ಚಿತ್ರದುರ್ಗ: ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ವೇಳೆ ಸೇರಿದ್ದ ಜನಸ್ತೋಮದಿಂದಾಗಿ ಶೋಭಾಯಾತ್ರೆ ಸಾಗಿದ ರಸ್ತೆಗಳಲ್ಲಿ ಕಸದ ರಾಶಿ ತುಂಬಿತ್ತು. ಆದರೆ ಶೋಭಾಯಾತ್ರೆ ನಡೆದ ಮರುದಿನ ಮುಂಜಾನೆಯೇ ಪೌರಕಾರ್ಮಿಕರು ತಮ್ಮ ಕೆಲಸ ಮಾಡಿ ನಾಲ್ಕೈದು ಗಂಟೆಗಳಲ್ಲಿ ಇಡೀ ನಗರವನ್ನು ಸ್ವಚ್ಛ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶನಿವಾರ ನಡೆದ ಶೋಭಾಯಾತ್ರೆ ವೇಳೆ ಸೇರಿದ್ದ ಜನರಿಂದಾಗಿ ನಗರದ ಪ್ರಮುಖ ರಸ್ತೆ ಇಕ್ಕಿಲುಗಳಲ್ಲಿ ಚಪ್ಪಲಿ, ನೀರಿನ ಬಾಟಲ್, ಪೇಪರ್ ಸೇರಿದಂತೆ ಹಲವು ವಸ್ತುಗಳಿಂದ ತುಂಬಿ ಹೋಗಿದ್ದ ರಸ್ತೆಗಳನ್ನು ಮರು ದಿನವಾದ ಭಾನುವಾರ ಕೆಲವೇ ಗಂಟೆಗಳಲ್ಲಿ ಸ್ವಚ್ಛ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಪೌರಕಾರ್ಮಿಕರ ಜೊತೆಗೆ ಸಂಸದ ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ ಸಹ ಸಾಥ್ ನೀಡಿ, ಸ್ವಚ್ಛತೆಯ ಕಾರ್ಯ ಮುಗಿದ ಬಳಿಕ ಪೌರಕಾರ್ಮಿಕರ ಜೊತೆ ಮಾತನಾಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







