ಧನಶ್ರೀ ವರ್ಮಾ ಮಾರ್ಚ್ 20, 2025 ರಂದು ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರಿಂದ ವಿಚ್ಛೇದನ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದರು. ವಿಚ್ಛೇದನದ ನಂತರ ಧನಶ್ರೀ ವರ್ಮಾ ಸರಣಿ ಚಲನಚಿತ್ರಗಳು ಮತ್ತು ಸಂಗೀತ ಆಲ್ಬಮ್‌ಗಳಲ್ಲಿ ನಿರತರಾಗಿದ್ದಾರೆ.
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಸದ್ಯ ರಿಯಾಲಿಟಿ ಶೋ, ಸಿನಿಮಾ ಹಾಗೂ ಆಲ್ಬಂ ಸಾಂಗ್ ಮೂಲಕ ಮಿಂಚುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಹಿಂದಿ ಸೀಸನ್ 19ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ. ತಮ್ಮ ವೀಡಿಯೊಗಳಿಂದ ಜನಪ್ರಿಯತೆ ಗಳಿಸಿದ ಧನಶ್ರೀ ವರ್ಮಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರನ್ನು ಪ್ರೀತಿಸಿ 2020ರಲ್ಲಿ ವಿವಾಹವಾದರು. ಆದರೆ ಮದುವೆಯಾದ ಕೆಲ ವರ್ಷಗಳಲ್ಲಿಯೇ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾರೆ.
ಧನಶ್ರೀ ವರ್ಮಾ-ಚಹಾಲ್ ಡಿವೋರ್ಸ್:
ವಿಚ್ಛೇದನ ಪಡೆದ ಬಳಿಕ ಧನಶ್ರೀ ವರ್ಮಾ ಯುಜ್ವೇಂದ್ರ ಚಾಹಲ್ ಅವರಿಂದ 40 ಕೋಟಿ ರೂ. ಜೀವನಾಂಶ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಚಾಹಲ್ ಮತ್ತು ಧನಶ್ರೀ ವರ್ಮಾ ಈ ವರದಿಗಳನ್ನು ನಿರಾಕರಿಸಿದ್ದಾರೆ. ಧನಶ್ರೀ ವರ್ಮಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಸಂಬಂಧ ಹೊಂದಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಮೀಮ್ಸ್ ವೈರಲ್ ಆಗಿದ್ದವು.
ಪ್ರಸ್ತುತ, ಧನಶ್ರೀ ವರ್ಮಾ ಸಂಗೀತ ಆಲ್ಬಮ್‌ಗಳ ಜೊತೆಗೆ ಕೆಲವು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಜ್‌ಕುಮಾರ್ ರಾವ್ ನಟಿಸಿದ ಭೂಲ್ ಚುಕ್ ಮಾಫ್ ಚಿತ್ರದಲ್ಲಿ ಅವರು ಐಟಂ ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಇದರ ನಡುವೆ ಅಕ್ಷಯ್ ಕುಮಾರ್ ನಡೆಸಿಕೊಡುವ ಖತ್ರೋನ್ ಕಿ ಖಿಲಾಡಿ ಕಾರ್ಯಕ್ರಮದಲ್ಲಿ ಧನಶ್ರೀ ವರ್ಮಾ ಭಾಗವಹಿಸಲಿದ್ದಾರೆ ಎಂಬ ವದಂತಿಯೂ ಇತ್ತು. ಆದಾಗ್ಯೂ, ಕೆಲವು ಕಾರಣಗಳಿಂದಾಗಿ ಈ ಕಾರ್ಯಕ್ರಮ ಪ್ರಾರಂಭವಾಗಲಿಲ್ಲ.
