Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್‌* 

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜಕೀಯ»ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ
ರಾಜಕೀಯ

ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿFebruary 3, 2026No Comments5 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram
  1. *ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ*

*ಅಧಿಕಾರಿಗಳ ಮಾತುಕತೆಯ ಆಡಿಯೋಗಳಿವೆ, ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ*

*ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯ ನಿಯಮಬಾಹಿರ*

*ಬೆಂಗಳೂರು, ಫೆಬ್ರವರಿ 3*

ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್‌ ಮಂಜೂರಾತಿಗೆ ಲಂಚ, ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ. ಆದ್ದರಿಂದ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ಅಪರಾಧಿ ನಂ.1 ಇಲಾಖೆಯಾಗಿದೆ. ಲೈಸೆನ್ಸ್‌ಗೆ ಲಂಚ, ವರ್ಗಾವಣೆಗೆ ಹಣ ಫಿಕ್ಸ್‌ ಹೀಗೆ ಮೊದಲಾದ ರೀತಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಬಿ ಜಿ ರಾಮ್‌ ಜಿ ಯೋಜನೆಯನ್ನು ವಿರೋಧಿಸಿರುವ ಕಾಂಗ್ರೆಸ್‌ ನಾಯಕರು ಮಹಾತ್ಮ ಗಾಂಧೀಜಿಯ ಆದರ್ಶಗಳ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಗಾಂಧೀಜಿಯ ಆದರ್ಶ ಪಾಲಿಸುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಕಡೆಯಿಂದ ಮಾಡಿರುವ ವಾಟ್ಸಾಪ್‌ ಸಂದೇಶದಲ್ಲಿ, ಹುಬ್ಬಳ್ಳಿಯಲ್ಲಿ ವಸತಿ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಹಾಗೂ ಡಿಸಿಎಂ ಭಾಗವಹಿಸುವುದರಿಂದ ಹೆಚ್ಚು ಜನರು ಬರುತ್ತಿದ್ದಾರೆ. ಆದ್ದರಿಂದ ಮದ್ಯದಂಗಡಿಗಳು ಸಾಕಷ್ಟು ಪ್ರಮಾಣದ ಮದ್ಯ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಬೇಕೆಂದು ಅಧಿಕೃತವಾಗಿ ಸೂಚಿಸಲಾಗಿದೆ. ಇದು ಮನೆ ಹಾಳು ಮಾಡುವ ಕಾರ್ಯಕ್ರಮ. ಸಿಎಂ ಸಿದ್ದರಾಮಯ್ಯ ಸಂವೇದನೆಯ ಪಾಠ ಮಾಡುತ್ತಾರೆ. ಮದ್ಯ ಕುಡಿಯಿರಿ ಎಂದು ಹೇಳುವುದೇ ಇವರ ಸಂವೇದನೆ ಎಂದರು.

ಅಬಕಾರಿ ಇಲಾಖೆಯಲ್ಲಿ ನಡೆಯುವ ಹಗರಣದಲ್ಲಿ ಅಧಿಕಾರಿಗಳಿಂದ ಮಂತ್ಲಿ ಫೀಸ್‌ ಬರುವುದರಿಂದ ಸಚಿವರು ಸುಮ್ಮನಿದ್ದಾರೆ. ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅಕ್ರಮದ ಕುರಿತು ರಾಹುಲ್‌ ಗಾಂಧಿಗೆ ದೂರು ನೀಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಇಲಾಖೆಯಲ್ಲಿ ಪ್ರತಿ ವರ್ಷ ಟಾರ್ಗೆಟ್‌ ನೀಡಿ ಹಣ ಸಂಗ್ರಹಿಸಲಾಗುತ್ತದೆ, ಲೈಸೆನ್ಸ್‌ನಿಂದ ಆರಂಭವಾಗಿ ಎಲ್ಲ ಹಂತದಲ್ಲೂ ಕೈ ಬಿಸಿ ಮಾಡಬೇಕಿದೆ, ಲೈಸೆನ್ಸ್‌ ನೀಡುವಾಗ ಅಬಕಾರಿ ಡಿಸಿ ಲಂಚ ಪಡೆಯುವುದು ಪತ್ತೆಯಾಗಿದೆ. ಹಿರಿಯ ಅಧಿಕಾರಿಗಳಿಂದ ಕಿರಿಯವರೆಗೂ ಲಂಚ ಕೊಡಬೇಕಿದೆ. ಈ ಕುರಿತು ಮುಖ್ಯಮಂತ್ರಿಗೆ ದೂರು ನೀಡಲಾಗಿದೆ” ಎಂದು ಗುರುಸ್ವಾಮಿ ಹೇಳಿದ್ದಾರೆ. ಎರಡು ಸಾವಿರ ಲಿಕ್ಕರ್‌ ಶಾಪ್‌ಗಳಿಗೆ ಅವಕಾಶ ನೀಡಿದ್ದು, ಒಂದಕ್ಕೆ 50 ಲಕ್ಷ ರೂ. ಹಾಗೂ ಮತ್ತೊಂದಕ್ಕೆ 1 ಕೋಟಿ ರೂ. ಲಂಚ ಪಡೆಯಲಾಗಿದೆ, ಪ್ರತಿ ತಿಂಗಳ 10 ನೇ ದಿನಾಂಕ ಲಂಚ ನೀಡದಿದ್ದರೆ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಾರೆ. ಗುರುಸ್ವಾಮಿ ಸಿಎಂ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದವರೇ ಆಗಿದ್ದಾರೆ. ಗುರುಸ್ವಾಮಿ ದೂರು ನೀಡಿದ್ದರೂ ಸಿದ್ದರಾಮಯ್ಯ ಸಹಾಯ ಮಾಡಿಲ್ಲ. ಅವರು ಖಡಕ್‌ ಸಿಎಂ ಆಗಿ ಉಳಿದಿಲ್ಲ ಎಂದು ಗುರುಸ್ವಾಮಿ ಹೇಳಿದ್ದಾರೆ ಎಂದರು.

