Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್‌* 

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ
ಚಿತ್ರದುರ್ಗ

12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿJanuary 28, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ
Share
WhatsApp Twitter Facebook Telegram

12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ

 

ಚಿತ್ರದುರ್ಗ ಜ. 28

12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ, ಮಹಿಳೆ ಯಾವುದರಲ್ಲೂ ಸಹಾ ಕಡಿಮೆ ಇಲ್ಲ ಎಲ್ಲದರಲ್ಲೂ ಸಹಾ ಸಾಧನೆ ಮಾಡಿದ್ದಾಳೆ, ಅವರಿವರ ಮಾತನ್ನು ಕೇಳದೆ ತಮ್ಮ ಸ್ವಂತಿಕೆ ಯಿಂದ ಬುದ್ದಿಯನ್ನು ಚಲಾಯಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಖಂಡಿಮಠ ಮಹಿಳೆಯರಿಗೆ ಕರೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ(ರಿ)ಜಿಲ್ಲಾ ಮಹಿಳಾ ಘಟಕದವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯವಾಗಿದೆ ಯಾವ ಕುಟುಂಬದಲ್ಲೂ ಸಹಾ ಮಹಿಳೆ ಇಲ್ಲದೆ ಆ ಕುಟುಂಬ ನಡೆಯಲು ಸಾಧ್ಯವಿಲ್ಲ, ಹೆಣ್ಣು ಪುರುಷನ ಬದುಕಿಗೆ ಮುಖ್ಯವಾಗಿದ್ದಾಳೆ, ವಚನ ಸಾಹಿತ್ಯದಲ್ಲಿ ಗಂಡು, ಹೆಣ್ಣು ಎಂಬ ಬೇಧ ಇಲ್ಲದೆ ಎಲ್ಲರನ್ನು ಸಮನಾಗಿ ಕಾಣಲಾಗಿದೆ. ನಮಗೆ ಶರಣರ ಸಾಹಿತ್ಯ ಪ್ರೇರಣೆಯಾಗಬೇಕಿದೆ. ಸಂವಿಧಾನ ನೀಡಿದ ಅಭೀವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕಿದೆ . ನಮಗೆ ಬೇಕಾದದ್ದನ್ನು ಅನುಸರಿಸಬೇಕಿದೆ ಬೇರೆಯವರಿಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಮಾನವನಾಗಿ ಬಂದ ಮೇಲೆ ಬರೀ ಸುಖವನ್ನು ಅನುಭವಿಸುವುದು ಮಾತ್ರವಲ್ಲ , ಮೋಕ್ಷದ ದಾರಿಯನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ನಮಗೆ ಶರಣರ ವಚನಗಳು ದಾರಿ ದೀಪನಾಗಿವೆ. ಮಹಿಳೆಯರ ಕೀಳೀರಿಮೆಯನ್ನು ಬಿಡುವುದರ ಮೂಲಕ ಸಮಾಜದಲ್ಲಿ ತನ್ನನ್ನು ತಾನು ಪ್ರತಿಬಿಂಬಿಸಿಕೊಳ್ಳಬೇಕಿದೆ. ಹೆಣ್ಣಿಗೆ ಅಭೀವೃದ್ದಿಯ ಶಕ್ತಿಯನ್ನು ಪ್ರಕೃತಿ ನೀಡಿದೆ. ಪುರುಷನ ಶಕ್ತಿಯನ್ನು ಜಗತ್ತಿಗೆ ತೋರಿಸುವ ಶಕ್ತಿಯನ್ನು ಹೊಂದಿರುವವಳು ಹೆಣ್ಣು ಆಗಿದ್ದಾಳೆ. ಗೃಹಣಿಗೆ ಸಮಾರ್ಥಕವಾದ ಪದ ಇನ್ನೂಂದು ಇಲ್ಲವಾಗಿದೆ, ಬೇರೆ ಎಲ್ಲಾ ಕೆಲಸವನ್ನು ನಿರ್ವಹಿಸಬಹುದು ಆದರೆ ಗೃಹಣಿಯ ಕೆಲಸವನ್ನು ಮಾಡುವುದು ಮಾತ್ರ ಕಷ್ಠವಾಗುತ್ತದೆ ನಮ್ಮ ದೇಶ ಭಾರತೀಯ ಸಂಸ್ಕøತಿಯನ್ನು ಹೊಂದಿರುವುದು ರಾಜಕೀಯ ನಾಯಕರಿಂದ ಅಲ್ಲ ನಮ್ಮ ನಾರಿಯರಿಂದ ಕುಟುಂಬ ಚನ್ನಾಗಿ ಇದ್ದರೆ ಜಿಲ್ಲೆ, ರಾಜ್ಯ ದೇಶ ಚನ್ನಾಗಿ ಇರುತ್ತದೆ, ಅದು ದಾರಿ ತಪ್ಪಿದರೆ ಎಲ್ಲವೂ ಸಹಾ ದಾರಿ ತಪ್ಪುತ್ತದೆ. ಮಹಿಳೆ ತನ್ನ ಎಲ್ಲಾ ಕೆಲಸಗಳನ್ನು ಯಾವುದೇ ಸ್ವಾರ್ಥ ಇಲ್ಲದೆ ನಿಸ್ವಾರ್ಥವಾಗಿ ಮಾಡುತ್ತಾಳೆ ಎಂದು ಖಂಡಿಮಠ ತಿಳಿಸಿದರು.

