Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಮರೆಯಾಗುತ್ತಿರುವ ಹರಿಕಥೆ: ಭಕ್ತಿಯ ಹೆಸರಿನಲ್ಲಿ ಮರೆತುಹೋಗುತ್ತಿರುವ ಸಾಂಸ್ಕೃತಿಕ ಪರಂಪರೆ*

ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಆ ಮೂಲಕ ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಇನ್ನಿಲ್ಲವಾಗಿದ್ದಾರೆ.

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ*

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ*
ರಾಜ್ಯ

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ*

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿFebruary 14, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
Share
WhatsApp Twitter Facebook Telegram

*ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ*

*ಹಿಂದುಳಿಯುವಿಕೆಗೆ ಕಾಂಗ್ರೆಸ್‌, ಸಿದ್ದರಾಮಯ್ಯ ನೇರ ಹೊಣೆ ; ಈಗ ದಂಡ ನಿಮ್ಮ ಕೈನಲ್ಲೇ ಇದೆ, ಲೋಪ ಸರಿಪಡಿಸಿ*

*ತಾರತಮ್ಯ ನಿವಾರಿಸಲು ಹೆಚ್ಚು ಅನುದಾನ ನೀಡಿದ ಸಿಎಂ ಎಂಬ ಎದೆಗಾರಿಕೆ ತೋರಿಸಿ ಎಂದು ಸವಾಲು*

*ಅನುದಾನದ ಸದ್ಭಳಕೆಗೆ ನಿಗಾ ಮತ್ತು ಮೌಲ್ಯಮಾಪನ ವಿಶೇಷ ಘಟಕ ಸ್ಥಾಪನೆಗೂ ಅಶೋಕ್‌ ಒತ್ತಾಯ*

*ಬೆಂಗಳೂರು :* ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಅವಧಿ ಅಧಿಕಾರದಲ್ಲಿದಿದ್ದುಕಾಂಗ್ರೆಸ್‌ ಪಕ್ಷ. ಅತಿ ಹೆಚ್ಚು ಬಜೆಟ್‌ ಮಂಡಿಸಿರುವುದು ಸಿದ್ದರಾಮಯ್ಯ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಬೇಕು ಎಂದು ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಅನ್ಯ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕ್ರೊಢೀಕರಿಸಿ ಇಂತಿಷ್ಟು ಮೊತ್ತ ಹಣವನ್ನು ನೀಡಿರುವುದಾಗಿ ಹಾರಿಕೆ ಭರವಸೆ ನೀಡಬಾರದು. ಕೆಕೆಆರ್‌ಡಿಬಿ ಸಹಿತ ಇತರೆ ಅಭಿವೃದ್ಧಿ ಮಂಡಳಿ ಅಥವಾ ನಿಗಮಗಳಿಗೆ ನೀಡುವ ಅನುದಾನವನ್ನು ಈ ಲೆಕ್ಕಾಚಾರಕ್ಕೆ ಸೇರಿಸಬಾರದು. ತಾರತಮ್ಯ ನಿವಾರಣೆಗಾಗಿಯೇ ವಿಶೇಷ, ಪ್ರತ್ಯೇಕ ಅನುದಾನ ಒದಗಿಸಬೇಕು. ಇಲ್ಲವಾದರೆ ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದುp ರಾಜ್ಯದ ಜನ ಭಾವಿಸಬೇಕಾಗುತ್ತದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

*ಅನುದಾನ ನೀಡಿದ ದಾಖಲೆ ಮಾಡಿ*

ಪ್ರೊ. ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಎರಡು ದಶಕಗಳ ಬಳಿಕವೂ ಕಡಿಮೆ ಆಗಿಲ್ಲ. ಶೇಕಡಾ 65 ರಿಂದ ಶೇಕಡಾ 72.8ಕ್ಕೆ ಹೆಚ್ಚಳ ಆಗಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಅತಿ ಹೆಚ್ಚು ಅವಧಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಮತ್ತು ದಿವಂಗತ ದೇವರಜ ಅರಸು ಅವರ ದಾಖಲೆ ಮುರಿದು ಅತಿ ಹೆಚ್ಚು ಅವಧಿಯ ಸಿಎಂ ಎಂಬ ಹೆಗ್ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವ ಸಿದ್ದರಾಮಯ್ಯ ಅವರೇ ಹೊಣೆ ಎಂದು ಆರೋಪಿಸಿದ್ದಾರೆ.

ಹಿಂದುಳಿದ ಪ್ರದೇಶಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಕಾಂಗ್ರೆಸ್‌ ಮುಖಂಡರು ನಿಲ್ಲಿಸಬೇಕು. ಅಧಿಕಾರದ ದಂಡ ಈಗ ಅವರ ಬಳಿಯೇ ಇದೆ. ಹೇಗೂ ದಾಖಲೆಯ ಮೇಲೆ ದಾಖಲೆ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ ಅವರು, ಪ್ರಾದೇಶಿಕ ತಾರತಮ್ಯ ನಿವಾರಣೆಗೂ ಅತಿ ಹೆಚ್ಚು ಅನುದಾನ ಹಂಚಿಕೆ ಮಾಡಿ ಮತ್ತೊಂದು ದಾಖಲೆ ಬರೆಯಲಿ ಎಂದು ಸವಾಲು ಹಾಕಿದ್ದಾರೆ.

