ಮುರುಘಾ ಬೃಹನ್ಮಠದ ಅನುಭವ ಮಂಟಪ ದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರದಲ್ಲಿ ಒತ್ತಡಗಳಿಂದ ಹಲವು ಸಮಸ್ಯೆಗಳ ಸೃಷ್ಟಿಯಾಗುತ್ತವೆ ಎಂದು ವೈದ್ಯ ಚನ್ನಬಸವಣ್ಣನವರು ತಿಳಿಸಿದರು. ಯೋಗದ ಮಹತ್ವವು ಅಪಾರವಾಗಿದೆ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಇದು ಭಾರತೀಯ ಮೂಲದ ಒಂದು ಸಮಗ್ರ ಜೀವನ ಶೈಲಿ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.ಇತ್ತೀಚಿನ ದಿನಗಳಲ್ಲಿ ನಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಲವು ಜೀವಕೋಶಗಳು ನಮ್ಮ ವಿರುದ್ಧವೇ ಕೆಲಸ ಮಾಡುತ್ತವೆ. ಒತ್ತಡಗಳಿಂದ ನಾವು ಮುಕ್ತರಾಗಬೇಕು ಈ ಒತ್ತಡದಿಂದಾಗಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಬಿಪಿ ಸಕ್ಕರೆ ಕಾಯಿಲೆ ಕಿಡ್ನಿ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಬರುವುದೇ ಒತ್ತಡದಿಂದ. ಕೆಲವು
ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಕುಟುಂಬದೊಂದಿಗೆ ಚೆನ್ನಾಗಿರಬೇಕು ಕುಟುಂಬವೇ ನಾಗರಿಕತೆಯ ತೊಟ್ಟಿಲು. ಮನೆ
ಚೆನ್ನಾಗಿದ್ದರೆ ಮನಸು ಚೆನ್ನಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತದೆ ಮನೆ ಮನ ಚೆನ್ನಾಗಿದ್ದರೆ ಜೀವನ ನಗುತ ಚೆನ್ನಾಗಿರುತ್ತದೆ. ನಾವು ಬಿಗುಮಾನಗಳನ್ನು ಬಿಡಬೇಕು ಬಿಗುಮಾನಗಳಿಂದ ಜೀವನ ಬಿಗಿಯಾಗಿರುತ್ತದೆ. ದೇಹದ ಸದೃಢತೆಗೆ, ಮನಸ್ಸಿನ ಸಮತೋಲನಗೆ ಯೋಗ
ಸಹಕಾರಿಯಾಗಿದೆ. ಬೆನ್ನು ನೋವು, ಕೀಲು ನೋವುಗಳಂತಹ ದೈಹಿಕ ನೋವುಗಳನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ.
ಉತ್ತಮ ರಕ್ತ ಪರಿಚಲನೆಗೆ ನೆರವಾಗುತ್ತದೆ. ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಭಾವನಾತ್ಮಕ ಸ್ಥಿರತೆಯನ್ನು ಸುಧಾರಿಸುತ್ತದೆ. ದೇಹ, ಮನಸ್ಸು ಮತ್ತು ಆತ್ಮಗಳ ನಡುವೆ ಸಾಮರಸ್ಯ ವನ್ನು ಸಾಧಿಸಲು ಯೋಗ ಸಹಾಯ ಮಾಡುತ್ತದೆ. ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬದುಕು ಬರಿ ಸೇವನೆ ಮಾಡುವುದಕ್ಕಲ್ಲ. ಸೇವೆ ಮಾಡಲು ಇರುವುದು. ಬೆಳಗಿನ ಜಾವ ಓಜೋನ್
ಪದರ ಕೆಳಹಂತದಲ್ಲಿ ಇರುವುದರಿಂದ ಬೇಗ ಎದ್ದು ಯೋಗ ಸಹಜಶಿವಯೋಗ ಮಾಡಿದರೆ ಹೃದಯಾಘಾತಗಳು ಬರುವುದಿಲ್ಲ ಎಂದು ತಿಳಿಸದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







