2025ರ ಮೊದಲಾರ್ಧ ಸಿನಿಮಾ ರಂಗಕ್ಕೆ ಅಷ್ಟು ಆಶಾದಾಯಕವಾಗಿ ಇರಲಿಲ್ಲ. ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಕಂಡಿರಲಿಲ್ಲ. ಈ ರೀತಿ ರಿಲೀಸ್ ಆದ ಚಿತ್ರಗಳು ಸೋಲು ಕಂಡಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜೂನ್ ಬಳಿಕ ಬರುತ್ತಿರೋ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಈಗ ಟಾಲಿವುಡ್ನಲ್ಲಿ ‘ಮಿರಾಯಿ’ ಹೆಸರಿನ ಸಿನಿಮಾ ಬಂದಿದೆ. ಈ ಚಿತ್ರ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡಿದೆ. ಕೇವಲ ಮೂರು ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.‘ಹನುಮಾನ್’ ಹೆಸರಿನ ಸಿನಿಮಾ ಮಾಡಿ ಫೇಮಸ್ ಆದವರು ತೇಜ್ ಸಜ್ಜ. ಆ ಬಳಿಕ ಅವರನ್ನು ಅದೇ ರೀತಿಯ ಪಾತ್ರಗಳು ಅರಸಿ ಬರುತ್ತಿವೆ. ಈಗ ಅವರು ‘ಮಿರಾಯಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ. ಈ ಚಿತ್ರ 60 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದ್ದು, ಮೂರೇ ದಿನಕ್ಕೆ ಉತ್ತಮ ಗಳಿಕೆ ಮಾಡಿದೆ.‘ಮಿರಾಯಿ’ ಚಿತ್ರ ಮೂರು ದಿನದಲ್ಲಿ ಬಾಚಿಕೊಂಡಿದ್ದು ಬರೋಬ್ಬರಿ 44.75 ಕೋಟಿ ರೂಪಾಯಿ. ಶುಕ್ರವಾರ 13 ಕೋಟಿ ರೂಪಾಯಿ, ಶನಿವಾರ 15 ಕೋಟಿ ರೂಪಾಯಿ ಹಾಗೂ ಭಾನುವಾರ 16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕೇವಲ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್. ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಸೇರಿದರೆ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.‘ಮಿರಾಯಿ’ ಸಿನಿಮಾನ ಕಾರ್ತಿಕ್ ಘಟ್ಟಮನೇನಿ ನಿರ್ದೇಶನ ಮಾಡಿದ್ದರು. ಈ ಮೊದಲು ಅವರು ‘ಕಾರ್ತಿಕೇಯ’, ‘ಕಾರ್ತಿಕೇಯ 2’ ಅಂತಹ ಅಡ್ವೆಂಚರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದಾರೆ. ಅವರ ಐಡಿಯಾ ಪ್ರೇಕ್ಷಕರಿಗೆ ಇಷ್ಟ ಆಗಿದೆ. ‘ಮಿರಾಯಿ’ ಚಿತ್ರ ತೆಲುಗು ಜೊತೆಗೆ, ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲೂ ಸಿನಿಮಾಗೆ ಒಳ್ಳೆಯ ಬುಕಿಂಗ್ ಆಗುತ್ತಿದೆ.‘ಮಿರಾಯಿ’ ಚಿತ್ರದ ಮೂಲಕ ತೇಜ್ ಸಜ್ಜಾ ಅವರು ಭೇಷ್ ಎನಿಸಿಕೊಂಡಿದ್ದಾರೆ. ಅವರು ‘ಹನುಮಾನ್’ ಚಿತ್ರದ ಸೀಕ್ವೆಲ್ನಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







