ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ
ಪತ್ನಿಯನ್ನು ಮನೆಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡುತ್ತಿದ್ದ ಪ್ರಕರಣ ವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಂದ ಫೋನ್ ಕರೆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅಕ್ಕ ಪಡೆಯು ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಿ, ಅಗತ್ಯ ವೈದ್ಯಕೀಯ ಸೇವೆ ನೀಡಿದ್ದಾರೆ. ಟಿಳಕ ವಾಡಿಯಲ್ಲಿ ಪತಿಯೇ ಪತ್ನಿಯನ್ನು ಬೆಡ್ ರೂಮ್‌ನಲ್ಲಿ ಲಾಕ್ ಮಾಡಿಟ್ಟಿದ್ದು ಮಾನಸಿಕ, ದೈಹಿಕ ಕಿರುಕುಳ ನೀಡು ತ್ತಿದ್ದಾನೆ ಎಂದು ಪೊಲೀಸರಿಗೆ ಫೋನ್ ಕರೆ ಬಂದಿತ್ತು. ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ಡಿ.ಪಿ.ನಿಂಬಾಳಕರಗೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತ ಭೂಷಣ ಬೋರಸೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆಯನ್ನು ಪತ್ತೆ ಮಾಡಿ, ರಕ್ಷಿಸುವಂತೆ ಅಕ್ಕ ಪಡೆಗೆ ನಿರ್ದೇಶನ ನೀಡಲಾಗಿತ್ತು. ಕಾರ್ಯಪ್ರವೃತ್ತರಾದ ಅಕ್ಕಪಡೆ, ಮನೆಗೆ ತೆರಳಿ, ಬಾಗಿಲು ಮಹಿಳೆ ಮತ್ತು ಮಕ್ಕಳಿಬ್ಬರನ್ನು ರಕ್ಷಿಸಿ ಸದ್ಯ ವಿಮಾನದ ಮೂಲಕ ತವರೂರಿಗೆ ರವಾನಿಸಿದ್ದಾರೆ. ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