*ಲಂಚ ವಸೂಲಿ*

ಅಬಕಾರಿ ಇಲಾಖೆಯ ಹಗರಣ ಸಂಬಂಧ ಆಡಿಯೋ ಬಂದಿದೆ. ಇದರಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹಾಗೂ ಅವರ ಮಗನ ಮೇಲೆ ಆರೋಪ ಬಂದಿದೆ. ಆದರೂ ನಾನವನಲ್ಲ ಎಂದು ಸಚಿವರು ಹೇಳುತ್ತಾರೆ. 2025 ಜೂನ್‌ವರೆಗೆ, ಸಿಎಲ್‌-7 ನಡಿ 3,267 ಹೋಟೆಲ್‌ ರೆಸ್ಟೋರೆಂಟ್, ಸಿಎಲ್‌-2‌ ನಡಿ 4342 ಎಂಆರ್‌ಪಿಗಳು, ಸಿಎಲ್‌-9 ನಡಿ 3667 ಬಾರ್‌ಗಳು, ಸಿಎಲ್‌ 11ಸಿ ನಡಿ 1088, ಸಿಎಲ್‌-4 316 ಕ್ಲಬ್‌ಗಳು, ಸಿಎಲ್‌ 6 ನಡಿ 86 ಸ್ಟಾರ್‌ ಹೋಟೆಲ್‌ಗಳಿವೆ. ಒಟ್ಟು 14,229 ಮದ್ಯ ಪೂರೈಸುವ ಸಂಸ್ಥೆಗಳಿವೆ. ಆದರೆ ರಾಜ್ಯದಲ್ಲಿ ಇಷ್ಟು ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಪ್ರತಿ ತಿಂಗಳು ಒಂದು ಅಂಗಡಿಯಿಂದ 15-20 ಸಾವಿರ ರೂ. ಲಂಚ ವಸೂಲಿ ಮಾಡಲಾಗುತ್ತಿದೆ. ಅಂದರೆ ಒಟ್ಟಾರೆಯಾಗಿ ತಿಂಗಳಿಗೆ ಸರಾಸರಿ 21 ಕೋಟಿ ರೂ. ಆಗುತ್ತದೆ ಹಾಗೂ ವರ್ಷಕ್ಕೆ 252 ಕೋಟಿ ರೂ. ಆಗುತ್ತದೆ.

