ಬೆಂಗಳೂರು: ವಿಧಾನ ಪರಿಷತ್ತು ಬಾಂಬೆ ಬಾಯ್ಸ್ ಪುಸ್ತಕ ಬರೆದಿಟ್ಟಿದ್ದೇನೆ. ಮೂರು ಪಕ್ಷದ ನಾಯಕರು ಆ ಪುಸ್ತಕ ಬಿಡುಗಡೆ ಮಾಡಬೇಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ಬಿಜೆಪಿ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿದ ಕಾರಣ ಬಹಿರಂಗ ಪಡಿಸುವಂತೆ ಆಗ್ರಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈಗ ಯಾವ ಪಕ್ಷವೂ ಸಿದ್ಧಾಂತದ ಮೇಲೆ ನಿಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರು ಸದನದ ಆಸ್ತಿ. ಅವರನ್ನು ವಜಾ ಮಾಡಲು ಏನು ಕಾರಣ ಎಂದು ತಿಳಿದುಕೊಳ್ಳುವ ಹಕ್ಕು ನಮಗಿದೆ ಎಂದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ್ ಬಿಜೆಪಿ ಆಪರೇಷನ್ ಕಮಲ ಮಾಡಿತ್ತು. ಇದ್ಯಾವ ಡೆಮಾಕ್ರಸಿ, ನೀವೇ ಬಾಂಬೆ ಬಾಯ್ಸ್ ಎಂದು ಒಳ್ಳೆ ಹೆಸರೇ ಇಟ್ಟಿದ್ದೀರಿ ಎಂದು ವ್ಯಂಗ್ಯವಾಡಿದರು. ಆಗ ಸದಸ್ಯ ಪುಟ್ಟಣ್ಣ ಅವರು, ಬಾಂಬೆ ಬಾಯ್ಸ್ ಬುಕ್ ಯಾವಾಗ ಪಬ್ಲಿಶ್ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಅದಕ್ಕೆ ವಿಶ್ವನಾಥ್ ಅವರು, ಬಾಂಬೆ ಬಾಯ್ಸ್ ಬುಕ್ ಬರೆದು ಇಟ್ಟಿದ್ದೇನೆ. ಆದರೆ, ಮೂರು ಪಕ್ಷದ ನಾಯಕರು ಪುಸ್ತಕ ಬಿಡುಗಡೆ ಮಾಡಬೇಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದರು.ಆಗ ಎಂ.ಬಿ.ಪಾಟೀಲ್, ಒಳ್ಳೆಯ ಪಬ್ಲಿಶರ್ ಹುಡುಕಿ ಕೊಡುತ್ತೇನೆ. ಬುಕ್ ರಿಲೀಸ್ ಮಾಡಿ, ಒಳ್ಳೆ ಸೇಲ್ ಆಗುತ್ತದೆ ಎಂದು ಕಿಚಾಯಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