ಉದ್ಘಾಟನೆಯನ್ನು ನೇರವೇರಿಸಿದ ಬಸವಮಂಟಪದ ಶರಣೆ ದಾನೇಶ್ವರಿ ಮಾತಾಜಿ ಮಾತನಾಡಿ ಇಂದಿನ ದಿನಮಾನದಲ್ಲಿ ಮಹಿಳೆ ಎಲ್ಲಾ ಕಡೆಯಲ್ಲಿಯೂ ಸಹಾ ಪ್ರಗತಿಯನ್ನು ಸಾಧಿಸಿದ್ದಾಳೆ, ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಿದ್ದಾಳೆ, ಮಹಿಳೆಯರಿಗಾಗಿ ಮೊಟ್ಟ ಮೊದಲ ಬಾರಿಗೆ ಪೀಠವನ್ನು ಸ್ಥಾಪಿಸಿದ್ದು, ಮಾತೆ ಮಹಾದೇವಿಯವರು ಇವರು ಆಂದು ಸ್ಥಾಪಿಸಿದ ಪೀಠ ಇಂದು ಹೆಮ್ಮರವಾಗಿ ಬೆಳೆದಿದೆ. ಲಿಂಗಾಯತರಾದವರು ದೇಹದ ಮೇಲೆ ಲಿಂಗ ಇರಬೇಕು, ರುದ್ರಾಕ್ಷಿಯನ್ನು ಧರಿಸಿರಬೇಕು, ಹಣೆಗೆ ವಿಭೂತಿ ಧಾರಣೆಯಾಗಿರಬೇಕು, ಇದರ ಬದಲು ಬಂಗಾರ ನಮ್ಮ ದೇಹದ ಮೇಲೆ ಇದ್ದರೆ ಯಾರೂ ಬೇಕಾದರೂ ಸಹಾ ಕಳ್ಳತನ ಮಾಡಬಹುದಾಗಿದೆ ನಮ್ಮಲ್ಲಿ ಇವುಗಳು ಇದ್ದರೆ ಯಾರು ಸಹಾ ಇದನ್ನು ಕೇಳುವುದಿಲ್ಲ ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಘಟಕ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶ್ರೀಮತಿ ಆರ್. ಶೈಲಜಬಾಬು ವಹಿಸಿದ್ದರು.ಕಾರ್ಯಕ್ರಮದಲ್ಲಿ ದಾವಣಗೆರೆಯ ಶಾಮನೂರಿನ ಜ್ಞಾನಧಾರೆ ಪುನರುತ್ಥಾನ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ.ಶಶಿಕಲಾ ಸುರೇಶ್‍ರವರನ್ನು ಸನ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕೆಂಚವೀರಪ್ಪ, ಹೊಸದುರ್ಗ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಮಲ್ಲೇಶ್ ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ(ರಿ)ಜಿಲ್ಲಾ ಮಹಿಳಾ ಘಟಕದ ಸದಸ್ಯನಿಯರಿಂದ ಪಾರ್ಥಿಸಿದರೆ, ಉಮಾ ರಮೇಶ್ ಸ್ವಾಗತಿಸಿದರು. ಕೆ.ಟಿ.ಶಾಂತಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು, ಜಯಶೀಲಾ ವಿರಣ್ಣ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ದೇವಕಿ ವಂದಿಸಿದರೆ ಗೀತಾ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು. ಕು.ನಿಖಿತಾ ಸ್ವಾಗತ ನೃತ್ಯವನ್ನು ಮಾಡಿದರು

12ನೇ ಶತಮಾನ chitradurga karanataka karnataka ಚಿತ್ರದುರ್ಗ ಲಿಂಗಾಯತ ಮಹಾಸಭಾ
Follow on Facebook Follow on Instagram
Share. Facebook Twitter WhatsApp Telegram
Previous Articleಉಚಿತ ತರಬೇತಿ ಶೀಬಿರ
Next Article ಹಸಿದವರ ಹೊಟ್ಟೆ ತುಂಬಿಸಿದ ಸಿದ್ದು ನನ್ನ ರಾಮ: ಪ್ರದೀಪ್
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

February 4, 2026

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

February 3, 2026

ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

February 3, 2026
Add A Comment
Leave A Reply Cancel Reply

Advertisement
Demo
Latest Posts

ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್‌* 

ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ

ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ

ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.