ಚಿತ್ರದುರ್ಗ: ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್ಟಿಯ ಪ್ರಮಾಣದಲ್ಲಿ ಕಡಿತ ಮಾಡಿದೆ ಇದರಿಂದ ಹಲವಾರು ಜನರಿಗೆ ಉಪಯೋಗವಾಗಿದೆ,
ಇದರ ಉಪಯೋಗ ಜನತೆಗೆ ದೊರಕಿದೆ ಇಲ್ಲವೆ ಎಂಬುದನ್ನು ತಿಳಿಯುವ ಸಲುವಾಗಿ ಸಂಸದ ಗೋವಿಂದ ಕಾರಜೋಳ,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕಾರಿ ಸಮಿತಿ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಸಂಚಾರ ಮಾಡುವುದರ ಮೂಲಕ ಮಾಹಿತಿಯನ್ನು ಸಂಗ್ರಹ ಮಾಡಿ ಜನತೆಗೆ ಜಿಎಸ್ ಟಿ ಇಳಿಕೆಯ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.ನಗರದ ಸಂತೆ ಹೊಂಡದ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ, ಪಕ್ಕದಲ್ಲಿನ ವಿವಿಧ ರೀತಿಯ ಅಂಗಡಿ, ಸಾಮಾನ್ಯ ಜನತೆಯನ್ನು ಭೇಟಿ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ಜಿಎಸ್.ಟಿ.ತೆರಿಗೆ ಕಡಿಮೆ ಮಾಡಿರುವ ಬಗ್ಗೆ ಅವರನ್ನು ಮಾತನಾಡಿಸಲಾಯಿತು.ಜಿಎಸ್ಟಿ ಕಡಿಮೆ ಮಾಡುವುದಕ್ಕೆ ಮುನ್ನ ತಾವು ಮಾರಾಟ ಮಾಡುತ್ತಿದ್ದ ದರ ಹಾಗೂ ಈಗ ಮಾರಾಟ ಮಾಡುತ್ತಿದ್ದ ದರದ ಬಗ್ಗೆ
ಸಂಸದರು ಪರಾಮರ್ಶೆ ಮಾಡಿ ಮಾರಾಟಗಾರರಿಗೆ ತಿಳಿ ಹೇಳಲಾಯಿತು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಕೇಂದ್ರ ಸರ್ಕಾರ ಜಿಎಸ್ಟಿ ಇಳಿಕೆ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರ ಸಾಮಾನ್ಯ ಜನತೆಗೆ, ರೈತರಿಗೆ ಹಾಗೂ ಬಡವರಿಗೆ ಆಹಾರ ಪ್ರದಾರ್ಥ, ದಿನ ನಿತ್ಯ ಬಳಕೆಯಾಗುವ ವಸ್ತುಗಳ ಬೆಲೆಗಳು ಕಡಿಮೆಯಾಗಬೇಕೆಂದು ಆ.15ರ ಭಾಷಣದಲ್ಲಿ ತಿಳಿಸಿದ್ದರು ದೀಪಾವಳಿಗೆ ಇದರ ದರ ಕಡಿಮೆಯಾಗಲಿದೆ
ಎಂದಿದ್ದರೂ ಆದರೆ ನವರಾತ್ರಿಗೆ ಕೇಂದ್ರ ಸರ್ಕಾರ ಇದರ ದರವನ್ನು ಕಡಿಮೆ ಮಾಡುವುದರ ಮೂಲಕ ಸಾಮಾನ್ಯ ಜನತೆಗೆ
ಹೊರೆಯಾ ಗುತ್ತಿದ್ದನ್ನು ತಪ್ಪಿಸಿದ್ದಾರೆ.ಶೇ. 28 ರಷ್ಟಿದ್ದನ್ನು 18ಕ್ಕೆ 12 ಇದಿದ್ದನ್ನು 5 ರಷ್ಟು ಮಾಡಿದೆ, ಇದರಿಂದ ಜನತೆಗೆ 8 ರಿಂದ 10
ಸಾವಿರ ರೂ.ಗಳ ಉಳಿತಾಯವಾಗಲಿದೆ. ಇದರಿಂದ ಬಡವರು ನೆಮ್ಮದಿಯಾಗಿ ಜೀವನ ಸಾಗಿಸಲು ಕಾರಣವಾಗಿದೆ. ಈಗ ಮೂರನೆ
ಹಂತದಲ್ಲಿಯೂ ಸಹಾ ಜಿ.ಎಸ್.ಟಿ.ಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಆಲೋಚನೆಯನ್ನು ನಡೆಸುತ್ತಿದೆ ಕೆಲವೇ ದಿನಗಳಲ್ಲಿ
ಜಿ.ಎಸ್.ಟಿ. ಮೂರನೇ ಹಂತವೂ ಸಹಾ ಬರಲಿದೆ ಇದರಿಂದ ಆಹಾರ ಪದಾರ್ಥಗಳು ಜನರು ಉಪಯೋಗ ಮಾಡುವ ವಸ್ತುಗಳ ಬೆಲೆ
ಕಡಿಮೆ ಯಾಗಲಿದೆ ಇದರಿಂದ ಸಾಮಾನ್ಯ ಜನತೆ ಹಾಗೂ ವ್ಯಾಪಾರಸ್ಥರಿಗೂ ಸಹಾ ಉಪಯೋಗವಾಗಲಿದೆ ಖರೀದಿ ಮಾಡುವವರ
ಶಕ್ತಿ ಹೆಚ್ಚಾಗಲಿದೆ ಎಂದರು.
