ಚನ್ನಗಿರಿ: ಸನಾತನ ಹಿಂದೂ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಹಿಂದೆ ನಮ್ಮ ಋಷಿಮುನಿಗಳ ಯಜ್ಞ ಯಾಗಾದಿಗಳಿಗೆ ರಾಕ್ಷಸರು ತೊಂದರೆ ಮಾಡುತ್ತಿದ್ದರು, ಅದು ಈಗಲೂ ನಡೆಯುತ್ತಲೇ ಬಂದಿದೆ ಇದನ್ನೆಲ್ಲ ತೊಳೆದು ಹಾಕುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಜಾತಿ ವ್ಯವಸ್ಥೆ ಇಲ್ಲದ ಜಾತ್ಯತೀತ ಸಾಮೂಹಿಕ ಗಣೇಶ ಪ್ರತಿಷ್ಠಾಪನೆ ಮಾಡಿದ್ದು ಎಂದು ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಹೇಳಿದರು.ಪಟ್ಟಣದ ಆರ್ ಎಸ್ ಎಸ್ ಮತ್ತು ಬಜರಂಗದಳ ವತಿಯಿಂದ ಸ್ಥಾಪಿಸಿರುವ ಗಣೇಶೋತ್ಸವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.ಜಾತ್ಯತೀತ ಭಾರತ ದೇಶದಲ್ಲಿ ಜಾತಿಮೀರಿ ನಾವೆಲ್ಲ ಹಿಂದೂಗಳು ಎಂಬುದನ್ನು ತೋರಿಸಲು ಇರುವ ವಿಶೇಷ ಉತ್ಸವವೇ ಗಣೇಶೋತ್ಸವ,ನಾವೆಲ್ಲ ಭಾರತೀಯರು ದೇಶ, ಹಿಂದುತ್ವ ಉಳಿವಿಗಾಗಿ ತೊಡಗಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ಮನಸ್ಸಿನಲ್ಲಿದ್ದು, ಅಲ್ಲೊಂದು ಇಲ್ಲೊಂದು ರಾಷ್ಟ್ರ ದ್ರೋಹಿ ಕೆಲಸಗಳು ಚಟುವಟಿಕೆಗಳು ಕೆಲವು ಕಿಡಿಗೇಡಿ ಮುಸ್ಲಿಮರು ಈ ಗಣೇಶ ಉತ್ಸವಕ್ಕೂ ಕಲ್ಲೆಸೆಯುವುದು ಉಗುಳುವುದು ಈ ರೀತಿಯ ಹಲವು ಅಡ್ಡಿಪಡಿಸುತ್ತಿದ್ದು ಹಿಂದೂಗಳು ಎಚ್ಚೆತ್ತಿದ್ದಾರೆ ಅವರ ಉತ್ಸವಗಳಿಗೆ ಅಡ್ಡಿಪಡಿಸಬಾರದು ಹಿಂದೂಗಳನ್ನು ಕೆಣಕಬಾರದು ಎಂದು ಹೇಳಿದರು.ಮುಸ್ಲಿಮರು ಈ ರೀತಿ ಮಾಡುತ್ತಿರುವುದಕ್ಕೆ ಅವರು ಒಟ್ಟಾಗಿರುವುದೇ ಕಾರಣಅವರ ಮತಗಳ ಆಸೆಗಾಗಿ ಕಾಂಗ್ರೆಸ್ ಪಕ್ಷ ಅವರಿಗೆ ಕುಮಕ್ಕು ನೀಡುತ್ತಿದೆ.ಹಿಂದೂಗಳ ಒಗ್ಗಟ್ಟಾಗಲು ಈ ಗಣೇಶೋತ್ಸವ ಕೂಡ ಕಾರಣವಾಗಿರುತ್ತದೆ, ಹಿಂದೂಗಳು ದೇಶದಲ್ಲಿ ಒಟ್ಟಾದಲ್ಲಿ ಕಾಂಗ್ರೆಸ್ ನಿರ್ಣಾಮವಾಗುತ್ತಿದ್ದು, ಈ ರಾಜ್ಯದಲ್ಲೂ ಕಾಂಗ್ರೆಸ್ ನಿರ್ಣಾಮವಾಗಿ ಬಿಜೆಪಿ ಬರುತ್ತದೆ ಎಂಬ ಭಯದಿಂದ ಈ ರೀತಿಯ ಕುಮ್ಮಕ್ಕುಗಳನ್ನು ನೀಡುತ್ತಿದ್ದಾರೆ ಎಂದರು.ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಚಿಕ್ಕಪ್ಪ, ರಾಜು ಕರಡೆರ್, ಆರ್ ಎಸ್ ಎಸ್ ಹಿರಿಯ ಮುಖಂಡ ಮಂಜುನಾಥ್, ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ್ ಕಾಳೆ, ಬಿಜೆಪಿ ಯುವ ಮುಖಂಡ ನವೀನ್ ಚನ್ನಗಿರಿ, ಬಜರಂಗದಳ ಜಿಲ್ಲಾ ಸಂಚಾಲಕ ರವಿಚಂದ್ರ ಹಾಗೂ ಹಿಂದೂ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







