Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 

ಪರೀಕ್ಷೆ ಬಳಿಕ ಸಿಹಿ ಸಂಭ್ರಮ: ವಿದ್ಯಾರ್ಥಿಗಳ ಮೊಗದಲ್ಲಿ ನಗು

ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಕ್ರೈಂ»ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 
ಕ್ರೈಂ

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 3, 2026Updated:April 3, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು

ಟಿಒಬಿ ನ್ಯೂಸ್ ಚಿತ್ರದುರ್ಗ

ಜಲಜೀವನ್ ಯೋಜನೆ ಸಿಬ್ಬಂದಿ ಎಂದು ನಂಬಿಸಿ ಮನೆಗಳಿಗೆ ಪ್ರವೇಶಿಸಿ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಿವಿಧ ಠಾಣೆಗಳ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹13 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣಗಳು ಹಾಗೂ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊಸದುರ್ಗ ಪಟ್ಟಣದ ನ್ಯೂ ಮಾರುತಿ ನಗರದಲ್ಲಿ 2025ರ ಆಗಸ್ಟ್ 23ರಂದು ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ವೇಳೆ ಈ ಮಹತ್ವದ ಸಾಧನೆ ನಡೆದಿದೆ.

ಪ್ರಕರಣದಲ್ಲಿ ಆರೋಪಿಗಳು ಮನೆಯ ಬಾಗಿಲು ತಟ್ಟಿ, ಮನೆಯಲ್ಲಿ ಗಂಡುಮಕ್ಕಳು ಇದ್ದಾರಾ? ಎಂದು ವಿಚಾರಿಸಿ, ಬಳಿಕ ಜಲಜೀವನ್ ಯೋಜನೆಯಡಿ ಮನೆಗೆ ಸಂಪರ್ಕ ಕಲ್ಪಿಸುವ ಕೆಲಸಕ್ಕಾಗಿ ಬಂದಿದ್ದೇವೆ ಎಂದು ನಂಬಿಸಿದ್ದರು.

ಮನೆಯ ಮಹಿಳೆಯನ್ನು ಮೇಲ್ಚಾವಣಿಗೆ ಕರೆದುಕೊಂಡು ಹೋಗಿ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ತೊಡಗಿಸಿಕೊಂಡಿದ್ದ ವೇಳೆ, ಇನ್ನಿಬ್ಬರು ಆರೋಪಿಗಳು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿದ್ದ ₹1.45 ಲಕ್ಷ ಮೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ಕಳವು ಮಾಡಿದ್ದರು.

ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಹಾಗೂ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಟಿ.ಎಂ ಅವರ ಉಸ್ತುವಾರಿಯಲ್ಲಿ, ಪಿಐ ರಮೇಶ್ ಕೆ.ಟಿ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿ, ಬಾತ್ಮಿದಾರರ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿತು.

ಬಂಧಿತರನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಸರವಣಭವ (42) ಮತ್ತು ಶ್ರೀನಿವಾಸ (42) ಎಂದು ಗುರುತಿಸಲಾಗಿದೆ. ಜೊತೆಗೆ ಕಾನೂನಿನ ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ಹೊಸದುರ್ಗ, ಚಿತ್ರದುರ್ಗ ಬಡಾವಣೆ ಹಾಗೂ ದಾವಣಗೆರೆ ವಿದ್ಯಾನಗರ ಠಾಣೆಗಳ ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳು ಶಿರಾ ಠಾಣೆ ವ್ಯಾಪ್ತಿಯಲ್ಲಿ ಕಳವುಗೊಂಡಿದ್ದವು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಂಡವನ್ನು ಶ್ಲಾಘಿಸಿದ್ದಾರೆ.

 

 

https://timesofbayaluseeme.com/daily-astrologer-5/

Central Home karnataka Theft ಕರ್ನಾಟಕ ಕಳ್ಳತನ ಕೇಂದ್ರ ಮನೆ
Follow on Facebook Follow on Instagram
Share. Facebook Twitter WhatsApp Telegram
Previous Articleಪರೀಕ್ಷೆ ಬಳಿಕ ಸಿಹಿ ಸಂಭ್ರಮ: ವಿದ್ಯಾರ್ಥಿಗಳ ಮೊಗದಲ್ಲಿ ನಗು
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಮುರುಘಾ ಮಠದಲ್ಲಿ ಅಕ್ಕಮಹಾದೇವಿ ಶರಣೋತ್ಸವ; ಸ್ತ್ರೀಕುಲದ ಅಸ್ಮಿತೆ ಅಕ್ಕ

April 3, 2026

ಅಧ್ಯಾತ್ಮ ರಶ್ಮಿ -1

April 2, 2026

ವಾರ್ತಾ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರ ಆಗಮನ; ಎಂ.ಜುಂಜಣ್ಣ ಅಧಿಕಾರ ಸ್ವೀಕಾರ

April 2, 2026
Add A Comment
Leave A Reply Cancel Reply

Advertisement
Latest Posts

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 

ಪರೀಕ್ಷೆ ಬಳಿಕ ಸಿಹಿ ಸಂಭ್ರಮ: ವಿದ್ಯಾರ್ಥಿಗಳ ಮೊಗದಲ್ಲಿ ನಗು

ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ

ಸಾಕ್ಷಾತ್ಕಾರಗೊಂಡ ವಿಶ್ವಬಂಧುವಿನ ವೈಭವದ ರಥಪರ್ವ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.