ಚಿತ್ರದುರ್ಗ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೆ ನಡೆಯುವ ಸೇವಾ ಪಾಕ್ಷಕಿ
ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇಂದು ನಗರದ ಬಂಜಾರ ಸಮುದಾಯ ಭವನದಲ್ಲಿ ಬಿಜೆಪಿ ನಗರ ಮಂಡಲದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ಜಿಲ್ಲಾ ಕೇಂದ್ರಗಳಲ್ಲಿ ಹಂತ 1ರಲ್ಲಿ ಸೆ. 17 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಇದರಲ್ಲಿ ಸುಮಾರು 25
ಯೂನಿಟ್ಗಳಷ್ಟು ರಕ್ತವನ್ನು ಪಡೆಯಲಾಯಿತು. ಇದರಲ್ಲಿ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಸತೀಶ್ಕುಮಾರ್, ಬಿಜೆಪಿ
ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ಕುಮಾರ್ ತಿಮ್ಮಯ್ಯ, ಪ್ರದೀಪ್ ಬಸವರಾಜು, ಸಿದ್ದೇಶ್, ರಮೇಶ್ ಸೇರಿದಂತೆ ಸುಮಾರು
25 ಜನ ತಮ್ಮ ರಕ್ತವನ್ನು ದಾನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ಬಾಮಿ, ಮಾನವನಿಗೆ ರಕ್ತ ಬಹಳಷ್ಟು ಅಗತ್ಯವಾಗಿದೆ.ರಕ್ತವನ್ನು ಕೃತಕವಾಗಿ ನಿರ್ಮಾಣ ಮಾಡಲು ಆಗುವುದಿಲ್ಲ, ಅಲ್ಲದೆ ಯಾವುದೇ ಪ್ರಾಣಿಗಳಿಂದಲೂ ಸಹಾ ಪಡಯಲು ಸಾಧ್ಯವಿಲ್ಲ
ಮಾನವನ ರಕ್ತವನ್ನು ಮಾತ್ರ ಮಾನವನಿಗೆ ನೀಡಲು ಸಾಧ್ಯವಿದೆ ಈ ಹಿನ್ನಲೆಯಲ್ಲಿ ನಾವುಗಳು ನಮ್ಮ ಮನೆಯಲ್ಲಿ ವಿಶೇಷ
ದಿನಗಳಂದು ರಕ್ತವನ್ನು ದಾನ ಮಾಡುವುದರ ಮೂಲಕ ಬೇರೆಯವರ ಪ್ರಾಣಕ್ಕೆ ಸಹಾಯವಾಗಬೇಕಿದೆ ಮಾನವನಿಗೆ ಕೆಲವೊಂದು
ಸಮಯದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಈ ಹಿನ್ನಲೆಯಲ್ಲಿ ಅಗತ್ಯ ಬಿದ್ಧಾಗ ಮಾತ್ರ ರಕ್ತವನ್ನು ದಾನ ಮಾಡದೇ ನಿಮಗೆ
ಅನುಗುಣವಾಗಿ ರಕ್ತವನ್ನು ದಾನ ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸಿದ್ಧಾಪುರ ಸುರೇಶ್,ಮಾಜಿ ಅಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತೆರ ಅಧ್ಯಕ್ಷ ನಾಗರಾಜ್, ವಕ್ತಾರ ನಾಗರಾಜ್ ಬೇದ್ರೇ, ಮಾಜಿನಗರಾಧ್ಯಕ್ಷ ಚಾಲುಕ್ಯ ನವೀನ್, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಲೀಮಾವತಿ ಶಶಿಧರ್, ಎಸ್.ಸಿ. ಮೋರ್ಚಾ ಅಧ್ಯಕ್ಷ
ತಿಪ್ಪೇಸ್ವಾಮಿ, ರಜನಿ, ಕವನ, ಬಸಮ್ಮ, ಶಾಂತಮ್ಮ, ಮಂಜುಳಮ್ಮ, ಚಂದ್ರಿಕಾ ಕಾಂಚನ ಕವಿತಾ ವೀಣಾ, ವಿಜಯಲಕ್ಷ್ಮೀ ಯೋಗೇಶ್
ಸಹ್ಯಾದ್ರಿ, ಶಂಭು ಬಸವರಾಜು, ನಗರಸಭೆಯ ಮಾಜಿ ಸದಸ್ಯರಾದ ಗರಡಿ ಪ್ರಕಾಶ್, ಲಿಂಗರಾಜು, ನಾಗರಾಜು ಆರ್ ಸೇರಿದಂತೆ
ಬಿಜೆಪಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







