ಚಿತ್ರದುರ್ಗ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರುಗಳಲ್ಲಿ ಪೂರ್ವಸಿದ್ದತೆ ಹಾಗೂ ಸಮಯ ಪಾಲನೆಯಿರಬೇಕೆಂದು ಸಾರ್ವಜನಿಕಶಿಕ್ಷಣ ಇಲಾಖೆ ನಿವೃತ್ತಉಪ ನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ. ಘಟಕದ
ವತಿಯಿಂದ ಪಿಳ್ಳೆಕೆರನಹಳ್ಳಿಯಲ್ಲಿರುವಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಗುರುಗಳ ಸ್ಥಾನ ದೊಡ್ಡದು.
ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇ.ಡಿ ಶಿಕ್ಷಣ ಪಡೆದಾಕ್ಷಣ
ಶಿಕ್ಷಕರಾಗಬೇಕೆಂದನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿ ದೊಡ್ಡ ದೊಡ್ಡ
ಅಧಿಕಾರಿಗಳಾಗಬಹುದು. ಅದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಕರುಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡಲು ಟಿ.ಇ.ಟಿ.ಪರೀಕ್ಷೆಗಳನ್ನು ನಡೆಸುತ್ತಿದೆ. ಮಹತ್ವಪೂರ್ಣ ಸ್ಥಾನ ಗುರುವಿಗಿದೆ. ಮಕ್ಕಳಲ್ಲಿನೆನಪಿನ ಸಾಮಥ್ರ್ಯವಿರಬೇಕು. ಶಿಕ್ಷಕ ಎಂದು ಹೇಳಿಕೊಳ್ಳಲು ಹಿಂಜರಿಯುವಂತ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದರೆವೃತ್ತಿಯನ್ನು ಗೌರವಿಸಲು ಆಗುವುದಿಲ್ಲ. ವೃತ್ತಿ ಮತ್ತು ವಿಷಯವನ್ನು ಶಿಕ್ಷಕ ಗೌರವಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಬಹುದು. ಕಲಿಕೆಅನುಕರಣೀಯವಾಗಿರಬೇಕು. ಮೌಲ್ಯಗಳು ಕಡಿಮೆಯಾಗುತ್ತಿವೆ. ಕಲಿಕೆಯೆಂದರೆ ಬರವಣಿಗೆಯಲ್ಲ. ಅನುಭವದಿಂದ ಬರಬೇಕು.
ಮಕ್ಕಳಿಗೆ ಪಾಠ ಮಾಡುವುದಷ್ಟೆ ಅಲ್ಲ. ಪೂರಕ ಮಾಹಿತಿ ಕೊಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಪ್ರತಿ ಮಗುವಿನ ಕಡೆ
ವೈಯಕ್ತಿಕ ಗಮನ ಕೊಟ್ಟಾಗ ಬೆಳವಣಿಗೆಯಾಗುತ್ತದೆ. ಶಿಕ್ಷಕರ ಸಂವಹನ, ಭಾಷೆ ಮಕ್ಕಳಿಗೆ ತಲುಪಬೇಕು ಎಂದರು.
ಸಾಮರಸ್ಯ ಪ್ರಶಸ್ತಿ ಪುರಸ್ಕøತರಾದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾದರೆ ನಿಮ್ಮ ಅರಿವಿಲ್ಲದೆ ಗುರಿ ಮುಟ್ಟುತ್ತೀರ. ಸಾಧನೆಯ ಮೆಟ್ಟಿಲು ಹತ್ತುವ ಒಂದು ಕ್ಷಣ ಖುಷಿಪಡಬೇಕು. ಉಳಿದಂತೆ ಹಿಂದಿನದನ್ನು ಮರೆಯಬಾರದು. ಎರಡು ಸಾವಿರ ವರ್ಷಗಳ ಹಿಂದಿನ ಬುದ್ದ, ಎಂಟು ನೂರು ವರ್ಷಗಳಬಸವಣ್ಣ ಸೇರಿದಂತೆ ಕ್ರಾಂತಿಕಾರಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಗುರು ಪೂರ್ಣಿಮೆಗೆ ಮಹತ್ವವಿದೆ. ಪಾಠ ಕಲಿಸುವ ಶಿಕ್ಷಕರುಗಳಷ್ಟೆ ಗುರುಗಳಲ್ಲ. ಮಾರ್ಗದರ್ಶನ ಮಾಡುವವರು ಗುರುಗಳೆ ಎಂದು ಹೇಳಿದರು.
ನಿತ್ಯದ ಜೀವನದಲ್ಲಿ ದಾರ್ಶನಿಕರನ್ನು ಸ್ಮರಿಸಬೇಕು
ನಿತ್ಯದ ಜೀವನದಲ್ಲಿ ದಾರ್ಶನಿಕರನ್ನು ಸ್ಮರಿಸಬೇಕು. ವೃದ್ದರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ಅತ್ಯಂತ ನೋವಿನಸಂಗತಿ. ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿಯೆಂದು ಅಂದುಕೊಳ್ಳಬೇಕು. ಆಗ ವೃತ್ತಿಯ ಪಾವಿತ್ರತೆ ಕಾಪಾಡಿದಂತಾಗುತ್ತದೆ.ಸಮಾನತೆ, ಸೌಹಾರ್ಧತೆಯಿಂದ ಸಾಮರಸ್ಯ ಬದುಕು ಕಟ್ಟಿಕೊಳ್ಳಬಹುದು. ಆಗ ಮಾತ್ರ ಸಮಾಜ, ದೇಶ, ಜಗತ್ತುಉಳಿಯುತ್ತದೆಂದರು.ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿತೊಡಗಿರುವವರಿಗೆ ಗುರುವಿನ ಸ್ಥಾನವಿದೆ.ಒಂದು ಅಕ್ಷರ ಕಲಿಸಿದವರನ್ನು ಗುರು ಎನ್ನುತ್ತೇವೆ. ತಾಯಿಯೆ ಮೊದಲ ಗುರು. ವ್ಯಾಸ ಮಹರ್ಷಿಗಳ ನೆನಪಿಗಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಗುವುದು. ಜಗತ್ತಿಗೆ ಸಾಮರಸ್ಯದ ಅಗತ್ಯವಿದೆ. ಶಿಕ್ಷಕನಿಗೆ ಸೇವಾ ಮನೋಭಾವವಿರಬೇಕು. ಸ್ವತಂತ್ರಪೂರ್ವದಲ್ಲಿ ಶೇ.13 ರಷ್ಟು ಸಾಕ್ಷರತೆಯಿತ್ತು. ಈಗ ಸಾಕ್ಷರತೆ ಪ್ರಮಾಣಶೇ.75 ರಷ್ಟಿದೆ. ಆದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕನಾದವನು ಉತ್ತಮ ನಡೆ, ನುಡಿ ಹೊಂದಿರಬೇಕು. ಎಷ್ಟೆ ಜ್ಞಾನವಂತರಾದರೂ ಅಹಂ ಇರಬಾರದು. ವಿದ್ಯಾರ್ಥಿಗಳು ಶಿಸ್ತು,ಸಮಯಪಾಲನೆಯನ್ನು ಜೀವನದಲ್ಲಿ ರೂಢಿಸಿಕೊಂಡು ಗುರುವಿಗೆ ಗೌರವಿಸುವುದನ್ನು ಕಲಿಯಬೇಕೆಂದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಚಾರ್ಯರಾದ ಪ್ರೊ.ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಹನುಮಂತರೆಡ್ಡಿ ಜಿ. ಪ್ರೊ.ಮಂಜುನಾಥ್ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



