ಭಾರತಕ್ಕೆ ಮರಳಲು ವಿಜಯ್ ಮಲ್ಯಗೆ ಕೋರ್ಟ್ ತಾಕೀತು
ಮುಂಬಯಿ: ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ನಿಯಂತ್ರಣ ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯಗೆ ಚಾಟಿ ಬೀಸಿರುವ ಮುಂಬಯಿ ಹೈಕೋರ್ಟ್, “ನಿಮ್ಮ ಅರ್ಜಿ ವಿಚಾರಣೆಗೂ ಮೊದಲು ನಿಮ್ಮ ವಿರುದ್ಧ ದಾಖಲಾಗಿರುವ ಕೇಸ್ ಗಳ ವಿಚಾರಣೆಗೆ ಹಾಜರಾಗಿ. ನೀವು ಭಾರತಕ್ಕೆ ಬರಲೇಬೇಕು. ಬರುವುದಾರ ಯಾವಾಗ ಬರುತ್ತೀರಿ ಎಂಬ ಕುರಿತು ಅಫಿಡವಿಟ್ ಸಲ್ಲಿಸಿ,” ಎಂದು ತಾಕೀತು ಮಾಡಿದೆ.
ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ 2016ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಭಾರತ ಸರಕಾರ ಆರ್ಥಿಕ ಅಪರಾಧಿ
ಪಟ್ಟಿಯಲ್ಲಿ ಸೇರಿಸಿದ ಕ್ರಮವನ್ನು ಪ್ರಶ್ನಿಸಿ ಮಲ್ಯ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಂಬಯಿ ಹೈಕೋರ್ಟ್ ಸಿಜೆ ಚಂದ್ರಶೇಖರ್ ಹಾಗೂ ನ್ಯಾ.ಗೌತಮ್ ఆవిండా ನ್ಯಾಯಪೀಠ, “ನೀವು ಮಲ್ಯ ಅವರನ್ನು ಉದ್ದೇಶಪೂರ್ವಕ ವಾಗಿ ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸುತ್ತಿದ್ದೀರಿ. ಭಾರತಕ್ಕೆ ಬಾರದ ಹೊರತು ನಿಮ್ಮ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಿಮಗೆ ಇನ್ನೊಂದು ಕೊನೆಯ ಅವಕಾಶ ನೀಡುತ್ತಿದ್ದೇವೆ. ಮುಂದಿನ ವಿಚಾರಣೆ (ಫೆ.18) ವೇಳೆ ಕೋರ್ಟ್‌ಗೆ ಮಲ್ಯ ಖುದ್ದು ಹಾಜರಾದರೆ ನಿಮ್ಮ ಸಿಂಧುತ್ವ . ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸುತ್ತೇವೆ,” ಎಂದು ಮೌಖಿಕವಾಗಿ ಆದೇಶ ನೀಡಿದೆ.