*ಆಡಿಯೋ ಬಿಡುಗಡೆ*

ಜಂಟಿ ಆಯುಕ್ತ ನಾಗರಾಜಪ್ಪ ಹಾಗೂ ವಕೀಲ ರಮೇಶ್‌ ಎಂಬುವರ ನಡುವೆ ಸಂಭಾಷಣೆ ನಡೆದಿದ್ದು, ಅದರಲ್ಲಿ 18 ಲಕ್ಷ ರೂ.ಗೆ ಬೇಡಿಕೆ ಇಡುತ್ತಿರುವ ಮಾತುಕತೆ ಇದೆ. ಸಚಿವ ಆರ್‌.ಬಿ.ತಿಮ್ಮಾಪುರ ಹಾಗೂ ಮಗ ವಿನಯ್‌ ಅವರಿಗೆ ಲಂಚ ಪಾವತಿಯಾಗಲಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಶೇ.50 ರಷ್ಟು ಕಡಿಮೆ ಮಾಡಲು ಸಚಿವರ ಬಳಿಯೇ ಮಾತನಾಡಬೇಕು ಎಂದು ಹೇಳಲಾಗುತ್ತದೆ. ಬಳಿಕ ರಮೇಶ್‌ ಮುಖ್ಯಮಂತ್ರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ನಗರ ಪ್ರದೇಶವಾದರೆ 15 ಲಕ್ಷ ರೂ. ಹಾಗೂ ಗ್ರಾಮೀಣವಾದರೆ 10 ಲಕ್ಷ ರೂ. ನೀಡಬೇಕೆಂದು ಅಧಿಕಾರಿ ಹೇಳಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಅಬಕಾರಿ ವರ್ಗಾವಣೆಗೆ ಹಣ ನಿಗದಿ ಮಾಡಲಾಗಿದೆ. ಉಪ ಆಯುಕ್ತರಿಗೆ 2.5 ರಿಂದ 3.5 ಕೋಟಿ ರೂ., ಅಧೀಕ್ಷಕರಿಗೆ 25-30 ಲಕ್ಷ ರೂ. ಉಪ ಅಧೀಕ್ಷಕರಿಗೆ 30-40 ಲಕ್ಷ ರೂ., ಅಬಕಾರಿ ವೀಕ್ಷಕರಿಗೆ 40-50 ಲಕ್ಷ ರೂ., ಪೇದೆಗಳಿಗೆ 5-8 ಲಕ್ಷ ರೂ., ನೀಡಬೇಕಾಗುತ್ತದೆ. ಇದರಲ್ಲಿ ಪೇದೆಗಳೇ ನಾಲ್ಕೈದು ಬಾರ್‌ಗಳನ್ನು ನಡೆಸುತ್ತಿರುತ್ತಾರೆ ಎಂದರು.

ಬಳಿಕ ಮಂಜು ಅವರು ಈ ಕುರಿತು ದೂರು ನೀಡಿದ್ದಾರೆ. ಆದರೆ ಅಧಿಕಾರಿ ನಾಗರಾಜಪ್ಪ ಇದನ್ನು ಅಲ್ಲಗಳೆದು ಕೃತಕವಾಗಿ ಧ್ವನಿ ಸೃಷ್ಟಿಸಿದ್ದಾರೆ, ಆದ್ದರಿಂದ ಪ್ರಕರಣ ಕೈ ಬಿಡಿ ಎಂದು ಕೋರಿದ್ದಾರೆ. ಆಗ ಇಲಾಖೆಯಿಂದ ತನಿಖೆ ಮಾಡಿಲ್ಲ. ಇಷ್ಟೆಲ್ಲ ದಾಖಲೆ ಇದ್ದಾಗಲೂ ಹಗರಣದ ವಿರುದ್ಧ ತನಿಖೆ ಮಾಡಲೇ ಇಲ್ಲ. ಆಡಿಯೋವನ್ನು ಫೊರೆನ್ಸಿಕ್‌ಗೆ ಕಳುಹಿಸಿ ಅದರ ನಿಜಾಂಶವನ್ನು ಪತ್ತೆ ಮಾಡಬೇಕಿತ್ತು. ಇಲ್ಲಿ ಅಧಿಕಾರಿಯನ್ನು ರಕ್ಷಿಸಲಾಗಿದೆ. ಮತ್ತೊಂದು ಆಡಿಯೊದಲ್ಲಿ ಜೆಡಿಎಸ್‌ ಬೆಂಬಲಿಗನಾಗಿರುವುದರಿಂದ ಹೆಚ್ಚು ಲಂಚ ಕೊಡಬೇಕೆಂದು ಹೇಳಲಾಗಿದೆ.

