ವಾಕಿಂಗ್ ತುಂಬಾ ಸುಲಭವಾಗಿ ಕಾಣಿಸಿದರೂ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ. ವಾಕಿಂಗ್ ಎನ್ನುವುದು ಯಾರಾದರೂ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಮಾಡಬಹುದಾದ ವ್ಯಾಯಾಮವಾಗಿದೆ. ಅದು ಸಾಮಾನ್ಯ ವಾಕಿಂಗ್ ಅಥವಾ ವೇಗದ ವಾಕಿಂಗ್ ಆಗಿರಬಹುದು, ಇದರಿಂದ ಅನೇಕ ಆರೋಗ್ಯದ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.ಪ್ರತಿಯೊಬ್ಬರೂ ದಿನಕ್ಕೆ ಒಂದು ಬಾರಿಯಾದರೂ ವಾಕಿಂಗ್ ಮಾಡಿದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಜಿಮ್‌ಗೆ ಹೋಗುವ ಅವಶ್ಯಕತೆ ಇಲ್ಲ. ವಾಕಿಂಗ್‌ಗಾಗಿ ಬೇರೆ ಸ್ಥಳಕ್ಕೆ ಹೋಗಬೇಕಾಗಿಲ್ಲ. ನಿಮಗೆ ಲಭ್ಯವಿರುವ ಪ್ರದೇಶದಲ್ಲೇ ವಾಕಿಂಗ್ ಮಾಡಿ. ಇದರಿಂದ ಹಲವು ಆರೋಗ್ಯ ಲಾಭಗಳು ಲಭಿಸುತ್ತವೆ. ಯಾವುದೇ ತೊಂದರೆಯಿಲ್ಲದೆ ಸಾಮಾನ್ಯವಾಗಿ ವಾಕಿಂಗ್ ಮಾಡಿದರೂ ಹಲವು ಲಾಭಗಳಿವೆ. ಕೆಲವರು ಕೆಲಸದ ಮಧ್ಯೆ ಆಗಾಗ್ಗೆ ವಾಕಿಂಗ್ ಮಾಡುತ್ತಾರೆ. ಇದೂ ಕೂಡಾ ಅತ್ಯುತ್ತಮ ಅಭ್ಯಾಸ.
ವಾಕಿಂಗ್ ನಿಂದಾಗುವ ಪ್ರಯೋಜನಗಳು
ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ:
ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕ ಜನರು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತಿತರ ಸಮಸ್ಯೆಗಳು ಅವರನ್ನು ಸುತ್ತಿಕೊಳ್ಳುತ್ತವೆ. ಅಂತಹ ಜನರು ನಿಯಮಿತವಾಗಿ ವಾಕಿಂಗ್ ಮಾಡುವುದು ತುಂಬಾ ಒಳ್ಳೆಯದು. ಊಟ ಮಾಡಿದ ನಂತರ ಸ್ವಲ್ಪ ವಾಕಿಂಗ್ ಮಾಡಬೇಕು. ಇದರಿಂದ ಸೇವಿಸಿದ ಹೆಚ್ಚಿನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಯಾವುದೇ ದೊಡ್ಡ ಹಾನಿ ಮಾಡುವುದಿಲ್ಲ. ನೀವು ಮಧ್ಯಾಹ್ನ ಹಾಗೂ ರಾತ್ರಿ ಊಟದ ನಂತರ ವಾಕಿಂಗ್ ಮಾಡಿದರೆ ಜೀರ್ಣಕ್ರಿಯೆಗೆ ಉತ್ತಮವಾಗುತ್ತದೆ.
