ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನಾದ್ಯಂತಬಂಜಾರ ಸಮುದಾಯದವರು ಬಗರ್ ಹುಕುಂ ಹಾಗೂಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿಅಭಿಯಾನ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸಾಗುವಳಿ ಪತ್ರಕ್ಕಾಗಿಆಗ್ರಹಿಸಿದರು.
ಚಳ್ಳಕೆರೆ ತಾಲ್ಲೂಕಿನ ಕೆಲ ಲಂಬಾಣಿ ತಾಂಡದ ಜನರು,ಬಗರ್‍ಹುಕುಂ ಹಾಗೂ ಅರಣ್ಯಭೂಮಿಯನ್ನುಸಾಗುವಳಿ ಮಾಡಿಕೊಂಡು ಬಂದಿದ್ದು, ತಾಲ್ಲೂಕು ಆಡಳಿತಸಾಗುವಳಿ ಚೀಟಿಗಳನ್ನು ನೀಡುವ ಬದಲಾಗಿ, ಅನಗತ್ಯವಾಗಿ
ಲಂಬಾಣಿ ಸಮುದಾಯದವರನ್ನು ಕಿರುಕುಳ ನೀಡಿ,ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕರ್ನಾಟಕ
ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಆರೋಪಿಸಿದೆ.ಪ್ರತಿಭಟನಾ ನಿರತ ಬಂಜಾರ ಸಮುದಾಯದವರನ್ನು
ಉದ್ದೇಶಿಸಿ ಮಾತನಾಡಿದ ಕರ್ನಾಟಕ ಶಾಂತಿ ಮತ್ತು ಸೌಹಾರ್ದವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್
ಅವರು ಚಳ್ಳಕೆರೆ ತಾಲ್ಲೂಕಿನಾದ್ಯಂತ ನೂರಾರುವರ್ಷಗಳಿಂದ ಬಗರ್‍ಹುಕುಂ ಮತ್ತುಅರಣ್ಯಭೂಮಿಗಳನ್ನು ಸಾಗುವಳಿಮಾಡಿಕೊಂಡುಬರಲಾಗಿದ್ದು, ಬಹಳಷ್ಟು ತಾಂಡಾದ ಜನರಿಗೆ ಇದೂವರೆಗೆಸಾಗುವಳಿ ಪತ್ರಗಳನ್ನು ನೀಡದೇ ಅನಗತ್ಯವಾಗಿ ವಿಳಂಭನೀತಿ ಅನುಸರಿಸಲಾಗುತ್ತಿದೆ ಎಂದರು.
ಚಳ್ಳಕೆರೆ ತಾಲ್ಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಬಳಿ,ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ ಜಮೀನು ಇದ್ದು, ಆ ಜಮೀನನ್ನು
ಖಾಸಗಿಯವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು,ತಾಲ್ಲೂಕು ಆಡಳಿತ ಮೌನವಾಗಿರುವುದು ಅನುಮಾನಕ್ಕೆಕಾರಣವಾಗಿದೆ. ಹಾಗೆಯೇ ಭರಮಸಾಗರ ಲಂಬಾಣೀ ಹಟ್ಟಿ ಬಳಿಹನುಮಾನಾಯ್ಕ ಎಂಬುವವರು ತಲತಲಾಂತರದಿಂದ ಭೂಮಿಸಾಗುವಳಿ ಮಾಡಿಕೊಂಡಿದ್ದು, ತಾಲ್ಲೂಕು ಆಡಳಿತ ಬೇರೆಭೂಮಿ ಇದ್ದಾಗ್ಯೂ ಹನುಮಾನಾಯ್ಕ ಅವರ ಸಾಗುವಳಿಭೂಮಿಯನ್ನೇ ವಶಪಡಿಸಿಕೊಂಡು ಶಾಲಾ ಕಟ್ಟಡ ಮೈದಾನನಿರ್ಮಾಣದಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಜನವಿರೋಧಿ ಕ್ರಮವಾಗಿದೆ ಎಂದರು.ಚಳ್ಳಕೆರೆ ಸಮೀಪಿದ ಕುರುಡಿಹಳ್ಳಿ ಲಂಬಾಣಿಹಟ್ಟಿ(ನಂದಿಹಳ್ಳಿ ಗ್ರಾಮದ ಬಳಿ) ದಿ:ಶಿವ ಸಾಧು ಮಹಾರಾಜ್‍ರವರುಅವರ ಕುಟುಂಬದವರು ತಲತಲಾಂತರದಿಂದಸಾಗುವಳಿಮಾಡಿಕೊಂಡು ಬಂದಿದ್ದು, ಹಾಗೆಯೇ ಆ
ಭೂಮಿಯಲ್ಲಿ ವಾಸಕ್ಕೆ ಮನೆ, ಗೋಶಾಲೆ, ತಿರುಪತಿ-ತಿರುಮಲ ದೇವಸ್ಥಾನ ಸೇರಿದಂತೆ ಸಾಕಷ್ಟು ಅಭಿವೃದ್ಧಿ
ಕಾರ್ಯಗಳನ್ನು ಕೈಗೊಂಡಿದ್ದು, ಆದಾಗ್ಯೂ ಅರಣ್ಯ ಇಲಾಖೆಅಧಿಕಾರಿಗಳು ಅವರಿಗೆ ಕಿರುಕುಳ ನೀಡಿ, ಒಕ್ಕಲೆಬ್ಬಿಸುವ
ಉದ್ದೇಶದಿಂದ ತಾಲ್ಲೂಕು ಆಡಳಿತ ಉಪವಿಭಾಗಾಧಿಕಾರಿಗಳುಮತ್ತು ನ್ಯಾಯಾಲಯದ ಮೊರೆ ಹೋಗಿ, ನೋಟೀಸಿನ
ಮೇಲೆ ನೋಟೀಸುಗಳನ್ನು ಜಾರಿಮಾಡಿ ನಿರಂತರವಾಗಿಕಿರುಕುಳ ನೀಡುತ್ತಿದ್ದು, ನಿಜಕ್ಕೂ ಅಮಾನವೀಯಘಟನೆಯಾಗಿದೆ. ಜಿಲ್ಲಾಡಳಿತ ತುರ್ತಾಗಿ ಲಂಬಾಣಿ ತಾಂಡದ ಜನರುಸಾಗುವಳಿಮಾಡಿದಂತಹ ಭೂಮಿಯ ಸಾಗುವಳಿಚೀಟಿಗಳನ್ನು ನೀಡಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಬಂಜಾರ ಜಾಗೃತಿಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿಆರ್.ನಿಂಗಾನಾಯ್ಕ್, ವೀರದಿಮ್ಮನಹಳ್ಳಿ ತಾಂಡದಮಹಂತೇಶ್‍ನಾಯ್ಕ್, ಅಶೋಕ್‍ನಾಯ್ಕ್, ತಾಲ್ಲೂಕು ಮಾಜಿಸದಸ್ಯರು ಸೇರಿ ಹಲವು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



