ಚಿತ್ರದುರ್ಗ: ಭಾರತ್ ಸಂಚಾರ ನಿಗಮದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವನೌಕರರಿಗೆ ಕೇಂದ್ರ ಸರ್ಕಾರ ತುಂಬಾ ಅನ್ಯಾಯ ಮಾಡುತ್ತಿದೆ.ನೌಕರರ ಪಿಂಚಣಿ ವಿಷಯದಲ್ಲಿ ಆಗಿರುವ ದೊಡ್ಡ ಪ್ರಮಾಣದ ಈಲೋಕಪವನ್ನು ಕೂಡಲೇ ಸರಿ ಪಡಿಸಿ ನ್ಯಾಯಯುತವಾದನಿರ್ಧಾರ ಕೈಗೊಳ್ಳಬೇಕು ಎಂದು ಬಿಎಸ್‍ಎನ್‍ಎಲ್ ಪಿಂಚಣಿದಾರರುಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆಚಿತ್ರದುರ್ಗದಲ್ಲಿ ಅಖಿಲ ಭಾರತೀಯ ಬಿಎಸ್‍ಎನ್‍ಎಲ್ ಪಿಂಚಣಿದಾರರಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷಬೋರಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನೌಕರರ ವಿರೋಧಿ
ನೀತಿಯ ವಿರುದ್ದ ತೀವ್ರ ಅಸಮಧಾನ ವ್ಯಕ್ತವಾಯಿತುಸಭೆಯಲ್ಲಿ ಭಾಗವಹಿಸಿದ್ದ ಬಹಳಷ್ಟು ಮಂದಿ ನೌಕರರರು,ಸಂಘದ ವಿವಿಧ ಹಂತದ ಪದಾಧಿಕಾರಿಗಳು ಬಿಎಸ್‍ಎನ್‍ಎಲ್ ನೌಕರರಿಗೆಪ್ರತಿ ಹಂತದಲ್ಲಿಯೂ ಆಗುತ್ತಿರುವ ಅನ್ಯಾಯದ ವಿರುದ್ದ ದ್ವನಿಎತ್ತಿದರು. ಕೇಂದ್ರ ಸರ್ಕಾರ ತನ್ನ ತಾರತಮ್ಯ ನೀತಿಯನ್ನುಬದಲಾಯಿಸಿಕೊಂಡು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕುಎಂದು ಸಭೆ ಒಕ್ಕೋರಲಿನಿಂದ ಆಗ್ರಹಿಸಿತುಈ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಖಿಲ ಭಾರತೀಯಬಿಎಸ್‍ಎನ್‍ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ದಿ ಸಂಘದ ವಲಯಮಟ್ಟದ ಕಾರ್ಯದಶಿ ಜಯಶಂಕರ್ ಅವರು ಈ ಸಂದರ್ಭದಲ್ಲಿಮಾತನಾಡಿ, ಕೇಂದ್ರ ಸರ್ಕಾರವು ನಮ್ಮ ನೌಕರರಿಗೆ ನಿಜಕ್ಕೂಅನ್ಯಾಯ ಮಾಡುತ್ತಿದೆ ಎನ್ನುವ ಭಾವ ವ್ಯಕ್ತವಾಗಿದೆ
ಸರ್ಕಾರತನ್ನ ನಿಲುವನ್ನು ಬದಲಾಯಿಸಿಕೊಂಡು ನಮಗೆ ನ್ಯಾಯಯುವಾಗಿಸಿಗಬೇಕಿರುವ ಎಲ್ಲಾ ವಿಧಧ ಸೌಲಬ್ಯಗಳನ್ನು
ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರುಬಿಎಸ್‍ಎನ್‍ಎಲ್ ಪಿಂಚಣಿದಾರರಿಗೆ ಟಿಬ್ರುನಲ್ಲಿ ಆದೇಶ ನೀಡಿದ್ದರೂ ಸಹ
ಅವರಿಗೆ 1.1.2017ರಿಂದ ಪಿಂಚಣಿ ಪರಿಸಿಷ್ಕರಣೆಯನ್ನು ಸರ್ಕಾರನೀಡಿರುವುದಿಲ್ಲ. ಎಲ್ಲಾ ಸರ್ಕಾರಿ ನಿವೃತ್ತ ನೌಕರರಿಗೆ ನೀಡುವಂತೆಇವರಿಗೂ ಸಂಚಿತ ನಿಧಿಯಿಂದಲೇ ಪಿಂಚಣಿ ಪಾವತಿ ಮಾಡುತ್ತಿದ್ದು,ಪರಿಷ್ಕರಣೆಯನ್ನು ಮಾತ್ರ ಮಾದೆ ಮಲತಾಯಿ ದೋರಣೆಮಾಡುತ್ತಿರುವ ನೀತಿಯನ್ನು ಖಂಡಿಸಿದರು\ಇತ್ತಿಚೇಗೆ ಕೇಂದ್ರ ಸರ್ಕಾರವು ಎಲ್ಲಾ ಪಿಂಚಣಿದಾರರ ಪಿಂಚಣಿಪರಿಷ್ಕರಣೆಯನ್ನುರದ್ದುಗೊಳಸಿಸುತ್ತಿದ್ದು,ಸಂವಿಧಾನಾತ್ಮಕವಾಗಿಪ್ರಜೆಗಳಿಗೆಕೊಡಮಾಡಿರುವಹಕ್ಕನ್ನುಕಿತ್ತುಕೊಂಡಿದ್ದು, ಹಿರಿಯ ನಾಗರೀಕರನ್ನು ಬೀದಿಗೆ ತಳ್ಳುವಹುನ್ನಾರ ನಡೆಸಿದೆ ಎಂದು ಅವರು ಕಿಡಿಕಾರಿದರುಸಭೆಯ ಅಧ್ಯಕ್ಷತೆಯನ್ನುವಹಿಸಿದ್ದ ಜಿಲ್ಲಾ ಸಮಿತಿಯಅಧ್ಯಕ್ಷ ಬೋರಯ್ಯ ಅವರು ಮಾತನಾಡಿ, ಬಿಎಸ್‍ಎನ್‍ಎಲ್ ಇಲಾಖೆಯ
ನಿವೃತ್ತ ನೌಕರರಿಗೆ ಸಿಗಬೇಕಾದ ಎಲ್ಲಾ ಬಗೆಯಸೌಕರ್ಯಗಳನ್ನು ಸರ್ಕಾರ ನೀಡಬೇಕು.
ಪಿಂಚಣಿ ವಿಚಾರದಲ್ಲಿಅನ್ಯಾಯವಾದರೆ ನಾವು ಸಹಿಸುವುದಿಲ್ಲ. ನಾವು ನಮ್ಮಹಕ್ಕುಗಳನ್ನು ಮಾತ್ರ ಕೇಳುತ್ತಿದ್ದೇವೆ. ಅದನ್ನು
ಕೊಡುವುದು ಸರ್ಕಾರದ ಕರ್ತವ್ಯ ಎಂದು ಪ್ರತಿಪಾದಿಸಿದರುಸಭೆಯಲ್ಲಿ ಹನುಮಂತಪ್ಪ ಬಜಾರಿ, ಷನ್ಮುಖಪ್ಪ, ಆನಂದ್, ಸತ್ತಾರ್ಕೆ, ತುಮಕೂರಿನ ರಾಜ್‍ಕುಮಾರ್, ಸ್ಡಾಮಿ ಎಂ.ವಿ. ಸೇರಿದಂತೆ ಎಲ್ಲಾಪದಧಿಕಾರಿಗಳು ಭಾಗವಹಿಸಿದ್ದರು
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದಆಗಮಿಸಿದ್ದ ನಿವೃತ್ತ ನೌಕರರು ತಮ್ಮ ಅನಿಸಿಕೆಗಳನ್ನು
ಹಂಚಿಕೊಂಡರು. 75 ವರ್ಷ ತುಂಬಿದ ನೌಕರರಿಗೆಸಂಘದವತಿಯಿಂದ ಗೌರವಿಸಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