ವೇಟ್ ಲಾಸ್
ದೇಹದ ತೂಕ ಹೆಚ್ಚಾಗಲು ಸಾಮಾನ್ಯವಾದ ಕಾರಣವೆಂದರೆ ಯಾವುದೇ ವ್ಯಾಯಾಮ ಮಾಡದಿರುವುದು. ಹೀಗಾಗಿ ಕ್ಯಾಲೊರಿಗಳನ್ನು ಬರ್ನ್ ಮಾಡಬೇಕಾದರೆ, ನಿಯಮಿತವಾಗಿ ವಾಕಿಂಗ್ ಅವಶ್ಯಕ. ಮತ್ತೊಂದು ವಿಷಯವನ್ನು ನೀವು ನೆನಪಿನಲ್ಲಿಡಬೇಕು. ಕೆಲವರು ಯಾವಾಗಲೂ ಎಷ್ಟೇ ನಡೆದರೂ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗೊಣಗುತ್ತಾರೆ. ಇದಕ್ಕೆ ಕಾರಣ, ವಾಕಿಂಗ್ ಫಲಿತಾಂಶಗಳನ್ನು ನೀಡುವುದಿಲ್ಲ ಎನ್ನುವುದಲ್ಲ. ಬದಲಾಗಿ, ನೀವು ತೆಗೆದುಕೊಂಡ ಆಹಾರ ಹೆಚ್ಚು ಕ್ಯಾಲೊರಿಗಳಿಂದ ಕೂಡಿರುತ್ತದೆ ಎಂಬುದು.
ಯಾವುದೇ ಸಮಯದಲ್ಲಿ ತೂಕ ಕರಗಿಸಲು ಸಹಾಯಬೇಕಾದರೆ, ನಿಯಮಿತವಾದ ಕ್ಯಾಲೊರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ, ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳಿರುವ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ, ಒತ್ತಡ ನಿಯಂತ್ರಿಸುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. ಇವುಗಳನ್ನು ಅನುಸರಿಸಿ ಮತ್ತು ಸರಿಯಾಗಿ ವಾಕಿಂಗ್ ಮಾಡಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಒತ್ತಡ ಮುಕ್ತ ಜೀವನ
ನೀವು ಆದಷ್ಟು ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಇಂದು ನಡೆಸುವ ವೇಗದ ಜೀವನ ಹಾಗೂ ನಮ್ಮಲ್ಲಿರುವ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಪ್ರತಿಯೊಬ್ಬರೂ ಒತ್ತಡ ಅನುಭವಿಸುತ್ತಾರೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಹ ಪ್ರತಿನಿತ್ಯ ಯಾವುದಾದರೂ ಒಂದು ಸಮಯದಲ್ಲಿ ವಾಕಿಂಗ್ ಮಾಡಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮಾನಸಿಕ ಆರೋಗ್ಯ
ಒತ್ತಡ ಕಡಿಮೆಯಾದರೆ ಸ್ವಯಂಚಾಲಿತವಾಗಿ ಮಾನಸಿಕವಾಗಿ ಆರೋಗ್ಯ ಸದೃಢವಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಕಿಂಗ್ ನಡೆದರೆ ಉತ್ತಮವಾಗಿದೆ. ಜೊತೆಗೆ ಹಸಿರುಮಯ ವಾತಾವರಣದಲ್ಲಿ ವಾಕಿಂಗ್ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸು ಶಾಂತವಾಗುತ್ತದೆ. ಸಂಗೀತ ಕೇಳುತ್ತಾ ವಾಕಿಂಗ್ ಮಾಡಿದರೆ ನಿಮ್ಮ ಮನಸ್ಸು ನಿರಾಳವಾಗುತ್ತದೆ.
ಮೂಳೆಗಳು ಸದೃಢ
ವಯಸ್ಸಾದಂತೆ ಅನೇಕರು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಾರೆ. ಅಂತಹ ಜನರು ನಿಯಮಿತವಾಗಿ ವಾಕಿಂಗ್ ಮಾಡಿದರೆ ಮೂಳೆಗಳು ಹಿಗ್ಗುತ್ತವೆ. ಮೂಳೆಗಳು ಸಹ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಕ್ರಮೇಣ ಮೂಳೆ ಮತ್ತು ಕೀಲು ಸಮಸ್ಯೆಗಳು ಕಡಿಮೆಯಾಗುತ್ತವೆ. ವಾಕಿಂಗ್ ಸುಲಭವಾದ ವ್ಯಾಯಾಮವಾಗಿರುವುದರಿಂದ ಯಾರಾದರೂ ನಿಯಮಿತವಾಗಿ ನಡೆಯಬಹುದು. ಹಲವು ಆರೋಗ್ಯದ ಪ್ರಯೋಜನಗಳನ್ನು ಒಳಗೊಂಡಿರುವ ವಾಕಿಂಗ್ ಅನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



