ಚಿತ್ರದುರ್ಗ: ವಿಧಾನಸೌಧದಲ್ಲಿ ನಾಯಿಗಳ ಶೆಲ್ಟರ್ ವಿಚಾರವಾಗಿ ಸರ್ಕಾರಕ್ಕೆ ಸಿಸ್ಟಮ್ಯಾಟಿಕ್ ಆಗಿ ಪತ್ರ ಸಲ್ಲಿಸಿದ್ದೇವೆ ಎಂದು ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ ಹೇಳಿದರು.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ಹಿಂದೆಯೇ ನಾವು ಪತ್ರ ಸಲ್ಲಿಸಿದ್ದೇವೆ. ಈಗ ಸುಪ್ರೀಂಕೋರ್ಟ್ ತೀರ್ಪು ಕೂಡ ಇದೆ. ವಿಧಾನಸೌಧದಲ್ಲಿ 53 ನಾಯಿಗಳಿವೆ. ಶಾಸಕರು ವಾಕ್ ವೇಳೆ ಕಾಟ ಮಾಡೋದು ತಿಳಿದಿದೆ.ಇದರ ಬಗ್ಗೆ ಕೆಲವರು ದೂರು ಕೊಟ್ಟಿದ್ದಾರೆ. ಕೆಲವರು ಅವುಗಳ ಪರವೂ ಇದ್ದಾರೆ. ಇಲ್ಲೇ ಎರಡು ಗುಂಪುಗಳಿವೆ ಎಂದರು. ಇನ್ನುಪ್ರಾಣಿಗಳಿಗೆ ನಮಗಿಂತ ಹೆಚ್ಚು ಬದುಕುವ ಹಕ್ಕಿದೆ.
ಮ್ಯಾಕ್ಸಿಮಮ್ 15 ವರ್ಷ ಅಷ್ಟೇ ಅವುಗಳ ಆಯಸ್ಸು. ಕೆಲವರು ಶಿಫ್ಟ್ ಮಾಡಿ ಅಂದ್ರು. ಶಿಫ್ಟ್ ಮಾಡೋಕೆ ಆಗೋದಿಲ್ಲ. ಶಿಫ್ಟ್ ಮಾಡಿದ್ರೆ ಬೇರೆಯವು ಬಿಡೋದಿಲ್ಲ.ಅಲ್ಲಿ ಅವುಗಳನ್ನ ಕಚ್ಚೋದು ಆಗುತ್ತದೆ. ಜೊತೆಗೆ ಹತ್ತಿರ ಅವುಗಳು ಸೇರಿಸಲ್ಲ. ಆರೋಗ್ಯ,ಅವುಗಳಿಗೆ ಊಟದ ವ್ಯವಸ್ಥೆ ಮಾಡ್ತೇವೆ.ನಾವು ಪ್ಲಾನ್ ಮಾಡಿ ಮೆಮೋಕೊಟ್ಟಿದ್ದೇವೆ.ಅಲ್ಲಿಂದ ಯಾವಾಗ ಆರ್ಡರ್ ಬರುತ್ತೆ ನೋಡೋಣ. ಇಲ್ಲಿ ನಾಯಿ ಕಚ್ಚಿದರೆ ವರ್ಡ್ ಫೇಮಸ್ ಆಗ್ತೇವೆ ಎಂದು ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







