ಚಿತ್ರದುರ್ಗ: ನಗರದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ನಗರದಲ್ಲಿಂದು ರಕ್ಷಾ ಬಂಧನವನ್ನು ಆಚರಣೆ
ಮಾಡಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿನ ಒನಕೆ ಓಬವ್ವ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಮಹಿಳಾ ಕಾರ್ಯಕರ್ತೆಯರುಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕ ಹಾಗೂ ಪೋಲಿಸ್ ಸಿಬ್ಬಂದಿಗೆ ರಾಖಿಯನ್ನು ಕಟ್ಟುವುದರ ಮೂಲಕ
ಸಹೋದರತ್ವವನ್ನು ಸಾರಿದರು.ಇದಾದ ನಂತರ ಜಿಲ್ಲಾ ಡಿಎಆರ್ ಪೋಲಿಸ್ ಕಚೇರಿಗೆ ಬೇಟಿ ನೀಡಿ ಅಲ್ಲಿನ ಪೋಲಿಸ್ ಸಿಬ್ಬಂದಿಗೆರಾಖಿಯನ್ನು ಕಟ್ಟುವುದರ ಮೂಲಕ ರಕ್ಷಾ ಬಂಧನವನ್ನು ಆಚರಣೆ ಮಾಡಲಾಯಿತು. ನಗರ ಪೋಲಿಸ್ ಠಾಣೆಗೆ ಬೇಟಿ ನೀಡಿ ಅಲ್ಲಿನಪೋಲಿಸ್ ಸಿಬ್ಬಂದಿಗೆ ಸಹಾ ರಾಖಿಯನ್ನು ಕಟ್ಟಲಾಯಿತು.ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಮಾತನಾಡಿ, ನಾವು ಭಾರತೀಯರು ವಿದೇಶಿಯರನ್ನುಅನುಕರಿಸುತ್ತಾ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ ಆತ್ಮಿಯತೆಯಿಂದ ದೂರ ಹೋಗುತ್ತಿದ್ದೇವೆ. ಇಂದಿನ ಯುವಪೀಳಿಗೆ ವ್ಯಾಲೆಂಟೆನ್ ಡೇ’ಗೆ ಮಹತ್ವವನ್ನು ಕೊಟ್ಟಷ್ಟು ಸಹೋದರತ್ವದ ಭಾವನೆಯನ್ನು ಬೆಳೆಸುವ ಸ್ನೇಹದ ಸೂಚಕವಾದ ರಾಖಿಗೆಬೆಲೆ ನೀಡುತ್ತಿಲ್ಲ. ಇಂತಹ ಸಮಯದಲ್ಲಿ ರಾಖಿಯ ಮಹತ್ವವನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ರಾಖಿಯಲ್ಲಿ ಇರುವ ದಾರವು ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ.ರಾಷ್ಟ್ರಕವಿ ರವಿಂದ್ರನಾಥ
ಟಾಗೋರರು ರಾಖಿಯು ಹಿಂದೂ-ಮುಸ್ಲಿಂ ಜನಾಂಗದಲ್ಲಿ ಪ್ರೀತಿ, ಬಂಧುತ್ವದ ಸಂಕೇತ ಎಂದು ಅವರು ಬಂಗಾಳದ ವಿಭಜನೆಯಸಮಯದಲ್ಲಿ ರಕ್ಷಾಬಂಧನದ ಕಾರ್ಯಕ್ರಮಗಳನ್ನು ಆಯೊಜಿ ಸಿದ್ದರು.ಹಿಂದೂ-ಮುಸ್ಲಿಂಮರು ಏಕತೆಯನ್ನು ಕಾಪಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿ ಎಂಬುದು ಅವರ ಪ್ರಯತ್ನವಾಗಿತ್ತು ಎಂದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಮಾತನಾಡಿ, ಭಾರತ ದೇಶದಲ್ಲಿಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. ಈ ಎಲ್ಲ ಹಬ್ಬಗಳಲ್ಲಿ ನೂಲಹುಣ್ಣಿಮೆ ಅಥವಾರಕ್ಷಾಬಂಧನ ಒಂದು ಪ್ರಮುಖ ಹಬ್ಬ. ರಕ್ಷಾ ಬಂಧನ ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ,ಅನೇಕ ಆಧ್ಯಾತ್ಮಿಕ ರಹಸ್ಯಗಳನ್ನು ಬೆಳಗಿಸುವ ಮತ್ತು ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ನಮಗೆ ನೆನಪಿಸುವಕೊಡುಗೆಯಾಗಿದೆ. ರಾಖಿ ಕಟ್ಟುವ ಮೊದಲು, ಸಹೋದರಿಯು ಅಣ್ಣನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಡುತ್ತಾಳೆ. ಇದು ಶುದ್ಧ, ಶೀತಲ ಮತ್ತು ಪರಿಮಳಯುಕ್ತ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ. ಬಲಗೈಯಿಂದ ತಿಲಕ ಮತ್ತು ರಾಖಿಯನ್ನೂಕಟ್ಟಲಾಗುತ್ತದೆ. ರಕ್ಷಾಬಂಧನ ಹಬ್ಬವು ಪ್ರಾಚೀನ ಕಾಲದಿಂದ ನಡೆದು ಬಂದ ಹಬ್ಬವಾಗಿದ್ದು ವಿಶ್ವಕ್ಕೆ ಸ್ನೇಹ ಮತ್ತು ಮಮತೆಯಸಂದೇಶ ನೀಡುತ್ತದೆ. 4-5 ನಿಮಿಷಗಳಲ್ಲಿ ಮುಗಿಯುವ ರಾಖಿ ಕಟ್ಟುವ ಈ ಕಾರ್ಯಕ್ರಮ ಸೋದರ-ಸೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ಮಧುರ ಸಂಬಂಧ ಉಸಿರು ಇರುವವರೆಗೂ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವಸ್ನೇಹ ದೃಢವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಜಗದಾಂಭ, ಸುಮಾ, ಕಾಂಚನ, ವೀಣಾ,
ಅಂಬಿಕಾ, ಜಿಲ್ಲಾ ಉಪಾಧ್ಯಕ್ಷರಾದ ರಜನಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಗುರು, ಶಿವಪ್ರಕಾಶ್ ಸೇರಿದಂತೆ ಇತರರು
ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



