Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ಸಾನಿಧ್ಯ ದಲ್ಲಿ ವಾಚನ ವ್ಯಾಖ್ಯಾನ; ಕಿರಾತುರ್ಜನೀಯ
ಮುಖಪುಟ

ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ಸಾನಿಧ್ಯ ದಲ್ಲಿ ವಾಚನ ವ್ಯಾಖ್ಯಾನ; ಕಿರಾತುರ್ಜನೀಯ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿJanuary 28, 2026Updated:January 28, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ಸನ್ನಿಧಿಯಲ್ಲಿ ಗಮಕ ವಾಚನ ವ್ಯಾಖ್ಯಾನ; ಕಿರಾತುರ್ಜನೀಯ
Share
WhatsApp Twitter Facebook Telegram

ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ಸಾನಿಧ್ಯ ದಲ್ಲಿ ಗಮಕ ವಾಚನವ್ಯಾಖ್ಯಾನ; ಕಿರಾತುರ್ಜನೀಯ

ಚಿತ್ರದುರ್ಗ ,ಜ,28, ಭಾರತೀಯರ ನಿತ್ಯ ಜೀವನದಲ್ಲಿ ಏಕತೆ ಅಂಶಗಳು ಢಾಳಾಗಿ ಅನುಭವಕ್ಕೆ ಬರುತ್ತವೆ. ವಿಶೇಷವಾಗಿ ಸಾಹಿತ್ಯ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಲ್ಲಿ ಅನುಭವ ಮತ್ತಷ್ಟು ಸ್ಪಷ್ಟ. ವಿಶೇಷವಾಗಿ ಸಂಗೀತ ಕಲೆಯಲ್ಲಿ ಏಕತೆಯ ಸ್ವರೂಪವು ನನ್ನ ಪ್ರವಾಸಗಳಲ್ಲಿ ವಿಶೇಷವಾಗಿ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯ ಹಾಗೂ ಪ್ರಯಾಗ್ ರಾಜ್ ನ ಕುಂಭಮೇಳದಂತಹ ಮಹಾಜನ ಸಮ್ಮೇಳನಗಳಲ್ಲಿ ಈ ವಿಚಾರ ಸ್ಪಷ್ಟವಾಯಿತು. ಚಿತ್ರದುರ್ಗದ ಗಮಕ ಕಲಾ ಸಂಘದವರು ಏರ್ಪಡಿಸಿದ್ದ ಕುಮಾರವ್ಯಾಸ ಭಾರತದ “ಕಿರಾತುರ್ಜನೀಯ” ಪ್ರಸಂಗದ ವಾಚನ ವ್ಯಾಖ್ಯಾನಗಳನ್ನು ಕೇಳಿದ ಮೇಲೆ ಈ ವಿಚಾರದಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ .ಎಂತಹ ಅದ್ಭುತ !ಎಂದು ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ನುಡಿದರು.
ಶ್ರೀಗಳವರು ಇಲ್ಲಿನ ಗಮಕ ಕಲಾಭಿಮಾನಿಗಳ ಸಂಘದವರು ಏರ್ಪಡಿಸಿದ್ದ ವಾಚನ- ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮೇಲಿನಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ಗಮಕಿ ವಿದೂಷಿ ಚಂಪಕಾ ಶ್ರೀಧರ್ ಸಂಗೀತದ ವಿವಿಧ ರಾಗಗಳನ್ನು ಅನ್ವಯಿಸಿ ಸಮಯೋಚಿತ ಆಲಾಪಗಳ ಸಹಿತ ಕಾವ್ಯ ವಾಚನ ಮಾಡಿದ ಪರಿಗೆ ಸಭಿಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಸಂವಾದಿಯಾಗಿ ಸಂಸ್ಕೃತ ಗ್ರಾಮ ಮತ್ತೂರಿನ ಸಂಸ್ಕೃತ ,ಕನ್ನಡ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪರಿಣಿತ ವಾಗ್ಮಿ, ವ್ಯಾಖ್ಯಾನ ವಿಶಾರದ ,ವಿದ್ವಾನ್ ಅಚ್ಯುತ ಅವಧಾನಿಗಳ ವ್ಯಾಖ್ಯಾನ ಅವರ ಉಚ್ಚಕಂಠಶ್ರೀ ಕಾವ್ಯಲೋಕದ ಸುಳಿವು ,ಸೂಕ್ಷ್ಮಗಳು ಹಾಗೂ ಹಾವಭಾವಗಳು ಮೊದಲಾದವುಗಳಿಂದ ಕೂಡಿದ ವ್ಯಾಖ್ಯಾನ ನಿಜಕ್ಕೂ ಸ್ಮರಣೀಯವಾಗಿತ್ತು.
ಜೆಸಿಆರ್ ಗಣಪತಿ ದೇವಾಲಯದ ಅಭಯ ಆಂಜನೇಯ ಭಜನಾ ಮಂಡಳಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾದ ಸಭೆಯಲ್ಲಿ ಗಮಕ ಸಂಘದ ಅಧ್ಯಕ್ಷೆ ಆರ್. ರಮಾದೇವಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದೂಷಿ ಮೀನಾಕ್ಷಿ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಎಲ್. ಉಮಾ ವಂದನಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿಯವರು ಗಮಕ ಕಲಾಭಿಮಾನಿಗಳು ಭಕ್ತಿಯಿಂದ ಸ್ವಾಗತಿಸಿ ವೇದ ಘೋಷಗಳ ಸಹಿತ ಗಣಪತಿಯ ಸನ್ನಿಧಿಗೆ ಕರೆ ತಂದರು. ಅಲ್ಲಿ ವಿಶೇಷ ಅರ್ಚನೆ ಮಾಡಿ ಮಹಾಮಂಗಳಾರತಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗಮಕ ಕಲಾಭಿಮಾನಿಗಳು, ದೇವಾಲಯದ ಪದಾಧಿಕಾರಿಗಳು ಆದ ಪ್ರೊ. ಬಿ.ಹೆಚ್. ಹರೀಶ್, ಜಿ.ಆರ್. ಕೃಷ್ಣಮೂರ್ತಿ, ಕೆ ವೆಂಕಣ್ಣಾಚಾರ್,ನಿ. ಶಿಕ್ಷಕಿ ಲಲಿತಮ್ಮ, ನಿ. ಪ್ರಾಚಾರ್ಯರಾದ ಆರ್.ಗೌರಮ್ಮ, ಗೌಡ್ರು, ಸಮಾಜಸೇವಕಿ ಗಾಯತ್ರಿ ಶಿವರಾಂ, ನಿವೃತ್ತ ಪ್ರಾಧ್ಯಾಪಕ ರಾಜೀವಲೋಚನ, ಅನಂತ ಕೃಷ್ಣ, ತವಂದಿ ರಾಜಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

chitradurga karanataka ಚಿತ್ರದುರ್ಗ
Follow on Facebook Follow on Instagram
Share. Facebook Twitter WhatsApp Telegram
Previous Articleಫೆ. 22 ರಿಂದ ಫೆ.27 ರವರೆಗೆ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ
Next Article ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

March 24, 2026

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ; ಹೈಕೋರ್ಟ್ ತರಾಟೆ

March 24, 2026

ಪ್ಲೆಕ್ಸ್ ಬೇಡ, ಸೇವೆ ಮಾಡಿ; ಯದುವೀರ್ ಮಾದರಿ ನಡೆ

March 24, 2026
Add A Comment
Leave A Reply Cancel Reply

Advertisement
Latest Posts

ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ

ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ

200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ:

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ; ಹೈಕೋರ್ಟ್ ತರಾಟೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.