ಮತ್ತೊಬ್ಬ ಹಿರಿಯ ಅಧಿಕಾರಿ ಡಿಸಿ ನಾಗಶಯನ ಲಂಚ ಪಡೆಯುವ ಬಗ್ಗೆ ಆಡಿಯೋದಲ್ಲಿದೆ. ನೀನು ಜೆಡಿಎಸ್‌ ಕಾರ್ಯಕರ್ತನೇ ಎಂದು ಅಧಿಕಾರಿ ಪ್ರಶ್ನೆ ಮಾಡುತ್ತಾನೆ. ಜೆಡಿಎಸ್‌ ಕಾರ್ಯಕರ್ತ ಅಲ್ಲದಿದ್ದರೆ ಲಂಚ ಕಡಿಮೆಯಾಗುತ್ತದೆ. ನೀವು ಒಕ್ಕಲಿಗರಾ, ನಿಮ್ಮೂರಿನಲ್ಲಿಉ ಯಾರೂ ಕುರುಬರು ಇಲ್ಲವೇ? ಕುರುಬ ಮುಖಂಡರನ್ನು ಕರೆದುಕೊಂಡು ಮುಖ್ಯಮಂತ್ರಿಯವರ ಮನೆಯವರಿಗೆ ಫೋನ್‌ ಮಾಡಿಸಿ, ಒಕ್ಕಲಿಗ ಮುಖಂಡರನ್ನು ಕರೆದುಕೊಂಡು ಸಚಿವ ಚಲುವರಾಯ ಸ್ವಾಮಿ ಬಳಿಗೆ ಹೋಗಿ ಒಂದು ಮಾತು ಹೇಳಿಸಿ ಎಂದು ಸಲಹೆ ನೀಡುತ್ತಾನೆ. ಇಂತಹ ಘಟನೆಗಳು ನಡೆಯುವುದರಿಂದಲೇ ಸರ್ಕಾರ ಸರ್ಕಸ್‌ ಆಗಿದೆ ಎಂದರು.

ವೈನ್‌ ಮರ್ಚೆಂಟ್‌ ಸಂಘದವರು ಮತ್ತೊಂದು ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಲಂಚ ಮಿತಿಮೀರಿದೆ. ಇದರಿಂದ ನಕಲಿ ಮದ್ಯ ಹೆಚ್ಚಳವಾಗಿದ್ದು, ಅದನ್ನು ನಿಯಂತ್ರಣ ಮಾಡುತ್ತಿಲ್ಲ. ಪರಿಣಾಮ ಆದಾಯ ಕಡಿಮೆಯಾಗಿದೆ ಎಂದು ಅವರು ದೂರು ನೀಡಿದ್ದಾರೆ. ಆದರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹೆಚ್ಚು ಹಣ ಕೊಟ್ಟರೆ ಆಯಕಟ್ಟಿನ ಹುದ್ದೆ ದೊರೆಯುತ್ತದೆ. ನಿಂಗಪ್ಪ ಎಂಬ ಅಧಿಕಾರಿ ಲೋಕಾಯುಕ್ತದಲ್ಲಿ ಸ್ವ ಇಚ್ಛಾ ಹೇಳಿಕೆ ನೀಡಿದ್ದು, ವರ್ಗಾವಣೆ ಸಂಬಂಧ ಸಚಿವರನ್ನು ಮಡಿವಾಳದ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇವೆಲ್ಲ ಆಡಿಯೊ ದಾಖಲೆಗಳನ್ನು ಮೂರು ಪೆನ್‌ಡ್ರೈವ್‌ಗಳನ್ನು ನೀಡಿದ್ದೇನೆ ಎಂದು ಹೇಳಿದರು.

ಸಿಎಲ್‌-7 ಲೈಸೆನ್ಸ್‌ಗೆ ಅಬಕಾರಿ ಡಿಸಿ ಜಗದೀಶ್‌ ನಾಯಕ್‌ ಒಂದೂವರೆ ಕೋಟಿ ರೂ. ಲಂಚ ಕೇಳಿದ್ದ. ಆತನ ಆಡಿಯೋದಲ್ಲಿ, ಮ್ರೈಕ್ರೋ ಬ್ರಿವರಿಗೆ 1.5 ಕೋಟಿ ರೂ. ಕೊಡಬೇಕು. ಅದರಲ್ಲಿ 25 ಲಕ್ಷ ರೂ. ಕಡಿಮೆ ಮಾಡಬಹುದು. ಇನ್ಸ್‌ಪೆಕ್ಟರ್‌, ಉಪ ಆಯುಕ್ತ, ಹೆಚ್ಚುವರಿ ಆಯುಕ್ತ ಹಾಗೂ ಸಚಿವರವರೆಗೂ ಈ ಹಣ ತಲುಪುತ್ತದೆ. ವಿಟಮಿನ್‌ ಎಂ ಕೊಟ್ಟರೆ ಸರಿ, ಇಲ್ಲವೆಂದರೆ ಓಡಾಡಿಸುತ್ತಾರೆ, ನಮ್ಮ ಬಳಿ 28 ಮಾಹಿತಿ ಕೇಳುತ್ತಾರೆ. ಲಂಚ ಕೊಡಲಿಲ್ಲವೆಂದರೆ ಗುಮ್ಮ ಬೀಳಿಸುತ್ತಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಲಕ್ಷ್ಮಿನಾರಾಯಣ ಎಂಬುವರು ಲೋಕಾಯುಕ್ತದಲ್ಲಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದರು.

