ಚಿತ್ರದುರ್ಗ: ಜಾತಿ ಜನಗಣತಿಯಲ್ಲಿ ಯಾವುದೇ ಉಪ ಜಾತಿಗಳನ್ನು ನಮೂದಿಸದೆ ವಿಶ್ವಕರ್ಮ ಎಂದೇ ನಮೂದಿಸಬೇಕು ಎಂದು
ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಪಂಚ ಕಸುಬುಗಳನ್ನು ಮಾಡುತ್ತಿದ್ದು, ಕಸುಬುಗಳ ಆಧಾರದ ಮೇಲೆ ಜಾತಿಯನ್ನು ಬರೆಸಿದರೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ನಮಗೆ ಆಗುವುದಿಲ್ಲ. ಆದ್ದರಿಂದ ವಿಶ್ವಕರ್ಮ ಎಂದೇ ಜಾತಿ ಕಲಂನಲ್ಲಿ ನಮೂದಿಸಬೇಕು. ಧರ್ಮದಲ್ಲಿ ಹಿಂದೂ ಎಂದು ಬರೆಸಬೇಕು ಎಂದರು. ನಮ್ಮ ಜನಾಂಗದಲ್ಲಿ ಯಾರು ಸಹ ಮತಾಂತರಗೊಂಡಿಲ್ಲ. ಆದರೂ ಸಹ ಆಯೋಗದ ಪ್ರಶ್ನಾವಳಿಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ. ಇದನ್ನು ಆಯೋಗ ಕೈ ಬಿಡಬೇಕು. ನಮ್ಮ ಧರ್ಮ ಹಾಗೂ ಸಂಸ್ಕೃತಿ ಬಿಟ್ಟು ಹೋಗುವ ಮಾತೇ ಇಲ್ಲ. ಹಿಂದೂ ಧರ್ಮಕ್ಕೆ ಬೆನ್ನೆಲುಬಾಗಿ ನಿಂತಿರುವುದು ವಿಶ್ವಕರ್ಮ ಸಮಾಜ ಆದ್ದರಿಂದ ಕ್ರಿಶ್ಚಿಯನ್ ಪದವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದು, ಇತ್ತಿಚಿನ ದಿನಗಳಲ್ಲಿ ನಮ್ಮ ಜನಾಂಗದವರು ಮಾಡುವಂತಹ ಕೆಲಸಗಳು ಕೈಗಾರಿಕೆಗಳು ಮತ್ತು ಬೇರೆ ಜನಾಂಗದವರು ಮಾಡುತ್ತಿದ್ದಾರೆ ಇದರಿಂದ ನಮ್ಮ ಮೂಲ ಕಸುಬಿಗೆ ಧಕ್ಕೆ ಆಗಿದ್ದು, ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ನ ಮಾಜಿ ರಾಜಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಕಾಂತರಾಜ್ ವರದಿಯಲ್ಲಿ ಅಂದು
ವಿಶ್ವಕರ್ಮ ಕ್ರಿಶ್ಚಿಯನ್ ಎಂಬ ಪದವನ್ನು ಸೇರಿಸಿದ್ದಾರೆ ಇದಕ್ಕೆ ಕಾರಣ ಏನು ಎಂಬ ನಮಗೆ ತಿಳಿದಿಲ್ಲ. ದೇವರ ವಿಗ್ರಹ ಕೆತ್ತನೆ
ಮಾಡುತ್ತಾ ದೇವರ ಪೂಜೆ ಮಾಡುತ್ತೇವೆ. ಆದರೂ ಕೂಡ ಏಕೆ ರೀತಿ ಆಯಿತು ಎಂಬುದು ನಮ್ಮ ಪ್ರಶ್ನೆ ಆಗಿದೆ. ಕೂಡಲೇ ಕ್ರಿಶ್ಚಿಯನ್
ಎಂಬ ಪದವನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದು,. ನಮ್ಮಲ್ಲಿ ಯಾರು ಕೂಡ ಶ್ರೀಮಂತರು ಇಲ್ಲ. ನಾವುಗಳು ಕೇವಲ ಕೂಲಿ ಹಣಕ್ಕಾಗಿ ಕೆಲಸ ಮಾಡುವವರು ಇದ್ದು, ಕೈಗಾರಿಕೆಗಳಿಂದಾಗಿ ಕುಶಲಕರ್ಮಿಗಳು ತಮ್ಮ ಮಕ್ಕಳಿಗೆ ಕೆಲಸ ಕಲಿಸಲು ಆಗುತ್ತಿಲ್ಲ ಆದ್ದರಿಂದ ಸರ್ಕಾರ ನಮ್ಮ ಜೀವನಕ್ಕೆ
ಮಾರ್ಗೋಪಾಯ ತಿಳಿಸಬೇಕು ಎಂದರು. ಜಾತಿ ಜನಗಣತಿಯಲ್ಲಿ ಮೂಲ ಜಾತಿಯ ಹೆಸರನ್ನು ಬರೆಸುವುದರಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸವಲತ್ತುಗಳನ್ನು ಪಡೆಯಲು ಅನುಕೂಲ ಆಗಲಿದೆ. ಆದ್ದರಿಂದ ವಿಶ್ವಕರ್ಮ ಎಂದೇ ಬರೆಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಶಂಕರಮೂರ್ತಿ, ವಿಶ್ವಕರ್ಮ ನಿಗಮದ ಸದಸ್ಯ ವೆಂಕಟೇಶಚಾರ್, ಮಾಜಿ ಸದಸ್ಯ ನಾರಾಯಣಚಾರ್, ಬಿ.ಜೆ.ಕೆರೆ ನಾಗೇಂದ್ರಚಾರ್, ಚಿತ್ರದುರ್ಗ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ಮಲ್ಲಿಕಾರ್ಜನಚಾರ್, ಚಳ್ಳಕೆರೆ ಅಧ್ಯಕ್ಷರಾದ ಚಂದ್ರಶೇಖರ್, ಮೊಳಕಾಲ್ಮೂರು ಅಧ್ಯಕ್ಷರಾದ ಉಮೇಶ್, ಚಿತ್ರದುರ್ಗ ಯುವ ಸಂಘದ ಉಪಾಧ್ಯಕ್ಷರಾದ ಸಂಜಯ್, ಚಳ್ಳಕೆರೆ ಉಪಾಧ್ಯಕ್ಷರಾದ ಶ್ರೀಧರ್ ಚಾರ್, ತಿಪ್ಪೇಸ್ವಾಮಿ, ಸತ್ಯ ನಾರಾಯಣ ಚಾರ್, ಲೋಕೇಶ್ ಚಾರ್, ಭಾನು ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







