ಚಿತ್ರದುರ್ಗ: ಕ್ಷೇತ್ರದಲ್ಲಿ ಯಾವುದೇ ಅನಾಹುತ ಆದರೆ ಮೊದಲು ನಾನು ಇರುತ್ತೇನೆ ಹಾಗೂ ನನ್ನ ಟೀಮನ ಸದಸ್ಯರು ಜೊತೆಗಿರುತ್ತಾರೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.ತಾಲೂಕಿನ ಕಕ್ಕೇರು ಹೊಸಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ದಾಳಿಗೆ ಒಳಗಾದ ಯುವಕ ಸಂದೀಪ ಅವರ ಮನೆಗೆ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.ಅನೇಹಾಳ್ ಗ್ರಾಮಗಳ ಸುತ್ತಮುತ್ತ ಸಾಕಷ್ಟು ಕಾಡು ಇರುವುದರಿಂದ ರೈತರ ಎಚ್ಚರಿಕೆಯಿಂದ ಇರಬೇಕಿದೆ, ಈಗಾಗಲೇ ಸಾಕಷ್ಟು ಚಿರತೆಗಳು ಓಡಾಡುತ್ತಿವೆ ಎಂಬುವುದರ ಬಗ್ಗೆ ವರದಿಗಳಾಗಿವೆ ಜಮೀನು, ತೋಟಗಳಿಗೆ ಹೋಗುವಂತಹ ರೈತಾಪಿ ಬಾಂಧವರು ಜಾಗೃತಯಿಂದ ಓಡಾಡಬೇಕಿದೆ ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಹೊಲ ಮತ್ತು ತೋಟಗಳಿಗೆ ಹೋಗಬಾರದೆಂದು ತಿಳಿಸಿದರು.
ಕಕ್ಕೇರು, ಅನ್ನೇಹಾಳ್, ಮಹದೇವನಕಟ್ಟೆ, ಗ್ರಾಮಗಳಲ್ಲಿ ಈಗಾಗಲೇ ಚಿರತೆಗಳ ಓಡಾಟ ಹೆಚ್ಚಾಗಿದೆ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇನೆ, ಚಿರತೆಗಳು ಓಡಾಟ ಕಂಡಲ್ಲಿ ಬೋನ್ ಗಳನ್ನು ಇಡಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದರು.ಕಕ್ಕೇರು ಹೊಸಹಟ್ಟಿ ಗ್ರಾಮದ ಹೊರವಲಯದಲ್ಲಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನನ್ ಇಟ್ಟಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಅನ್ನೇಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಮ್ಮ ಅಂಜಿನಪ್ಪ, ಮಾಜಿ ಅಧ್ಯಕ್ಷರಾದ ನಿರಂಜನ್ ಮೂರ್ತಿ, ಮಂಜಪ್ಪ, ನಾಗರಾಜ್, ರಾಜಣ್ಣ, ಮಂಜುನಾಥ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