ಇಷ್ಟೆಲ್ಲ ದಾಖಲೆಗಳಿದ್ದರೂ ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಏನೂ ಅನ್ನಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಶ್‌ ಅವರ ಮೇಲೆ ವರ್ಗಾವಣೆ ಲಂಚದ ಆರೋಪ ಬಂದಿತ್ತು. ನಂತರ ಅವರು ರಾಜೀನಾಮೆ ನೀಡಿದ್ದರು. ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗಲೂ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈಗ ಇಷ್ಟೆಲ್ಲ ಲಂಚಾವತಾರ ಬಹಿರಂಗವಾಗಿದ್ದರೂ ಸಚಿವ ತಿಮ್ಮಾಪುರ ಅವರ ರಾಜೀನಾಮೆ ಕೊಟ್ಟಿಲ್ಲ ಎಂದರು.

*ಕಾಂಗ್ರೆಸ್‌ ಸರ್ಕಾರದ ನಿರ್ಣಯ ನಿಯಮಬಾಹಿರ*

ಸದನದ ಬಳಿಕ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ನಿಯಮಾವಳಿಗಳನ್ನು ಮೀರಿ ಕೇಂದ್ರ ಸರ್ಕಾರವನ್ನು ತೆಗಳುವ ನಿರ್ಣಯವನ್ನು ಮಂಡಿಸಿದ್ದಾರೆ. ನಿಯಮ ಪ್ರಕಾರ ಎಲ್ಲರಿಗೂ ಏಳು ದಿನ ಮುನ್ನ ನೋಟಿಸ್‌ ನೀಡಬೇಕು. ಮುಖ್ಯಮಂತ್ರಿ ದೌರ್ಜನ್ಯ ಮಾಡಿ, ಕೇಂದ್ರ ಸರ್ಕಾರವನ್ನು ಕೆಟ್ಟ ರೀತಿಯಲ್ಲಿ ಬೈದಿದ್ದಾರೆ. ಇದು ಸದನದ ನಿರ್ಣಯ ಎಂದು ಅವರು ಹೇಳಿದ್ದಾರೆ. ಇದನ್ನು ಕಾಂಗ್ರೆಸ್‌ ಸರ್ಕಾರದ ನಿರ್ಣಯ, ರಾಹುಲ್‌ ಗಾಂಧಿಯ ನಿರ್ಣಯ ಎಂದು ಹೇಳಬೇಕು. ಅಧಿವೇಶನದಲ್ಲಿ ನಿಯಮಬಾಹಿರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದರು.

ಮಾಜಿ ಸಿಎಂ ಎಸ್‌.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ಮೆಟ್ರೊ ತಂದರು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ನಾಯಕ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಇಲ್ಲಿನ ಅಧಿವೇಶನದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯ ಅಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಎಂದಿಗೂ ಜಿಎಸ್‌ಟಿ ಸಭೆಗೆ ಹೋಗಿಲ್ಲ. ಪ್ರಧಾನಮಂತ್ರಿ ಕರೆದ ಸಭೆಗೆ ಹಾಜರಾಗಿಲ್ಲ. ಆದರೆ ಇಲ್ಲಿ ಬಂದು ಜಿಎಸ್‌ಟಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಾರೆ. ಅಬಕಾರಿ ಇಲಾಖೆಯ ಹಗರಣವನ್ನು ಮರೆಮಾಚಲು ಕೇಂದ್ರ ಸರ್ಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು, ಸೋನಿಯಾ ಗಾಂಧಿಯನ್ನು ಇಷ್ಟಪಡಿಸಲು ಹೀಗೆ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದರು.

Bangalore goverment karanataka ಅಬಕಾರಿ ಇಲಾಖೆ ಕರ್ನಾಟಕ ರಾಜಕೀಯ
Follow on Facebook Follow on Instagram
Share. Facebook Twitter WhatsApp Telegram
Previous Articleಗೃಹಲಕ್ಷ್ಮೀ ಯೋಜನೆ ಸಂಬಂಧ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ
Next Article ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್‌* 

February 5, 2026

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

February 4, 2026

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

February 3, 2026
Add A Comment
Leave A Reply Cancel Reply

Advertisement
Demo
Latest Posts

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್‌* 

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.