ಚಿತ್ರದುರ್ಗ: ಸರ್ಕಾರ ಜನತೆಯನ್ನು ಸ್ವಾವಲಂಭಿ ಮಾಡಲು ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದೆ, ಇದಕ್ಕೆ ತಕ್ಕಂತೆ ಜನತೆಯೂ
ಸಹ ಕೈಗಾರಿಕೆಯನ್ನು ಪ್ರಾರಂಭ ಮಾಡಲು ಆಸಕ್ತರಾಗಿದ್ದಾರೆ ಆದರೆ ಕೈಗಾರಿಕೆಯನ್ನು ಪ್ರಾರಂಭ ಮಾಡುವುದಕ್ಕೆ ಬೇಕಾದ ಪರವಾನಿಗೆಯನ್ನು ಪಡೆಯಲು ಹರ ಸಾಹಸವನ್ನು ಮಾಡಬೇಕಾದ ಪರಿಸ್ಥಿತಿ ಇಂದಿನ ದಿನದಲ್ಲಿ ನಿರ್ಮಾಣವಾಗಿದೆ ಎಂದು ಚೇಂಬರ್ ಅಫ್ ಕಾಮರ್ಸ್ನ ಅಧ್ಯಕ್ಷ ಎನ್.ಸತೀಶ್ ತಿಳಿಸಿದರು.ನಗರದ ಖಾಸಗಿ ಹೋಟೇಲ್ನಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆ, ಕೆ.ಸಿ.ಟಿ.ಯು. ಟೆಕ್ಸಾಕ್ ಬೆಂಗಳೂರು ಹಾಗೂ
ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್. ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು
ಮತ್ತು ವೇಗಗೊಳಿಸುವುದು ಯೋಜನೆಯಡಿ ಟಿ ಆರ್ಇಡಿ ಎಸ್ ಯೋಜನೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬ್ಯಾಂಕ್ಗಳು ಕೈಗಾರಿಕೆಯನ್ನು ಆರಂಭಿಸಲು ಸಾಲವನ್ನು ನೀಡಲು ಮುಂದೆ ಬರುತ್ತಿವೆ, ಇದೇ ರೀತಿ ಕೈಗಾರಿಕೆಯನ್ನು ಮಾಡಲು ಸಹಾ ಜನತೆ ಮುಂದೆ ಬಂದಿದ್ದಾರೆ ಆದರೆ ಸಮಸ್ಯೆ ಏನೆಂದರೆ ಯಾವ ಕೈಗಾರಿಕೆಯನ್ನು ಮಾಡಬೇಕು ಎನ್ನುವುದು ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ ನಮ್ಮ ಜನರಿಗೆ ಏನು ಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಯುವ ಕೈಗಾರಿಕೆ ಉದ್ಯಮಿಗಳಿಗೆ ನೀಡಬೇಕಿದೆ ಎಂದರು.ಇಂದಿನ ದಿನಮಾನದಲ್ಲಿ ಕೈಗಾರಿಕೆಯನ್ನು ಪ್ರಾರಂಭ ಮಾಡಬೇಕೆಂದು ಹಲವಾರು ಜನತೆ ಮುಂದೆ ಬರುತ್ತಾರೆ ಅದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಾರೆ ಆದರೆ ಸರ್ಕಾರದ ವಿವಿಧ ಇಲಾಖೆ ವತಿಯಿಂದ ಪರವಾನಿಗೆ ಪತ್ರವನ್ನು ಪಡೆಯಬೇಕಾದರೆ
ಯಾವ ಕೈಗಾರಿಕೆಯನ್ನು ಮಾಡುವುದು ಬೇಡ ಎನ್ನುವಷ್ಟು ಬೇಸರ ಮೂಡುತ್ತದೆ ಒಂದೊಂದು ಇಲಾಖೆಯಿಂದ ಪರವಾನಿಗೆ
ಪತ್ರವನ್ನು ಪಡೆಯುವಾಗ ತಿಂಗಳುಗಳು ಕಳೆದ ಹೋಗುತ್ತವೆ ಈ ಸಮಯದಲ್ಲಿ ಕೈಗಾರಿಕೆಯನ್ನು ಆರಂಭ ಮಾಡುವ ಉತ್ಸಾಹ
ಇಲ್ಲವಾಗುತ್ತದೆ, ಸರ್ಕಾರ ಇದರ ಬಗ್ಗೆ ಪರಿಶೀಲನೆಯನ್ನು ಮಾಡಬೇಕಿದೆ ಕೈಗಾರಿಕೆಯನ್ನು ಪ್ರಾರಂಭ ಮಾಡುವುದಕ್ಕೆ ಅಗತ್ಯವಾಗಿ
ಬೇಕಾದ ಪರವಾನಿಗೆಯನ್ನು ಪಡೆಯಲು ಕಾನೂನು ಸರಳ ಮಾಡುವುದರ ಮೂಲಕ ಕೈಗಾರಿಕೆಯನ್ನು ಪ್ರಾರಂಭ ಮಾಡುವವರಿಗೆ
ಉತ್ತೇಜನವನ್ನು ನೀಡಬೇಕಿದೆ ಎಂದು ಸತೀಶ್ ತಿಳಿಸಿದರು.
