ಚಿತ್ರದುರ್ಗ:ಕೌಟುಂಬಿಕ ಹಿನ್ನೆಲೆ ಮೆದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಯಿಂದ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಮಾನಸಿಕ ರೋಗ ಯಾರಿಗಾದರೂ ಬರಬಹುದು. ಮೂಡನಂಬಿಕೆ ಬಿಟ್ಟು ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯಿರಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಇಲ್ಲಿನ ನೆಹರು ನಗರ ಅಂಗನವಾಡಿ ಸಿ ಕೇಂದ್ರದಲ್ಲಿ ಬುಧವಾರ ಸ್ವಸ್ತನಾರಿ ಸಶಕ್ತ ಪರಿವಾರ ಅಭಿಯಾನದಡಿ ಆಯೋಜಿಸಿದ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಲೆಗೆ ಪೆಟ್ಟು ಆದಾಗ ಆಲೋಚನೆಯಗಳಲ್ಲಿ ಬದಲಾವಣೆ ತೀವ್ರತರ ಸಂಕಷ್ಟಕ್ಕೆ ಒಳಗಾದಾಗ ಮನೋವೈದ್ಯದಲ್ಲಿ ಪರೀಕ್ಷಿಸಿಕೊಂಡು, ಚಿಕಿತ್ಸೆ ಪಡೆದು ರೋಗ ಹತೋಟಿಗೆ ತರಬಹುದು ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ದೈಹಿಕ ಕ್ರಿಯೆಗಳು ಏರುಪೇರು ಆದಾಗ ಅಸಹಜ ಹಾಗೂ ವಿಚಿತ್ರ ಅನುಭವಗಳು ಕಂಡು ಬಂದರೆ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜೀವನಶೈಲಿ ಬದಲಾವಣೆ ಮಾಡಿಕೊಂಡು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಯೋಗ, ಧ್ಯಾನ,ಇವುಗಳ ಮುಖಾಂತರ ಮನಸ್ಸಿಗೆ ನೆಮ್ಮದಿ ತಂದುಕೊಂಡು ಮಾನಸಿಕ ಕಾಯಿಲೆಯಿಂದ ದೂರ ಇರಬಹುದೆಂದು ಜಾಗೃತಿ ಮೂಡಿಸಿದ ಅವರು, ಹೆಚ್ಚಿನ ಮಾಹಿತಿಗೆ ಟೆಲಿ ಮಾನಸ 14416 ನಂಬರ್ಗೆ ಕರೆ ಮಾಡಿರಿ ಎಂದರು.ಕಾರ್ಯಕ್ರಮದಲ್ಲಿ ನೆಹರುನಗರ ಆರೋಗ್ಯ ಕೇಂದ್ರದ ಡಾ.ಸೈಯದ್ ಬಿಲಾಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹನುಮಂತಪ್ಪ, ಪ್ರವೀಣ್ ಕುಮಾರ್, ರೇಖಾ, ಆಶಾ ಕಾರ್ಯಕರ್ತೆರಾದ ವಾಣಿ, ದ್ಯಾಮಕ್ಕ, ಅತ್ತರ್ ಫಾತಿಮಾ, ಅಂಗನವಾಡಿ ಕಾರ್ಯಕರ್ತೆಯರಾದ ಅನ್ನಪೂರ್ಣ, ಸಹಾಯಕಿ ನೇತ್ರಾವತಿ ಸೇರಿದಂತೆ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