*ತಾರತಮ್ಯ ನಿವಾರಣೆ ನಿಗಾ ಘಟಕ ಸ್ಥಾಪಿಸಿ*

ದೇಶದ ದೊಡ್ಡ ರಾಜ್ಯಗಳ ಪೈಕಿ ನಿವ್ವಳ ದೇಶಿಯ ಉತ್ಪನ್ನ (ಎನ್‌ಎಸ್‌ಡಿಪಿ)ದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ಪ್ರಾದೇಶಿಕ ಅಸಮತೋಲನಕ್ಕೆo ಕಾರಣಗಳ ಬಗ್ಗೆಯೂ ಮಾತನಾಡಬೇಕು. ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಪ್ರೊ. ಗೋವಿಂದರಾವ್‌ ಸಮಿತಿ ನೀಡಿರುವ 11 ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಟಾನಕ್ಕೆ “ಪ್ರಾದೇಶಿಕ ತಾರತಮ್ಯ ನಿವಾರಣೆ ನಿಗಾ ಘಟಕ” ಸ್ಥಾಪಿಸಿ “ಅನುದಾನ ಹಂಚಿಕೆ, ಬಳಕೆ ಮತ್ತು ಪ್ರಗತಿ” ಮೇಲೆ ನಿಗಾ ಮತ್ತು ಮೌಲ್ಯಮಾಪನಕ್ಕೆ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೈಗೊಳ್ಳುವ ಕಾಮಗಾರಿ ಅಥವಾ ಯೋಜನೆಗಳಿಗೆ ವೇಳಾಪಟ್ಟಿ ನಿಗದಿಗೊಳಿಸಿ ಕಾಲಮಿತಿಯಲ್ಲೇ ಅನುಷ್ಟಾನ ಆಗುವಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ನಿಗದಿತ ಸಮಯದೊಳಗೆ ಪ್ರಗತಿ ಅಸಾಧ್ಯ. ಈ ಸೂಚನೆಗಳನ್ನು ಉಲ್ಲಂಘಿಸುವ ಅಥವಾ ವಿಶೇಷ ಅನುದಾನ ದುರ್ಬಳಕೆ ಮಾಡಿದವರ ವಿರುದ್ಧ ಕಠಿಣ ಕ್ರಮಗಳಿಗೂ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕು ಎಂದೂ ಅಶೋಕ್‌ ಅವರು ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.

*ಕೆಕೆಆರ್‌ಡಿಬಿ ಪುನಾರಚನೆ ಅಗತ್ಯ*

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯ ಸ್ವರೂಪ ಬದಲಾಗಬೇಕು ಎಂಬುದು ಆ ಭಾಗದ ಜನತೆ ಆಶಯವಾಗಿದೆ. ಚುನಾಯಿತ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಯೋಜನೆ ರೂಪಿಸುವ ಪದ್ಧತಿ ಬದಲಾಗಬೇಕು. ತಜ್ಞರ ಸಲಹೆಯಂತೆ ಹೊಸದಾಗಿ ಮಾರ್ಗಸೂಚಿ ರೂಪಿಸಿ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಗೊಳಿಸಿ, ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಬೇಕು. ಇದಕ್ಕಾಗಿ ಪ್ಲಾನಿಂಗ್‌ ಇಲಾಖೆಯ ಕಾರ್ಯಚಟುವಟಿಕೆಗಳ ಸ್ವರೂಪ ಬದಲಾಗಬೇಕು ಎಂಬ ಗೋವಿಂದರಾವ್‌ ಸಮಿತಿ ಅಭಿಪ್ರಾಯವನ್ನು ಆದ್ಯತೆ ಮೇರೆಗೆ ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಗೋವಿಂದರಾವ್‌ ಸಮಿತಿ ಪ್ರಮುಖ ಶಿಫಾರಸ್ಸಿನಲ್ಲಿ, “ಬಜೆಟ್‌ನಲ್ಲಿ ನಿಯಮಿತ ಅನುದಾನದ ಜತೆಗೆ ಹೆಚ್ಚುವರಿಯಾಗಿ ಸೂಚಿಸಲಾದ ಅನುದಾನ ಹಂಚಿಕೆ ಮಾಡಬೇಕು” ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಹಿಂದುಳಿದಿರುವಿಕೆ ಆಧಾರದ ಮೇಲೆಯೇ ಅನುದಾನ ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ್‌ ಆಗ್ರಹಿಸಿದ್ದಾರೆ.

Ashok Bengaluru Bjp chitradurga Congress karnataka R ashok
Follow on Facebook Follow on Instagram
Share. Facebook Twitter WhatsApp Telegram
Previous Articleಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ.
Next Article ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಆ ಮೂಲಕ ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಇನ್ನಿಲ್ಲವಾಗಿದ್ದಾರೆ.
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಮರೆಯಾಗುತ್ತಿರುವ ಹರಿಕಥೆ: ಭಕ್ತಿಯ ಹೆಸರಿನಲ್ಲಿ ಮರೆತುಹೋಗುತ್ತಿರುವ ಸಾಂಸ್ಕೃತಿಕ ಪರಂಪರೆ*

February 14, 2026

ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಆ ಮೂಲಕ ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಇನ್ನಿಲ್ಲವಾಗಿದ್ದಾರೆ.

February 14, 2026

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ.

February 13, 2026
Add A Comment
Leave A Reply Cancel Reply

Advertisement
Demo
Latest Posts

ಮರೆಯಾಗುತ್ತಿರುವ ಹರಿಕಥೆ: ಭಕ್ತಿಯ ಹೆಸರಿನಲ್ಲಿ ಮರೆತುಹೋಗುತ್ತಿರುವ ಸಾಂಸ್ಕೃತಿಕ ಪರಂಪರೆ*

ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಆ ಮೂಲಕ ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಇನ್ನಿಲ್ಲವಾಗಿದ್ದಾರೆ.

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ*

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ.

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.