ಚಿತ್ರದುರ್ಗ : ಪ್ರತಿಯೊಂದು ಮಗುವಿನಲ್ಲಿಯೂ ಬುದ್ದಿವಂತಿಕೆಯಿರುತ್ತದೆ. ಏಕಾಗ್ರತೆ, ಅರ್ಥೈಸುವಿಕೆ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿಶಿಕ್ಷಣದ ಜೊತೆ ಸಮೂಹ ಕೌಶಲ್ಯವಿರಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಕುಮಾರಸ್ವಾಮಿ ಮಕ್ಕಳಿಗೆ ತಿಳಿಸಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಬುಧವಾರ ಸ್ಟೆಮ್ ಮತ್ತು ಲಾಂಗ್ವೇಜ್ ಲ್ಯಾಬ್ಸ್ಉದ್ಗಾಟಿಸಿ ಮಾತನಾಡಿದರು.ಒಂದು ಕೋಟಿ ರೂ.ವೆಚ್ಚದಲ್ಲಿ ಸಂಸ್ಥೆ ಮಕ್ಕಳಿಗೆ ಈ ಅವಕಾಶವನ್ನು ಕಲ್ಪಿಸಿದೆ. ಕೇಳುವ ಪ್ರಶ್ನೆಗಳಿಗೆ ಉತ್ತರ ಏನು, ಎಷ್ಟುಬರೆಯಬೇಕೆಂಬ ಕೌಶಲ್ಯವಿರಬೇಕು. ಆಗ ಮಾತ್ರ ನೀವುಗಳು ಕಂಡ ಕನಸು ನನಸಾಗಲು ಸಾಧ್ಯ. ನಿಮ್ಮ ಬರವಣಿಗೆ ಓದುವವರಿಗೆಆಕರ್ಷಣೀಯವಾಗಿರಬೇಕು. ಚಿತ್ರದುರ್ಗ ಜಿಲ್ಲೆಯ ಮಕ್ಕಳಿಗೆ ಇದೊಂದು ವರದಾನವಾಗಿದೆ. ಇಂತಹ ವ್ಯವಸ್ಥೆ ಜಿಲ್ಲೆಯಲ್ಲಿ ಇದೆಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು.
ಗುಣಾತ್ಮಕ ಹಾಗೂ ಕೌಶಲ್ಯಯುಕ್ತ ಶಿಕ್ಷಣ ಇಂದಿನ ಮಕ್ಕಳಿಗೆ ಬೇಕು. ಯುವ ಜನತೆಯಿಂದ ಕೂಡಿರುವ ಭಾರತದಲ್ಲಿ ಅನೇಕ
ಅವಕಾಶಗಳಿವೆ. ಮಕ್ಕಳು ಮೊದಲು ಮೊಬೈಲ್‍ನಿಂದ ಹೊರ ಬರಬೇಕು. ಅಮೂಲ್ಯವಾದ ಸಮಯವನ್ನು ಮೊಬೈಲ್‍ನಿಂದ ಹಾಳುಮಾಡಿಕೊಳ್ಳಬೇಡಿ. ಒಳ್ಳೆಯದಕ್ಕಷ್ಟೆ ಬಳಸಿಕೊಳ್ಳಬೇಕು. ವಿಶಾಲವಾದ ಜಗತ್ತಿನಲ್ಲಿ ನಾನಾ ಕ್ಷೇತ್ರಗಳಲ್ಲಿ ವಿಫುಲವಾದ
ಅವಕಾಶಗಳಿವೆ. ಸ್ಟೆಮ್ ಮತ್ತು ಲಾಂಗ್ವೇಜ್ ಲ್ಯಾಬ್ಸ್ ಒಂದಕ್ಕೊಂದು ಪೂರಕ. ಶಿಕ್ಷಣ ಕೇವಲ ಅಂಕಗಳಿಗಷ್ಟೆ
ಸೀಮಿತವಾಗಬಾರದೆಂದು ಹೇಳಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡುತ್ತಪ್ರತಿಯೊಬ್ಬರಿಗೂ ತನ್ನದೆ ಆದ ಜವಾಬ್ದಾರಿಯಿದೆ. ಕೇವಲ ಶಿಕ್ಷಣವೊಂದೆ ಬದುಕಿಗೆ ಮಾನದಂಡವಾಗಬಾರದು. ರೈಲು ನಿಲ್ದಾಣದಲ್ಲಿಚಹ ಮಾರುತ್ತಿದ್ದ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಇನ್‍ಫೋಸಿಸ್‍ನ ನಾರಾಯಣಮೂರ್ತಿ ಹಾಗೂ ಸುಧಾನಾರಾಯಣಮೂರ್ತಿ ಇವರುಗಳು ಒಂದು ಕಾಲದಲ್ಲಿ ಕಷ್ಟದಲ್ಲಿದ್ದರು. ಈಗ ವರ್ಷಕ್ಕೆ ಅವರ ಆದಾಯ ಎಂಟು ಸಾವಿರ ಕೋಟಿರೂ.ಗಳು ಕೌಶಲ್ಯದಿಂದ ಮಾತ್ರ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.ಯಾವುದೇ ಆಸೆ ಫಲಾಪೇಕ್ಷೆಯಿಟ್ಟುಕೊಳ್ಳದೆ ನಲವತ್ತು ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದೆ. ಲಕ್ಷಾಂತರವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಹೊರ ಹೋಗಿದ್ದಾರೆ. ದೇಶ-ವಿದೇಶಗಳಲ್ಲಿ ಕೆಲವರು ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಎನಿಸುತ್ತದೆ. ಶಿಕ್ಷಣದ ಜೊತೆ ಕೌಶಲ್ಯ ಜ್ಞಾನ ಬಹಳ ಮುಖ್ಯ. ಸ್ಟೆಮ್ ಅಂಡ್ ಲಾಂಗ್ವೇಜ್ ಲ್ಯಾಬ್ಸ್‍ನ ಪ್ರಯೋಜನ ಪಡೆದುಕೊಳ್ಳುವಂತೆವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಮೈರಾಸ್ ಅಕಾಡೆಮಿಯ ಸಂಸ್ಥಾಪಕ ಡಾ.ಮನಿಷ್ ಜಾ ಮಾತನಾಡಿ ಭಾರತ ದೇಶ ಯುವ ಜನತೆಯಿಂದ ಕೂಡಿದೆ. ಎಲ್ಲಾ
