ಚಳ್ಳಕೆರೆ ನಗರದ ಹೊರವಲಯದಲ್ಲಿರುವ ಬೃಹತ್ತಾದಶ್ರೀಸಾಯಿಬಾಬಾಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 12ನೇ ವರ್ಷದ ಶ್ರೀಸಾಯಿ ಗುರು ಪೂರ್ಣಿಮ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಜುಲೈ 9 ಮತ್ತು 10 ಎರಡು ದಿನಗಳ ಕಾಲ ಭಕ್ತಿ, ಶ್ರದ್ದೆಯಿಂದ ಅದ್ದೂರಿಯಾಗಿ ನಡೆಸಲಾಗುವುದು ಎಂದು ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು.ಇದೆ ತಿಂಗಳ 9 ಬುಧವಾರ ಬೆಳಗ್ಗೆ 8.30ಕ್ಕೆ ಸಾಯಿಬಾಬಾರ ಬೃಹತ್ ಶೋಭಾಯಾತ್ರೆ ಬಳ್ಳಾರಿ ರಸ್ತೆಯಲ್ಲಿರುವ ಗ್ರಾಮದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಆರಂಭವಾಗಲಿದ್ದು, ವಾಲ್ಮೀಕಿ ಹರ್ಷಾನಂದ ಮಹಾಸ್ವಾಮಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಿ ಬಳಿಕ ಮಧ್ಯಾಹ್ನ ಸಾಯಿಬಾಬಾಮಂದಿರಕ್ಕೆ ತಲುಪುವುದು ಎಂದು ಮಾಹಿತಿ ನೀಡಿದರು.
ಇನ್ನು ಮಧ್ಯಾಹ್ನ 12ಕ್ಕೆ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿತ್ರದುರ್ಗ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನ ಕೋಟೆಯ ಬಸವಲಿಂಗಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಘುಮೂರ್ತಿ ವಹಿಸಲಿದ್ದು, ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುವರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ , ಶಿಮುಲ್ ಅಧ್ಯಕ್ಷ ಕೆ.ಎನ್. ವಿದ್ಯಾಧರ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಯುವಮುಖಂಡ ಕೆ.ಟಿ.ಕುಮಾರಸ್ವಾಮಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಜುಲೈ10ರ ಗುರುವಾರ ದೊಡ್ಡೇರಿಯ ಕನ್ನೇಶ್ವರಮಠದ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲ್ಲಿದ್ದು, ಸಾಣೇಹಳ್ಳಿಯ ನಾಗರಾಜ ಶಿವಸಂಚಾರ ಕಲಾತಂಡದಿಂದ ಸುಗಮ ಸಂಗೀತ, ಮಧ್ಯಾಹ್ನ 4.30ರ ನಡೆಯುವ ಕಾರ್ಯಕ್ರಮದಲ್ಲಿ ಶಾರದಾಶ್ರಮದ ಮಾತಾಜಿ ತ್ಯಾಗಮಯಿ, ಡಾ.ಅನಂತರಾಮ್ ಗೌತಮ್ ಸಮ್ಮುಖದಲ್ಲಿ ವಿವಿಧ ಮಹಿಳಾ ತಂಡಗಳು ಭಜನೆ ಮತ್ತು ಲಲಿತ ಸಹಸ್ರಾನಾಮನ ಪಠಿಸುವರು. ಬೃಂದಾವನ ವಾದ್ಯಗೋಷ್ಠಿ ಗಾಯನ, ಬೆಂಗಳೂರಿನ ಸಿದ್ದರಾಮು ಮತ್ತು ಸಂಗಡಿಗರಿಂದ ಭಕ್ತಿಗೀತೆ, ರಾತ್ರಿ 8.15ಕ್ಕೆ ನರಹರಿ ಸದ್ಗುರು ಪೀಠದ ಪೀಠಾಧ್ಯಕ್ಷ ಡಾ.ವೈ.ರಾಜರಾಮ್, ಡಾ.ವೈ.ನರಹರಿರವರಿಂದ ಗುರು ಪೌರ್ಣಿಮೆ ವಿಶೇಷ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಸಿ.ವೆಂಕಟೇಶ್ ಮೂರ್ತಿ, ಕೆ.ಎಂ.ಜಗದೀಶ್, ಕಾರ್ರದರ್ಶಿ ಎಂ.ಆರ್.ರವಿಪ್ರಸಾದ್, ನಿರ್ದೇಶಕರಾದ ಕೆ.ನಾಗೇಶ್, ಬಿ.ವಿ.ಚಿದಾನಂದಮೂರ್ತಿ, ಸಿ.ಆರ್.ಶ್ರೀನಾಥ, ವಿಕಾಸ್, ಬಿ.ಸಿ.ಸತೀಶ್‌ಕುಮಾರ್, ಕಾರ್ತಿಕ್ ಎಸ್.ಮೂರ್ತಿ ಮುಂತಾದವರು ಮನವಿ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



