ಚಿತ್ರದುರ್ಗ ನಗರದ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆಶುಕ್ರವಾರ ಆಯ್ಕೆ ಪ್ರತ್ರಿಯೆ ನಡೆದಿದ್ದು, ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ ಎಂದುಚುನಾವಣಾಧಿಕಾರಿಗಳಾದ ಸಜೀವರಾಂ ತಿಳಿಸಿದ್ದಾರೆ.ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಕಳೆದ 22 ರಂದು ಚುನಾವಣೆ ನಡೆದಿದ್ದು 12 ಸ್ಥಾನಗಳಲ್ಲಿ
ಮೂರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಸ್ಥಾನಗಳಿಗೆ 19 ಜನ
ಸ್ಫರ್ಧಾ ಕಣದಲ್ಲಿದ್ದರು ಅಂತಿಮವಾಗಿ ಮತದಾರರು ಎ.ಈಶ್ವರಪ್ಪ ಮತ್ತು ನಿಶಾನಿ ಜಯ್ಯಣ್ಣ ರವರು ಗಂಪಿನ ಸದಸ್ಯರನ್ನು ಆಯ್ಕೆಮಾಡಿದರು.
ಇಂದು ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಕಚೇರಿಯಲ್ಲಿ ನಡೆದ ನಿರ್ದೆಶಕರ ಸಭೆಯಲ್ಲಿ ಅಧ್ಯಕ್ಷ-ಉಪಾಧಕ್ಷ ಸ್ಥಾನಕ್ಕೆ ಅವಿರೋದ ಆಯ್ಕೆ ನಡೆದಿದ್ದು ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕರುಗಳಾದ ನಿಶಾನಿ ಜಯ್ಯಣ್ಣ,ಎಸ್.ತಿಮ್ಮಪ್ಪ, ಸೂರ್ಯ ಪ್ರಕಾಶ್, ಮಲ್ಲಿಕಾರ್ಜನ್, ಲಕ್ಷ್ಮೀದೇವಿ, ಪಾಪೇಶ್, ಶೇಖಮ್ಮ, ಮೂರ್ತಿ, ನರಸಿಂಗನ್ ಡಿ, ಏಕಾಂತಪ್ಪಭಾಗವಹಿಸಿದ್ದರು.ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ರಾಮಕೃಷ್ಣಪ್ಪಭಾಗವಹಿಸಿದ್ದರು. ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾದ ಎ,ಈಶ್ವರಪ್ಪಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಕ್ಕೆ ಅಭಿಮಾನಿಗಳು ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚುವುದರ ಮೂಲಕತಮ್ಮ ನಾಯಕ ಗೆಲುವು ಸಾಧಿಸಿದ್ದಕ್ಕೆ ಸಂತಸವನ್ನು ಹಂಚಿಕೊಂಡರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



