ಚಳ್ಳಕೆರೆ: ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಫರ್ಟಿಲೈಜರ್ಸ್ ನಲ್ಲಿ ಕಳಪೆ ಗೊಬ್ಬರ ಮಾರಾಟ ಮಾಡಿ ರೈತರಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ. ಹೌದು..ಚಳ್ಳಕೆರೆ ತಾಲೂಕಿನ ವಡೇರಹಳ್ಳಿ ಗ್ರಾಮದ ನರಸಿಂಹಪ್ಪ ಎಂಬ ರೈತ ಈರುಳ್ಳಿ ಬೆಳೆಗೆ ಎಂದು ಗೊಬ್ಬರ ಕೇಳಿದಾಗ ಗೊಬ್ಬರದ ಅಂಗಡಿ ಮಾಲೀಕ ತಿಪ್ಪೇಸ್ವಾಮಿ ಐಪಿಎಲ್ ಎಂಬ ಕಂಪನಿಯ ಗೊಬ್ಬರ ನೀಡಿದ್ದಾನೆ. ರೈತ ನರಸಿಂಹಪ್ಪ ಆಗ ತೆಗೆದುಕೊಂಡು ಹೋಗಿ ಹೊಲದಲ್ಲಿ ಈರುಳ್ಳಿ ಬೆಳೆಗೆ ಗೊಬ್ಬರ ಹಾಕಿದ್ದಾನೆ. ಆಗ ಗೊಬ್ಬರದಲ್ಲಿ ಬೋರ್ವೆಲ್ ಕೊರೆವ ವೇಳೆ ಬರುವ ಮಣ್ಣು ಹಾಗೂ ಕಲ್ಲಿನ ವಸ್ತು ಸಿಕ್ಕಿದ್ದು, ಅಂಗಡಿಗೆ ವಾಪಸ್ ಬಂದು ಗೊಬ್ಬರ ಸರಿಯಿಲ್ಲ ಎಂದಿದ್ದಕ್ಕೆ ತಿಪ್ಪೇಸ್ವಾಮಿ ಅವಾಜ್ ಹಾಕಿದ್ದಾನೆ. ಬಳಿಕ ಸಾರ್ವಜನಿಕರು ಸೇರಿ ಗೊಬ್ಬರವನ್ನು ನೀರಿನಲ್ಲಿ ಹಾಕಿದಾಗ ಕಲ್ಲು ಮಣ್ಣು ಕಂಡು ಬಂದಿದ್ದು, ಕೂಡಲೇ ಗುರು ತಿಪ್ಪೇರುದ್ರಸ್ವಾಮಿ ಫರ್ಟಿಲೈಜರ್ಸ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಅಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿದರು. ರೈತರ ಪ್ರತಿಭಟನೆ ಬಳಿಕ ಅಂಗಡಿಗೆ ಚಳ್ಳಕೆರೆ ಕೃಷಿ ಅಧಿಕಾರಿ ಗುರುನಂದನ್ ಭೇಟಿ ನೀಡಿ ಅಂಗಡಿಯಲ್ಲಿದ್ದ ಅಷ್ಟು ಗೊಬ್ಬರವನ್ನು ಲೆಕ್ಕ ತೆಗೆದುಕೊಂಡು ರೈತರಿಗೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಇನ್ನು ನರಸಿಂಹಪ್ಪ ರೈತನಿಗೆ ನೀಡಿದ್ದ ಗೊಬ್ಬರವನ್ನು ಕೃಷಿ ಅಧಿಕಾರಿಗಳು ಲ್ಯಾಬ್ ಟೆಸ್ಟಿಂಗ್ ಗೆ ಎಂದು ಸ್ಯಾಂಪಲ್ ತೆಗೆದುಕೊಂಡಿದ್ದು, ಸ್ಯಾಂಪಲ್ ವರದಿ ಬಂದ ಬಳಿಕ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಗುರು ತಿಪ್ಪೇರುದ್ರಸ್ವಾಮಿ ಫರ್ಟಿಲೈಜರ್ಸ್ ಅಂಗಡಿ ವಿರುದ್ಧ ರೈತರು ಹಲವು ಆರೋಪ ಮಾಡಿದ್ದು, ಯೂರಿಯ ಸೇರಿದಂತೆ ವಿವಿಧ ಗೊಬ್ಬರಗಳು ಇದ್ದರು ಇಲ್ಲ ಎಂದು ಹೇಳಿ ಕಳಿಸುತ್ತಾರೆ. ಬಿತ್ತನೆ ಸಮಯದಲ್ಲಿ ಅದೇ ಯೂರಿಯ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಾರೆ ಎಂದು ಆರೋಪಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