ರಂಗಗಳಲ್ಲಿಯೂ ಅವಕಾಶವಿದೆ. ಆದರೆ ಕೌಶಲ್ಯ ಜ್ಞಾನವಿಲ್ಲದ ಕಾರಣ ಬಹಳಷ್ಟು ಮಂದಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಪದವಿ ಜೊತೆ ಕೌಶಲ್ಯ ಜ್ಞಾನವಿರಬೇಕು. ಶಿಕ್ಷಣವಂತರಾಗಿ ಕೇವಲ ಇಂಜಿನಿಯರ್ ಡಾಕ್ಟರ್, ಐ.ಎ.ಎಸ್. ಐ.ಪಿ.ಎಸ್.ಅಧಿಕಾರಿಗಳಾಗಬೇಕೆಂದೇನು ಇಲ್ಲ. ಸ್ವ-ಉದ್ಯೋಗಿಗಳಾಗಲು ಅನೇಕ ದಾರಿಗಳಿವೆ. ಬಹಳಷ್ಟು ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿತೇರ್ಗಡೆಯಾಗುತ್ತಾರೆ. ಆದರೆ ಸಂದರ್ಶನದಲ್ಲಿ ವಿಫಲರಾಗುತ್ತಾರೆ. ವಿಷಯವನ್ನು ಹೇಗೆ ಸಂವಹನ ಮಾಡಬೇಕೆಂಬ ಜ್ಞಾನದಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ ಶಿಕ್ಷಣಕ್ಕಿಂತ ಕೌಶಲ್ಯತುಂಬಾ ಮುಖ್ಯ. ಯುವ ಸಮೂಹದಿಂದ ಕೂಡಿರುವ ಭಾರತದಲ್ಲಿ ಪರಿಸ್ಥಿತಿಗನುಗುಣವಾಗಿ ಮಕ್ಕಳು ಬೆಳೆಯುತ್ತಿರುವುದುಬದಲಾವಣೆಯಾಗಬೇಕು. ಶಿಕ್ಷಣ ಪುಸ್ತಕದ ಬದನೆಕಾಯಿಯಿದ್ದಂತೆ. ತಿನ್ನಲು ಬರುವುದಿಲ್ಲ. ಪ್ರತಿಯೊಬ್ಬರಲ್ಲಿ ಜ್ಞಾನವಿದೆ.ಕೌಶಲ್ಯವಿಲ್ಲದ ಕಾರಣ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸ್ಟೆಮ್ ಮತ್ತು ಲಾಂಗ್ವೇಜ್ ಲ್ಯಾಬ್ಸ್ ನಮ್ಮ ಸಂಸ್ಥೆಯಲ್ಲಿಉದ್ಗಾಟನೆಗೊಂಡಿರುವುದು ನಿಮಗೆ ಸಿಕ್ಕಿರುವ ಸದಾವಕಾಶ ಇದನ್ನು ಬಳಸಿಕೊಂಡು ಕೌಶಲ್ಯಯುತ ಶಿಕ್ಷಣಕ್ಕೆ ಒತ್ತು ಕೊಡಿ ಎಂದುನುಡಿದರು.
ಅಕಾಡೆಮಿಕ್ ಡೈರೆಕ್ಟರ್ ಎಸ್.ಎಲ್.ವಿ. ಪಿ.ಯು.ಕಾಲೇಜಿನ ಡಾ.ಹೆಚ್.ಎನ್.ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡುತ್ತ
ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಶಿಕ್ಷಣಕ್ಕೆ ಸ್ಟೆಮ್ ಅಂಡ್ ಲಾಂಗ್ವೇಜ್ ಲ್ಯಾಬ್ಸ್ ಸಹಕಾರಿಯಾಗಲಿದೆ. ಶಾಲೆಗಳಲ್ಲಿ ಕಲಿಯುವಪಾಠದ ಜೊತೆ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸುವುದು ಇದರ ಉದ್ದೇಶ. ಇಂತಹವ್ಯವಸ್ಥೆ ಜಿಲ್ಲೆಯಲ್ಲಿಯೇ ಪ್ರಥಮ. ಸೃಜನಶೀಲ ನಾಯಕತ್ವ, ಕೌಶಲ್ಯ ಶಿಕ್ಷಣಕ್ಕೆ ಇದು ನೆರವಾಗುವುದಲ್ಲದೆ ಉದ್ಯೋಗಾವಕಾಶ ಕೂಡಸಿಗುತ್ತದೆ ಎಂದು ನುಡಿದರು.ಮೈರಾಸ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾ ದೇವರಾಜ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಚಂದ್ರಕಲಾ, ಡೀನ್ ಅಕಾಡೆಮಿಕ್ಸ್
ಡಾ.ಬಿ.ಸಿ.ಅನಂತರಾಮು ಇವರುಗಳು ವೇದಿಕೆಯಲ್ಲಿದ್ದರು.ಸಂಸ್ಥೆಯ ಪ್ರಾಂಶುಪಾಲರುಗಳು ಹಾಗೂ ಬೋಧಕ ಸಿಬ್ಬಂದಿ ಮತ್ತು ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