ಬಿಗ್ ಬಾಸ್‌ಗೆ ಧನಶ್ರೀ ಎಂಟ್ರಿ:
ಇದೀಗ ಧನಶ್ರೀ ವರ್ಮಾ ಅವರಿಗೆ ಬಿಗ್ ಬಾಸ್ ಮನೆಯಿಂದ ಭಾರಿ ಸಂಭಾವನೆಯ ಆಫರ್ ಬಂದಿದೆ ಎಂದು ವರದಿಯಾಗಿದೆ. ಯೂಟ್ಯೂಬರ್, ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ಯುಜ್ವೇಂದ್ರ ಚಾಹಲ್ ಅವರ ಮಾಜಿ ಪತ್ನಿಯಾಗಿ ಧನಶ್ರೀ ವರ್ಮಾ ಯುವಕರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇದರೊಂದಿಗೆ ಅವರನ್ನು ಮನೆಗೆ ಕರೆತರಲು ವಾಹಿನಿಯವರು ಪ್ರಯತ್ನಗಳು ನಡೆಯುತ್ತಿವೆ ಎಂಬ ವರದಿಗಳಿವೆ.
ಬೋಲ್ಡ್ ಲುಕ್‌ಗೆ ಸೋಶಿಯಲ್ ಮೀಡಿಯಾ ಶೇಕ್! ಫೋಟೋ ನೋಡಿ ಪಡ್ಡೆ ಹೈಕ್ಳು ಫಿದಾಅಲ್ಲದೆ ಯೂಟ್ಯೂಬರ್ ಪೂರವ್ ಝಾ, ರಾಜ್ ಕುಂದ್ರಾ, ಫೈಸಲ್ ಶೇಖ್, ರಾಮ್ ಕಪೂರ್, ತನುಶ್ರೀ ದತ್ತಾ ಮತ್ತು ಗೌರವ್ ತನೇಜಾ ಅವರಂತಹ ಸೆಲೆಬ್ರಿಟಿಗಳು ಬಿಗ್ ಬಾಸ್ ಹಿಂದಿ ಸೀಸನ್ 19ರಲ್ಲಿ ಸ್ಪರ್ಧಿಗಳಾಗಲಿದ್ದಾರೆ ಎಂದು ವರದಿಯಾಗಿದೆ. ಮುಂದಿನ ತಿಂಗಳು ಬಿಗ್ ಬಾಸ್ ಹಿಂದಿ ಸೀಸನ್ 19 ಅನ್ನು ಪ್ರಾರಂಭಿಸಿ ಜನವರಿ 2026ರ ವರೆಗೆ ಮುಂದುವರಿಸಲು ಪ್ರಯತ್ನಗಳು ನಡೆಯುತ್ತಿವೆ. ಬಿಗ್ ಬಾಸ್ ಸೀಸನ್ ಸುಮಾರು 5 ತಿಂಗಳ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ, ಇದು ಬಿಗ್ ಬಾಸ್ ಇತಿಹಾಸದಲ್ಲಿ ಅತಿ ದೊಡ್ಡ ಶೋ ಆಗಲಿದೆ.
ಧನಶ್ರೀ ವರ್ಮಾ ಹಿನ್ನಲೆ ಏನು?
ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿರುವ ಧನಶ್ರೀ ಅವರಿಗೆ ಅಪಾರ ಸಂಖ್ಯೆಯ ಫಾಲೋವರ್ಸ್ ಇದ್ದಾರೆ. ಇವರು ಪ್ರತಿಭಾವಂತ ಕೊರಿಯಾಗ್ರಫರ್. ಬಾಲ್ಯದಿಂದಲೂ ಭರತನಾಟ್ಯಂ ಅಭ್ಯಾಸ ಮಾಡುತ್ತಿದ್ದಾರೆ. 2018ರಿಂದ ಅವರು ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ನೃತ್ಯ ತರಬೇತಿ ಕೊಡುತ್ತಿದ್ದಾರೆ. ಧನಶ್ರೀ ಅವರು ಮೊಟ್ಟಮೊದಲು ದಂತವೈದ್ಯೆಯಾಗಿ ವೃತ್ತಿ ಜೀವನ ಶುರು ಮಾಡಿದರು. ಬಳಿಯ ತಮ್ಮ ಆಸಕ್ತಿಯ ಡ್ಯಾನ್ಸ್ ಕ್ಷೇತ್ರದತ್ತ ಸಂಪೂರ್ಣ ಗಮನ ಹರಿಸಿದರು. ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಫೇಮಸ್ ಆದರು. ಅವರು ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಜೊತೆ ಕೆಲಸ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