ಕೈಗಾರಿಕೆಯನ್ನು ಪ್ರಾರಂಭ ಮಾಡಿದರೆ ಅದಕ್ಕೆ ಕೌಶಲ್ಯವನ್ನು ಹೊಂದಿದ ವ್ಯಕ್ತಿಗಳು ಸಿಗುವುದು ಕಡಿಮೆಯಾಗುತ್ತದೆ, ನಮ್ಮಲ್ಲಿ ಕೆಲಸ
ಖಾಲಿ ಇದ್ದರೂ ಸಹಾ ಕೆಲಸಕ್ಕೆ ಬರುವವರ ಪ್ರಮಾಣ ಕಡಿಮೆ ಯಾಗುತ್ತಿದೆ ಇದರಿಂದ ಕೆಲಸಗಾರರಲ್ಲಿದೆ ಕೈಗಾರಿಕೆಯನ್ನು
ನಿಲ್ಲಿಸುವಂತ ವಾತಾವರಣ ನಿರ್ಮಾಣ ವಾಗುತ್ತಿದೆ. ಹೊರ ರಾಜ್ಯದಿಂದ ಕೆಲಸಗಾರರನ್ನು ಕರೆಯಿಸಿ ಕೆಲಸವನ್ನು ಮಾಡಿಸುವಂತ
ಪರಿಸ್ಥಿತಿ ನಿರ್ಮಾಣವಾಗಿದೆ.ಚಿತ್ರದುರ್ಗ ನಗರದಲ್ಲಿ ಪ್ರವಾಸ್ಯೋದ್ಯಮವನ್ನು ಮಾಡಲು ಹೇರಳವಾದ ಅವಕಾಶ ಇದೆ ಅದರೆ ಇದನ್ನು ಸರ್ಕಾರವಾಗಲಿ, ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ, ಇದರ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು ಆದರೆ ಇದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಈ ಹಿನ್ನಲೆಯಲ್ಲಿ ಚಳ್ಳಕೆರೆಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಪ್ರವಾಸದ್ಯೋಮವನ್ನು ಮಡಲು ಮುಂದಾಗಿದ್ದೇವೆ ಎಂದು ಹೇಳಿದರು. ಕೆ.ಎಸ್.ಎಫ್.ಸಿಯ ವ್ಯವಸ್ಥಾಪಕರಾದ ಆರ್,ಬಾಬು ಮಾತನಾಡಿ, ಕಳೆದ 30 ವರ್ಷದ ಹಿಂದೆ ಕೈಗಾರಿಕ್ಯೋದ್ಯಮಿಗಳಿಗ ನಮ್ಮ
ಕಡೆಯಿಂದ ಮಾತ್ರ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಅರ್ಥಿಕವಾಗಿ ಸಹಾಯವನ್ನು ಮಾಡಲಾಗುತ್ತಿತ್ತು ಆದರೆ ಈಗ ಎಲ್ಲಾ
ಬ್ಯಾಂಕ್ ಗಳು ಸಹಾ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಹಣದ ಸಹಾಯವನ್ನು ಮಾಡಲು ಮುಂದಾಗಿವೆ ಎಂದ ಅವರು ನಮ್ಮಕಡೆಯಿಂದ ಸಾಮಾನ್ಯ, ಮಹಿಳೆ, ಎಸ್.ಸಿ. ಎಸ.ಟಿ.ಯವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ಸರ್ಕಾರ ಕೈಗಾರಿಕೆಯನ್ನು ಪ್ರಾರಂಭ ಮಾಡುವವರಿಗೆ ಉತ್ತೇಜನ ನೀಡುವ ಸಲುವಾಗಿ ನೀವು ಪಡೆಯುವ ಸಾಲದ ಮೇಲೆ ಸಹಾಯಧನವನ್ನು ನೀಡುತ್ತಿದೆ ಇದರ ಪ್ರಯೋಜನವನ್ನು ಪಡೆಯಬೇಕಿದೆ, 5 ಲಕ್ಷದಿಂದ 10 ಕೋಟಿಯವರೆಗೂ ಸಾಲವನ್ನು ನಮ್ಮ ಸಂಸ್ಥೆಯವತಿಯಿಂದ ನೀಡಲಾಗುತ್ತಿದೆ, ಕಳೆದ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 25 ಕೋಟಿ ಸಾಲವನ್ನು ನೀಡಲಾಗಿತ್ತು, ಈ ಬಾರಿ 50 ಕೋಟಿ ಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿದ್ದು ಈಗಾಗಲೇ 20 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದ್ದು ಮುಂದಿನ ಸಮಯದಲ್ಲಿ ಉಳಿದ 30 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್ನ ವ್ಯವಸ್ಥಾಪಕರಾದ ಎಂ.ರಾಘವೇಂದ್ರರವರು ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಮಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿ ಅದರ ಪ್ರಯೋಜವನ್ನು ಪಡೆಯುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಟೆಕ್ಸಾಕ್ನ ಸಿಇಓ ಹಾಗೂ ಮುಖ್ಯ ಸಲಹೆಗಾರರಾದ ಸಿದ್ದರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ.ಆನಂದ್, ಉಪ ನಿರ್ದೇಶಕರಾದ ಬಿ.ಕೆ.ಮಂಜುನಾಥ್ ಸ್ವಾಮಿ ಸೇರಿದಂತೆ ಇಲಾಖೆಯ ಅಧಿಕಾರಿಗಳು
ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







