ಚಿತ್ರದುರ್ಗ: ಬಾಲ್ಯವಿವಾಹ ಪದ್ಧತಿ ವಿರುದ್ಧ ಧೈರ್ಯದಿಂದ ಧ್ವನಿ ಎತ್ತುವ ಮೂಲಕ ನಿರ್ಮೂಲನೆಗೆ ಬಾಲಕಿಯರು ಮುಂದಾಗಬೇಕಿದೆ ಎಂದು ಆಶ್ರಿತ ಸಂಸ್ಥೆ ಜಿಲ್ಲಾ ಸಂಯೋಜಕ ಹಾಗೂ ಗಾಯಕ ಡಿ.ಒ. ಮುರಾರ್ಜಿ ತಿಳಿಸಿದರು.ನಗರದ ಆಶ್ರಿತ ಸಂಸ್ಥೆ ಕಚೇರಿಯಲ್ಲಿ ಕರೆದಿದ್ದ ಕಿಶೋರಿಯರ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿ,ಕೆಲ ಪೋಷಕರು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಚಿಕ್ಕ ವಯಸ್ಸಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ವಿಮುಖರಾಗುವ ಯೋಚನೆಯಲ್ಲಿರುತ್ತಾರೆ ಇಂತಹ ಮನಸ್ಥಿತಿಗಳಿಂದ ಪೋಷಕರು ಹೊರಬರಬೇಕು ಹಾಗೇಯೇ ಇಂತಹ ಘಟನೆಗಳು ಮನೆಯಲ್ಲಿ ನಡೆಸುವಾಗ ತಮ್ಮ ಗೆಳತಿಯರಿಗೆ, ಶಾಲಾ ಶಿಕ್ಷಕರಿಗೆ ಅಥವಾ ಸಹಾಯವಾಣಿ ಸಂಖ್ಯೆಗೆ ವಿಷಯ ಮುಟ್ಟಿಸಲು ಧೈರ್ಯ ತೋರಬೇಕೆಂದು ತಿಳಿಸಿದರು.
ಆಶ್ರಿತ ಸಂಸ್ಥೆ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜತೆಗೆ ಕಾರ್ಯ ನಿರ್ವಹಿಸುತ್ತಿದೆ ಜಿಲ್ಲಾಡಳಿತದ ಸಂಕಲ್ಪಕ್ಕೆ ಪೂರಕವಾಗಿ ನಮ್ಮ ಕಾರ್ಯ ಕೆಲಸಗಳು ನಡೆಯುತ್ತಿವೆ ಈ ನಿಟ್ಟಿನಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳು ಯಾವುದೇ ಹಿಂಜರಿಕೆ ತೋರದೆ ಇಲಾಖೆಯ ಅಧಿಕಾರಿಗಳಿಗೆ ಅಥವಾ ನಮ್ಮ ಸಂಸ್ಥೆಯ ಸಿಬ್ಬಂದಿ ಕಾರ್ಯಕರ್ತ ಜತೆಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡರೆ ಅದಕ್ಕೆ ಪರಿಹಾರ ಮತ್ತು ಬೆಂಬಲ ನೀಡಲು ಸಹಕಾರಿಯಾಗುವುದು ಎಂದರು.ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಹಾಯಕಿ ಅನಿತ ಲಕ್ಷ್ಮಿ ಮಾತನಾಡಿ ಹದಿ ಹರೆಯದ ಹೆಣ್ಣು ಮಕ್ಕಳು ಹುಡುಗರ ಆಕರ್ಷಣೆಗೆ ಒಳಗಾಗಿ ಚಿಕ್ಕ ವಯಸ್ಸಿಗೆ ಪ್ರೀತಿ ಪ್ರೇಮದ ವ್ಯಾಮೋಹಕ್ಕೆ ಬಿದ್ದು ಸುಂದರ ಜೀವನವನ್ನು ನಾಶಪಡಿಸಿಕೊಳ್ಳತ್ತಾರೆ ಯಾವುದೇ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಂದೆ ತಾಯಿ ಮತ್ತು ತಮ್ಮ ಕುಟುಂಬದ ಬಗ್ಗೆ ಯಾವಾಗಲೂ ಗೌರವ ಇಟ್ಟುಕೊಂಡು ವ್ಯಾಸಂಗದ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.ಗಾಯಕ ಎಂ.ಕೆ. ಹರೀಶ್ ಮಾತನಾಡಿ ಹೆಣ್ಣು ಸಂತತಿ ತುಂಬಾ ಕಡಿಮೆಯಾಗುತ್ತಿದೆ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಮತ್ತು ಸಮಾಜ ಕಾಳಜಿವಹಿಸಬೇಕೆಂದು ತಿಳಿಸಿದರು.ಯುವ ಪ್ರವರ್ತಕಿ ಸುಷ್ಮ, ಆಶ್ರಿತ ಸಂಸ್ಥೆ ಕಾರ್ಯಕರ್ತರಾದ ಭಟ್ರಹಳ್ಳಿ ಧನಂಜಯ, ಹರ್ಷವರ್ಧನ, ದೇವಿರಮ್ಮ, ಮಮತ ಇನ್ನಿತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







