ಮುರುಘಾ ಬೃಹನ್ಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಐದನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಕೊಲ್ಲಾಪುರ ಸಾಯಿಗಾವ್, ಬಸವ ಶಿವಾನಂದ ಸ್ವಾಮಿಗಳು ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಭಿನ್ನವಾದ ನೀತಿ ನಿಯಮಗಳಿವೆ. ಕ್ರೈಸ್ತ ಧರ್ಮದವರು
ಪ್ರಾರ್ಥನೆ. ಮುಸ್ಲಿಂ ಧರ್ಮದವರು ನಮಾಜ್ ಮಾಡುವಂತೆ, ಲಿಂಗಾಯತ ಧರ್ಮದಲ್ಲಿ ವಿಶೇಷವಾದ ಪ್ರಾಧಾನ್ಯತೆಯನ್ನು ಶಿವಯೋಗಕ್ಕೆ
ನೀಡಲಾಗಿದೆ. ವಿಶ್ವದಲ್ಲಿ ಅತ್ಯಂತ ಶಾಂತಿ, ಸಮಾಧಾನವನ್ನು ಕೊಡುವುದು ಇಷ್ಟಲಿಂಗ ಪೂಜೆ. ನಾಡಿನಲ್ಲಿ ಹಲವಾರು ಮಠಗಳು ಇವೆ. ರಥೋತ್ಸವದ
ಮಠಗಳು, ಪಲ್ಲಕ್ಕಿ ಉತ್ಸವ ಮಠಗಳು. ಆದರೆ ಶಿವಯೋಗಕ್ಕೆ ಅತಿಹೆಚ್ಚು ಪ್ರಾತಿನಿದ್ಯತೆ ಯನ್ನು ನೀಡಿದ್ದು ಶ್ರೀ ಮುರುಘಾಮಠ. ಮನಸ್ಸನ್ನು ಗುರುವಿಗೆ ಕೊಡಬೇಕು, ಅರಿವನ್ನು ತೋರಿಸುವವನು ಗುರುವೇ ಆಗಿರುತ್ತಾನೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಶಿಗ್ಗಾವಿ ಶ್ರೀವಿರಕ್ತ ಮಠದ ಶ್ರೀ ಸಂಗನಬಸವ ಸ್ವಾಮಿಗಳು, ಇರಕಲ್ ಶಿವಶಕ್ತಿ ಪೀಠದ ಶ್ರೀ ಬಸವ ಪ್ರಸಾದ ಸ್ವಾಮಿಗಳು, ಕವಲೆತ್ತು ಬಸವ ಕೇಂದ್ರ ಶರಣೆ ಮುಕ್ತಾಯಕ್ಕ, ದೇವರ ಹಿಪ್ಪರಗಿಯ ಗದ್ದಿಗೆ ಮಠದ ಶ್ರೀ ಮಹಾಂತಸ್ವಾಮಿಗಳು, ಹೊಸಕರೆ ಶರಣೆ ನೀಲಾಲೋಚನ ತಾಯಿ, ಕಾರವಾರ ಬಸವ ಗ್ರಾಮದ ಶರಣ ಬಸವೇಶ್ವರ ಮಹಾತಾಯಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ವಿದ್ಯಾಪೀಠ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ್ ಸ್ವಾಮೀಜಿ ಶರಣು ಸಮರ್ಪಣೆ ಸಲ್ಲಿಸದರು. ಜಮರಾ ಕಲಾವಿದರು ಪ್ರಾರ್ಥಸಿ, ಜ್ಞಾನಮೂರ್ತಿ ನಿರೂಪಿಸಿ
ವಂದಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







