ದಾರೆ. ಒಕ್ಕಲಿಗರು ಸೇರಿ ಎಲ್ಲ ಜಾತಿಗಳಲ್ಲೂ ಕ್ರಿಶ್ಚಿಯನ್ಗಳನ್ನು ಹುಟ್ಟು ಹಾಕಿದ್ದಾರೆ. ಇದರ ವಿರುದ್ಧ ಒಕ್ಕಲಿಗರು ಸೇರಿಕೊಂಡು ಸದ್ಯದಲ್ಲೇ ಸಭೆ ಮಾಡ್ತೀವಿ. ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಈಗಾಗಲೇ ಕೈಸುಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.ಮೋದಿಯವರಿಗೆ 75 ವರ್ಷ ಆಯ್ತು, ಪ್ರಧಾನಿ ಪದವಿಯಿಂದ ಕೆಳಗಿಳಿಯೋದು ಯಾವಾಗ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ವಯಸ್ಸಿನ ಮಿತಿ ಇಲ್ಲ. ನಮ್ಮಲ್ಲಿ ಪರ್ಫಾರ್ಮೆನ್ಸ್ ಗೆ ಮಾತ್ರ ಮನ್ನಣೆ ಕೊಡುತ್ತೇವೆ. ನಮ್ಮಲ್ಲಿ ವಯಸ್ಸಿನ ಆಧಾರದಲ್ಲಿ ಯಾರನ್ನೂ ಮನೆಗೆ ಕಳಿಸಲ್ಲ. ಮೋದಿಯವರು ಇನ್ನೊಂದು ಅವಧಿಗೆ ಪ್ರಧಾನಿ ಆಗಬೇಕು, ಆಗ ಭಾರತ ನಂಬರ್ ಒನ್ಗೆ ಹೋಗುತ್ತದೆ ಎಂದರು.ಇದೇ ವೇಳೆ ಬಿಜೆಪಿ ಶಾಸಕರಿಗೆ ಅನುದಾನ ತಾರತಮ್ಯಕ್ಕೆ ಅಶೋಕ್ ಖಂಡಿಸಿದ್ದು, ಕಾಂಗ್ರೆಸ್ನವರು ತಿರುಗಿ ಬಿದ್ದಿದ್ದಾರೆ ಎಂದು ಅನುದಾನ ಕೊಡ್ತಿದ್ದಾರೆ. ಆದರೆ ಅವರಿಗೆ 50 ಕೋಟಿ ರೂ. ಕೊಟ್ಟು ನಮಗೆ 25 ಕೋಟಿ ರೂ. ಕೊಡ್ತಿದ್ದಾರೆ. ನಮಗೆ ಕಡಿಮೆ ಅನುದಾನ ಕೊಡೋದು ಸರಿಯಲ್ಲ, ಇದು ತಾರತಮ್ಯ ನೀತಿ. ಇವರು ಅಭಿವೃದ್ಧಿ ಪಥದಲ್ಲಿ ಹೋಗ್ತಿಲ್ಲ, ರಾಜಕೀಯ ಪಥದಲ್ಲಿ ಹೋಗ್ತಿದ್ದಾರೆ ಎಂದು ಆಗ್ರಹಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