ಈ ಮುಂಚೆ ಜಿಎಸ್ಟಿಯಿಂದ ಜನತೆಗೆ ಹೊರೆಯಾಗಿತ್ತು ಅದರ ಭಾರವನ್ನು ಕೇಂದ್ರ ಸರ್ಕಾರ ಈಗ ಕಡಿಮೆ ಮಾಡಿದೆ, ಜಿಎಸ್.ಟಿ.
ಪ್ರಮಾಣ ಇಳಿಕೆಯಿಂದ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ, ಜನತೆ ಬಳಕೆ ಮಾಡುವ ಸಾಮಾನ್ಯ ವಸ್ತುವಿನಿಂದ ಹಿಡಿದು ಆವರು
ಬಳಸುವ ಕಾರು, ಬೈಕ್, ಟ್ರಾಕ್ಟ್ರರ್ ವಿವಿಧ ರೋಗಗಳಿಗೆ ಔಷಧಿ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಇಳಿಕೆಯಾಗಿದೆ ಎಂದು
ಗೋವಿಂದ ಕಾರಜೋಳ ತಿಳಿಸಿದರು. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಕಡಿಮೆ ಮಾಡಿರುವ ಜಿಎಸ್.ಟಿ. ಪ್ರಮಾಣದಿಂದ ಸುಮಾರು 2.50 ಲಕ್ಷ ಕೋಟಿ ತೆರಿಗೆಯನ್ನು ಕಡಿಮೆ ಮಾಡಿ ಜನರಿಗೆ ತೆರಿಗೆಯನ್ನು ಜನರಿಗೆ ನೀಡಿದ್ದಾರೆ. ಈ ತೆರಿಗೆ ಕಡಿಮೆಯಿಂದ ಹಲವಾರು ಜನರಿಗೆ ಅನುಕೂಲವಾಗಿದೆ, ಅದರಲ್ಲಿ ರೈತರಿಗೆ ಇದರಿಂದ ಬಹಳಷ್ಟು ಉಒಯೋಗವಾಗಿದೆ, ಅವರು ಬಳಸುವ ವಾಹನಗಳ ಚಕ್ರದ
ಟೈರ್ ಬೆಲೆ ಹಾಗೂ ಟ್ರಾಕ್ಟ್ರರ್ ಬೆಲೆಯಲ್ಲಿಯೂ ಸಹಾ ಇಳಿಕೆಯಾಗಿದೆ, ಸ್ಕೂಟರ್ ಸೈಕಲ್ ಬಟ್ಟೆಗಳ ಮೇಲಿನೆ ಜಿಎಸ್.ಟಿ.ಯ
ದರವನ್ನು ಕಡಿಮೆ ಮಾಡಿದ್ದರಿಂದ ಎಲ್ಲರಿಗೂ ಸಹಾ ಅನುಕೂಲವಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧಾಪುರದ ಸುರೇಶ್, ಸಂಪತ್ ಕುಮಾರ್, ಖಂಜಾಚಿ ಮಾಧುರಿಗೀರಿಶ್, ಮುಖಂಡರಾದ ಡಾ.ಸಿದ್ದಾರ್ಥ ಗುಡಾರ್ಪಿ ಮಾಜಿ ಅಧ್ಯಕ್ಷರಾದ ಎ.ಮುರಳಿ, ನಗರಸಭಾ ಸದಸ್ಯರಾದ ಸುರೇಶ್, ಶ್ರೀನಿವಾಸ್ ಮಾಜಿ ಸದಸ್ಯರಾದ ಗರಡಿ ಪ್ರಕಾಶ್, ರವಿಶಂಕರ್, ನಗರಾಧ್ಯಕ್ಷರಾದ ಲೋಕೇಶ್, ಗ್ರಾಮಾಂತರ ಅಧ್ಯಕ್ಷರಾದ
ಕೆ.ನಾಗರಾಜ್ ಉಪ್ಪೇರಿಗೆನಹಳ್ಳಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಕವನ, ಪ್ರಭು, ರಾಮಕೃಷ್ಣ
ಯಾದವ್, ಪಲ್ಲವಿ ಪ್ರಸನ್ನ, ಪ್ರದೀಫ್, ಮುರಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







