ಚಿತ್ರದುರ್ಗ: ನಗರಸಭೆಗೆ ನೂತನ ಅಧ್ಯಕ್ಷರಾಗಿ 20ನೇ ವಾರ್ಡಿನ ಎಂ.ಪಿ.ಅನಿತಾ ರಮೇಶ್ ಅವಿರೋಧವಾಗಿ
ಆಯ್ಕೆಯಾಗಿದ್ದಾರೆ.ಚಿತ್ರದುರ್ಗ ನಗರದ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ
ಚುನಾವಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿಗಳಾದ ಮಹಮ್ಮದ್ ಜಿಲಾನಿ ಖುರೇಷಿನ ಚುನಾವಣಾಧಿಕಾರಿಗಳಾಗಿ
ಕಾರ್ಯನಿರ್ವಹಿಸಿದ್ದು, ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಎಂ.ಪಿ. ಅನಿತಾ ಅವರು ಎರಡು ನಾಮಪತ್ರಗಳನ್ನು
ಸಲ್ಲಿಸಿದ್ದು, ಎರಡು ನಾಮಪತ್ರಗಳು ಸಿಂಧೂವಾಗಿದ್ದು, ನಾಮಪತ್ರ ವಾಪಾಸ್ಸು ಪಡೆಯುವ ಸಮಯ ಪೂರ್ಣವಾದ ನಂತರ
ಎಂ.ಪಿ.ಅನಿತಾರವರನ್ನು ಚಿತ್ರದುರ್ಗ ನಗರಸಭೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು
ಘೋಷಣೆಯನ್ನು ಮಾಡಿದರು.ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಬಂದ್ದಿದ್ದು, ಈಗಾಗಲೇ ಇಬ್ಬರು ಮಹಿಳೆಯರು ಈಗಾಗಲೇಅಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದಾರೆ. ಇವರು ಮೂರನೇ ಅಧ್ಯಕ್ಷರಾಗಿ ಅಧಿಕಾರವನ್ನು ಪಡೆದಿದ್ದಾರೆ. ಚಿತ್ರದುರ್ಗ ನಗರಸಭೆಯ
35, ಸಂಸದರು, ಶಾಸಕರು ಸೇರಿ 37 ಜನ ಸದಸ್ಯರಿದ್ದು ಇದರಲ್ಲಿ ಚುನಾವಣಾ ಸಮಯದಲ್ಲಿ 29 ಜನರು ಹಾಜರಾಗಿದ್ದು 8 ಜನ
ಸದಸ್ಯರು ಗೈರು ಹಾಜರಾಗಿದ್ದರು. ಕೋರಂ ಇದ್ದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಸಭೆಯನ್ನು ನಡೆಸಿ ಅನಿತಾರವರು
ಆಧ್ಯಕ್ಷರಾಗಿ ಅವವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ಚುನಾವಣಾ ಸಮಯದಲ್ಲಿ ಪೌರಾಯುಕ್ತರಾದ ಲಕ್ಷ್ಮೀ ಭಾಗವಹಿಸಿದ್ದರು.
ಅಭಿಮಾನಿಗಳಿಂದ ಹೂ. ಮಳೆ : ಚಿತ್ರದುರ್ಗ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಅಯ್ಕೆಯಾದ ಎಂ.ಪಿ.ಅನಿತಾರವರಿಗೆ
ಚುನಾವಣೆಯ ನಂತರ ಅವರು ನಗಸಭೆಯ ಸದಸ್ಯರು, ಹಿತೈಷಿಗಳು, ಅಭಿಮಾನಿಗಳು ಸ್ನೇಹಿತರು, ಹೂವಿನಹಾರ, ಬೊಕ್ಕೆ,
ಶಾಲುನ್ನು ಹಾಕುವುದರ ಮೂಲಕ ಶುಭಾಷಯವನ್ನು ಕೋರಿದರು. ಚುನಾವಣೆಯ ನಂತರ ತೆರೆದ ಜೀಪಿನಲ್ಲಿ ನಗರದ ವಿವಿಧ
ಬಡಾವಣೆ ಹಾಗೂ 20ನೇ ವಾರ್ಡಿನಲ್ಲಿ ನೂತನ ಅಧ್ಯಕ್ಷರು ಹಾಗೂ ಅವರ ಪತಿಯಾದ ಕರವೇ ರಮೇಶ್ರವರನ್ನು ವಿವಿಧ ಜಾನಪದ
ವಾದ್ಯಗಳು ಮೂಲಕ ಬೃಹತ್ ಮೆರವಣಿಗೆಯನ್ನು ಮಾಡಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







